ಭಾರತದಲ್ಲಿ ಆರ್ಥಿಕ ಸುಧಾರಣೆಗಳು (ಎಲ್‌ಪಿಜಿ ನೀತಿಗಳು)

 

ಬಹಳಷ್ಟು ಅರ್ಥಶಾಸ್ತವರು ಭಾರತದ ಆರ್ಥಿಕ ಸಾಧನೆಯ ದರಲ್ಲೂ ಸಾರ್ವಜನಿಕ ಉದ್ದಿಮೆಗಳ ಸಾಧನೆಯ ಕುರಿತು ಆತೃಪ್ತಿ ಹೊಂದಿದ್ದರು. 1990-91ರ ವೇಳೆಗೆ ಭಾರತವು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಕೊಂಡಿತ್ತು. ವ್ಯಾಪಾರ ಶಿಲಿನ ಆಗಾಧ ಕೊರತೆ, ಅತ್ಯಂತ ಕಡಿಮೆ ಪ್ರಮಾಣದ ವಿದೇಶೀ ವಿನಿಮಯ ಸಂಗ್ರಹ. ಹಣದುಬ್ಬರ ಮತ್ತು ಅತಿ ಹೆಚ್ಚು ಪ್ರಮಾಣದಲ್ಲಿದ್ದ ಮುಂಗಡಪತ್ರದ ಕೊರತೆಗಳು ಆರ್ಥಿಕತೆಯನ್ನು ಮತ್ತು ಜನರ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದವು.

ಈ ಸಂದರ್ಭದಲ್ಲಿ ಆರ್ಥಿಕ ನೀತಿಗಳು ಸುಧಾರಣೆಗೊಳ್ಳಬೇಕು ಎಂಬ ಭಾವನೆ ವಿಸ್ತ್ರತವಾಗಿ ಬಲಗೊಂಡು 1991ರಲ್ಲಿ ಹೊಸ ಆರ್ಥಿಕ ನೀತಿಯು ಜಾರಿಗೆ ಬಂದಿತು. ಈ ಹೊಸ ಆರ್ಥಿಕ ನೀತಿಗಳನ್ನು 'ಆರ್ಥಿಕ ಸುಧಾರಣೆಗಳು' ಎಂದೂ ಕರೆಯಲಾಗುತ್ತದೆ. ಈ ನೀತಿಗಳು ಉದಾರ್ಧಿಕರಣ (Liberalization), ಖಾಸಗೀಕರಣ (Privatization) ಮತ್ತು ಜಾಗತೀಕರಣಗಳ (Globalization) ಮೇಲೆ ಹೆಚ್ಚು ಒತ್ತನ್ನು ನೀಡಿದ್ದರಿಂದ ಅವುಗಳನ್ನು ಸಂಕ್ಷಿಪ್ತದಲ್ಲಿ ಎಲ್‌ಪಿಜಿ ನೀತಿಗಳು ಎಂದೂ ಕರೆಯುತ್ತಾರೆ,

ಅರ್ಥ ಮಾರುಕಟ್ಟೆ ಅಡೆತಡೆಗಳನ್ನು ತೆಗೆದು ಹಾಕುವ, ಖಾಸಗಿ ವಲಯದ ಸಹಭಾಗಿತ್ವವನ್ನು ಹೆಚ್ಚಿಸುವ ವಿತ್ತೀಯ ಕೊರತೆಯನ್ನು ಕಡಿಮೆ ಮಾಡುವ, ರಫ್ತು ಪ್ರಮಾಣದಲ್ಲಿ ಹೆಚ್ಚಳ ಸಾಧಿಸಿ ಆಮದು ಪ್ರಮಾಣದಲ್ಲಿ ಇಳಿಕ ಸಾಧಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ಪೂರಕವಾದ ನೀತಿಗಳ ಗುಚ್ಛವನ್ನು ಆರ್ಥಿಕ ಸುಧಾರಣೆ ಎಂದು ಕರೆಯುತ್ತೇವೆ.

ಈ ನೀತಿಗಳ ಗುಚ್ಛವು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ:

1. ಏದೇಶಿ ಹೂಡಿಕೆಗೆ ಅನುಕೂಲವಾಗುವಂಥ ಲೈಸೆನ್ಸಿಂಗ್ ಪದ್ಧತಿಯನ್ನು ನಿವಾರಿಸುವ ಮತ್ತು ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಉದಾರ ಔದ್ಯಮಿಕ ನೀತಿ.

2. ಹಲವು ಉದ್ದಿಮೆಗಳಲ್ಲಿ ವಿದೇಶಿ ನೇರ ಹೂಡಿಕೆಗೆ ಮುಕ್ತ ಅನುಮೋದನೆ.

3. ಭಾರತದ ರಸ್ತೆಗಳನ್ನು ಸುಲಭವಾಗಿ ಕಳಿಸುವ ಹಾಗೂ ಅವಶ್ಯವಿರುವ ಕಚ್ಚಾ ಸರಕುಗಳನ್ನು ಸುಲಭವಾಗಿ ಆಮದು ಮಾಡಿಕೊಳ್ಳಬಹುದಾದ ಉದಾರ ಆಮದು-ರಫ್ತು ನೀತಿ

4. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವೀಕೃತವಾದ ಮಾನದಂಡಗಳನುಸಾರ ಬ್ಯಾಂಕಾ ಮತ್ತು ಹಣಕಾಸು ವಲಯದ ಒಟ್ಟಾರೆ ಪುನಾರಚನೆ

5. ತೆರಿಗೆ ಜಾಲವನ್ನು ವಿಸ್ತರಿಸುವ ಮತ್ತು ತೆರಿಗೆ ಆದಾಯಿ ಹೆಚ್ಚಿಗೆ ಬರುವಂಥ ತೆರಿಗೆ ಸುಧಾರಣೆಗಳು, ಹೂಡಿಕೆಯ ಮೇಲಿರುವ ಸರ್ಕಾರದ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವುದು ಮತ್ತು

6. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವುದು.


ಆರ್ಥಿಕ ಉದಾರೀಕರಣಕ್ಕೆ ಭಾರತದ ಆರ್ಥಿಕತೆಯನ್ನು ತೀವ್ರ ಬೆಳವಣಿಗೆಯ ಹಂತಕ್ಕೆ ಕೊಂಡೊಯ್ಯಲು ಕಾರಣೀಭೂತವಾಗಿದೆ. ಭಾರತವನ್ನು ಈಗ ವಿಷಾದ ಪ್ರಮುಖ ಆರ್ಥಿಕತೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಭಾರತಕ್ಕೆ ಹರಿದು ಬರುತ್ತಿರುವ ವಿದೇಶಿ ಹೂಡಿಕೆಯಲ್ಲಿ ಆಗಾಧ ಹೆಚ್ಚಳವಾಗಿದೆ. ಹಲವು ಬಹುರಾಷ್ಟ್ರೀಯ ಕಂಪೆನಿಗಳು ಭಾರತದಲ್ಲಿ ತಮ್ಮ ಕಛೇರಿಗಳನ್ನು ತೆರೆದಿವೆ. ಭಾರತದ ತಲಾ ಆದಾಯವು ಹೆಚ್ಚಾಗಿದ್ದುದು ಒಂದು ಸಕಾರಾತ್ಮಕ ಚಿಹ್ನೆಯಾಗಿದೆ. ಭಾರತವು ಸೇವೆಗಳ ಮತ್ತು ಮುಖ್ಯವಾಗಿ ಸಾಫ್ಟ್‌ವೇರ್ ಹಾಗೂ ಮಾಹಿತಿ ತಂತ್ರಜ್ಞಾನ ಸಂಬಂಧಿತ ರಫ್ತುಗಳ ಮುಂಚೂಣಿಯಲ್ಲಿದೆ. ವಿಪೂ, ಇನ್‌ಫೋಸಿಸ್, ಟಿಸಿಎಸ್, ಎಚ್‌ಸಿಎಲ್, ಟೆಕ್ ಮಹಿಂದ್ರಾ ಮತ್ತು ಇನ್ನೂ ಹಲವಾರು ಕಂಪನಿಗಳು ವಿಶ್ವವಿಖ್ಯಾತಿಯನ್ನು ಹೊಂದಿವೆ. ಹೀಗೆ ಹೊಸ ಆರ್ಥಿಕ ನೀತಿಗಳು ಭಾರತವನ್ನು ಉದಾರಿ ಅಥವಾ ಮಾರುಕಟ್ಟೆ ಆಧಾರಿತ ಅರ್ಥವ್ಯವಸ್ಥೆಯತ್ತ ಕೊಂಡೊಯ್ಯುತ್ತಿವೆ. 1990-91ರಲ್ಲಿ ಅನುಭವಿಸಿದ್ದ ಬಹಳಷ್ಟು ಕಂಟಕಗಳಿಂದ ಭಾರತವನ್ನು ಈ ನೀತಿಗಳು ಮುಕ್ತಿಗೊಳಿಸಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ 2008-09ರಲ್ಲಿ ಇಡೀ ವಿಶ್ವವನ್ನೆ ತಲ್ಲಣಗೊಳಿಸಿದ ಆರ್ಥಿಕ ಬಿಕ್ಕಟ್ಟನ್ನು ಭಾರಶ ಸದೃಢತೆಯಿಂದ ಎದುರಿಸಿ ನಿಂತಿತು.

ಆರ್ಥಿಕ ಅಭಿವೃದ್ಧಿಗಾಗಿ ಇರುವ ಸರ್ಕಾರದ ಪ್ರಸ್ತುತ ಕಾರ್ಯಕ್ರಮಗಳು

ಆರ್ಥಿಕ ಅಭಿವೃದ್ಧಿ ಸಾಧಿ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಅವುಗಳಲ್ಲಿ ಈ ಕೆಳಗಿನವು ಪ್ರಮುಖವಾಗಿವೆ:

ಒಟ್ಟಾರೆ ಅಭಿವೃದ್ಧಿ

ಡಿಜಿಟಲ್ ಇಂಡಿಯಾ: ಜನರಿಗೆ ಸರ್ಕಾರಿ ಸೇವೆಗಳು ಶರೀತವಾಗಿ ವಿದ್ಯುನ್ಮಾನ ರೂಪದಲ್ಲಿ ದೊರಕಿಸಿಕೊಡುವುದು ಮತ್ತು ಜನರು ಇತ್ತೀಚಿನ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಪ್ರಯೋಜನ ಪಡೆದುಕೊಳ್ಳುವಂತೆ ಮಾಡುವುದು.

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ

1. ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ – ಬೆಳಗಳ ನಷ್ಟ ಸಂಭವಿಸಿದಲ್ಲಿ ರೈತರಿಗೆ ಮುಂಗಾರು ಮತ್ತು ಹಿಂಗಾರು ಬೆಳೆಗಳೆರಡಕ್ಕೂ ವಿಮಾ ಹಣಕಾಸು ಸೌಲಭ್ಯ ಒದಗಿಸುವುದು,

2. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ: ‘ಪ್ರತಿ ನೀರ ಹಾಗೂ ಗರಿಷ್ಠ ಉತ್ಪಾದನೆ ಸಾಧಿಸುವಂಥ ನೀರು ಸದ್ಬಳಕೆ ಮಾಡುವಂಥ ನೀರಾವರಿ ಸೌಲಭ್ಯ ಒದಗಿಸುವುದು

3. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ: ಪ್ರತಿ ವರ್ಷ ಯಾವುದೇ

ಗ್ರಾಮೀಣ ಕುಟುಂಬದ ವಯಸ್ಕ ಕಾರ್ಮಿಕರಿಗೆ ಕನಿಷ್ಠ ಕೂಲಿ ದರದಲ್ಲಿ ಕೌಶಲ್ಯರಹಿತ ಮಾಡುವ ಉದ್ಯೋಗದ ಹಕ್ಕನ್ನು ನೀಡುವುದು.

4. ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆ: ರಸ್ತೆ ಸಂಪರ್ಕವಿಲ್ಲದ ಹಳ್ಳಿಗಳಿಗೆ ಸರ್ವಋತು ನಿರ್ಮಿಸಿ ಸಂಪರ್ಕ ಕಲ್ಪಿಸುವುದು

ಔದ್ಯಮಿಕ ಅಭಿವೃದ್ಧಿ

1. ಮೇಕ್ ಇನ್ ಇಂಡಿಯಾ : 25 ಕ್ಷೇತ್ರಗಳಲ್ಲಿ ಭಾರತದಲ್ಲಿ ಉದ್ದಿಮೆ ಸ್ಥಾಪಿಸಿ ಉತ್ಪಾದನೆ ಆರಂಭಿಸಿ ಉದ್ಯೋಗ ಸೃಷ್ಟಿ ಮಾಡಲು ದೇಶಿ ಮತ್ತು ವಿದೇಶಿ ಕಂಪನಿಗಳನ್ನು ಪ್ರೋತ್ಸಾಹಿಸುವುದು.

2. ಸ್ಟಾರ್ಟ್‌ಅಪ್ ಇಂಡಿಯಾ ಮತ್ತು ಸ್ಟ್ಯಾಂಡಪ್ ಇಂಡಿಯಾ : ಪ್ರಾರಂಭಿಕ ಹಂತದ ಎಲ್ಲ ಉದ್ದಿಮೆಗಳಿಗೆ ವ್ಯವಹಾರ ನಡೆಸಲು ಬೇಕಾದ ಎಲ್ಲ ಬೆಂಬಲವನ್ನು ನೀಡುತ್ತ

3. ಪ್ರಧಾನ ಮಂತ್ರಿ ಮುದ್ರಾ ಯೋಜನೆ : ಸಣ್ಣ ಉದ್ದಿಮೆಗಳಿಗೆ/ಸ್ಪಾರ್ಟ್ ಅಪ್‌ಗಳಿಗೆ ಶಿಶು, ಕಿಶೋರ, ತರುಣ ವರ್ಗಗಳಲ್ಲಿ 50 ಸಾವಿರ ರೂಪಾಯಿಗಳಿ 10 ಲಕ್ಷ ರೂಪಾಯಿಗಳವರೆಗೆ ಉದ್ದಿಮೆ ಅಭಿವೃದ್ಧಿಪಡಿಸಲು ಸರಳ ನಿಯಮಾವಳಿಗಳ ಮೇಲೆ ಸಾಲ ಒದಗಿಸುವುದು.

ಸಾಮಾಜಿಕ ವಲಯ

1. ಸ್ವಚ್ಛ ಭಾರತ ಅಭಿಯಾನ: ಮಹಾತ್ಮಾ ಗಾಂಧೀಜಿಯವರ ಕನಸಾದ ಸ್ವಚ್ಛ ಹಾಗೂ ಸ್ವಸ್ಥ ಭಾರತದ ನಿರ್ಮಾಣ

2. ಕೌಶಲ ಭಾರತ (ಸ್ಕಿಲ್ ಇಂಡಿಯಾ): ಯುವಕರಿಗೆ ಉದ್ಯೋಗ ಗಳಿಸಲು ಅವಶ್ಯವಿರುವ ಕೌಶಲಗಳನ್ನು ತರಬೇತಿ ಮೂಲಕ ನೀಡುವುದು ಅಥವಾ ಅವುಗಳನ್ನು ಗಳಿಸಿಕೊಳ್ಳಲು ಧನಸಹಾಯ ನೀಡುವುದು.

3. ಪ್ರಧಾನ ಮಂತ್ರಿ ಜನ ಧನ ಯೋಜನೆ : ಹಣಕಾಸಿನ ಒಳಗೊಳ್ಳುವಿಕೆಯನ್ನು ಸಾಧಿಸಲು ರಾಷ್ಟ್ರೀಯ ಅಭಿಯಾನ ಇದಾಗಿದ್ದು, ಇದರ ಅಡಿಯಲ್ಲಿ ಹಣಕಾಸು ಸೇವೆಗಳಾದ ಉಳಿತಾಯ ಮತ್ತು ಠೇವಣಿ, ಹಣ ವರ್ಗಾವಣೆ, ಸಾಲ, ವಿಮೆ, ಪೆನನ್ ಇವುಗಳನ್ನು ಬ್ಯಾಂಕ್ ಖಾತೆ ಮೂಲಕ ಪಡೆಯಲು ಸಹಾಯ ಮಾಡುವುದು.

4. ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ : ಜೀವ ವಿಮೆಯನ್ನು ಎಲ್ಲರಿಗೂ ಕಡಿಮೆ ದರದಲ್ಲಿ ವಿಸ್ತರಿಸುವ ಯೋಜನೆ ಇದಾಗಿದ್ದು 18ರಿಂದ 50 ವರ್ಷಗಳವರೆಗಿನ ಎಲ್ಲ ವ್ಯಕ್ತಿಗಳು ಅತ್ಯಂತ ಕನಿಷ್ಠ ಪ್ರಿಮಿಯಮ್ ನೀಡಿ ಜೀವ ವಿಮೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

5. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ : ಇದೊಂದು ಅಪಘಾತ ವಿಮಾ ಯೋಜನೆಯಾಗಿದ್ದು 18ರಿಂದ 70 ವರ್ಷಗಳವರೆಗಿನ ಎಲ್ಲ ವ್ಯಕ್ತಿಗಳು ಕಡಿಮೆ ವೆಚ್ಚದಲ್ಲಿ ಇದರ ಪ್ರಯೋಜನ ಪಡೆದುಕೊಳ್ಳಬಹುದು.

6. ಅಟಲ್ ಪೆನನ್ ಯೋಜನೆ : ಈ ಯೋಜನೆಯು ಅಸಂಘಟಿತ ವಲಯದಲ್ಲಿರುವ 18 ರಿಂದ 40 ವರ್ಷಗಳವರೆಗಿನ ವ್ಯಕ್ತಿಗಳಿಗೆ ಮಾಸಿಕ 1000 ರೂಪಾಯಿಗಳಿಂದ 5000 ರೂಪಾಯಿಗಳವರೆಗಿನ ಪೆನ್ನನ್ ಹಣವನ್ನು ಅವರ ಕೊಡುಗೆ ಆಧರಿಸಿ ನೀಡುವ ಉದ್ದೇಶ ಹೊಂದಿದೆ.

ನಗರ ಅಭಿವೃದ್ಧಿ

1. ನಗರ ಪುನರುತ್ಥಾನ ಮತ್ತು ಪರಿವರ್ತನೆಯ ಅಟಲ್ ಅಭಿಯಾನ (Atal Mission Reju vention and Urban Transformation, AMRUT) : ಜನ ಕೇಂದ್ರಿತ ನಗರ ಯೋಜನೆ ಮತ್ತು ಅಭಿವೃದ್ಧಿ ಮೂಲಕ ನಗರಗಳಲ್ಲಿ ಜೀವನದ ಸ್ಥಿತಿಯನ್ನು ಉತ್ತಮಗೊಳಿಸುವುದು.

2. ಪ್ರಧಾನ ಮಂತ್ರಿ ಆವಾಸ್ ಯೋಜನೆ : ನಗರ ಪ್ರದೇಶದಲ್ಲಿರುವ ಬಡವರಿಗೆ ಅಲ್ಪ ವೆಚ್ಚದಲ್ಲಿ ಮನೆ ಹೊಂದುವ ಯೋಜನೆ.

3. ಸ್ಮಾರ್ಟ್ ಸಿಟಿ ಅಭಿಯಾನ : ದೇಶದಾದ್ಯಂತ 100 ನಗರಗ ನಾಗರಿಕ ಸ್ನೇಹಿಯಾಗಿ ಮತ್ತು ಸುಸ್ಥಿರತೆಯಿಂದ ಅಭಿವೃದ್ಧಿ ಪಡಿಸಲು ಇರುವ ಯೋಜ

ಭಾರತ ದೇಶವು ಹಲವಾರು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಅಧಿಕ ದರದ ಬೆಳವಣಿಗೆ ಸಾಧಿಸುತ್ತಿದೆಯಲ್ಲದೇ ಅದು ಭವಿಷ್ಯದ ಆರ್ಥಿಕ ಸೂಪರ್ ಪವರ್ ಆಗುವತ್ತ ಮುನ್ನಡೆದಿದೆ. ರಾಜ್ಯ ಸರ್ಕಾರಗಳೂ ಸಹ ಜನರ ಯೋಗಕ್ಷೇಮ ಹೆಚ್ಚಿಸುವಂಥ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು