ಅರ್ಥಶಾಸ್ತ್ರ ವಿಭಾಗದಲ್ಲಿ ಸಂಪನ್ಮೂಲಗಳು

 ಈ ಮೊದಲು ನೀವು ನಮ್ಮ ಇಷ್ಟಗಳು ಆನಂತವಾಗಿದ್ದು, ಅವುಗಳನ್ನು ಕೈಸಿಕೊಳ್ಳಲು ಇರುವ ಸಂಪನ್ಮೂಲಗಳು ಮಿತವಾಗಿದ್ದು ಇದು ಕೊರತೆಯ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದೀರಿ, ಸಂಪನ್ಮೂಲವೆಂಬುದು ಒಂದು ವಿಶಾಲ ಅರ್ಥವುಳ್ಳ ಶಬ್ದವಾಗಿದ್ದು, ಮಾನವರು ತಾವು ಕೈಗೊಳ್ಳುವ ಎಲ್ಲ ಆರ್ಥಿಕ ಚಟುವಟಿಕೆಗಳಾದ ಉತ್ಪಾದನೆ, ವಿನಿಮಯ ಮತ್ತು ಅನುಭೋಗಗಳಲ್ಲಿ ಬಳಸುವ ಎಲ್ಲ ವಸ್ತುಗಳನ್ನು ಸೂಚಿಸುತ್ತದೆ. ವಿವಿಧ ಸಂಪನ್ಮೂಲಗಳಲ್ಲಿ ಬಳಕೆಗೆ ಲಭ್ಯವಿರುವ ಅತ್ಯಂತ ಪ್ರಮುಖವಾದವುಗಳಾಗಿವೆ. ನೈಸರ್ಗಿಕ ಸಂಪನ್ಮೂಲಗಳು ಮಾನವನ ಇವುಗಳು ನಿಸರ್ಗದ ಕೊಡುಗೆಗಳಾಗಿದ್ದು ಅವುಗಳಿಲ್ಲದೇ ಮಾನವನ ಜೀವಿತವು ಸಾಧ್ಯವೇ ಇಲ್ಲಿ ಸೂರ್ಯರಶ್ಮಿ, ನೀರು, ವಾಯು, ಆರಣ್ಯಗಳು, ಮಣ್ಣ, ಜೈವಿಕ ವೈವಿಧ್ಯತೆ, ಅವರು, ಇತ್ಯಾದಿಗಳು ಮಾನವನ ಜೀವಿತಕ್ಕೆ ಅತ್ಯಂತ ಪ್ರಮುಖವಾಗಿವೆ. ಆದರೆ ಜಾಗತಿಕ ಜನಸಂಖ್ಯೆಯು ಏಳು ಶತಕೋಟಿಗಿಂತಲೂ ಅಧಿಕವಾಗಿ ಬೆಳೆದಿದ್ದರಿಂದ ಬಹಳಷ್ಟು ಜನರಿಗೆ ಕನಿಷ್ಠ ಅವಶ್ಯಕತೆಗಳನ್ನು ಪೂರೈಸುವುದೇ ದುಸ್ತರವಾಗುತ್ತಿದೆ. ಈ ಅಧ್ಯಾಯದಲ್ಲಿ ಸಂಪನ್ಮೂಲಗಳ ಕೊರತೆ, ಪರಿಸರ ಸಂರಕ್ಷಣೆ ಮತ್ತು ನಮ್ಮ ಪರಿಸರದ ಹೆಜ್ಜೆ ಗುರುತಿನ ಪ್ರಮಾಣವನ್ನು ಕಡಿಮೆ ಮಾಡುವುದರ ಕುರಿತು ಅಧ್ಯಯನ ಮಾಡಲಿದ್ದೇವೆ.


ಸಂಪನ್ಮೂಲಗಳ ಅರ್ಥ ಹಾಗೂ ವಿಧಗಳು


ನೈಸರ್ಗಿಕವಾಗಿ ಲಭ್ಯವಿದ್ದು, ತಾವಿದ್ದ ಸ್ವರೂಪದಲ್ಲಿಯೇ ಮೌಲ್ಯಯುತ ಎಂದು ಪರಿಗಣಿತವಾಗಿರುವ ವಸ್ತುಗಳನ್ನು ನೈಸರ್ಗಿಕ ಸಂಪನ್ಮೂಲಗಳೆಂದು ಕರೆಯಬಹುದು, ಆಹಾರ ಬೆಳೆಯಲು ಉಪಯುಕ್ತವಿರುವ ಮಣ್ಣು, ನಮ್ಮ ಹಲವು ಚಟುವಟಿಕೆಗಳಿಗೆ ಮೂಲಾಧಾರವಾಗಿರುವ ನೀರು, ಹಲವು ಸೇವೆಗಳನ್ನು ಒದಗಿಸುವ ಮರಗಿಡಗಳು, ಜೀವಿಗಳು ಉಸಿರಾಡುವ ವಾಯು, ನಮ್ಮ ಹಲವಾರು ಉತ್ಪನ್ನಗಳಿಗೆ ಕಚ್ಚಾ ವಸ್ತುಗಳಾದ ಆದಿರುಗಳು, ಇತ್ಯಾದಿಗಳೆಲ್ಲವನ್ನೂ ನಾವು ಸಂಪನ್ಮೂಲಗಳು ಎಂದು ಕರೆಯುತ್ತೇವೆ. ಇವುಗಳು ಇಲ್ಲದಿದ್ದರೆ ನಮ್ಮ ಜೀವನ ಇಷ್ಟು ಆರಾಮದಾಯಕವಾಗುತ್ತಲೇ ಇರಲಿಲ್ಲ.


ನೈಸರ್ಗಿಕ ಸಂಪನ್ಮೂಲಗಳನ್ನು ಸಾಮಾನ್ಯವಾಗಿ ‘ಪುನರುತ್ಪತ್ತಿ ಹೊಂದುವ ಅಥವಾ ನವೀಕರಣಗೊಳ್ಳುವ ಹಾಗೂ ಮುಗಿದು ಹೋಗುವ ಎಂಬ ಎರಡು ವಿಧಗಳಲ್ಲಿ ವರ್ಗಿಕರಿಸಲಾಗಿದೆ.

ನವೀಕರಣಗೊಳ್ಳುವ ಅಥವಾ ಮನರುತ್ಪತ್ತಿ ಹೊಂದುವ ಸಂಪನ್ಮೂಲಗಳು: ಕೆಲವು ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಬಳಸಿಕೊಳ್ಳುತ್ತಾ ಹೋದಂತೆ ಅವು ಪುನಃ ತಮ್ಮ ಮೂಲ ಸ್ವರೂಪವನ್ನು ಪಡೆದುಕೊಂಡು ನಿರಂತರವಾಗಿ ನಮ್ಮ ಬಳಕೆಗೆ ದೊರಕುತ್ತವೆ. ಇಂತಹ ಸಂಪನ್ಮೂಲಗಳನ್ನು ನಕರಣಗೊಳ್ಳುವ ಅಥವಾ ಪುನರುಕ್ತಿ ಹೊಂದುವ ಅಥವಾ ಬದಾಗದ ಸಂಪನ್ಮೂಲಗಳು ಎಂದು ಕರೆಯುತ್ತೇವೆ. ಇವುಗಳನ್ನು ನಾವು ಬಳಸಿದಂತೆ ಪಕೃತಿಯು ತನ್ನ ನೈಸರ್ಗಿಕ ಪ್ರಕ್ರಿಯೆಗಳ ಮೂಲಕ ಅವುಗಳನ್ನು ಮತ್ತೆ ಮತ್ತೆ ತುಂಬಿ ಕೊಡುತ್ತದೆ. ನೀರು, ಭೂಮಿ, ಅರಣ್ಯ, ಗಾಳಿ, ಸೂರ್ಯನ ಶಾಖ ಮೀನುಗಳು, ಮುಂತಾದುವು ಮುಗಿಯದ ಸಂಪನ್ಮೂಲಗಳಾಗಿವೆ.


ಮುಗಿದು ಹೋಗುವ ಸಂಪನ್ಮೂಲಗಳು: ಕೆಲವು ನೈಸರ್ಗಿಕ ಸಂಪನ್ಮೂಲಗಳು ನಾವು ಬಳಸಿದಂತೆ ಕ್ರಮೇಣ ಕಡಿಮೆಯಾಗಿ ಅಂತಿಮವಾಗಿ ಕಲಿಯಾಗುವ ಅಥವಾ ರಿದಾಗುವ ಲಕ್ಷಣ ಹೊಂದಿವೆ. ಅವುಗಳ ಸೃಷ್ಟಿ ಮತ್ತೆ ಸಾಧ್ಯವಿಲ್ಲ. ಇಂತಹ ಸಂಪನ್ಮೂಲಗಳನ್ನು ಮುಗಿದು ಹೋಗುವ ಸಂಪನ್ಮೂಲಗಳು ಎನ್ನುತ್ತೇವೆ, ಕಬ್ಬಿಣದ ಅದಿರು, ತಾಮ್ರ, ಚಿನ್ನ, ಮ್ಯಾಂಗನೀಸ್, ಬಾಕ್ಸಟ್ ಮುಂತಾದ ಖನಿಜಗಳು, ಕಲ್ಲಿದ್ದಲು, ಪೆಟ್ರೋಲಿಯಮ್, ನೈಸರ್ಗಿಕ ಅನಿಲ, ಯುರೇನಿಯಮ್, ಥೋರಿಯಮ್, ಮುಂತಾದ ಇಂಧನಮೂಲಗಳು ಬಳಸಿದಂತೆ ಮುಗಿದುಹೋಗುತ್ತವೆ. ಇವುಗಳನ್ನು ನಿಸರ್ಗವು ತನ್ನ ಪ್ರಕ್ರಿಯೆಯ ಮೂಲಕ ಮತ್ತೆ  ಸಾಧ್ಯವಿಲ್ಲದಿರುವುದರಿಂದ ಇವುಗಳಿಗೆ ನವೀಕರಿಸಲಾಗದ ಸಂಪನ್ಮೂಲಗಳು' ಎಂತಲೂ ಕರೆಯುತ್ತಾರೆ.


ಸಂಪನ್ಮೂಲಗಳನ್ನು ಜೈವಿಕ ಮತ್ತು ಜೈವಿಕ ಸಂಪನ್ಮೂಲಗಳಿಂದ ರ್ವಕರಿಸಲಾಗುತ್ತದೆ. ಜೀವಿಗಳಿಂದ ಪಡೆಯಲಾದ ಸಂಪನ್ಮೂಲಗಳನ್ನು ಜೈವಿಕ ಸಂಪನ್ಮೂಲಗಳೆಂದೂ, ನಿರ್ಜೀವ ವಸ್ತುಗಳಿಂದ ಪಡೆಯಲಾದ ಸಂಪನ್ಮೂಲಗಳನ್ನು ಅಜೈವಿಕ ಸಂಪನ್ಮೂಲಗಳೆಂದೂ ವರ್ಗೀಕರಿಸಬಹುದು, ಸಸ್ಯ ಮತ್ತು ಪ್ರಾಣಿಗಳು ಜೈವಿಕ ಸಂಪನ್ಮೂಲಗಳಾದರೆ, ನೀರು, ಮಣ್ಣು, ಅದಿರುಗಳು, ಪ್ರಾದಿಗಳು ಅಜೈವಿಕ ಸಂಪನ್ಮೂಲಗಳಾಗಿವೆ. ಸಂಪನ್ಮೂಲಗಳ ಕೊರತೆ


ನಮ್ಮ ಎಲ್ಲಾ ಮೂಲ ಅವಶ್ಯಕತೆಗಳಾದ ಆಹಾರ, ವಸತಿ, ಬಟ್ಟೆ, ಮುಂಕಾರವುಗಳನ್ನು ವಿವಿಧ ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ, ನೀರು, ಮಣ್ಣು, ಅದಿರು, ಕಲ್ಲಿದ್ದಲು, ಪೆಟ್ರೋಲಿಯಮ್, ಪಾಣಿ ಹಾಗೂ ಸಸ್ಯ ಸಂಕುಲ, ಇತ್ಯಾದಿಗಳಿಂದ ಪೂರೈಸಿಕೊಳ್ಳುತ್ತೇವೆ. ಆದರೆ ಇನ್ನು ಎಷ್ಟು ದಿನಗಳವರೆಗೆ ಈ ಅಮೂಲ್ಯ ಸಂಪನ್ಮೂಲಗಳು ನಮ್ಮ ಬಳಕೆಗೆ ಲಭ್ಯವಿರುತ್ತವೆ? ಏರುಗತಿಯಲ್ಲಿರುವ ಜನಸಂಖ್ಯೆಯಲ್ಲದೇ ತೀವ್ರಗೊಳ್ಳುತ್ತಿರುವ ಔದ್ಯೋಗೀಕರಣ ಹಾಗೂ ನಗರಿಕರಣಗಳು ಸಂಪನ್ಮೂಲಗಳ ಬೇಡಿಕೆಯನ್ನು ಅಗಾಧವಾಗಿ ಹೆಚ್ಚಿಸಿವೆ. ಅದರಲ್ಲೂ ಸದಾ ಹೆಚ್ಚುತ್ತಿರುವ ಮಾನವನ ಇಲ್ಲಿಗಳಿಗೆ ಹೋಲಿಸಿದರೆ ಸಂಪನ್ಮೂಲಗಳು ತುಂಬಾ ಕಡಿಮೆ ಪ್ರಮಾಣದಲ್ಲಿವೆ. ತೀರಿಹೋಗುವ ಸಂಪನ್ಮೂಲಗಳು ನಿರ್ದಿಷ್ಟ ಪ್ರಮಾಣದಲ್ಲಿ ಲಭ್ಯವನ್ನು ಬಳಕೆ ಹೆಚ್ಚಿದಂತೆ ಅವುಗಳ ಪ್ರಮಾಣ ಕುಸಿಯುತ್ತಿವೆ. ಇವರುತ್ಪತ್ತಿ ಹೊಂದುವ ಸಂಪನ್ಮೂಲಗಳನ್ನು ಅವುಗಳ ಪುನರುಜ್ಜಿವನದ ದರಕ್ಕಿಂತ ತೀವ್ರವಾಗಿ ಬಳಕೆ ಮಾಡಲಾಗುತ್ತಿದೆ.


ಕೊರತೆಯನ್ನು ಅಧಿಕಗೊಳಿಸುತ್ತಿರುವ ಪ್ರಮುಖ ಅಂಶಗಳೆಂದರೆ:

1. ಮಿತಿಮೀರಿದ ಜನಸಂಖ್ಯೆ : ಆಗಾಧ ಪ್ರಮಾಣದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಮತ್ತು ವಸತಿ ಸೌಕರ್ಯ ಒದಗಿಸಲು ಹೆಚ್ಚುವರಿ ಜಮೀನು ಬೇಕಾಗುತ್ತದೆ. ಇದಕ್ಕೆ ಅರಣ್ಯಗಳನ್ನು ಕೃಷಿ ಭೂಮಿಯಾಗಿ, ಕೃಷಿ ಭೂಮಿಯನ್ನು ವಸತಿ, ವಾಣಿಜ್ಯಕ ಮತ್ತು ಔದ್ಯಮಿಕ ಭೂಮಿಯಾಗಿ ಮಾರ್ಪಡಿಸಿ ಬೇರೆಸಿಕೊಳ್ಳಲಾಗುತ್ತಿದೆ.

2. ಹೆಚ್ಚುತ್ತಿರುವ ಔದ್ಯೋಗಿಕರಣ : ಉದ್ಯಮಗಳ ಸಂಖ್ಯೆ ಹೆಚ್ಚಿದಂತೆ, ಆದರು, ಕಚ್ಚಾ ತೈಲ ಮತ್ತು ನೀರಿನ ಹೊರತೆಗೆಯುವಿಕೆ ಅಧಿಕವಾಗಿದ್ದು ಹಲವಾರು. ಗಣಿಗಳು. ತೈಲ ಬಾವಿಗಳು ಮತ್ತು ಜಲಮೂಲಗಳು ಬರಿದಾಗಿವೆ.

3. ವಿಸ್ತರಣೆಯಾಗುತ್ತಿರುವ ಪ್ರದೇಶಗಳು ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ 33 ಹೆಚ್ಚು ಜನಸಂಖ್ಯೆ ವಾಸವಾಗಿರುವುದನ್ನು ನೀವು ನಗರ ಪ್ರದೇಶ ಎನ್ನುತ್ತೇವೆ. ಸಹಜವಾಗಿ ಸಂಪನ್ಮೂಲಗಳ ಬಳಕೆ ಮತ್ತು ತ್ಯಾಜ್ಯ ಉತ್ಪಾದನಾ ಪ್ರಮಾಣವು ಅಂಥ ಪ್ರದೇಶಗಳಲ್ಲಿ ಅತ್ಯಧಿಕವಾಗಿರುತ್ತದೆ. ಇದು ಸಂಪನ್ಮೂಲಗಳ ಪ್ರಮಾಣ ಹಾಗೂ ಗುಣಮಟ್ಟಗಳೆರಡನ್ನೂ ಕಡಿಮೆ ಮಾಡುತ್ತದೆ, ನೂರಾರು ಕಿಲೋಮೀಟರುಗಳ ದೂರದಿಂದ ನೀರು ಪಡೆದು, ಆ ಪದ್ದ ನೀರನ್ನು ಕುಟುಂಬಗಳು ಮತ್ತು ಉದ್ಯಮಗಳು ಅದನ್ನು ಕೊಳಚೆ ನೀರಾಗಿ ಪರಿವರ್ತಿಸುವ ಸಂಕಷ್ಟವನ್ನು ಊಹಿಸಿಕೊಂಡರೆ ನಗರೀಕರಣದ ಪರಿಣಾಮವನ್ನು ಅರ್ಥೈಸಿಕೊಳ್ಳಬಹುದಾಗಿದೆ.

4. ವಾಯು ಮಾಲಿನ್ಯ ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು, ಡೀಸೆಲ್ ಮತ್ತು ಪೆಟ್ರೋಲ್ ಇವುಗಳ ಡಹಿಸುವಿಕೆಯಿಂದಾಗಿ, ಹಾನಿಕಾರಕ ಅಂಶಗಳಾದ ಇಂಗಾಲದ ಡೈಆಕ್ಸೆಡ್, ಹೈಡೋಜನ್ ಸ, ಮಸಿ ದೂಳು ಮುಂತಾದವುಗಳು ನಾಯು ಮಂಡಲವನ್ನು ಪ್ರವೇಶಿಸಿ ಅದನ್ನು ಮಲಿನಗೊಳಿಸುತ್ತವೆ. ಇದರಿಂದಾಗಿ ತುದ್ದ ವಾಯುವಿನ ಲಭ್ಯತೆ ಕಡಿಮೆಯಾಗುತ್ತದೆ.

5. ಜಲಮಾಲಿನ್ಯ ಮತ್ತು ಭೂ ಸವಕಳಿ : ಮಾನವರ, ಆಸ್ಪತ್ರೆಗಳು, ಉದ್ಯಮಗಳು ಹಾಗೂ ಇತರ ತ್ಯಾಜ್ಯಗಳನ್ನು ಬಯಲಿನಲ್ಲಿ ಸುರಿಯುವುದರಿಂದ ಅಲ್ಲಿನ ಭೂಮಿ ಮತ್ತು ನೀರಿನ ಉಪಯುಕ್ತತ ಕಡಿಮೆಯಾಗುತ್ತದೆ. ಕೃಷಿ ಹಾಗೂ ಕುಟುಂಬಗಳ ಚಟುವಟಿಕೆ ದೆಸೆಯಿಂದಾಗಿ ಸಹ ಜಲ ಮಾಲಿನ್ಯ ಉಂಟಾಗುತ್ತದೆ. ಇವುಗಳ ಕಾರಣದಿಂದಾಗಿ ಭೂಮಿಯ ಫಲವತ್ತತೆ ನಶಿಸಿ ಉತ್ಪಾದನೆಯ ನಷ್ಟವಾಗುತ್ತದೆ.


ಹೀಗೆ ಏರುತ್ತಿರುವ ಜನಸಂಖ್ಯೆ ಹಾಗೂ ಅವರ ಚಟುವಟಿಕೆಗಳು ಸಂಪನ್ಮೂಲಗಳ ಕೊರತೆಯನ್ನು ಹೆಚ್ಚಿಸಿ, ಅವುಗಳ ಗುಣಮಟ್ಟದ ನಷ್ಟಕ್ಕೂ ಕಾರಣವಾಗಿವೆ.


ಆದರೆ, ಈ ಕೊರತೆಯನ್ನು ಈ ಕೆಳಗೆ ಸೂಚಿಸಿದ ಕ್ರಮಗಳ ಪಾಲನೆಯಿಂದ ತಡೆಗಟ್ಟಬಹುದಾಗಿದೆ

1. ಸಂಪನ್ಮೂಲಗಳ ಹೊಸ ಮೂಲಗಳ ಪರಿಶೋಧನೆ ಮತ್ತು ಆವಿಷ್ಕಾರ;

2. ಪರ್ಯಾಯ ಹಾಗೂ ಬದಲಿ ವಸ್ತುಗಳ ಆವಿಷ್ಕಾರ (ಉದಾಹರಣೆಗೆ ಕಲ್ಲಿದ್ದಲು ಆಧಾರಶ ಇಂಧನದ ಬದಲಾಗಿ ಸೌರ ಹಾಗೂ ಪವನ ಶಕ್ತಿ, ಡೀಸೆಲ್ ಬದಲಾಗಿ ಎಥನಾಲ್ , ಕಟ್ಟಿಗೆ ಪೀಠೋಪಕರಣಗಳ ಬದಲಿಗೆ ಪ್ಲಾಸ್ಟಿಕ್ ಪಿಠೋಪಕರಣಗಳು, ಇತ್ಯಾದಿ):

3. ಸಂಪನ್ಮೂಲ ಬಳಕೆಯ ದಕ್ಷತೆಯನ್ನು ಹೆಚ್ಚಿಸುವುದು (ಉದಾಹರಣೆಗೆ 2 ಸ್ಟೋಕ್ ಎಂಜಿನ್ನುಗಳಿಗೆ ಹೋಲಿಸಿದರೆ 4 ಸ್ಪೂಕ್ ಎಂಜಿನ್ನುಗಳು ಕಡಿಮೆ ಇಂಧನವನ್ನು ಬಳಸುತ್ತವೆ.)

4. ಸಂಪನ್ಮೂಲಗಳ ಅಪಬಳಕೆ ತಡೆಯಲು ಮತ್ತು ಮಾಲಿನ್ಯ ನಿಯಂತ್ರಿಸಲು ಸರ್ಕಾರದ ನಿಯಮಗಳು,

5. ನಿತ್ಯದ ಚಟುವಟಿಕೆಗಳಲ್ಲಿ ಸಂಪನ್ಮೂಲಗಳನ್ನು ಸಂರಕ್ಷಿಸಿ ಮತ್ತು ಮಾಲಿನ್ಯ ಕಡಿಮೆಗೊಳಿಸುವಂಥ ಕ್ರಮಗಳನ್ನು ಅಳವಡಿಸಿಕೊಳ್ಳುವ ಸಲುವಾಗಿ ಜನರನ್ನು ಜಾಗೃತಗೊಳಿಸುವುದು.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು