ಅರ್ಥಶಾಸ್ತ್ರ ವಿಭಾಗದಲ್ಲಿ ಸಂಪನ್ಮೂಲಗಳ ಸಂರಕ್ಷಣೆ

 

ಸಂಪನ್ಮೂಲಗಳ ಬಳಕೆಯಲ್ಲಿನ ತೀವ್ರ ಏರಿಕೆ ಹೆಚ್ಚಳ ಅವುಗಳ ಮಾಲಿನ್ಯವು ಮಾನವ ಜನಾಂಗಕ್ಕೆ ಗಂಭೀರ ಸ್ವರೂಪದ ಸಮಸ್ಯೆಗಳನ್ನು ತಂದೊಡ್ಡುತ್ತದೆ. ನಮಗೆ ಕುಡಿಯಲು ಶುದ್ಧ ನೀರು ಸಿಗದಿರಬಹುದು, ಉಸಿಉಡಲು ಶುದ್ಧ ಗಾಳಿ ಇರದಿರಬಹುದು, ಹಲವನ್ನು ಸಂಪನ್ಮೂಲಗಳು ಬರಿದಾಗಬಹುದು, ಜನವ ವೈವಿಧ್ಯತೆ ವಿರಳವಾಗಿ ಇಡೀ ವಿಶ್ವವೇ ತಾಗುಂಡಿಯಾಗಿಬಿಡುವ ಅಪಾಯವಿದೆ. ಈ ಸಮಸ್ಯೆಗಳನ್ನು ಹೇಗೆ ಎದುರಿಸುವುದು? ಇದನ್ನು ಸಂಪನ್ಮೂಲಗಳ ಸಂರಕ್ಷಣೆಯ ಮೂಲಕ ಮಾಡಬಹುದಾಗಿದೆ.

ಸಂಪನ್ಮೂಲಗಳ ಸಂರಕ್ಷಣೆಯೆಂದರೆ ಅವುಗಳ ಆದಬಳಕೆಯನ್ನು ಕಡಿಮೆ ಮಾಡಿ ಅವುಗಳ ನ್ಯಾಯೋಚಿತ ಬಳಕನ್ನು ಪ್ರೋತ್ಸಾಹಿಸಿ, ಪರಿಸರ ಮತ್ತು ಸಂಪನ್ಮೂಲ ಬಳಕೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದಾಗಿದೆ. ಮಾನವ ಜನಾಂಗದ ಈಗಿನ ಪೀಳಿಗೆಯ ಆಕಾಂಕ್ಷೆಗಳನ್ನು ಈಡೇರಿಸುವ ಹಾಗೂ ಮುಂದಿನ ಪೀಳಿಗೆಯವರ ಅಭೀಷ್ಟೆಗಳನ್ನೂ ಪೂರೈಸಲು ಸಾಧ್ಯವಾಗುವಂತೆ ಈ ಜೀವಗೋಳವನ್ನು ನಿರ್ವಹಿಸುವ ಕ್ರಮಗಳು” ಎಂದು ಸಂರಕ್ಷಣೆಯನ್ನು ವ್ಯಾಖ್ಯಾನಿಸಲಾಗಿದೆ. ಸಂರಕ್ಷಣೆಯ ನೈಸರ್ಗಿಕ ಸಂಪನ್ಮೂಲಗಳ ಸರಿಯಾದ ನಿರ್ವಹಣೆಗೆ ಸಂಬಂಧಿಸಿದ್ದು ಅವುಗಳ ಅತಿಯಾದ ಬಳಕೆ, ಅಪವ್ಯಯ ಮತ್ತು ಅವನತಿಗಳನ್ನು ತಡೆಯುವ ಒಂದು ಕಾರ್ಯವಾಗಿದೆ. ಅದು ಸಂಪನ್ಮೂಲಗಳಿಂದ ದೊರಕಬಹುದಾದ ಎಲ್ಲ ಪ್ರಯೋಜನಗಳನ್ನು ಪಡೆದುಕೊಳ್ಳವುದರ ಜೊತೆಗೆ, ಅವುಗಳ ಪ್ರಮಾಣ ಹಾಗೂ ಗುಣಮಟ್ಟವನ್ನು ಕಾಯ್ದುಕೊಂಡು ಹೋಗಲು ಬಳಸಬಹುದಾದ ಚಟುವಟಿಕೆಗಳ ಒಂದು ಗುಚ್ಚವಾಗಿದೆ.

ಸಂಪನ್ಮೂಲಗಳ ಸಂರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದೆ. ಅದನ್ನು ಹೇಗೆ ಸಾಕಾರಗೊಳಿಸುವುದು? ಅದನ್ನು ನಾಲ್ಕು R ಶಂತ್ರದ ಮೂಲಕ ಪರಿಣಾಮಕಾರಿಯಾಗಿ ಮಾಡಬಹುದಾಗಿದೆ. ಹಾಗಾದರೆ, ಆ ನಾಲ್ಕು R ಗಳು ಯಾವುವು? ಅವೆಂದರೆ, 

Reduce (ಸಂಪನ್ಮೂಲಗಳ ಬಳಕೆಯನ್ನು ಕಡಿಮೆ ಮಾಡುವುದು),

Reuse (ಸಂಪನ್ಮೂಲಗಳ ಮರು ಬಳಕೆ ಮಾಡುವದ) 

Recharge (ಸಂಪನ್ಮೂಲಗಳ ಪುನರ್ಭತಿ್ರ ಮಾಡುವುದು ಅಥವಾ Regenerate (ಸಂಪನ್ಮೂಲಗಳನ್ನು ಪುನರುಜೀವನಗೊಳಿಸುವುದು 

 Research (ಸಂಶೋಧನೆ), 

ಈಗ ಇವುಗಳ ಕುರಿತು ಸಂಕ್ಷಿಪ್ತವಾಗಿ ತಿಳಿಯೋಣ.

1. ಸಂಪನ್ಮೂಲಗಳ ಬಳಕೆಯನ್ನು ಕಡಿಮೆ ಮಾಡುವುದು (Reduce) : ಸಂಪನ್ಮೂಲಗಳನ್ನು ಆದಷ್ಟು ಕಡಿಮೆ ಬಳಕೆ ಮಾಡುವುದಲ್ಲದೇ ಅವುಗಳ ಪೋಲು ಮಾಡುವಿಕೆಯನ್ನು ಕಡಿಮೆಗೊಳಿಸುವುದಾಗಿದೆ. ಯಾವುದೇ ಕೆಲಸಕ್ಕೆ ಬೇಕಾದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದರೆ ಒಟ್ಟಾರೆ ಮಾಲಿನ್ಯವೂ ಕಡಿಮೆಯಾಗುತ್ತದೆ. ಉದಾಹರಣೆಗೆ ಪ್ರತಿಸಾರಿ ಮೋಟರ್ ಬೈಕ್ ಬಳಕೆಯ ಬದಲಾಗಿ ಸೈಕಲ್ ಬಳಸುವುದು ಅಥವಾ ನಡೆದು ಹೋಗುವುದು, ಪ್ರತಿಯೊಬ್ಬರೂ ಸ್ವಂತ ವಾಹನದಲ್ಲಿ ತಿರುಗಾಡದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವುದರಿಂದ ಪೆಟ್ರೋಲ್ ಮತ್ತು ಡೀಸಲ್‌ನ ಬಳಕೆ ಕಡಿಮೆಯಾಗುವುದಲ್ಲದೇ ವಾಯುಮಾಲಿನ್ಯವು ಸಹ ಕಡಿಮೆಯಾಗುತ್ತದೆ.

2. ಸಂಪನ್ಮೂಲಗಳ ಮರು ಬಳಕೆ ಮಾಡುವುದು (Reuse) : ಇದು ಸಂಪನ್ಮೂಲ ಸಂರಕ್ಷಣೆಗೆ ಒಂದು ಸರಳ ಆದರೆ ತುಂಬಾ ಪರಿಣಾಮಕಾರಿ ಮಾರ್ಗವಾಗಿದೆ. ಪ್ರತಿಯೊಂದು ಸಂಪನ್ಮೂಲಗಳನ್ನು ಬೇರೆ ಬೇರೆ ಕೆಲಸಗಳಿಗಲ್ಲದೇ, ಹಲವು ಬಾರಿ ಉಪಯೋಗಿಸಬಹುದಾಗಿದೆ. ಉದಾಹರಣೆಗೆ ಸ್ನಾನಕ್ಕೆ ಬಳಸಿದ ನೀರನ್ನು ತೋಟಕ್ಕೆ ಬಳಸಬಹುದು, ಉಪಯೋಗಿಸಿದ ಕಾಗದವನ್ನು ಪಟ್ಟಣಗಳನ್ನು ತಯಾರಿಸಲು ಬಳಸಬಹುದು.

3, ಸಂಪನ್ಮೂಲಗಳ ಮನಃರ್ಭತಿ್ರ ಮಾಡುವುದು (Recharge) ಮತ್ತು ಪುನರುಜೀವನಗೊಳಿಸುವುದು (Regenerate) : ನಮ್ಮ ಪ್ರಜ್ಞಾಪೂರ್ವಕ ಪ್ರಯತ್ನಗಳಿಂದ ಸಂಪನ್ಮೂಲಗಳನ್ನು ವೃದ್ಧಿಸುವ ಕಾರ್ಯಗಳು ಈ ವಿಧಗಳಲ್ಲಿ ಬರುತ್ತವೆ. ಅಂತರ್ಜಲ ಮರುಪೂರಣಗೊಳಿಸುವ ಎಲ್ಲ ಕಾರ್ಯಗಳು, ಆರಣ್ಯಕರಣದಿಂದ ಮರಗಿಡಗಳ ಸಂಖ್ಯೆಯ ವೃದ್ಧಿ ಹಾಗೂ ತನ್ಮೂಲಕ ಜೀವ ವೈವಿಧ್ಯತೆಯ ವಿಸ್ತರಣೆಗಳು ಇಲ್ಲಿ ನೀಡಬಹುದಾದ ಉದಾಹರಣೆಗಳಾಗಿವೆ.

4. ಸಂಶೋಧನೆ (Research : ಬರಿದಾಗುವ ಸಂಪನ್ಮೂಲಗಳಿಗೆ ಪರ್ಯಾಯವಾಗಿ ಬಳಕೆ ಮಾಡಬಹುದಾದ ನವೀಕರಣಗೊಳಿಸಬಹುದಾದ ವಸ್ತುಗಳ ಸಂಶೋಧನೆ ನಿರಂತರವಾಗಿ ಆಗಬೇಕು. ನಾವು ಈಗ ಬಳಸುತ್ತಿರುವ ಇಂಧನಕ್ಕೆ ಸೌರಶಕ್ತಿ ಮತ್ತು ಭವನ ಶಕ್ತಿಗಳು ಉತ್ತಮ ಪರ್ಯಾಯಗಳಾಗಿವೆ.


ಈ ಕೆಳಗೆ ಸೂಚಿಸಿದ ಅಂಶಗಳು ನೀವು ಸಂಪನ್ಮೂಲಗಳನ್ನು ಸಂರಕ್ಷಿಸಲು ಏನು ಮಾಡಬಹುದು ಎಂಬದನ್ನು ತಿಳಿಸುತ್ತವೆ:

• ಕಡಿಮೆ ಸರಕನ್ನು ಖರೀದಿಸಿ (ಈಗಾಗಲೇ ಇರುವಂಥವುಗಳನ್ನು ಎಷ್ಟು ದೀರ್ಘಕಾಲವೂ ಅಷ್ಟು ಉಪಯೋಗಿಸಿ, ಹೊಸದನ್ನು ಖರೀದಿಸುವಾಗ ಅದು ಅವಶ್ಯವಿದೆಯಾ ಎಂದು ಪ್ರಶ್ನಿಸಿಕೊಳ್ಳಿ).

• ಅನವಶ್ಯಕ ಪ್ಯಾಕಿಂಗ್‌ನ್ನು ವರ್ಜಿಸಿ (ಉದಾ: ಬಾಟಲಿ ನೀರು ಖರೀದಿಸುವ ಬದಲಾಗಿ ನಳದಿಂದ ನೀರು ಕುಡಿಯಿರಿ)

• ಮೆಟಲ್ ಡಬ್ಬಿಗಳು, ಹಳೆಯ ಸೆಲ್ ಫೋನ್‌ಗಳು ಮತ್ತು ಪ್ಲಾಸ್ಟಿಕ್ ಬಾಟಲುಗಳನ್ನು ಮರುಬಳಕೆ ಮಾಡಿರಿ.

• ಪುನರುತ್ಪಾದಿಸಿದ ಸರಕಿನಿಂದ ಮಾಡಿದ ವಸ್ತುಗಳನ್ನು ಹೆಚ್ಚು ಖರೀದಿಸಿರಿ.

• ವಾತಾವರಣವನ್ನು ಮಲಿನಗೊಳಿಸದೇ ನೀರು ಮತ್ತು ಗಾಳಿಯನ್ನು ಶುದ್ಧವಾಗಿಡಿ.

• ಮಣ್ಣಿನ ಸವಕಳಿಯನ್ನು ತಡೆಗಟ್ಟಿರಿ.

• ಒಂದು ಮರವನ್ನು ಅನಿವಾರ್ಯವಾಗಿ ಕತ್ತರಿಸಿದಾಗ ಅದರ ಬದಲಾಗಿ ಇನ್ನೊಂದು ಸಸಿಯನ್ನು ನೆಡಿರಿ.

• ಸ್ವಂತ ವಾಹನವನ್ನು ಕಡಿಮೆ ಚಲಾಯಿಸಿ, ಸಾರ್ವಜನಿಕ ಸಾರಿಗೆಯನ್ನು ಬಳಸಿ; ಸೈಕಲ್ ಉಪಯೋಗಿಸಿ ಅಥವಾ ನಡೆದಾಡಿರಿ.

• ಮನೆಯಲ್ಲಿ ಇಂಧನವನ್ನು ಉಳಿಸಿ (ಉದಾ : ದೀಪಗಳನ್ನು ಅವಶ್ಯವಿಲ್ಲದಿದ್ದಾಗ ಆರಿಸುವುದು).

ಇದೇ ಸಂರಕ್ಷಣೆಯ ಅಂಶವನ್ನು ಜಗತ್ತಿನ ಬಹುತೇಕ ರಾಷ್ಟ್ರಗಳು ‘ಸುಸ್ಥಿರ ಅಭಿವೃದ್ಧಿ’ಯ ತತ್ವವನ್ನು ಅಳವಡಿಸಿಕೊಳ್ಳುವುದರ ಮೂಲಕ ಸಾಕಾರಗೊಳಿಸಲು ಪ್ರಯತ್ನಿಸುತ್ತಿವೆ. ಸುಸ್ಥಿರ ಅಭಿವೃದ್ಧಿಯೆಂದರೆ ಮುಂದಿನ ಪೀಳಿಗೆಯವರಿಗೂ ಉತ್ತಮ ಜೀವನ ಮಟ್ಟ ಲಭಿಸುವಂತೆ ಸಂಪನ್ಮೂಲಗಳ ನ್ಯಾಯೋಚಿತ ಬಳಕೆ, ಸಂರಕ್ಷಣೆ ಮತ್ತು ಅವುಗಳ ಗುಣಮಟ್ಟವನ್ನು ಕಾಪಾಡಿಕೊಂಡು ಹೋಗುವಂಥ ಒಂದು ಮಾರ್ಗವಾಗಿದೆ.

ನಮ್ಮ ಜೀವಪರಿಸರದ ಹೆಜ್ಜೆ ಗುರುತನ್ನು ಕಡಿಮೆ ಮಾಡುವುದು

ಮಾನವ ಜನಾಂಗ ಪೃಥ್ವಿಯ ಪರಿಸರದ ಮೇಲೆ ಹಾಕುತ್ತಿರುವ ಒಟ್ಟಾರೆ ಒತ್ತಡದ ಪ್ರಮಾಣವೆಷ್ಟು? ಅದನ್ನು ಅಳೆಯಲು ಯಾವುದಾದರೂ ಸಾಧನವಿದೆಯಾ? ವರ್ಲ್ಡ್ ವೈಲ್ಡ್‌ಲೈಫ್ ಫಂಡ್ (WWE) ಸಂಸ್ಥೆಯು 'ಜೀವಪರಿಸರದ ಹೆಜ್ಜೆಗುರುತು' ಎಂಬ ಸಾಧನವನ್ನು ಸಿದ್ಧಪಡಿಸಿ ಅದರ ಮೂಲಕ ಒಂದು ರಾಷ್ಟ್ರ ಅಥವಾ ಯಾವುದೇ ರಾಷ್ಟ್ರದ ಒಬ್ಬ ವ್ಯಕ್ತಿಯ ಸಂಪನ್ಮೂಲಗಳ ಬಳಕೆ ಮತ್ತು ತ್ಯಾಜ್ಯ ಉತ್ಪನ್ನದ ಪ್ರಮಾಣಗಳ ಮೂಲಕ ಪರಿಸರದ ಮೇಲೆ ಬೀಳುವ ಒತ್ತಡವನ್ನು ಅಳೆಯುತ್ತಿದೆ. ಸದ್ಯದ ತಾಂತ್ರಿಕತೆಯನ್ನು ಬಳಸುತ್ತಾ ಒಬ್ಬ ವ್ಯಕ್ತಿ ಪೃಥ್ವಿಯ ಎಷ್ಟು ಭೌತಿಕ ಪ್ರದೇಶವನ್ನು ಬಳಸಿ ಜೀವಿಸುತ್ತಿದ್ದಾನೆ ಎಂಬುದನ್ನು ಸೂಚಿಸುವ ಸಾಧನವೆ ಪರಿಸರದ ಹೆಜ್ಜೆಗುರುತು, ಈ ಭೌತಕ ಪ್ರದೇಶವು ಒಬ್ಬ ವ್ಯಕ್ತಿಗೆ ಅವಶ್ಯವಿರುವ ಆಹಾರ, ನೀರು, ಇಂಧನ, ಬಟ್ಟೆ ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಉತ್ಪಾದಿಸುವ ಜೈವಿಕ ಪ್ರದೇಶವಲ್ಲದೇ, ಆ ವ್ಯಕ್ತಿಯು ಸೃಷ್ಟಿಸುವ ತ್ಯಾಜ್ಯಗಳನ್ನು ಹಿಂಗಿಸಿಕೊಳ್ಳಲು ಬೇಕಾಗಿರುವ ಪ್ರದೇಶವೂ ಆಗಿದೆ. ಅಂದರೆ, ಒಬ್ಬ ವ್ಯಕ್ತಿಯ ಪೃಥ್ವಿಯ ಜೈವಿಕ ಸಾಮರ್ಥ್ಯದ ಬೇಡಿಕೆಯ ಮೂಲಕ ಪರಿಸರದ ಹೆಜ್ಜೆಗುರುತನ್ನು ಅಳೆಯಬಹುದಾಗಿದೆ.

WWF ಸಂಸ್ಥೆಯು ಒಂದು ದೇಶದ ಜೀವ ಪರಿಸರದ ಹೆಜ್ಜೆಗುರುತನ್ನು “ಆ ದೇಶವು ಬಳಸುವ ಆಹಾರ, ಬಟ್ಟೆ ಹಾಗೂ ಕಟ್ಟಿಗೆಯನ್ನು ಉತ್ಪಾದಿಸಲು ಬೇಕಾಗುವ ಎಲ್ಲ ಕೃಷಿ, ಪಾನುವಾರು ಮೇಯಿಸುವ, ಅರಣ್ಯ ಮತ್ತು ಮೀನುಗಾರಿಕೆಗೆ ಲಭ್ಯವಿರುವ ಭೂಮಿಯ ಪ್ರಮಾಣವಲ್ಲದೇ ಬಂಧನ ಬಳಸಿದಾಗ ಹೊರಹೊಮ್ಮುವ ತ್ಯಾಜ್ಯಗಳನ್ನು ಹೀರಿಕೊಳ್ಳಲು ಬೇಕಾದ ಜಮೀನು, ಮತ್ತು ಮೂಲ ಸೌಕರ್ಯಗಳನ್ನು ಕಲಿಸಲು ಬೇಕಾದ ಒಟ್ಟು ಜಮೀನಿನ ಪ್ರಮಾಣ" ಎಂದು ವ್ಯಾಖ್ಯಾನಿಸಲಾಗಿದೆ.

ಅದೇ ಸಂಸ್ಥೆಯು ತನ್ನ 2011ರ Living Planet Reports 201ನೇ ಸಾಲಿನಲ್ಲಿ ಒಟ್ಟು ಜಾಗತಿಕ ಜೀವ ಪರಿಸರದ ಹೆಜ್ಜೆ ಗುರುತಿನ ಪ್ರಮಾಣವು 181 ಶತಕೋಟಿ ಹೆಕ್ಟೇರುಗಳು ಅಥವಾ ಕಲಾ ಒಬ್ಬರಿಗೆ 26 ಹೆಕ್ಟೇರುಗಳಷ್ಟಿತ್ತು ಎಂದು ಅಂದಾಜಿಸಿದೆ. ಆದರೆ ಪೃಥ್ವಿಯ ದೈವಿಕ ಸಾಮರ್ಥ್ಯವನ್ನು 12 ಶತಕೋಟಿ ಹೆಕ್ಟೇರುಗಳು ಅಥವಾ ತಲಾ ಒಬ್ಬರಿಗೆ 1.7 ಹೆಕ್ಟೇರುಗಳು ಮಾತ್ರ ಎಂದು ಅಂದಾಜಿಸಲಾಗಿದೆ. ಇದರರ್ಥ, ಪತಿಯೊಬ್ಬರೂ ಸದ್ಯದ ಜೀವನ ಶೈಲಿಯನ್ನು ಮುಂದುವರೆಸಿಕೊಂಡು ಹೋಗು 18 ಶತಕೋಟಿ ಹೆಕ್ಟೇರುಗಳಷ್ಟು ಭೂಪ್ರದೇಶದ ಅವಶ್ಯಕತೆಯಿದ್ದು, ಇದ್ದದ್ದು ಕೇವಲ 12 ಶತಕೋಟಿ ಹೆಕ್ಟೇರುಗಳಷ್ಟು ಮಾತ್ರ ಅಂದರೆ 2010ರಲ್ಲಿ, ಮಾನವರು ವ್ಯಕ್ತಿಯು ನೀಡಬಹುದಾದಂಥ ಸಂಪನ್ಮೂಲಗಳಿಗಿಂತ ಶೇ.50ರಷ್ಟು ಹೆಚ್ಚಿನ ಪ್ರಮಾಣದ ಸಂಪನ್ಮೂಲಗಳನ್ನು ಅಂದರೆ ಒಂದೂವರೆಯಷ್ಟು ಸೃಷ್ಟಿಯನ್ನು ಬಳಸುತ್ತಿದ್ದರು ಎಂದರ್ಥ, ನಾವು ಇದೇ ರೀತಿ ನಮ್ಮ ಸಂಪನ್ಮೂಲ ಬಳಕೆಯನ್ನು ಮುಂದುವರೆಸಿದರೆ, ಕೆಲವೇ ದಶಕಗಳಲ್ಲಿ ದೃಷ್ಟಿಯ ಮರುಸೃಷ್ಟಿ ಸಾಮರ್ಥ್ಯ ಮೀರಿಸುವವಲ್ಲದೇ, ನಮ್ಮ ಜೀವನ ನಡೆಸಲು ಇ೦ಥ ಐದು ಭೂಮಿಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಆದ್ದರಿಂದ ಏನು ಮಾಡಬೇಕು? ಈ ಸಂಗತಿಯು ನಮ್ಮ ಜೀವನ ಶೈಲಿಯ ಬದಲಾವಣೆಯಲ್ಲದೇ ಕಡಿಮೆ ಸಂಪನ್ಮೂಲಗಳನ್ನು ಬಳಸಲು ಸ್ಪಷ್ಟ ಸಂದೇಶ ನೀಡುತ್ತದೆ.

ನಮ್ಮ ಪ್ರತಿಯೊಬ್ಬರದೂ ಜೀವಪರಿಸರದ ಹೆಜ್ಜೆ ಗುರುತು ಇದ್ದು, ಒಟ್ಟಾರೆ ಹೆಜ್ಜೆಗುರುತಿನ ಹೆಚ್ಚಳಕ್ಕೆ ಕೊಡುಗೆ ನೀಡುತ್ತಿದ್ದೇವೆ, ಆದ್ದರಿಂದ ಜೀವಪರಿಸರದ ಹೆಜ್ಜೆಗುರುತನ್ನು ಕಡಿಮೆ ಮಾಡಬೇಕಾದರೆ ನಾವೇ ಮೊದಲು ಅದನ್ನು ಪ್ರಾರಂಭಿಸುವುದು ಸೂಕ್ತ. ಇಲ್ಲಿ ಬಹು ಪ್ರಮುಖವಾದ ಸಂಗತಿಯೆಂದರೆ ಈ ಕುರಿತು ನಾವು ಅರಿತುಕೊಂಡು, ನಮ್ಮ ಸಮೀಪದವರಿಗೆ ಮನದಟ್ಟು ಮಾಡಿಸಿ, ಜನರ ಒಟ್ಟಾರೆ ತಿಳುವಳಿಕೆಯನ್ನು ಹೆಚ್ಚಿಸುವುದಾಗಿದೆ. ಈ ಮೂಲಕ ನಿಮ್ಮ ಮಾವ ಅರ್ಥಪೂರ್ಣ ವಾಗುತ್ತದೆ. ಉದಾಹರಣೆಗೆ, ತ್ಯಾಜ್ಯ ವಸ್ತುಗಳ ಮರುಬಳಕೆಯನ್ನು ನೀವು ಪ್ರಾರಂಭಿಸಿ, ನಿಮ್ಮ ಮನೆಯವರಿಗೆ ಅವರ ಕುರಿತು ಜಾಗೃತಿ ಮೂಡಿಸಿದಾಗ ಆದರೂ ಅದನ್ನು ಅಳವಡಿಸಿಕೊಳ್ಳುತ್ತಾರಲ್ಲದೆ ಈ ವಿಷಯವೂ ನೆರೆಹೊರೆಯವರಿಗೂ ಹೆಬ್ಬುವುದು. ಇದು ಒಂದು ಸಣ್ಣ ಪ್ರಯತ್ನವಾದರೂ ವಿಶಾಲ ಪರಿಣಾಮ ಬೀರುವಂಥದಾಗಿದೆ.

ನಿಮ್ಮ ಪರಿಸರದ ಹೆಜ್ಜೆ ಗುರುತನ್ನು ಕಡಿಮೆ ಮಾಡಲು ನೀವು ಏನು ಮಾಡಬಹುದು?

ಆಹಾರ

• ಸಾವಯವ ಅಥವಾ ಸ್ಥಳೀಯವಾಗಿ ಬೆಳೆದ ಆಹಾರವನ್ನು ಖರೀದಿಸಿರಿ.

• ಒಂದು ಕೈತೋಟವನ್ನು ಬೆಳೆಸಿರಿ (ತನ್ಮೂಲಕ ನೀವು ಆಹಾರ ಸಾಗಾಟದಿಂದಾಗುವ ಮಾಲಿನ್ಯ. ರಸಗೊಬ್ಬರ ಬಳಕೆ, ಮೊಟ್ಟಣಗಳ ಅವಶ್ಯಕತೆಯನ್ನು ಕಡಿಮೆ ಮಾಡಬಹುದಲ್ಲದೇ, ನಿಮಗೆ ತಾಜಾ ತರಕಾರಿ ಲಭ್ಯವಾಗುತ್ತದೆ).

• . ಅಂಗಡಿಗಳಿಗೆ ನಿಮ್ಮದೇ ಕೈಚೀಲಗಳನ್ನು ತೆಗೆದುಕೊಂಡು ಹೋಗಿರಿ.

• ಆದಷ್ಟು ಕಡಿಮೆ ಪ್ರಮಾಣದಲ್ಲಿ ಸಂಸ್ಕರಿಸಿದ ಆಹಾರವನ್ನು ಬಳಸಿರಿ.

• ಹಣ್ಣಿನ ರಸದ ಪೊಟ್ಟಣ ಕೊಳ್ಳುವುದರ ಬದಲಾಗಿ ಹಣ್ಣನ್ನೇ ಖರೀದಿಸಿ

• ಮಾಂಸ ಮತ್ತು ಡೇರಿ ಉತ್ಪನ್ನಗಳ ಕೆಯನ್ನು ಕಡಿಮೆ ಮಾಡಿರಿ, ಮಗೆ ಬೇರೆ ಮೂಲಗಳಿಂದಲೂ ಪ್ರೋಟೀನ್ ದೊರಕುತ್ತದೆ.

• ಹೊರಗಿನಿಂದ ಆಹಾರ ತರಿಸಿಕೊಳ್ಳುವುದಕ್ಕಿಂತ ಮನೆಯಲ್ಲಿಯೇ ತಯಾರಿಸುವುದು ಉತ್ತಮ

ಇಂಧನ/ವಿದ್ಯುಚ್ಛಕ್ತಿ

• ಬಳಕೆ ಮುಗಿದ ಮೇಲೆ ಎಲ್ಲ ವಿದ್ಯುದ್ದೀಪಗಳನ್ನು ಆರಿಸಿರಿ

• ರಾತ್ರಿ ಹೊತ್ತಿನಲ್ಲಿ ಏರ್ ಕಂಡೀಷನರ್‌ ಮತ್ತು ಹೀಟರ್‌ಗಳನ್ನು ಆರಿಸಿರಿ.

• ಮನೆಯಿಂದಾಚೆಗೆ ಬನ್ನಿ, ನೀವು ಉಲ್ಲಾಸಭರಿತರಾಗಿರುತ್ತೀರಲ್ಲದೇ, ಕಡಿಮೆ ಇಂಧನ ಬಳಸುತ್ತೀರಿ. ಮನೆ/ಕಾರನ್ನು ತಂಪಾಗಿಸುವಾಗ ಅಥವಾ ಬಿಸಿಯಾಗಿಸುವಾಗ, ಬಾಗಿಲು-ಕಿಟಕಿಗಳನ್ನು ಮುಚ್ಚಿರಿ.

ಸಾರಿಗೆ

• ಶಾಲೆಗೆ ನಡೆದು ಬನ್ನಿ ಅಥವಾ ಸೈಕಲ್ ತನ್ನಿ.

• ಸಾರ್ವಜನಿಕ ಸಾರಿಗೆಯನ್ನು ಬಳಸಿರಿ.

• ಹೊರಗೆ ಹೋಗುವಾಗ ಅಥವಾ ನಡೆಯುವ ದಾರಿ ದೂರ ಇದ್ದಾಗ ಕಾರ್ ಪೂಲ್ ಬಳಸಿರಿ.

ಕಡಿಮೆ ಪ್ರಮಾಣದ ತ್ಯಾಜ್ಯ ಸೃಷ್ಟಿಸುವುದು

• ಆದಷ್ಟು ಕಡಿಮೆ ಪ್ಯಾಕೇಜ್ ಇರುವ ವಸ್ತುಗಳನ್ನು ಖರೀದಿಸುವುದು

• ಅವಶ್ಯಕತೆಯಿಲ್ಲದಿದ್ದಾಗ ಚೀಲವನ್ನು ಕೇಳದಿರುವುದು

• ಆದಷ್ಟು ಪುನರ್ಬಳಕೆ ಮಾಡುವುದು ಮತ್ತು ಪುನರ್ಬಳಕೆ ಮಾಡಿದ ವಸ್ತುಗಳನ್ನು ಖರೀದಿಸುವುದು.

• ಮುರಿದ ಸಾಮಾನುಗಳನ್ನು ಜೋಡಿಸಿ ರಿಪೇರಿ ಮಾಡುವುದು.

• ಪುನಃ ಪುನಃ ಬಳಸಬಹುದಾದಂಥ ವಸ್ತುಗಳನ್ನು ಖರೀದಿಸುವುದು.

ನೀರು

• ಹಲ್ಲುಜ್ಜುವಾಗ ನಳವನ್ನು ಬಂದ್ ಮಾಡುವುದು.

• ಚರಂಡಿಗಳಲ್ಲಿ ವಿಷಕಾರಕ ವಸ್ತುಗಳನ್ನು ಸುರಿಯದಿರುವುದು

• ಪಾತ್ರೆ ಮತ್ತು ಬಟ್ಟೆ ತೊಳೆಯುವ ಯಂತ್ರಗಳನ್ನು ತುಂಬಿಸಿ (ಫುಲ್ ಲೋಡ್) ಉಪಯೋಗಿಸುವುದು.

• ಶೌಚಾಲಯ (ಫಷ್) ಟ್ಯಾಂಕಿನಲ್ಲಿ ಒಂದು ಇಟ್ಟಿಗೆಯನ್ನು ಇಡುವುದರಿಂದ ಸಾಕಷ್ಟು ನೀರನ್ನು ಉಳಿಸಬಹುದು.

• ಭಾರತೀಯ ವಿಧದ ಶೌಚಾಲಯವನ್ನು ಹೆಚ್ಚು ಬಳಸಿರಿ

ಸಮುದಾಯ

• ಸಮುದಾಯದ ಜನರಿಗೆ ಪರಿಸರದ ಹೆಜ್ಜೆಗುರುತಿನ ಕುರಿತು ಮಾಹಿತಿ ನೀಡಿ, ಅದನ್ನು ಕಡಿಮೆ ಮಾಡಲು ಏನು ಮಾಡಬಹುದೆಂಬುದನ್ನೂ ತಿಳಿಸಿ.

• ಸ್ಥಳೀಯ ಜಲಮೂಲಗಳನ್ನು ರಕ್ಷಿಸುವ/ಶುದ್ದೀಕರಿಸುವ ಯಾವುದ ದರೂ ಸಂಘ ಸಂಸ್ಥೆಯಿದ್ದರೆ ಅದರ ಸದಸ್ಯರಾಗಿರಿ,

• . ಪುನರ್ಬಳಕೆ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಿರಿ.

•  ಯಾವ ಕ್ರಮಗಳ ಮೂಲಕ ವಿದ್ಯುತ್ ಹಾಗೂ ಹಣ ಉಳಿಸಬಹುದೆಂಬುದನ್ನು ಗಮನಿಸಿರಿ.


ಹೀಗೆ ಸರಳ ಕ್ರಮಗಳಿಂದ ಸಂಪನ್ಮೂಲ ಸಂರಕ್ಷಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ಮಹಿಸಬಹುದಾಗಿದೆ. ಏಕೆಂದರೆ ಮಹಾತ್ಮಾ ಗಾಂಧೀಜಿಯವರು ಸಹ “ಇತರರಲ್ಲಿ ಕಾಣಬಯಸುವ ಬದಲಾವಣೆಯನ್ನು ಮೊದಲು ನೀನೇ ಆಗಿ ತೋರಿಸು” ಎಂದಿದ್ದಾರೆ.



“ಎಲ್ಲರ ಆಸೆಗಳನ್ನು ಈಡೇರಿಸಲು ಈ ಪೃಥ್ವಿಯಲ್ಲಿ ಎಲ್ಲ ಇದೆ, ಆದರೆ ದುರಾಸೆಗಳನ್ನಲ್ಲ.” – ಮಹಾತ್ಮಾ ಗಾಂಧೀಜಿ


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು