ನೈಸರ್ಗಿಕ ಸಂಪನ್ಮೂಲಗಳ ಹಾಗೆಯೇ, ಜನಸಂಖ್ಯೆಯನ್ನೂ ಸಹ ಒಂದು ದೇಶದ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಒಂದು ದೇಶದಲ್ಲಿ ವಾಸಿಸುತ್ತಿರುವ ಜನರು ಈ ದೇಶದ ಜನಸಂಖ್ಯೆ ಆಗಿದ್ದು ಅವರಲ್ಲಿ ಮಕ್ಕಳು, ವಯಸ್ಕರು ಮತ್ತು ಹಿರಿಯ ನಾಗರಿಕರಿದ್ದಾರೆ. 14 ವರ್ಷದ ವಯಸ್ಸಿನ ಒಳಗಿರುವವರನ್ನು ಮಕ್ಕಳೆಂತಲೂ, 15 ವರ್ಷದ – ಮೇಲ್ಪಟ್ಟು 60 ವರ್ಷದ ಒಳಗಿನವರನ್ನು ವಯಸ್ಕರಂತಲೂ ಮತ್ತು 60 ವರ್ಷದ ಮೇ ಜವರನ್ನು ಹಿರಿಯ ನಾಗರಿಕರೆಂತಲೂ ಗುರುತಿಸಲಾಗಿದೆ. ವಯಸ್ಕರು ದುಡಿಯಲು ಸಮರ್ಥರು. ಇವರನ್ನು ದುಡಿಯುವ ಜನರು ಎನ್ನುತ್ತೇವೆ. ಈ ದುಡಿಯುವ ಜನರೇ ದೇಶದ ಸಂಪತ್ತು, ಪ್ರಸ್ತುತ ದೇಶದಲ್ಲಿರುವ ಉತ್ಪಾದನ ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯ ಹೊಂದಿರುವ ದುಡಿಯುವ ಜನರನ್ನು ಮಾನವ ಸಂಪನ್ಮೂಲ ಎಂದು ಕರೆಯಲಾಗುತ್ತಿದೆ. ಈಗ ಭಾರತದಲ್ಲಿ ಯುವಕರೇ ಹೆಚ್ಚಾಗಿರುವುದರಿಂದ, ದುಡಿಯುವ ಶಕ್ತಿ ಹೆಚ್ಚಾಗಿದೆ.
ಮಾನವ ಸಂಪನ್ಮೂಲಕ್ಕೆ ಉತ್ತಮ ಶಿಕ್ಷಣ ತರಬೇತಿ ಮತ್ತು ಆರೋಗ್ಯ ಸುರಕ್ಷತೆಗಳನ್ನು ಒದಗಿಸಿದರೆ, ಅವರು ಮಾನವ ಬಂಡವಾಳವಾಗಿ ಮಾರ್ಪಡುತ್ತಾರೆ, ಇವರು ರಾಷ್ಟ್ರದ ಆದಾಯದ ಹೆಚ್ಚಳಕ್ಕೆ ಕಾರಣರಾಗುವ ಸಾಮಾಜಿಕ ಪರಿವರ್ತನೆ ತರುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಮೇಲೆ ಹೆಚ್ಚಿನ ಹಣ ಹೂಡುವುದರಿಂದ ಭವಿಷ್ಯದಲ್ಲಿ ಅವರು ಹೆಚ್ಚಿನ ಆದಾಯ ತರಬಲ್ಲರು, ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು. ಆದ್ದರಿಂದಲೇ ಸರ್ಕಾರಗಳು ನಾಗರಿಕರಿಗೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಒದಗಿಸಲು ಶ್ರಮಿಸುತ್ತವೆ.
ಸಂಪನ್ಮೂಲವಾಗಿ ಜನರು
ಶಿಕ್ಷಣ ಮತ್ತು ತರಬೇತಿ ಪಡೆದ ಆರೋಗ್ಯವಂತ ಜನರ ದುಡಿಯುವ ಸಾಮರ್ಥ್ಯ ಹೆಚ್ಚಾಗಿರುವುದನ್ನು ನಮ್ಮ ಪರಿಸರದಲ್ಲಿ ನಾವು ಗಮನಿಸಬಹುದು, ಇದರಿಂದ ರಾಷ್ಟ್ರದ ಆದಾಯ ಹೆಚ್ಚುತ್ತದೆ. ಹಾಗಾಗಿ ವಿದ್ಯಾವಂತ ಹಾಗೂ ಆರೋಗ್ಯವಂತ ದುಡಿಯುವ ಜನರೇ ದೇಶದ ಮಾನವ ಸಂಪತ್ತು, ಸರಕು ಸೇವೆಗಳ ಉತ್ಪಾದನೆಯಲ್ಲಿ ನಿಸರ್ಗ ಸಂಪತ್ತು ಮತ್ತು ಭೌತಿಕ ಬಂಡವಾಳಕ್ಕಿಂತ ಮಾನವ ಸಂಪತ್ತು ಹೆಚ್ಚಿನ ಮಹತ್ವವನ್ನು ಪಡೆದಿದೆ. ಮಾನವ ಸಂಪತ್ತು ಉತಾದನೆಗೆ ಬೇಕಾದ ಜ್ಞಾನ ಮತ್ತು ಶ್ರಮಶಕ್ತಿಯನ್ನು ಒದಗಿಸುತ್ತವೆ. ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯದ ವಿವಿಧ ಉದ್ಯೋಗಗಳಲ್ಲಿ ದುಡಿಯುತ್ತಿರುವ ಜನರನ್ನು ಶ್ರಮ ಶಕ್ತಿ ಎನ್ನುತ್ತೇವೆ. ಮಾನವ ಸಂಪತ್ತು ದುಡಿಮೆಗೆ ಅಗತ್ಯವಾದ ಶ್ರಮಶಕ್ತಿಯನ್ನು ಪೂರೈಸುತ್ತದೆ. ಮಾನವ ಬಂಡವಾಳವು ಹೆಚ್ಚಿನ ಸಂಶೋಧನೆಗಳನ್ನು ಕೈಗೊಂಡು, ಜನಸಮುದಾಯಕ್ಕೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ. ನಾವು ಪಡೆಯುವ ವಿದ್ಯುತ್, ಟಿ.ಎ., ಕಂಪ್ಯೂಟರ್, ಮೊಬೈಲ್, ವಾಹನಗಳು ಮುಂತಾದುವು ಮಾನವ ಬಂಡವಾಳದ ಕೊಡುಗೆಯಾಗಿವೆ.
ಬಹಳ ಕಾಲದವರೆಗೂ ಭಾರತದಲ್ಲಿನ ಅತಿಯಾದ ಜನಸಂಖ್ಯೆಯು ದೇಶಕ್ಕೆ ಹೊರೆ ಎಂದೇ ಭಾವಿಸಲಾಗಿತ್ತು.ಆದರೆ ಚೀನಾದ ಆರ್ಥಿಕ ಯಶಸ್ಸಿನ ನಂತರ ಜನಸಂಖ್ಯೆಯನ್ನು ಸಂಪನ್ಮೂಲವಾಗಿ ನೋಡಲಾಗುತ್ತಿದೆ. ಶಿಕ್ಷಣ, ತರಬೇತಿ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಜನರನ್ನು ದೇಶದ ಉತ್ಪಾದಕ ಆಸ್ತಿಯನ್ನಾಗಿ ಪರಿವರ್ತಿಸಲು ಸಾಧ್ಯವಿದೆ. ಆದರೂ ದೇಶದಲ್ಲಿ ಜನಸಂಖ್ಯೆ ಮಿತಿಯಲ್ಲಿರುವುದು ಒಳಿತು.
ಭಾರತದ ಜನಸಂಖ್ಯೆಯ ಲಕ್ಷಣಗಳು
ಜನಸಂಖ್ಯೆಯ ಲಕ್ಷಣಗಳೆಂದರೆ, ಅದರ ಗಾತ್ರ, ರಚನೆ, ಸಾಂದ್ರತೆ, ಗುಣಮಟ್ಟ, ಇತ್ಯಾದಿಗಳಿಗೆ ಸಂಬಂಧಪಟ್ಟಂಥ ಅಂಶಗಳಾಗಿವೆ. ಯಾವುದೇ ರಾಷ್ಟ್ರದ ಜನಸಂಖ್ಯಾ ಸಂಬಂಧಿ ಸಮಸ್ಯೆಗಳನ್ನು ಅರಿಯಲು ಅದರ ಲಕ್ಷಣಗಳ ಸಂಪೂರ್ಣ ಮಾಹಿತಿ ಹೊಂದಿರುವುದು ಅವಶ್ಯಕ. ಭಾರತದಲ್ಲಿ ಜನಗಣತಿ (ಅಂದರೆ ಪ್ರತಿ ನಾಗರಿಕನ ಕುರಿತು ವಿಷಯ ಸಂಗ್ರಹಣೆ) ಪ್ರತಿ ಹತ್ತು ವರ್ಷಗಳಿಗೊಮ್ಮೆ ಜರುಗುತ್ತದೆ. ತೀರ ಇತ್ತೀಚಿನ ಜನಗಣತಿಯನ್ನು 2011ರಲ್ಲಿ ಕೈಗೊಳ್ಳಲಾಗಿದೆ. 2011ರ ಜನಗಣತಿಯು ತೋರ್ಪಡಿಸಿದ ಭಾರತದ ಜನಸಂಖ್ಯೆಯ ಲಕ್ಷಣಗಳು ಈ ಕೆಳಗಿನಂತಿವೆ.
1. ಅಗಾಧ ಗಾತ್ರ ಹಾಗೂ ತೀವ್ರ ಬೆಳವಣಿಗೆ • 201159 2011ರಲ್ಲಿ 121.1 ಕೋಟಿ ಜನರನ್ನು ಹೊಂದಿದ್ದ ಭಾರತವು, ಚೀನಾ ದೇಶದ ನಂತರದಲ್ಲಿ, ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಜನರನ್ನುಳ್ಳ ದೇಶವಾಗಿದೆ. ವಿಶ್ವದ ಪ್ರತಿ ಆರನೆಯ ವ್ಯಕ್ತಿಯು ಭಾರತೀಯನಾಗಿರುವನು. ವಾರ್ಷಿಕ ಪ್ರತಿಶತ 1.8ರ ದರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಭಾರತದಲ್ಲಿ ಪ್ರತಿವರ್ಷ ಆಸ್ಟ್ರೇಲಿಯ ದೇಶದಲ್ಲಿರುವಷ್ಟು ಜನರು ಸೇರಿಕೊಳ್ಳುತ್ತಿದ್ದಾರೆಂದರೆ ಅದರ ಅಗಾಧತೆಯನ್ನು ನೀವು ಗಮನಿಸಬಹುದು. ಇಂಥ ಪರಿಸ್ಥಿತಿಯನ್ನು ‘ಜನಸಂಖ್ಯಾ ಸ್ಫೋಟ’ ಎಂದು ಕರೆಯಲಾಗುತ್ತದೆ. 2022ನೆಯ ಇಸವಿಯ ಹೊತ್ತಿಗೆ, ನಾವು ವಿಶ್ವದ ಅತಿ ಹೆಚ್ಚು ಜನರುಳ್ಳ ರಾಷ್ಟ್ರವಾಗುತ್ತೇವೆ.
2. ಜನಸಂಖ್ಯಾ ಪರಿವರ್ತನೆಯ ಎರಡನೆಯ ಹಂತ: ಭಾರತವು ಸದ್ಯ ಜನಸಂಖ್ಯಾ ಪರಿವರ್ತನೆಯ ಎರಡನೆಯ ಹಂತದಲ್ಲಿದ್ದು, ಮರಣ ದರವು (ಪ್ರತಿ ಸಾವಿರ ಜನಸಂಖ್ಯೆಗೆ ಮರಣಿಸಿದ ಜನರ ಪ್ರಮಾಣ) ಕಡಿಮೆ ಇದ್ದು ಜನನ ದರವು (ಪ್ರತಿ ಸಾವಿರ ಜನಸಂಖ್ಯೆಗೆ ಜನಿಸಿದ ಮಕ್ಕಳ ಪ್ರಮಾಣ) ಇನ್ನೂ ಅಧಿಕವಾಗಿಯೇ ಇದೆ. 2010ನೇ ವರ್ಷದಲ್ಲಿ ಜನನ ದರವು 22.1 ಇದ್ದರೆ, ಮರಣ ದರವು 7.2 ಇದ್ದಿತು, ಅಂದರೆ ಆ ವರ್ಷ, ಪ್ರತಿ ಸಾವಿರ ಜನಸಂಖ್ಯೆಗೆ 15ಕ್ಕೂ ಹೆಚ್ಚಿನ ಸಂಖ್ಯೆಯ ಜನರ ಸೇರ್ಪಡೆ ಆಗುತ್ತಿತ್ತು. ಇದನ್ನು ತುಂಬಾ ಅಧಿಕವೆಂದೇ ಭಾವಿಸಲಾಗುತ್ತದೆ.
3. ತೀವ್ರವಾಗಿ ಏರುತ್ತಿರುವ ಸಾಂದ್ರತೆ : ಒಂದು ಚದರ ಕಿಲೋ ಮೀಟರ್ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸರಾಸರಿ ಸಂಖ್ಯೆಗೆ ಜನಸಾಂದ್ರತೆ ಎನ್ನುತ್ತೇವೆ. ಒಂದು ದೇಶದಲ್ಲಿರುವ ಒಟ್ಟು ಜನಸಂಖ್ಯೆಯನ್ನು ಅಲ್ಲಿನ ಒಟ್ಟು ಭೂವಿಸ್ತೀರ್ಣದಿಂದ ಭಾಗಿಸುವ ಮೂಲಕ ಜನಸಾಂದ್ರತೆಯನ್ನು ಲೆಕ್ಕಾಚಾರ ಮಾಡಲಾಗುತ್ತದೆ. 2011 ರಲ್ಲಿ ಭಾರತದ ಜನಸಾಂದ್ರತೆ 382 ಇತ್ತು. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚಾಗಿರುವುದು ಕಂಡುಬರುತ್ತದೆ, ಭಾರತವು ವಿಶ್ವದ ಶೇ.2.4 ಭೂಪ್ರದೇಶವನ್ನು ಹೊಂದಿದ್ದು, ವಿಶ್ವದ ಶೇ.16.7 ಜನರನ್ನು ಹೊಂದಿದೆ.
4. ಅನಾನುಕೂಲಕರ ಲಿಂಗ ಅನುಪಾತ: ಪ್ರತಿ ಸಾವಿರ ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆಯನ್ನು ಲಿಂಗ ಅನುಪಾತವೆಂದು ವ್ಯಾಖ್ಯಾನಿಸಲಾಗಿದೆ. 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಲಿಂಗ ಅನುಪಾತವು ಕೇವಲ 943 ಇದ್ದು ಇದು ಮಹಿಳಾ ಸಬಲೀಕರಣ ಮತ್ತು ಆರೋಗ್ಯಕರ ಸಾಮಾಜಿಕ ಅಭಿವೃದ್ಧಿ ಹಿನ್ನೆಲೆಯಲ್ಲಿ ಅನಾನುಕೂಲಕರವಾಗಿದೆ.
5. ಕೆಳವಯಸ್ಸಿನವರು ಅಧಿಕವಿರುವ ವಯೋಮಾನ ರಚನೆ: ಭಾರತದ ಜನಸಯ್ಯಾ ರಚನೆಯಲ್ಲಿ ಕೆಳ ವಯಸ್ಸಿನ ಅಂದರೆ (1-14 ವಯೋಮಾನದ ಮಕ್ಕಳ ಪ್ರಮಾಣವು ಅಧಿಕವಿದೆ. 2011ರ ಜನಗಣತಿಯ ಪ್ರಕಾರ ಈ ವಯೋಮಾನದವರು ಜನಸಂಖ್ಯೆಯ ಶೇ. 30, ರಸಿದರು. ಇದು ಅಧಿಕ ಅವಲಂಬಿತ ಜನಸಂಖ್ಯೆಯ ಪ್ರಮಾಣವನ್ನು ತೋರಿಸುತ್ತದೆ ಮತ್ತು ಇದನ್ನು ಜನನ
6. ದರವನ್ನು ನಿಯಂತ್ರಿಸುವುದರ ಮೂಲಕ ಕಡಿಮೆ ಮಾಡಬಹುದಾಗಿದೆ. ಅಧಿಕ ಗ್ರಾಮೀಣ ಜನಸಂಖ್ಯೆಯ ಪ್ರಮಾಣ ಒಂದು ದೇಶದಲ್ಲಿರುವ ನಗರ-ಗ್ರಾಮೀಣ ಜನಸಂಖ್ಯೆಯ ಅನುಪಾತವು ಆ ವೇಷದ ಔದ್ಯರ್ಮಿಕರಣದ ಸೂಚಿಯಾಗಿ ಪರಿಗಣಿತವಾಗಿದೆ. ಭಾರತದ ಜನಸಂಖ್ಯೆಯು ಪ್ರಮುಖವಾಗಿ ಗ್ರಾಮೀಣ ಭಾಗಗಳಲ್ಲಿ ವಾಸಿಸುತ್ತಿದ್ದು, 2011ರಲ್ಲಿ ಶೇ. 68.8 ಜನರು ಗ್ರಾಮವಾಸಿಗರಾಗಿದ್ದರು. ಇದು ಭಾರತದ ನಗರೀಕರಣ ಪ್ರಕ್ರಿಯ ಕಡಿಮೆ ಹಾಗೂ ನಿಧಾನಗತಿಯಾಗಿರುವುದನ್ನು ಬಿಂಬಿಸುತ್ತದೆ.
7. ಜನಸಂಖ್ಯೆಯ ಕಳಪೆ ಗುಣಮಟ್ಟ: ಜನಸಂಖ್ಯೆಯ ಗುಣಮಟ್ಟವನ್ನು ಅವರ ಶಿಕ್ಷಣ, ಕೌಶಲಗಳು ಮತ್ತು ಆರೋಗ್ಯ ಸ್ಥಿತಿಗಳಿಂದ, ಅಂದರೆ ನಿರ್ದಿಷ್ಟವಾಗಿ, ಸಾಕ್ಷರತಾ ದರ, ಕೌಶಲಗಳ ಗಳಿಕೆ ಜೀವಿತಾವಧಿಗಳ ಮೂಲಕ ಅಳೆಯಬಹುದಾಗಿದೆ.
(a) ಕಡಿಮೆ ಸಾಕ್ಷರತಾ ದರ : ಭಾರತವು ಇನ್ನೂ ನೂರಕ್ಕೆ ನೂರರಷ್ಟು ಸಾಕ್ಷರತೆಯನ್ನು ಸಾಧಿಸಿಲ್ಲ. ಸಾಕ್ಷರತೆಯಂದರೆ ಓದಲು ಮತ್ತು ಬರೆಯಲು ಗೊತ್ತಿರುವ ಜನರ ಪ್ರತಿಶತ ಪ್ರಮಾಣ, 2011ರಲ್ಲಿ ಭಾರತದ ಶೇ. 74ರಪ್ಪ ಜನರು ಮಾತ್ರ ಓದು ಬರಹ ಬಲ್ಲವರಾಗಿದ್ದರು. ಸುಮಾರು 31 ಕೋಟಿಗಿಂತಲೂ ಅಧಿಕ ಜನರು ನಿರಕ್ಷರಿಗಳಾಗಿದ್ದರು ಎಂಬುದನ್ನು ಇದು ಹೇಳುತ್ತದೆ, ಮಹಿಳೆಯರ ಸಾಕ್ಷರತೆ ಇನ್ನೂ ಕಡಿಮೆ ಇದ್ದು ಕೇವಲ ಶೇ. 15ರಷ್ಟು ಮಹಿಳೆಯರು ಸಾಕ್ಷರರಾಗಿದ್ದರು.
(b) ಅಲ್ಪ ಪ್ರಮಾಣದ ಶಿಕ್ಷಣ ಮತ್ತು ತರಬೇತಿ : ಭಾರತದಲ್ಲಿ 20-25 ವರ್ಷ ವಯೋಮಾನದವರಲ್ಲಿ ಉನ್ನತ ಶಿಕ್ಷಣದಲ್ಲಿ ದಾಖಲಾದ ವ್ಯಕ್ತಿಗಳ ಪ್ರಮಾಣ ಕೇವಲ ಶೇ. 20.4 ಇದ್ದು, ಇದು ತುಂಬಾ – ಕಡಿಮೆ ಪ್ರಮಾಣದ್ದು. ಇದು ಮುಂದುವರೆದ ರಾಷ್ಟ್ರಗಳಲ್ಲಿ ಇರುವ ಪ್ರಮಾಣದ ಕೇವಲ ಕಾಲುಭಾಗ ಮಾತ್ರ ಅಲ್ಲದೇ ಭಾರತದಲ್ಲಿ ಪ್ರತಿ ಸಾವಿರ ಜನರಿಗೆ ಲಭ್ಯವಿರುವ ವೈದ್ಯರ ಪ್ರಮಾಣವು ಕೇವಲ 1.7 ಇದ್ದರೆ, ಇಂಜಿನಿಯರರ ಪ್ರಮಾಣವು 211) ಇದೆ. ಇದು ಕೌಶಲಗಳಲ್ಲಿನ ಅಸಮತೋಲನ ಹಾಗೂ ಕಡಿಮೆ ಪ್ರಮಾಣವನ್ನು ಸೂಚಿಸುತ್ತದೆ.
(c) ಕಡಿಮೆ ಜೀವಿತಾವಧಿ : ಒಬ್ಬ ವ್ಯಕ್ತಿ ಜೀವಿಸಬಹುದಾದ ಸರಾಸರಿ ಆಯುಷ್ಯವನ್ನು ಜೀವಿತಾವಧಿ ಎಂದು ಕರೆಯುತ್ತದೆ. ಭಾರತದಲ್ಲಿ 2013ರಲ್ಲಿ ಸರಾಸರಿ ಜೀವಿತಾವಧಿಯು ಕೇವಲ 65.8 ವರ್ಷಗಳಿದ್ದು ಅದು ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ತುಂಬಾ ಕಡಿಮೆ.
8. ಕೆಲಸದಲ್ಲಿ ಭಾಗವಹಿಸುವಿಕೆಯ ಕಡಿದು ದರ, ಕೆಲಸ ಮಾಡಬಲ್ಲ ಜನರ ಸಂಖ್ಯೆಯನ್ನು ಒಟ್ಟು ಜನಸಂಖ್ಯೆಯ ಪ್ರತಿಶತವಾಗಿ ಲೆಕ್ಕ ಹಾಕಿದಾಗ, ಆ ಜನಸಂಖ್ಯೆಯ ಕೆಲಸದಲ್ಲಿ ಭಾಗವಹಿಸುವಿಕೆಯ ದರ ದೊರೆಯುತ್ತದೆ. ಭಾರತದಲ್ಲಿ ಈ ಪ್ರಮಾಣವೂ ಕಡಿಮೆ ಇದ್ದು, 2011ರಲ್ಲಿ ಕೇವಲ ಶೇ. 79.8ರಷ್ಟು ಜನರು ಕೆಲಸಗಾರರಾಗಿದ್ದರು. ಅಂದರೆ, ಕೆಲಸ ಮಾಡದೇ ಇದ್ದು, ಕೆಲಸಗಾರರ ಮೇಲೆ ಹೆಚ್ಚಿನ ಅವಲಂಬಿತ ಜನರ ಪ್ರಮಾಣವನ್ನು ಇದು ತೋರಿಸುತ್ತದೆ.
9. ಅತಿ-ಜನಸಂಖ್ಯೆ : ಆಹಾರ ಧಾನ್ಯದ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೂ ಸಹ ದೇಶದಲ್ಲಿ ತಾಂಡವವಾಡುತ್ತಿರುವ ಬಡತನ, ಹಸಿವು, ಅಪೌಷಿಕತೆಗಳನ್ನಲ್ಲದೇ, ನಿರುದ್ಯೋಗ, ಮುಂತಾದವುಗಳನ್ನು ಕಡಿಮೆ ವರಮಾನ, ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಪ್ರಮಾಣ, ಗಮನಿಸಿದಾಗ, ಭಾರತದ ಜನಸಂಖ್ಯೆಯು ಅದರ ಧಾರಣಾ ಶಕ್ತಿಯನ್ನು ಮೀರಿ ಬೆಳೆದಿದೆ ಎಂದು ಹೇಳಲಾಗುತ್ತಿದೆ, ಇವೆಲ್ಲ ಅತಿಯಾದ ಜನಸಂಖ್ಯೆಯ ಪರಿಣಾಮಗಳಾಗಿವೆ.
ಜನಸಂಖ್ಯಾ ಪರಿವರ್ತನೆ
ಆರ್ಥಿಕ ಅಭಿವೃದ್ಧಿ ಮತ್ತು ಜನಸಂಖ್ಯಾ ಬೆಳವಣಿಗೆ ನಡುವೆ ನಿಕಟ ಸಂಬಂಧವಿದೆ. ದೇಶವು ಆರ್ಥಿಕ ಅಭಿವೃದ್ಧಿ ಹೊಂದಿದಂತೆ, ಆ ದೇಶದ ಜನಸಂಖ್ಯೆಯು ಕಡಿಮೆಯಾಗುತ್ತಾ ಸಾಗುತ್ತದೆ. ಇದನ್ನು ‘ಜನಸಂಖ್ಯಾ ಪರಿವರ್ತನೆ ಸಿದ್ಧಾಂತ’ದ ಮೂಲಕ ವಿವರಿಸಲಾಗುತ್ತದೆ. ದೇಶದ ಆರ್ಥಿಕ ಅಭಿವೃದ್ಧಿಯು ಮೂರು ಹಂತಗಳನ್ನು ಹಾದು ಸಾಗುತ್ತದೆ. ಅವುಗಳೆಂದರೆ: ಹಿಂದುಳಿದ ಹಂತ, ಮುಂದುವರಿಯುತ್ತಿರುವ ಹಂತ ಹಾಗೂ ಮುಂದುವರಿದ ಹಂತ.
1. ಹಿಂದುಳಿದ ಹಂತ : ಒಂದು ದೇಶವು ಆರ್ಥಿಕವಾಗಿ ಹಿಂದುಳಿದಿದ್ದಾಗ ಅಲ್ಲಿ ಬಡತನ, ನಿರುದ್ಯೋಗ ಹೆಚ್ಚಾಗಿರುತ್ತದೆ. ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಇರುವುದಿಲ್ಲ. ಜನರು ಮೂಢನಂಬಿಕೆ ಉಳ್ಳವರೂ, ಸಂಪ್ರದಾಯಶರಣರೂ ಆಗಿರುತ್ತಾರೆ. ಇದರಿಂದ ಜನನ ದರ ಮತ್ತು ಮರಣ ದರಗಳೆರಡೂ ಹೆಚ್ಚಾಗಿದ್ದು, ಜನಸಂಖ್ಯಾ ಬೆಳವಣಿಗೆ ದರ ಅತ್ಯಂತ ಕಡಿಮೆಯಿರುತ್ತದೆ.
2. ಮುಂದುವರಿಯುತ್ತಿರುವ ಹಂತ : ಹಿಂದುಳಿದ ದೇಶವು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ತೀವ್ರ ಪ್ರಯತ್ನಗಳನ್ನು ಕೈಗೊಳ್ಳುತ್ತದೆ. ಸರ್ಕಾರವು ಮೊದಲು ಜನರಿಗೆ ಶಿಕ್ಷಣ ನೀಡಲು, ಆರೋಗ್ಯ ಸೌಲಭ್ಯಗಳನ್ನು ಒದಗಿಸಿಕೊಡಲು ಮುಂದಾಗುತ್ತದೆ. ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲಾಗುತ್ತದೆ. ಇದರಿಂದ ಮರಣದರ ಶೀಘ್ರವಾಗಿ ಕಡಿಮೆಯಾಗುತ್ತದೆ. ಆದರೆ ಜನನ ದರವು ಹೆಚ್ಚಾಗಿಯೇ ಇದ್ದು, ಅದು ನಿಧಾನವಾಗಿ ಕಡಿಮೆಯಾಗುತ್ತಿರುತ್ತದೆ. ಹೀಗೆ ಈ ಹಂತದಲ್ಲಿ ಜನನ ದರ ಹೆಚ್ಚಿದ್ದು, ಮರಣ ದರ ಕಡಿಮೆಯಾಗುವುದರಿಂದ ಜನಸಂಖ್ಯಾ ಬೆಳವಣಿಗೆ ದರ ಹೆಚ್ಚಾಗಿರುತ್ತದೆ. ಸದ್ಯದಲ್ಲಿ ಭಾರತವು ಈ ಹಂತದಲ್ಲಿದೆ. ಹಾಗಾಗಿ ಇಲ್ಲಿ ಜನಸಂಖ್ಯಾ ಬೆಳವಣಿಗೆ ಹೆಚ್ಚಾಗಿದೆ.
3. ಮುಂದುವರಿದ ಹಂತ: ಮುಂದುವರಿಯುತ್ತಿರುವ ದೇಶವು ಅಭಿವೃದ್ಧಿ ಚಟುವಟಿಕೆಗಳನ್ನು ತೀವ್ರಗೊಳಿಸುವ ಮೂಲಕ ಕ್ರಮೇಣ ಮುಂದುವರಿದ ದೇಶವಾಗಿ ಮಾರ್ಪಡುತ್ತದೆ. ಆಗ ದೇಶದಲ್ಲಿರುವ ಎಲ್ಲ ಜನರು ವಿದ್ಯಾವಂತರು ಮತ್ತು ತಿಳುವಳಿಕೆಯುಳ್ಳವರೂ ಆಗಿರುತ್ತಾರೆ. ಎಲ್ಲರಿಗೂ ಆರೋಗ್ಯ ಮತ್ತು ಸ್ವಚ್ಛತೆಯ ಸೌಲಭ್ಯಗಳು ದೊರೆಯುತ್ತವೆ. ಇದರಿಂದಾಗಿ ಈ ಹಂತದಲ್ಲಿ ಜನನ ದರ ಮತ್ತು ಮರಣ ದರಗಳೆರಡೂ ಅತ್ಯಂತ ಕಡಿಮೆಯಿದ್ದು, ಜನಸಂಖ್ಯಾ ಬೆಳವಣಿಗೆ ದರವು ಅತ್ಯಂತ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಹಿಂದುಳಿದ ದೇಶವು ಆರ್ಥಿಕ ಅಭಿವೃದ್ಧಿ ಸಾಧಿಸಿ ಕ್ರಮೇಣ ಮುಂದುವರೆದ ದೇಶವಾಗಿ ಮಾರ್ಪಡುತ್ತಾ ಸಾಗಿದಂತೆ, ಅಲ್ಲಿನ ಜನಸಂಖ್ಯಾ ಬೆಳವಣಿಗೆಯಲ್ಲಿ ಪರಿವರ್ತನೆಯಾಗುತ್ತದೆ. ಯಾವುದೇ ದೇಶವು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸಬಹುದು.
ನೆನಪಿರಲಿ
ಒಂದುಳಿದ ದೇಶ – ಜನನ ದರ ಮತ್ತು ಮರಣ ದರ ಹೆಚ್ಚು ಜನಸಂಖ್ಯೆ ಬೆಳವಣಿಗೆ ದರ ಕಡಿಮೆ
ಮುಂದುವರಿಯುತ್ತಿರುವ ದೇಶ – ಜನನ ದರ ಹೆಚ್ಚು ಮತ್ತು ಮರಣ ದರ ಕಡಿಮೆ, ಜನಸಾ ಬೆಳವಣಿಗೆ ದರ ಹೆಚ್ಚು
ಮುಂದುವರಿದ ದೇಶ – ಜನನವರ ಮತ್ತು ಮರಣ ದರ ಕಡಿಮೆ ಜನಸಂಖ್ಯಾ ಬೆಳವಣಿಗೆ ದರ ಕಡಿಮೆ
ಸಂತಾನೋತ್ಪತ್ತಿ ಆರೋಗ್ಯ ಮತ್ತು ಜನಸಂಖ್ಯೆಯ ಗುಣಮಟ್ಟ ಆರೋಗ್ಯವು ಮಾನವನ ಬಹುಮುಖ್ಯ ಸಾಮಾಜಕ ಮೂಲಸೌ ಲಭ್ಯವಾಗಿದೆ. ಉತ್ತಮ ಆರೋಗ್ಯವು ಜನರ ಜೀವನದ ಗುಣಮಟ್ಟ ಮತ್ತು ಅವರ ಕೆಲಸದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ ಆರ್ಥಿಕ ಅಭಿವೃದ್ಧಿಯನ್ನು ತೀವ್ರಗೊಳಿಸಬೇಕಾದರೆ ದೇಶದ ಜನರ ಆರೋಗ್ಯ ಮಟ್ಟವನ್ನು ಸುಧಾರಿಸಬೇಕಾದ ಆವಶ್ಯಕತೆಯಿದೆ.
ಸಂತಾನೋತ್ಪತ್ತಿಯು ಜನವಿಗಳ ಪ್ರಧಾನ ಲಕ್ಷಣಗಳಲ್ಲಿ ಒಂದು. ಜನಸಂಖ್ಯೆಯ ಗುಣಮಟ್ಟವು ಜನಸಿದ ಮಕ್ಕಳ ಸಂಖ್ಯೆ ಹಾಗೂ ಅವುಗಳ ಆರೋಗ್ಯದ ಮೇಲೆ ಬಹುವಾಗಿ ಅವಲಂಬಿಸಿದೆ. ಆರೋಗ್ಯಪೂರ್ಣ ಮಕ್ಕಳು ಆರೋಗ್ಯಪೂರ್ಣ ವಯಸ್ಕರಾಗಿ ಬೆಳೆದು ದೇಶದ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡಬಲ್ಲರು, ತಾಯಿಯು ಗರ್ಭ ಧರಿಸಿದಂದಿನಿಂದ ಮಗುವಿಗೆ ಜನ್ಮ ನೀಡುವವರೆಗೆ ಆಕೆಯ ಆರೋಗ್ಯ ಮತ್ತು ಪೌಷ್ಟಿಕತೆಗೆ ಹೆರಿಗೆಯ ನಂತರ ತಾಯ ಮತ್ತು ಶಿಶುವಿಗೆ ಸೂಕ್ತ ಆರೈಕೆಯನ್ನು ಹೆಚ್ಚಿನ ಗಮನ ನೀಡಬೇಕಾಗುತ್ತವರು ಮಆರೋಗ್ಯವಂತರಾಗಿರೋ ಗಂಟಲಾಗಿ ಇದ್ದರೆ, ಮಕ್ಕಳು ಕೂಡ ಆರೋಗ್ಯವಂತರಾಗಿ ಜನಿಸಿ ಬೆಳೆಯುವುದು ನಿರೀಕ್ಷಿತ. ಆದ್ದರಿಂದ ಆರೋಗ್ಯ ಸೌಲಭ್ಯಗಳಲ್ಲದೇ, ರೋಗಗಳ ನಿಯಂತ್ರಣಕ್ಕಾಗಿ ಲಸಿಕೀಕರಣ, ಪೌಷ್ಟಿಕಾಂಶಗಳ ನೀಡಿಕೆ ಮತ್ತು ಕಾಂತ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ಹೆರಿಗೆ ಮಾಡಿಸುವುದು ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ತುಂಬಾ ಮಹತ್ವದ್ದಾಗಿವೆ.
ಹೀಗಾಗಿ ಎಲ್ಲ ದೇಶಗಳಲ್ಲಿ ಸರ್ಕಾರಗಳು ಈ ಸೌಲಭ್ಯಗಳನ್ನು ಎಲ್ಲರಿಗೆ ಒದಗಿಸುವ ಪ್ರಯತ್ನ ಮಾಡುತ್ತಿವೆ. ಸಂತಾನೋತ್ಪತ್ತಿ ಆರೋಗ್ಯ ಸೌಲಭ್ಯಗಳಿಂದಾಗಿ ಮಕ್ಕಳ ಹಾಗೂ ತಾಯಂದಿರ ಬದುಕುಳಿಯುವಿಕೆಯ ಸಾಧ್ಯತೆ ಹೆಚ್ಚಾಗುವುದರಿಂದ ಮಕ್ಕಳ ಜನನ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಇದು ಜನಸಂಖ್ಯಾ ನಿಯಂತ್ರಣಕ್ಕೆ ಪೂರಕ. ಇವಲ್ಲದೇ ಮಕ್ಕಳ, ಗರ್ಭಿಣಿಯರ ಹಾಗೂ ಬಾಣಂತಿಯರ ಪೌಷ್ಟಿಕತೆ ವರ್ಧನೆಗೂ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇವುಗಳಿಂದಾಗಿ ಮಕ್ಕಳ ಮತ್ತು ತಾಯಂದಿರ ಮರಣ ಪ್ರಮಾಣಗಳು ಕಡಿಮೆಯಾಗಿದೆ.
ಭಾರತದಲ್ಲಿ 1997-98ರಲ್ಲಿ 198ರಷ್ಟಿದ್ದ ತಾಯಂದಿರ ಮರಣ ಪ್ರಮಾಣವು (ಪತಿ |KMH ಸಹವ ಜನನಗಳಿಗೆ ಮರಣಿಸಿದ ಗರ್ಭಿಣಿಯರ ಸಂಜೆ) ಮೇಲೆ ತಿಳಿಸಿದ ಎಲ್ಲ ಕಾರಣಗಳಿಂದಾಗಿ 2012ರಲ್ಲಿ 167ಕ್ಕೆ ಇಳಿದಿದ್ದು ಸಮಾಧಾನಕರ, ಅದೇ ರೀತಿಯಲ್ಲಿ ಶಿಶು ಮರಣ ದರವು (ಪ್ರತಿ 1000 ಸಜೀವ ಜನನಗಳಿಗೆ ಮರಣಿಸಿದ ಒಂದು ವರ್ಷದೊಳಗಿನ ಮಕ್ಕಳ ಸಂಖ್ಯೆ) 1990ರಲ್ಲಿ 8ರಷ್ಟಿದ್ದು, 2012ರಲ್ಲಿ 47ಕ್ಕೆ ಇಳಿಕೆಯಾಯಿತು. ಹಾಗೆಯೇ ಮಕ್ಕಳ ಮರಣ ಪ್ರಮಾಣವು (ಪ್ರತಿ 11 ಮಕ್ಕಳಿಗೆ ಮರಣಿಸಿದ ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ) 1991ರಲ್ಲಿ 115ರಷ್ಟಿದ್ದು, 2010ರಲ್ಲಿ 59ಕ್ಕೆ ಇಳಿಕೆಯಾಯಿತು.
ಆದರೆ ಪೌಷ್ಠಿಕತೆಯಲ್ಲಿ ಭಾರತದ ಪರಿಸ್ಥಿತಿ ಕಳವಳಕಾರಿಯಾಗಿದ್ದು 32 ಹೆಚ್ಚು ಪ್ರಮಾಣದ ಮಕ್ಕಳು ಅಪೌಷ್ಟಿಕತೆಯಿಂದ ಮರಣ ಹೊಂದುತ್ತಿವೆ. ಜನಸಂಖ್ಯಾ ಅಧ್ಯಯನದ ಅಂತರಾಷ್ಟ್ರೀಯ ಸಂಸ್ಥೆಯ ಸಮೀಕ್ಷೆಗಳ ಪ್ರಕಾರ 2008-09ರಲ್ಲಿ ಶೇ. 40ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದವರಾಗಿದ್ದರು. ಅದೇ ರೀತಿ ಅರ್ಧದಷ್ಟು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿರುವುದೂ ಸಹ ಕಂಡು ಬಂದಿದೆ.
ನಿಮಗಿದು ತಿಳಿದಿರಲಿ:
ಯುನಿಸೆಫ್‌ನ ವರದಿಯೊಂದರ ಪ್ರಕಾರ ಭಾರತವು ಐದು ವರ್ಷಗಳೊಳಗಿನ ಮಕ್ಕಳ ಸಾವಿನಲ್ಲಿ ಗರಿಷ್ಠ ಪಾಲು ಹೊಂದಿದ್ದು, ಅವರಲ್ಲಿ ಅರ್ಧದಷ್ಟು ಮಕ್ಕಳು ಅಪೌಷ್ಠಿಕತೆಯ ದೆಸೆಯಿಂದ ಮರಣವನ್ನಪ್ಪುತ್ತವೆ. ವಿಶ್ವದ ಸುಮಾರು ಐದು ವರ್ಷಗಳೊಳಗಿನ ಮಕ್ಕಳ ಅರ್ಧದಷ್ಟು ಸಾವುಗಳು ಕೇವಲ ಐದು ದೇಶಗಳಲ್ಲಿ ಸಂಭವಿಸುತ್ತಿವೆ: ಭಾರತ, ನೈಜೀರಿಯಾ, ಕಾಂಗೋ, ಪಾಕಿಸ್ತಾನ ಹಾಗೂ ಚೀನ. ಭಾರತ ವಿಶ್ವದ ಈ ಸಾವುಗಳಲ್ಲಿ ಶೇ. 22ರಷ್ಟು ಪಾಲು ಹೊಂದಿದ್ದರೆ, ನೈಜೀರಿಯಾ ಶೇ. 13ರಷ್ಟನ್ನು ಹೊಂದಿದೆ.
ಭಾರತದ ರಾಷ್ಟ್ರೀಯ ಆರೋಗ್ಯ ನೀತಿಯು ಜನರ ಆರೋಗ್ಯ ಸುರಕ್ಷತೆ, ಕುಟುಂಬ ಕಲ್ಯಾಣ ಮತ್ತು ಪೌಷ್ಠಿಕತೆ ಒದಗಿಸುವ ಸೇವೆಗಳನ್ನು ಉತ್ತಮಪಡಿಸುವ ಗುರಿ ಹೊಂದಿದೆ. ಅದರಲ್ಲೂ ಸೌಲಭ್ಯ ವಂಚಿತ ಬಡವರ ಮತ್ತು ಗುಡ್ಡಗಾಡು ಜನರ ಆರೋಗ್ಯ ರಕ್ಷಣೆಗೆ ಅಧಿಕ ಗಮನ ಹರಿಸಿದೆ. ಕಳೆದ ಸುಮಾರು ಆರು ದಶಕಗಳ ಅವಧಿಯಲ್ಲಿ ವ್ಯಾಪಕವಾದ ಆರೋಗ್ಯ ಮೂಲಸೌಲಭ್ಯಗಳನ್ನು ಸೃಷ್ಟಿಸುವ ಮೂಲಕ ಜನರ ಗುಣಮಟ್ಟವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುತ್ತಿದೆ.
ಸರ್ಕಾರದ ಈ ಕ್ರಮಗಳಿಂದಾಗಿ ಜನರ ಗುಣಮಟ್ಟದಲ್ಲಿ ಸುಧಾರಣೆಯಾಗಿದೆ. ನಿರೀಕ್ಷಿತ ಜೀವಿತಾವಧಿ ಹೆಚ್ಚುತ್ತಿದೆ. ಶಿಶು ಮರಣ ದರ ಕಡಿಮೆಯಾಗುತ್ತಿದೆ. ನಿರೀಕ್ಷಿತ ಜೀವಿತಾವಧಿ ದರದ ಹೆಚ್ಚಳವು ಜನರ ಜೀವನದ ಗುಣಮಟ್ಟದಲ್ಲಾಗಿರುವ ಸುಧಾರಣೆಯ ಸ್ಪಷ್ಟ ಸೂಚಿಯಾಗಿದೆ. ತಾಯಿ ಮಕ್ಕಳ ಸುರಕ್ಷತೆ, ಪೌಷ್ಠಿಕಾಂಶದ ಪೂರೈಕೆ, ರೋಗಗಳಿಂದ ಮಕ್ಕಳ ರಕ್ಷಣೆ ಮುಂತಾದ ಕ್ರಮಗಳ ಪರಿಣಾಮವಾಗಿ ಶಿಶು ಮರಣ ದರ ಕಡಿಮೆಯಾಗುತ್ತಿದೆ.
ಇತ್ತೀಚೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಭಾರತ ಸರ್ಕಾರವು ಶಿಶು ಹಾಗೂ ತಾಯಂದಿರ ಮರಣದರಗಳನ್ನು ಕಡಿಮೆಗೊಳಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದು ಅವುಗಳಲ್ಲಿ ಪ್ರಮುಖವಾದವೆಂದರೆ:
1. ಜನನಿ ಸುರಕ್ಷಾ ಯೋಜನೆಯಡಿ ಸಾಂಸ್ಥಿಕ ಹೆರಿಗೆಗಳನ್ನು ಉತ್ತೇಜಿಸುವುದು. ಕರ್ನಾಟಕ ಸರ್ಕಾರ ಕೂಡ ತನ್ನ 24x7 ಉಚಿತ ಆಂಬುಲೆನ್ಸ್ ಸೇವೆಯ ಮೂಲಕ ಸಾಂಸ್ಥಿಕ ಹೆರಿಗೆಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.
2. ಆರೋಗ್ಯ ಉಪ-ಕೇಂದ್ರಗಳ, ಪ್ರಾಥಮಿಕ ಆರೋಗ್ಯ ಕೇಂದ್ರಗಳ, ಸಮುದಾಯ ಆರೋಗ್ಯ ಕೇಂದ್ರಗಳ ಹಾಗೂ ಜಿಲ್ಲಾ ಆಸ್ಪತ್ರೆಗಳ ಬಲವರ್ಧನೆ ಮಾಡಿ ಅವುಗಳಲ್ಲಿ ಸಹ ಸಂಪೂರ್ಣ ಹೆರಿಗೆ ಹಾಗೂ ಶಿಶು ಆರೈಕೆ ಸೌಲಭ್ಯಗಳನ್ನು ಒದಗಿಸಲಾಗಿದೆ.
3. ಜನರು ಆರೋಗ್ಯ ಸೇವೆಗಳನ್ನು ಬಳಸಲು ಉತ್ತೇಜಿಸಲಿಕ್ಕೆ ಆಶಾ ಕಾರ್ಯಕರ್ತೆಯರ ನೇಮಕ. 4. ಆರೋಗ್ಯ ಗೂ ಪೋಷಣೆ ಕುರಿತಾದ ಶಿಕ್ಷಣ ಹಾಗೂ ಜಾಗೃತಿ ನೀಡಿ ಆಹಾರದಲ್ಲಿ ಕಬ್ಬಿಣಾಂಶ ಅಧಿಕವಿರುವ ಹಾಗೆ ಮಾಡುವ ಕಾರ್ಯಕ್ರಮಗಳು.
4. ಸಾರ್ವತ್ರಿಕ ಲಸಿಕೀಕರಣ ಸಾಧಿಸಿ ಮಕ್ಕಳನ್ನು ಬಾಧಿಸುತ್ತಿರುವ ಮಾರಣಾಂತಿಕ ರೋಗಗಳ ಹತೋಟಿ.
5. ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಪೂರಕ ಪೌಷ್ಠಿಕಾಂಶಗಳನ್ನು ಒದಗಿಸಿ ಅಪೌಷ್ಠಿಕತೆಯನ್ನು ಕಡಿಮೆ ಮಾಡುವುದು. ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯು ಸಹ ಇದಕ್ಕೆ ಕೊಡುಗೆ ನೀಡಿದೆ.
ಈ ಎಲ್ಲ ಕ್ರಮಗಳು ಮಹಿಳೆಯರ ಹಾಗೂ ಮಕ್ಕಳ ಆರೋಗ್ಯ ವೃದ್ಧಿಸುವುದಲ್ಲದೇ ಮರಣ ದರಗಳನ್ನು ಇನ್ನೂ ಕಡಿಮೆ ಮಾಡುವಲ್ಲಿ ಸಹಾಯಕವಾಗುತ್ತವೆ.
ಆರೋಗ್ಯದ ಸೂಚಿಗಳು :
ಒಂದು ದೇಶದ ಜನರ ಆರೋಗ್ಯದ ಸ್ಥಿತಿಗತಿಗಳನ್ನು ತಿಳಿಯಲು ಕೆಲವು ಸೂಚಕಗಳನ್ನು ಬಳಸುತ್ತಾರೆ. ಅವುಗಳೆಂದರೆ: ನಿರೀಕ್ಷಿತ ಜೀವಿತಾವಧಿ ದರ, ಶಿಶು ಮರಣ ದರ, ಮಕ್ಕಳ ಮರಣ ದರ ಮತ್ತು ಮಾತೃ ಮರಣ ದರ.
ನಿರೀಕ್ಷಿತ ಜೀವಿತಾವಧಿ ದರ : ಹುಟ್ಟಿದ ಪ್ರತಿಯೊಂದು ಮಗು ಬದುಕುಳಿಯಬಹುದಾದ ಅಂದಾಜು ವರ್ಷ.
ಶಿಶು ಮರಣ ದರ : ಪ್ರತಿ ಸಾವಿರ ಜನನದಲ್ಲಿ ಒಂದು ವರ್ಷದ ಒಳಗೆ ಮರಣಹೊಂದುವ ಶಿಶುಗಳ ಸರಾಸರಿ ಸಂಖ್ಯೆ.
ಮಕ್ಕಳ ಮರಣ ದರ : ಪ್ರತಿ ಸಾವಿರ ಜನನದಲ್ಲಿ ಒಂದು ವರ್ಷದ ಒಳಗೆ ಮರಣಹೊಂದುವ ಮಕ್ಕಳ ಸರಾಸರಿ ಸಂಖ್ಯೆ
ಮಾತೃ ಮರಣ ದರ : ಪ್ರತಿ ಒಂದು ಲಕ್ಷ ಜನನದಲ್ಲಿ ಮರಣ ಹೊಂದುವ ತಾಯಂದಿರ ಸರಾಸರಿ ಸಂಖ್ಯೆ.
ಕಾಮೆಂಟ್ ಪೋಸ್ಟ್ ಮಾಡಿ