ಬಡತನ

 

ನೀವು ನಿಮ್ಮ ಸುತ್ತಮುತ್ತಲಿನ ಜೀವನವನ್ನು ಗಮನಿಸಿರಬಹುದು. ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಬಡತನ ಕಂಡುಬರುತ್ತದೆ. ನಗರಗಳಲ್ಲಿ ಬೀದಿಬದಿಯ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು, ಭಿಕ್ಷುಕರು, ಸಮಟ್ಟ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ಅಲೆಮಾರಿಗಳು ಮುಂತಾದವರು ಬಡವರೆನಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಜಮೀನು ಇಲ್ಲದೆ ಇತರರ ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರು, ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರು, ಕೃಷಿಯೇತರ ಕಸಬುಗಳಲ್ಲಿ ತೊಡಗಿರುವ ಬುಟ್ಟಿ ಹೆಣೆಯುವವರು, ಮಡಿಕೆ ಮಾಡುವವರು, ಕಮ್ಮಾರರು, ಮುಂತಾದವರು ಬಡತನದಲ್ಲಿ ವಾಸಿಸುತ್ತಿದ್ದಾರೆ.

ಬಡವರು ಎರಡು ಹೊತ್ತಿನ ಊಟಕ್ಕೆ ಸಾಕಾಗುವಷ್ಟು ಆದಾಯ ಗಳಿಸಲು ವಿಫಲರಾಗುತ್ತಾರೆ. ಇದರಿಂದಾಗಿ ಇವರಲ್ಲಿ ಅಪೌಷ್ಠಿಕತೆ ಮತ್ತು ಅನಾರೋಗ್ಯ ಅಧಿಕವಾಗಿರುತ್ತದೆ. ಶಿಕ್ಷಣ ಮತ್ತು ತರಬೇತಿಯಿಲ್ಲದೆ ಕೌಶಲ್ಯರಹಿತರಾಗಿರುತ್ತಾರೆ. ಇವರಿಗೆ ಉದ್ಯೋಗಾವಕಾಶಗಳು ಕಡಿಮೆ ಮತ್ತು ಇರುವ ಕೆಲಸವೂ ಸ್ಥಿರವಾಗಿರುವುದಿಲ್ಲ. ಸಾಮಾನ್ಯವಾಗಿ ಬಡವರು ಕಚ್ಚಾ ಮನೆಗಳಲ್ಲಿ ವಾಸಿಸುತ್ತಾರೆ ಅಥವಾ ಮನೆಯೇ ಇರುವುದಿಲ್ಲ. ಹೀಗೆ ಮಾನವನ ಬದುಕಿಗೆ ಅಗತ್ಯವಾದ ಊಟ, ಬಟ್ಟೆ, ವಸತಿ, ಶಿಕ್ಷಣ, ಆರೋಗ್ಯ ಮುಂತಾದ ಕನಿಷ್ಠ ಮೂಲಭೂತ ಅವಶ್ಯಕತೆಗಳಿಂದ ಬಹುಪಾಲು ಜನರು ವಂಚಿತರಾಗಿರುವ ಸ್ಥಿತಿಯನ್ನು ಬಡತನ ಎನ್ನಬಹುದು.

ಆದರೆ ಬಡತನವನ್ನು ಗುರುತಿಸಿ ಅದರ ಪ್ರಮಾಣವನ್ನು ಅಳೆಯುವುದಕ್ಕಾಗಿ ನಿಖರವಾದ ಮಾನದಂಡದ ಅವಶ್ಯಕತೆಯಿದೆ. ಸ್ವಾಶಂತ್ರ್ಯ ಪೂರ್ವದಲ್ಲಿ ದಾದಾಭಾಯಿ ನವರೋಜಿಯವರು ಬಡವರನ್ನು ಗುರುತಿಸಲು ರೈತನೊದಲ ಬಾರಿಗೆ ಬಡತನ ರೇಖೆಯನ್ನು ಬಳಕೆಗೆ ತಂದರು. ಸ್ವಾತಂತ್ರ ಸಂತರವು ಬಡತನ ಬಡತನ ಅಳೆಯುವ ಪ್ರಮುಖ ಸೂಚಿಯಾಗಿ ಬಳಕೆಯಾಗುತ್ತಿದೆ. ಹಾಗಾದರೆ ಬಡತನ ರೇಖ ಎಂದರೇನು? ಮೂಲ ಅವಶ್ಯಕತೆಗಳನ್ನು ಪಡೆದುಕೊಳ್ಳಲು ಅವಶ್ಯವಿರುವ ಕನಿಷ್ಠ ಆದಾಯದ ಪ್ರಮಾಣವೇ ಬಡತನ ರೇಖೆಯಾಗಿದೆ. ಅದು ಒಬ್ಬ ವ್ಯಕ್ತಿಯು ತನ್ನ ಮೂಲ ಅವಶ್ಯಕತೆಗಳನ್ನು ಪೂರೈಸಿಕೊಂಡು, ಆರೋಗ್ಯಯುತವಾಗಿ ಮತ್ತು ಘನತೆಯತವಾಗಿ ಜೀವನ ನಡೆಸಲು ಹೆಚ್ಚ ಮಾಡುವ ಸಾಮರ್ಥ್ಯವನ್ನು ಸೂಚಿಸುತ್ತದೆ.


2005ರಲ್ಲಿ ಪ್ರೊ. ಸುರೇಶ್ ತೆಂಡೂಲ್ಕರ್‌ ಸಮಿತಿಯ ಶಿಫಾರಸ್ಸುಗಳನ್ನು ಅನುಸರಿಸಿ ಆಹಾರದ ಜೊತೆಗೆ ಶಿಕ್ಷಣ, ಆರೋಗ್ಯ, ವಿದ್ಯುತ್ ಶಕ್ತಿ ಮತ್ತು ಸಾರಿಗೆಗಳ ಮೇಲೆ ಮಾಡುವ ಶಲಾ ಮಾಸಿಕ ಅನುಭೋಗಿ ವೆಚ್ಚವನ್ನು ಅಂದಾಜಿಸಿ ಬಡತನ ರೇಖೆಯನ್ನು ರೂಪಿಸಲಾಗಿದೆ. ತದನಂತರ ೩ರಂಗರಾಜನ್ ಸಮಿತಿಯು ತಂಡೂಲ್ಕರ್ ಸಮಿತಿಯ ಶಿಫಾರಸುಗಳನ್ನು ಅನುಸರಿಸಿ ಗ್ರಾಮೀಣ ಭಾಗಗಳಲ್ಲಿ ರೂ. 12 ಮತ್ತು ನಗರ ಭಾಗಗಳಲ್ಲಿ ರೂ. 47 ರಷ್ಟು ತಲಾ ಮಾಸಿಕ ಅನುಭೋಗಿ ವೆಚ್ಚವನ್ನು ಬಡತನ ರೇಖೆಯೆಂದು ನಿಗದಿಗೊಳಿಸಿದೆ. ವ್ಯಕ್ತಿಗಳು ಇದಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಅವರನ್ನು ಬಡತನ ರೇಖೆಯ ಮೇಲೆ ಇರುವರೆಂದೂ, ಇಲ್ಲವಾದರೆ ಬಡತನ ರೇಖೆಯ ಕೆಳಗೆ ಇರುವರೆಂದೂ ವರ್ಗೀಕರಿಸಲಾಗುತ್ತದೆ. ಬಡತನ ರೇಖೆಯ ಕೆಳಗೆ ಇರುವವರೇ ಬಡವರು.


ಹಾಗೆಯೇ ಅಂತರಾಷ್ಟ್ರೀಯ ಮಟ್ಟದಲ್ಲಿ, ವಿಶ್ವ ಬ್ಯಾಂಕು ಯಾವ ವ್ಯಕ್ತಿಯು ಪ್ರತಿದಿನ 1,25 ಡಾಲರ್ ಹಣವನ್ನು ಗಳಿಸಲು ಅಸಮರ್ಥರೋ ಅಂಥವನನ್ನು ಬಡತನದ ರೇಖೆಯ ಕೆಳಗಿರುವವನು ಎಂದು ಗುರುತಿಸುತ್ತದೆ. ಈ ಮಾನದಂಡದ ಪ್ರಕಾರ, ಭಾರತದಲ್ಲಿ ಶೇ 41ರಷ್ಟು ಜನರು ಸದ್ಯ ಬಡವರಾಗಿದ್ದಾರೆ.


ಭಾರತದಲ್ಲಿ ಬಡತನದ ಪ್ರಮಾಣ ವಿವಿಧ ಸಮಿತಿಗಳು, ಮತ್ತು ಕಾರ್ಯಕಾರಿ ಸಮೂಹಗಳು ನೀಡಿದ ವ್ಯಾಖ್ಯೆಗಳನ್ನು ಮತ್ತು ರಾಷ್ಟ್ರೀಯ ಮಾದು ಸಮೀಕ್ಷಾ ಸಂಸ್ಥೆ (NSSO) ಅಂದಾಜಿಸಿದ ಅನುಭೋಗಿ ವೆಚ್ಚದ ಮಾಹಿತಿ ಬಳಸಿಕೊಂಡು ಬಡತನದ ರೇಖೆಯ ಕೆಳಗಿರುವ ಜನರ ಪ್ರಮಾಣವನ್ನು ಲೆಕ್ಕ ಹಾಕಲಾಗಿದೆ. 

1983ರಲ್ಲಿ ಶೇ.4ರ ಬಡತನದ ಪ್ರಮಾಣವು 2009-10ರ ವೇಳೆಗೆ ಶೇ.20ರಷ್ಟಕ್ಕೆ ಇಳಿಕೆಯಾಗಿರುವುದನ್ನು ಗಮನಿಸಬಹುದು. ಗ್ರಾಮೀಣ-ನಗರ ಪ್ರದೇಶಗಳೆರಡರಲ್ಲೂ ಬಡತನದ ಪ್ರಮಾಣ ಇಳಿಕೆಯಾಗಿದೆ. 2000ನೇ ಇಸವಿಯಿಂದಾಚೆಗೆ, ಬಡತಾದ ಇಳಕೆ ಮತ್ತಷ್ಟು ತಿಳಿಗೊಂಡಿದ ಗ್ರಾಮೀಣ ಪ್ರದೇಶದ ಬಡತನವು ನಗರ ಪ್ರದೇಶದ ಬಡತನಕ್ಕಿಂತ ವೇಗವಾಗಿ ಇಳಿಕೆ ಕಂಡಿದೆ.

 ಬಡಜನರ ಸಂಖ್ಯೆಯು 1973-24 ಹಾಗೂ 2004-05ರ ಅವಧಿಯಲ್ಲಿ 3213ಲಕ್ಷಗಳಿಂದ 3017 ಅಕ್ತಿಗಳಿಗೆ ಇಳಿಕೆಯಾಗಿದೆ. ಅಂದರೆ ಬಡತನದ ಪ್ರತಿಶತ ಪ್ರಮಾಣವು ತೀವ್ರವಾಗಿ ಇಳಿದರೂ, ಬಡವರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಾಣದಿರುವುದು ಮತ್ತು ಈಗಲೂ ಸುಮಾರು 30 ಕೋಟಿಯಷ್ಟು ಜನನು ಬಡವರಿರುವುದು ಆಘಾತಕಾರಿ, ಗ್ರಾಮಿಣ ಬಡವರು ಒಟ್ಟು ಬಡಜನರ ಶೇ. 73ರಷ್ಟಿದ್ದು, ಅವರ ಸಂಖ್ಯೆ ಇಳಿಕೆಯಾಗಿದ್ದು ನಗರ ಪ್ರದೇಶದ ಬಡವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.


ಭಾರತದಲ್ಲಿ ಬಡತನಕ್ಕೆ ಕಾರಣಗಳು


ಭಾರತದಲ್ಲಿನ ಬಡತನಕ್ಕೆ ಹಲವಾರು ಐತಿಹಾಸಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅಂಶಗಳು ಕಾರಣೀಭೂತವಾಗಿವೆ. ಬಡತನದ ಪ್ರಮುಖ ಆರ್ಥಿಕ ಕಾರಣಗಳನ್ನು ಕೆಳಗಿನಂತೆ ವರ್ಣಿಸಬಹುದು.


1. ಜನಸಂಖ್ಯೆಯಲ್ಲಿನ ತೀವ್ರ ಹೆಚ್ಚಳ : ಜನಸಂಖ್ಯೆಯು ತೀವ್ರಗತಿಯಲ್ಲಿ ಏರಿಕೆಯಾಗಿದ್ದುದು ಏನೇ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿದರೂ ಅದು ಹೆಚ್ಚುತ್ತಿರುವ ಜನಸಂಖ್ಯೆಗೆ ಮೂಲ ಅವಶ್ಯಕತೆಗಳನ್ನು ಪೂರೈಸುವಲ್ಲಿ ವಿಫಲವಾಗುತ್ತ ಸಾಗಿರುವುದು ಒಂದು ಪ್ರಮುಖ ಕಾರಣವಾಗಿದೆ.

2. ಕಡಿಮೆ ಮಟ್ಟದ ರಾಷ್ಟ್ರೀಯ ಆದಾಯ ಹಾಗೂ ಅದರ ನಿಧಾನ ಬೆಳವಣಿಗೆ : ಒಂದು ಕಡೆ ದೇಶದ ಅನಾಭಿವೃದ್ಧಿ ಹಾಗೂ ಮತ್ತೊಂದೆಡೆ ತೀವ್ರವಾಗಿ ಹೆಚ್ಚಿದ ಜನಸಂಖ್ಯೆ ತಲಾ ಆದಾಯವನ್ನು ಕಡಿಮೆ ಇಡುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಇದು ಒಂದು ವಿಷ ವರ್ತುಲವನ್ನು ಸೃಷ್ಟಿಸಿ, ಕಡಿಮೆ ಆದಾಯ ಕಡಿಮೆ ಉಳಿತಾಯ ಕಡಿಮೆ ಬಂಡವಾಳ ಹೂಡಿಕೆ – ಕಡಿಮೆ ಉತ್ಪಾದಕತೆ – ಕಡಿಮೆ ಹಾಗೂ ನಿಧಾನಗತಿಯ ಆದಾಯ ಬೆಳವಣಿಗೆ – ಮತ್ತೆ ಹೆಚ್ಚಿನ ಬಡತನದ ವಿಷವರ್ತುಲವನ್ನು ಸೃಷ್ಟಿಸಿದೆ.

3. ಬೆಲೆಗಳಲ್ಲಿ ಹೆಚ್ಚಳ : ನಿರಂತರವಾಗಿ ಏರತ್ತಿರುವ ಬೆಲೆ ಪ್ರಮಾಣಗಳು ಬಡವರ ಕೊಳ್ಳುವ ಶಕ್ತಿಯನ್ನು ಕುಗ್ಗಿಸಿ, ಅವರು ಮೂಲ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅಸಮರ್ಥರನ್ನಾಗಿಸಿ, ಅವರನ್ನು ಇನ್ನಷ್ಟು ಬಡವರನ್ನಾಗಿಸಲು ಕಾರಣವಾಗಿವೆ.

4. ನಿರುದ್ಯೋಗ : ಅಭಿವೃದ್ಧಿ ಪ್ರಕ್ರಿಯೆಯು ಉದ್ಯೋಗವನ್ನು ಅರಸುತ್ತಿರುವ ಜನರನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ವಿಫಲವಾಗಿದ್ದರಿಂದ ದಿನೇ ದಿನೇ ನಿರುದ್ಯೋಗ ಹೆಚ್ಚಾಗಿ ಬಡತನವು ಕೂಡ ಹೆಚ್ಚಾಗಿದೆ.

5. ಬಂಡವಾಳದ ಕೊರತೆ : ಕಡಿಮೆ ಆದಾಯ ಹಾಗೂ ಉಳಿತಾಯಗಳಿಂದಾಗಿ ಹೂಡಿಕೆಗೆ ಅಗತ್ಯವಾದ ಬಂಡವಾಳವನ್ನು ಸೃಜಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬಂಡವಾಳ ಸಂಚಯನ ಕುಂಠಿತಗೊಂಡಿದ್ದು, ಉತ್ಪಾದಕತೆ ಮತ್ತು ಆದಾಯ ಸೃಷ್ಟಿಸುವಿಕೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿ ಬಡತನಕ್ಕೆ ಕಾರಣವಾಗಿದೆ


ಬಡತನ ನಿರ್ಮೂಲನಾ ಕಾರ್ಯಕ್ರಮಗಳು :


ಸರ್ಕಾರವು ಬಡತನವನ್ನು ನಿರ್ಮೂಲನೆ ಮಾಡಲು ಹಲವಾರು ಕ್ರಮಗಳನ್ನು ಜಾರಿಗೊಳಿಸಿದೆ. ಈ ಕಾರ್ಯಕ್ರಮಗಳ ಬಡಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿ, ಅವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿ ತನ್ಮೂಲಕ ಬಡತನದ ತೀವ್ರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಸರ್ಕಾರದ ಈ ಕ್ರಮಗಳನ್ನು ನಾಲ್ಕು ವಿಧಗಳನ್ನಾಗಿ ವರ್ಗೀಕರಿಸಬಹುದಾಗಿದೆ. ಅವುಗಳೆಂದರೆ -


1. ಆರ್ಥಿಕ ಅಭಿವೃದ್ಧಿ ಕ್ರಮಗಳು : ಆರ್ಥಿಕ ಅಭಿವೃದ್ಧಿ ಮತ್ತು ಬಡತನದ ನಡುವೆ ನಿಕಟವಾದ ಸಂಬಂಧವಿದೆ. ದೇಶವು ಆರ್ಥಿಕವಾಗಿ ಅಭಿವೃದ್ಧಿಯನ್ನು ಸಾಧಿಸಿದಂತೆ ಬಡತನದ ಪ್ರಮಾಣವು ಕಡಿಮೆಯಾಗುತ್ತದೆ. ಸರ್ಕಾರವು ಪಂಚವಾರ್ಷಿಕ ಯೋಜನೆಗಳ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ. ಜೊತೆಗೆ ಅಭಿವೃದ್ಧಿಯ ಫಲಗಳು ಎಲ್ಲ ವರ್ಗದ ಜನರಿಗೆ ದೊರಕುವಂತೆ ನೋಡಿಕೊಳ್ಳುತ್ತಿದೆ


2. ಬಡತನ ನಿರ್ಮೂಲನಾ ಕಾರ್ಯಕ್ರಮಗಳು : ಸರ್ಕಾರವು 1960ರಿಂದೀಚೆಗೆ ಗ್ರಾಮೀಣ ಭಾಗದಲ್ಲಿನ ಜನಸಮುದಾಯಕ್ಕೆ ಅಗತ್ಯವಾಗಿರುವ ಉದ್ಯೋಗಾವಕಾಶಗಳನ್ನು ಒದಗಿಸಿಕೊಡಲು ಹಲವಾರು ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ:


1. ಸ್ವ-ಉದ್ಯೋಗ ಕಾರ್ಯಕ್ರಮಗಳು: ದೇಶದಲ್ಲಿರುವ ಬಡಜನರು ಮತ್ತು ವಿದ್ಯಾವಂತ ನಿರುದ್ಯೋಗಿಗಳನ್ನು ಗುರುತಿಸಿ, ಅವರಿಗೆ ಅಗತ್ಯವಿರುವ ಬಡಜನರು ಮತ್ತು ವಿದ್ಯಾವಂತ ಸಾಲವನ್ನು ಒದಗಿಸಿ, ಸ್ವಂತ ಉದ್ಯೋಗವನ್ನು ಕೈಗೊಳ್ಳುವಂತೆ ಮಾಡಲು ಹಲವಾರು ಸ್ವ ಉದ್ಯೋಗ ಯೋಜನೆಗಳನ್ನು ಜಾರಿಗೆ ತರಲಾಗಿದೆ ಅವುಗಳಲ್ಲಿ ಮುಖ್ಯವಾದವುಗಳೆಂದರೆ: 1980ರಲ್ಲಿ ಜಾರಿಗೆ ತಂದ 'ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ' (IRDP); 1997ರಲ್ಲಿ ಜಾರಿಯಾಗಿರುವ 'ಸ್ವರ್ಣಜಯಂತಿ ಶಹರಿ ರೋಜಗಾರ್ ಯೋಜನೆ' (SSRY); 1999ರಲ್ಲಿ ಜಾರಿಯಾಗಿರುವ 'ಸ್ವರ್ಣಜಯಂತಿ ಗ್ರಾಮ ಸ್ವ-ರೋಜಗಾರ್ ಯೋಜನೆ' (SGSRY); ಮತ್ತು 4, 2011ರಿಂದೀಚೆಗೆ ಜಾರಿಯಲ್ಲಿರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಅಥವಾ ದೀನ ದಯಾಳ ಅಂತ್ಯೋದಯ ಯೋಜನೆ.


2. ಕೂಲಿ ಉದ್ಯೋಗ ಕಾರ್ಯಕ್ರಮಗಳು: ಸ್ವಂತ ಆಸ್ತಿಯಿಲ್ಲದ ಹಾಗೂ ಕೌಶಲ್ಯ ರಹಿತ ಬಡಜನರಿಗೆ ದಿನಗೂಲಿ ಆಧಾರದ ಉದ್ಯೋಗ ಒದಗಿಸಲು ಹಲವಾರು 'ಕೂಲಿ ಉದ್ಯೋಗ ಕಾರ್ಯಕ್ರಮ'ಗಳನ್ನು ಜಾರಿಗೆ ತರಲಾಗಿದೆ. ಗ್ರಾಮೀಣ ಭಾಗದಲ್ಲಿ ಕೆರೆ-ಕಟ್ಟೆಗಳು, ರಸ್ತೆ, ಶಾಲೆ, ಆಸ್ಪತ್ರೆ ಮುಂತಾದ ಸಮುದಾಯದ ಆಸ್ತಿಗಳನ್ನು ನಿರ್ಮಿಸುವ ಮೂಲಕ ಇವರಿಗೆ ಕೂಲಿ ಉದ್ಯೋಗ ಒದಗಿಸಿಕೊಡಲಾಗುತ್ತದೆ.


2006ರಲ್ಲಿ 'ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ' (MGNREGS) ಯನ್ನು ಜಾರಿಗೆ ತರಲಾಗಿದೆ. ಇದು ಸದ್ಯದಲ್ಲಿ ಜಾರಿಯಲ್ಲಿರುವ ಅತ್ಯಂತ ಮಹತ್ವಾಕಾಂಕ್ಷಿ ಕೂಲಿ ಉದ್ಯೋಗ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರತಿ ಬಡ ಕುಟುಂಬದ ಇಚ್ಛೆಯುಳ್ಳ ಕೆಲಸಗಾರರಿಗೆ ವರ್ಷದಲ್ಲಿ ಕನಿಷ್ಠ 100 ದಿನಗಳ ಕೆಲಸವನ್ನು ನಿರ್ದಿಷ್ಟಪಡಿಸಿದ ಕನಿಷ್ಠ ಕೂಲಿದರದಲ್ಲಿ ಒದಗಿಸುವ ಭರವಸೆ ನೀಡಲಾಗಿದ್ದು ಇದರ ಮೂಲಕ ಅವರ ಜೀವನೋಪಾಯಕ್ಕೆ ಭದ್ರತೆಯನ್ನು ಒದಗಿಸಲಾಗುತ್ತಿದೆ. ಈ ಯೋಜನೆಯಡಿ ಬಡವರಾಗಿದ್ದು ಕನಿಷ್ಠ ಕೂಲಿ ದರಕ್ಕೆ ಕೆಲಸ ಮಾಡಲು ಸಿದ್ಧರಿರುವ ಅರೆಕುಶಲ ಕೆಲಸಗಾರರು ತಮ್ಮ ಗ್ರಾಮ ಪಂಚಾಯ್ತಿಗಳಲ್ಲಿ ಹೆಸರು ನೋಂದಾಯಿಸಿ ಉದ್ಯೋಗ ಚೀಟಿ ಪಡೆಯಬೇಕು. ಇಂಥ ನೋಂದಾಯಿತ ಉದ್ಯೋಗಾಕಾಂಕ್ಷಿಗಳು ಕೆಲಸಕ್ಕೆ ಬೇಡಿಕೆ ಇಟ್ಟ 15 ದಿನಗಳಲ್ಲಿ ಉದ್ಯೋಗ ಒದಗಿಸದಿದ್ದರೆ, ಅವರಿಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು. 


3. ಕನಿಷ್ಠ ಮೂಲ ಅವಶ್ಯಕತೆಗಳ ಪೂರೈಕೆ : ಗ್ರಾಮೀಣ ಭಾಗದ ಬಡ ಜನರಿಗೆ ಅಗತ್ಯವಿರುವ ಆಹಾರ, ವಸತಿ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೈರ್ಮಲ್ಯ ಮುಂತಾದ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸಿ, ಅವರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ನ್ಯಾಯ ಬೆಲೆ ಅಂಗಡಿಗಳ ಮೂಲಕ ಬಡಜನರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ‘ಯಶಸ್ವಿನಿ ಯೋಜನೆಯ ಅಡಿಯಲ್ಲಿ ಬಡಜನರಿಗೆ ಆರೋಗ್ಯ ವಿಮಾ ಸೌಲಭ್ಯ ಒದಗಿಸಲಾಗುತ್ತಿದೆ. ಇಂದಿರಾ ಆವಾಸ್ ಯೋಜನೆ’ ಮತ್ತು ‘ವಾಲ್ಮೀಕಿ-ಅಂಬೇಡ್ಕರ್ ಆವಾಸ್ ಯೋಜನೆ’ ಮೂಲಕ ಮನೆಯಿಲ್ಲದ ಬಡಜನರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ನಿರ್ಮಲ ಗ್ರಾಮ’ ಯೋಜನೆ ಹಾಗೂ ಇತ್ತೀಚಿನ ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗುತ್ತಿದೆ. 2000ರಲ್ಲಿ ‘ಪ್ರಧಾನ ಮಂತ್ರಿ ಗ್ರಾಮೋದಯ ಯೋಜನೆ”(PMGY)ಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಅಡಿಯಲ್ಲಿ ಗ್ರಾಮೀಣ ಬಡಜನರಿಗೆ ಪ್ರಾಥಮಿಕ ಶಿಕ್ಷಣ, ಆರೋಗ್ಯ, ವಸತಿ, ಕುಡಿಯುವ ನೀರು, ಗ್ರಾಮೀಣ ವಿದ್ಯುದೀಕರಣ ಮುಂತಾದ ಸೇವೆಗಳನ್ನು ಒದಗಿಸಲಾಗುತ್ತಿದೆ.


4. ಸಾಮಾಜಿಕ ಭದ್ರತಾ ಕ್ರಮಗಳು: ಸಮಾಜದ ಅತಿ ಬಡಕುಟುಂಬಗಳ ಅಸಹಾಯಕರು, ವಯಸ್ಸಾದವರು, ಅಂಗವಿಕಲರು ಮುಂತಾದವರಿಗೆ ಸರ್ಕಾರ ಒದಗಿಸುವ ರಕ್ಷಣೆಗೆ ಸಾಮಾಜಿಕ ಭದ್ರತೆ ಎನ್ನುತ್ತೇವೆ. ಅನಾಥರಾದ ಶ್ಯ ವೇತನ ನೀಡಲಾಗುತ್ತಿದೆ. ಮುದುಕರಿಗೆ ‘ಸಂಧ್ಯಾ ಸುರಕ್ಷಾ ಯೋಜನೆ’ ಯ ಮೂಲಕ ಪ್ರತಿ ತಿಂಗಳು ವೃದ್ಧಾಪ್ಯ ದುಡಿಯಲು ಅಸಮರ್ಥರಾದ ಅಂಗವಿಕಲರಿಗೆ ಮತ್ತು ಬಡ ವಿಧವೆಯರಿಗೆ ವಿಧವಾ ಮಾಶಾಸನ ನೀಡಲಾಗುತ್ತಿದೆ.


ಹೀಗೆ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಬಡಜನರನ್ನು ಬಡತನ ರೇಖೆಯ ಮೇಲೆತ್ತಲು ಪ್ರಯತ್ನಿಸುತ್ತಿದೆ. ಇದರ ಪರಿಣಾಮವಾಗಿ ಬಡತನದ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ

 .


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು