1. ಪರಿಚಯ
ನಿಮಗೆ ನಿಮ್ಮ ಕುಟುಂಬ ಯಾವ ಮೂಲಗಳಿಂದ ಎಷ್ಟು ವರಮಾನ ಪಡೆಯುತ್ತದೆ ಎಂಬ ಮಾಹಿತಿ ಇದೆಯೆ? ಪ್ರತಿ ಕುಟುಂಬದ ಸದಸ್ಯರು ಕೃಷಿ ಉದ್ದಿಮೆ ಅಥವಾ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವರಮಾನ ಪಡೆಯುತ್ತಾರೆ, ವ್ಯಕ್ತಿಗಳು ವರಮಾನವನ್ನು ಗಣಿ ಅಥವಾ ಪಾಡಿಗೆ (ಭೂಮಿ, ಜಮೀನು ಮತ್ತು ಇತರ ಸ್ಥಿರ ಆಸ್ತಿಗಳ ಮೇಲೆ): ಕೂಲಿ (ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ತಮ್ಮ ಶ್ರಮ ನೀಡುವುದರ ಮೂಲಕ): ಬಡ್ಡಿ (ಹಣಕಾಸು ಸಂಸ್ಥೆಗಳಲ್ಲಿ ಹಣ ಹೂಡುವುದರ ಮೂಲಕ ಅಥವಾ ಇನ್ನೊಬ್ಬರಿಗೆ ಸಾಲವಾಗಿ ನೀಡುವುದರ ಮೂಲಕ): ಮತ್ತು ಲಾಭಗಳ (ಒಂದು ಉತ್ಪಾದಕ ಚಟುವಟಿಕೆಯಲ್ಲಿ ಹಣ ತೊಡಗಿಸುವುದರ ಮೂಲಕ) ರೂಪದಲ್ಲಿ ವರಮಾನ ಪಡೆಯುತ್ತಾರೆ.
ಹೀಗೆ ಪಡೆಯಲಾಗುವ ವರಮಾನವನ್ನು ಅನುಭೋಗ ಮತ್ತು ಅಭಿವೃದ್ಧಿ, ಉದ್ದೇಶಗಳಿಗಾಗಿ ವೆಚ್ಚ ಮಾಡಲಾಗುತ್ತದೆ. ವ್ಯಕ್ತಿ ಅಥವಾ ಕುಟುಂಬ ತನ್ನ ವರಮಾನ ಮತ್ತು ವೆಚ್ಚವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಅಭಿವೃದ್ಧಿಯನ್ನು ಸಾಧಿಸುವುದು ಒಂದು ಕಲೆ, ವರಮಾನಕ್ಕಿಂತ ವೆಚ್ಚ ಅಧಿಕವಾದಾಗ ಸಾಲ ಮಾಡಬೇಕಾಗುತ್ತದೆ. ಹೀಗೆ ವ್ಯಕ್ತಿ ಅಥವಾ ಕುಟುಂಬದ ವರಮಾನ, ವೆಚ್ಚ ಮತ್ತು ಸಾಲದ ನಿರ್ವಹಣೆಯ ಬಗ್ಗೆ ತಿಳಿಸಿಕೊಡುವುದನ್ನು ‘ವೈಯಕ್ತಿಕ ಹಣಕಾಸು’ ಎನ್ನುತ್ತೇವೆ. ಅದೇ ರೀತಿಯಲ್ಲಿ ಸರ್ಕಾರವು ತನ್ನದೇ ಹಣಕಾಸನ್ನು ನಿರ್ವಹಿಸುತ್ತದೆ, ಅದೇ ಸಾರ್ವಜನಿಕ ಹಣಕಾಸು. ಈ ಅಧ್ಯಾಯದಲ್ಲಿ ಸರ್ಕಾರವು ತನ್ನ ಹಣಕಾಸನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ತಿಳಿಯೋಣ. ಸಾರ್ವಜನಿಕ ಹಣಕಾಸಿನ ಅರ್ಥ ಮತ್ತು ಮಹತ್ವ
ಸರ್ಕಾರದ ವರಮಾನ, ವೆಚ್ಚ ಹಾಗೂ ಸಾಲಗಳ ನಿರ್ವಹಣೆಯನ್ನು ಕುರಿತು ಅಧ್ಯಯನ ಮಾಡುವುದೇ ಸಾರ್ವಜನಿಕ ಹಣಕಾಸು, ಸರ್ಕಾರದ ವರಮಾನ ಹಾಗೂ ವೆಚ್ಚಗಳ ನಿರ್ವಹಣೆ ಮತ್ತು ಅವುಗಳಲ್ಲಿನ ಹೊಂದಾಣಿಕೆ ಮಾಡುವ ಪ್ರಕ್ರಿಯೆ ಬಗ್ಗೆ ಅಭ್ಯಸಿಸುವುದೇ ಸಾರ್ವಜನಿಕ ಹಣಕಾಸು ಎಂದು ಡಾಲ್ಟನ್‌ರವರು ವ್ಯಾಖ್ಯಾನಿಸುತ್ತಾರೆ. ಸಾರ್ವಜನಿಕ ಹಣಕಾಸು ಸರ್ಕಾರದ ಪರಮಾನ, ವೆಚ್ಚ ಮತ್ತು ಸಾಲ ನಿರ್ವಹಣೆಯ ಸಮಗ್ರ ಚಿತ್ರಣವನ್ನು ನೀಡುತ್ತದೆ.
ಮಹತ್ವ: ಆರ್ಥಿಕ ಅಭಿವೃದ್ಧಿ ಮತ್ತು ಆರ್ಥಿಕ ಸ್ಥಿರತೆಯನ್ನು ಸಾಧಿಸುವ ಉದ್ದೇಶದಿಂದ ಸರ್ಕಾರವು ತನ್ನ ವರಮಾನ, ವೆಚ್ಚ ಮತ್ತು ಸಾಲಕ್ಕೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಅನುಸರಿಸುವ ನೀತಿಗೆ ಹೋಶೀಯ ನೀತಿ ಅಥವ ವಿತ್ತೀಯ ನೀತಿ ಎನ್ನುತ್ತಾರೆ, ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆ ಸಾಧಿಸಿ ವರಮಾನದ ಸಮಾನ ಹಂಚಿಕೆಯನ್ನು ಸಾಧಿಸುವುದು ವಿತ್ತೀಯ ನೀತಿಯ ಪ್ರಮುಖ ಉದ್ದೇಶಗಳಾಗಿವೆ.
ಸರ್ಕಾರವು ಸಾಮಾನ್ಯವಾಗಿ ತಾನು ಸಂಗ್ರಹಿಸಿದ ವರಮಾನವನ್ನು ಅಥವಾ ಪಡೆದ ಸಾಲದ ಮೊತ್ತವನ್ನು ಅಭಿವೃದ್ಧಿ ಕಾರ್ಯಗಳ ಮೇಲೆ ವ್ಯಯಿಸುತ್ತದೆ. ಇದು ಬೆಳವಣಿಗೆ ದರವನ್ನು ವೃದ್ಧಿಸಿ ಎಲ್ಲರಿಗೂ ಪ್ರಯೋಜನ ದೊರಕಿಸುತ್ತದೆ. ಅದೇ ರೀತಿ ಆರ್ಥಿಕ ಹಿಂಜರಿತದ ಸಂದರ್ಭಗಳಲ್ಲಿ ವೆಚ್ಚವನ್ನು ಹಿಗ್ಗಿಸಿ, ಆರ್ಥಿಕ ಹಿಗ್ಗುವಿಕೆಯ ಸಂದರ್ಭಗಳಲ್ಲಿ ವೆಚ್ಚವನ್ನು ಕುಗ್ಗಿಸಿ, ಸರ್ಕಾರವು ಆರ್ಥಿಕ ಸ್ಥಿರತೆಯನ್ನು ಸಾಧಿಸುತ್ತದೆ. ಸರ್ಕಾರದ ವರಮಾನ, ವೆಚ್ಚ ಮತ್ತು ಅವುಗಳ ನಡುವಿನ ಹೊಂದಾಣಿಕೆಗಳು ವಾರ್ಷಿಕ ಆಯ-ವ್ಯಯ ಅಥವಾ ಮುಂಗಡ ಪತ್ರಗಳ ಭಾಗವಾಗಿರುವುದರಿಂದ ಸಾರ್ವಜನಿಕ ಹಣಕಾಸಿನ ಅಧ್ಯಯನವು ಆಯ-ವ್ಯಯಗಳ ವಿಶ್ಲೇಷಣೆಗೂ ಸಹಾಯಕಾರಿಯಗುತ್ತದೆ.
2, ಆಯ-ವ್ಯಯ ಅಥವಾ ಮುಂಗಡ ಪತ್ರ
ಸರ್ಕಾರವು ಪ್ರತಿ ವರ್ಷ ತನ್ನ ಆಯ-ವ್ಯಯವನ್ನು ತಯಾರಿಸುತ್ತದೆ. ಭಾರತದಲ್ಲಿ ಹಣಕಾಸು ವರ್ಷವು ಏಪ್ರಿಲ್ 1ರಂದು ಪ್ರಾರಂಭವಾಗಿ ಅದರ ಮುಂದಿನ ವರ್ಷದ ಮಾರ್ಚ್ 31ಕ್ಕೆ ಮುಕ್ತಾಯವಾಗುತ್ತದೆ, ಮುಂದಿನ ವರ್ಷದ ಆಯ-ವ್ಯಯವನ್ನು ಸರ್ಕಾರವು ಸದರಿ ವರ್ಷದಲ್ಲಿ ತಯಾರಿಸಿ ಸಂಸತ್ತಿನ ಅನುಮೋದನೆ ಪಡೆಯುತ್ತದೆ, ಆ ಆಯ-ವ್ಯಯದ ಮೂಲಕ ತನ್ನ ಕೋತಿಯ ನೀತಿಯ ಉದ್ದೇಶಗಳನ್ನು ಸಾಧಿಸಲು ಪ್ರಯತ್ನಿಸುತ್ತದೆ, ಹಾಗಾದರೆ ಆಯ-ವ್ಯಯ ಎಂದರೇನು?
ಸರ್ಕಾರದ ಒಂದು ವರ್ಷದ ಬರಮಾನ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಆಯ-ವ್ಯಯ ಪತ್ರ ಅಥವಾ ಮುಂಗಡ ಪತ್ರ ಎಂದು ಕರೆಯುತ್ತಾರೆ. ಇದು ಸರ್ಕಾರದ ವರಮಾನ ಮತ್ತು ವೆಚ್ಚವನ್ನು ತಿಳಿಸುವ ಒಂದು ದಾಖಲೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮದೇ ಪ್ರತ್ಯೇಕ ಆಯ-ವ್ಯಯವನ್ನು ತಯಾರಿಸುತ್ತವೆ. ಭಾರತದಲ್ಲಿ ಸಾಮಾನ್ಯವಾಗಿ ಹಣಕಾಸು ಸಚಿವರು ಪ್ರತಿವರ್ಷ ಫೆಬ್ರವರಿ ಅಥವಾ ಮಾರ್ಚ್ ತಿಂಗಳ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಕೇಂದ್ರ ಆಯ-ವ್ಯಯವನ್ನು ಮಂಡಿಸುತ್ತಾರೆ, ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಆಯ-ವೈಯ ಚಿತ್ರದ ಮೇಲೆ ಸುದೀರ್ಘ ಚರ್ಚೆ ನಡೆದು, ಮಾರ್ಚ್ 31ರ ಒಳಗಾಗಿ ಎರಡೂ ಸದನಗಳ ಅನುಮೋದನೆಯನ್ನು ಪಡೆಯಲಾಗುತ್ತದೆ.
ಆಯ-ವ್ಯಯ ಪತ್ರದಲ್ಲಿ ಮೂರು ವಿಧಗಳಿವೆ: ಸರ್ಕಾರದ ವರಮಾನವು ಅದರ ವೆಚ್ಚಕ್ಕಿಂತ ಹೆಚ್ಚಾಗಿದ್ದರೆ, ಅದನ್ನು ಉಳಿತಾಯ ಆಯ-ವ್ಯಯ ಎಂತಲೂ: ವರಮಾನಕ್ಕಿಂತ ವೆಚ್ಚವು ಹೆಚ್ಚಾಗಿದ್ದರೆ ಅದನ್ನು ಕೊರತೆಯ ಆಯ-ವ್ಯಯ ಎಂತಲೂ: ವರಮಾನ ಮತ್ತು ವೆಚ್ಚಗಳೆರಡೂ ಸಮನಾಗಿದ್ದರೆ, ಅದನ್ನು ಸಮತೋಲನ ಆಯ ವ್ಯಯ ಎಂತಲೂ ಕರೆಯುತ್ತೇವೆ. ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ರಾಷ್ಟ್ರಗಳಲ್ಲಿ ಸರ್ಕಾರಗಳು ಕೊರತೆಯ ಆಯ-ವ್ಯಯವನ್ನು ಮಂಡಿಸುವ ಮೂಲಕ ಅಧಿಕ ಪ್ರಮಾಣದ ವೆಚ್ಚ ಮಾಡಿ, ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತಿವೆ.
2.1. ಸಾರ್ವಜನಿಕ ವೆಚ್ಚಗಳು: ಸರ್ಕಾರವು ರಾಷ್ಟ್ರದ ರಕ್ಷಣೆ, ಆಡಳಿತ ನಿರ್ವಹಣೆ, ಆರ್ಥಿಕ ಅಭಿವೃದ್ಧಿ ಹಾಗೂ ಜನರ ಯೋಗಕ್ಷೇಮದ ದೃಷ್ಟಿಯಿಂದ ವಿವಿಧ ಚಟುವಟಿಕೆಗಳಿಗಾಗಿ ಹಣವನ್ನು ವೆಚ್ಚ ಮಾಡುತ್ತದೆ, ಇದನ್ನು ಸಾರ್ವಜನಿಕ ವೆಚ್ಚ ಎನ್ನುತ್ತಾರೆ. ಅಂದರೆ ಸರ್ಕಾರವು ತನ್ನ ಪ್ರಜೆಗಳ ಹಿತದೃಷ್ಟಿಯಿಂದ ಮಾಡುವ ವೆಚ್ಚವೆ ಸಾರ್ವಜನಿಕ ವೆಚ್ಚ 20ನೆಯ ಶತಮಾನದಲ್ಲಿ ಕಲ್ಯಾಣ ರಾಜ್ಯಗಳ ಉದಯದೊಂದಿಗೆ ಆಧುನಿಕ ಸರ್ಕಾರಗಳ ಕಾರ್ಯಕ್ಷೇತ್ರ ಮತ್ತು ಪಾತ್ರ ವಿಸ್ತರಣೆಯಾಗಿದೆ. ಹಾಗಾಗಿ ಸಾರ್ವಜನಿಕ ವೆಚ್ಚವೂ ಹೆಚ್ಚಾಗಿದೆ. ಭಾರತದಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ತಮ್ಮದೇ ಆದ ವೆಚ್ಚದ ಬಾಬುಗಳನ್ನು ಹೊಂದಿವೆ.
ಇಪ್ಪತ್ತನೆಯ ಶತಮಾನದಲ್ಲಿ ಸರ್ಕಾರದ ಪಾತ್ರೆಗಳ ವಿಸ್ತಾರವು ಅಧಿಕಗೊಂಡಿದ್ದರಿಂದ ಸಾರ್ವಜನಿಕ ವೆಚ್ಚವೂ ಏರಿಕೆಯಾಗಿದೆ. ಸಾರ್ವಜನಿಕ ವೆಚ್ಚವು ಆರ್ಥಿಕ ಅಭಿವೃದ್ಧಿಯನ್ನು ಜೋಡಿಸುವ ಸೌಕರ್ಯಗಳನ್ನು ಸೃಷ್ಟಿಸಿ ಹೊರೆಯಬೇಕಾಗುತ್ತದೆ. ಅದು ಬಂಡವಾಳ ಹೂಡಿಕೆಗೆ ಇರುವ ವಾತಾವರಣವನ್ನು ಸುಧಾರಿಸಬೇಕಾಗುತ್ತದೆ, ಉಳಿತಾಯು, ಹೂಡಿಕೆ ಮತ್ತು ಆವಿಷ್ಕಾರಗಳಿಗೆ ಉತ್ತೇಜಕಗಳನ್ನು ಒದಗಿಸಬೇಕಾಗುತ್ತದೆ. ಅಲ್ಲದೇ, ಆರ್ಥಿಕ ಬೆಳವಣಿಗೆಯನ್ನು ತೀವ್ರಗೊಳಿಸಿ ಸ್ಥಿರತೆಯನ್ನೂ ಬಿಚಿತಪಡಿಸಬೇಕಾಗುತ್ತದೆ, ಅಂದರೆ ಸಾರ್ವಜನಿಕ ವೆಚ್ಚದ ಪ್ರಮುಖ ಉದ್ದೇಶಗಳೆಂದರೆ:
i. ಅರ್ಥಿಕ ಬೆಳವಣಿಗೆಯನ್ನು ತೀವ್ರಗೊಳಿಸುವುದು;
Ii. ಉದ್ಯಮ, ವ್ಯವಹಾರ ಮತ್ತು ವಾಣಿಜ್ಯಗಳನ್ನು ಪ್ರೋತ್ಸಾಹಿಸುವುದು,
iii. ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವುದು;
iv, ಸಂತುಲಿತ ಪ್ರಾದೇಶಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು
V. ಸಾಮಾಜಿಕ-ಆರ್ಥಿಕ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವುದು;
vi. ಸಂಪೂರ್ಣ ಉದ್ಯೋಗ ಸಾಧಿಸುವುದು, ಮತ್ತು
vii, ಸಾಮಾಜಿಕ ಕಲ್ಯಾಣವನ್ನು ಅಧಿಕಗೊಳಿಸುವುದು,
2.2, ಸಾರ್ವಜನಿಕ ವರಮಾನ
ಸಾರ್ವಜನಿಕ ವರಮಾನವು ವಿವಿಧ ಆರ್ಥಿಕ ಚಟುವಟಿಕೆ ಹಾಗೂ ವ್ಯಕ್ತಿಗಳ ಮೇಲೆ ವಿಧಿಸಿದ ತೆರಿಗೆಗಳಿಂದ: ಸರ್ಕಾರದ ಉದ್ದಿಮೆಗಳಿಂದ ದೊರಕಿದ ವರಮಾನದಿಂದ; ಅನುದಾನ ಮುಂತಾದವುಗಳಿಂದ ದೊರೆಯುತ್ತದೆ. ಜನರ ವರಮಾನದಲ್ಲಿನ ಹೆಚ್ಚಳದಿಂದಾಗಿ ಮತ್ತು ಸರ್ಕಾರದ ಆವಶ್ಯಕತೆಗಳೂ ಹೆಚ್ಚಾಗುತ್ತಿರುವುದರಿಂದ, ಸರ್ಕಾರ ಸಂಗ್ರಹಿಸುತ್ತಿರುವ ವರಮಾನದ ಪ್ರಮಾಣವು ಹೆಚ್ಚಾಗುತ್ತಲಿದೆ. ಸಂವಿಧಾನವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯಗಳನ್ನು ನಿರ್ದಿಷ್ಟಗೊಳಿಸುವುದರ ಜೊತೆಗೆ ಅವಗಳ ವರಮಾನದ ಮೂಲಗಳನ್ನೂ ನಿರ್ದಿಷ್ಟಪಡಿಸಿದೆ. ಕೇಂದ್ರ ಸರ್ಕಾರದ ವರಮಾನದ ಮೂಲಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ.
A. ಕಂದಾಯ ವರಮಾನ (Revenue Receipts): ಸರ್ಕಾರವು ವಿವಿಧ ತೆರಿಗೆಗಳು ಮತ್ತು ತೆರಿಗೆಯೇತರ ಮೂಲಗಳಿಂದ ಸಂಗ್ರಹಿಸುವ ವರಮಾನವನ್ನು ಕಂದಾಯ ವರಮಾನ ಎಂದು ಕರೆಯುತ್ತಾರೆ, ಇದು ಸರ್ಕಾರದ ವಾಸ್ತವ ವರಮಾನವಾಗಿರುತ್ತದೆ. ಕಂದಾಯ ವರಮಾನವನ್ನು ಮುಖ್ಯವಾಗಿ ಎರಡು ವಿಧಗಳನ್ನಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ, ತೆರಿಗೆ ವರಮಾನ ಮತ್ತು ತೆರಿಗೆಯೇತರ ವರಮಾನ 1) ತೆರಿಗೆ ವರಮಾನ (Tax Revenue): ಪಡೆಗಳು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸರ್ಕಾರಕ್ಕೆ
ಕೊಡಬೇಕಾದ ಕಡ್ಡಾಯ ವಂತಿಗೆಯನ್ನು ತೆರಿಗೆ ಎನ್ನುತ್ತೇವೆ. ಕೇಂದ್ರ ಸರ್ಕಾರವು ಪಜೆಗಳ ಮೇಲೆ ನಾನಾ ರೀತಿಯ ತೆರಿಗೆಗಳನ್ನು ವಿಧಿಸಿ ವರಮಾನವನ್ನು ಸಂಗ್ರಹಿಸುತ್ತಿದೆ. ತೆರಿಗೆಗಳು ಸರ್ಕಾರದ ಬಹುಮುಖ್ಯ ವರಮಾನದ ಮೂಲಗಳಾಗಿವೆ. ಸರ್ಕಾರವು ತೆರಿಗೆಗಳನ್ನು ವಿಧಿಸುವಾಗ ಹೆಚ್ಚು ವರಮಾನವ ಳವರ ಮೇಲೆ ಹೆಚ್ಚಿನ ತೆರಿಗೆಯನ್ನೂ ಕಡಿಮೆ ವರಮಾನವುಳ್ಳವರ ಮೇಲೆ ಕಡಿಮೆ ತೆರಿಗೆಯನ್ನು ವಿಧಿಸುತ್ತದೆ. ಬಡವರಿಗೆ ವರಮಾನ ತೆಗೆಯಲ್ಲಿ ವಿನಾಯಿತಿ ನೀಡಿದೆ. ಅದೇ ರೀತಿಯಲ್ಲಿ ಶ್ರೀಮಂತರು ಬಳಸುವ ಸರಕು-ಸೇವೆಗಳ ಮೇಲೆ ಹೆಚ್ಚಿನ ತೆರಿಗೆಯನ್ನೂ ಮತ್ತು ಸಾಮಾನ್ಯ ಜನರು ಬಳಸುವ ಸರಕು-ಸೇವೆಗಳ ಮೇಲೆ ಕಣದ ತೆರಿಗೆಯನ್ನು ವಿಧಿಸುತ್ತಿವೆ. ಸರ್ಕಾರ ತೆರಿಗೆ ವಿಧಿಸುವಲ್ಲಿ ಅನುಸರಿಸುವ ಈ ನೀತಿಯನ್ನು ಪ್ರಗತಿಪರ ತೆರಿಗೆ ನೀತಿ ಎನ್ನುತ್ತಾರೆ.
ಕೇಂದ್ರ ಸರ್ಕಾರ ವಿಧಿಸುವ ತೆರಿಗೆಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಅವುಗಳೆಂದರೆ, ಆ) ಪ್ರತ್ಯಕ್ಷ
ತೆಂಗೆಗಳು ಬ) ಪರೋಕ್ಷ ತೆರಿಗೆಗಳು, ೨) ಪ್ರತ್ಯಕ್ಷ ತೆರಿಗೆಗಳು (Direct Taxe): ಸರ್ಕಾರವು ಯಾರ ಮೇಲೆ ತೆರಿಗೆಯನ್ನು ವಿಧಿಸುತ್ತದೆಯೋ ಅವರೇ ಆ ತೆರಿಗೆಯನ್ನು ಪಾವತಿಸಿದರೆ, ಅಂತಹ ತೆರಿಗೆಯನ್ನು ಪ್ರತ್ಯಕ್ಷ ತೆರಿಗೆ ಎನ್ನುತ್ತಾರೆ. ಈ ತೆರಿಗೆಗಳನ್ನು ಇತರರಿಗೆ ವರ್ಗಾಯಿಸಲು ಬರುವುದಿಲ್ಲ. ಸಾಮಾನ್ಯವಾಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಗಳಿಸುವ ವರಮಾನ ಮತ್ತು ಸಂಪತ್ತಿನ ಮೇಲೆ ವಿಧಿಸುವ ತೆರಿಗೆಗಳು ಪ್ರತ್ಯಕ್ಷ ತೆರಿಗೆಗಳಾಗಿವೆ. ಪ್ರಮುಖ ಪತ್ರಕ್ಕೆ ತೆರಿಗೆಗಳೆಂದರೆ, ವರಮಾನ ತೆರಿಗೆ, ಕಂಪನಿ ತೆರಿಗೆ, ಸಂಪತ್ತಿನ ತೆರಿಗೆ, ಸ್ಟಾಂಪ್ ಶುಲ್ಕ ಇತ್ಯಾದಿ.
ಬ) ಪರೋಕ್ಷ ತೆರಿಗೆಗಳು (Indirect Taxp): ಸರ್ಕಾರವು ವಿಧಿಸುವ ತೆರಿಗೆಯನ್ನು ಇತರರ ಮೇಲೆ ವರ್ಗಾಯಿಸಲು ಸಾಧ್ಯವಿದ್ದರೆ, ಅಂತಹ ತೆರಿಗೆಯನ್ನು ಪರೋಕ್ಷ ತೆರಿಗೆ ಎನ್ನುತ್ತಾರೆ. ಸಾಮಾನ್ಯವಾಗಿ ಪರೋಕ್ಷ ತೆಗೆಯನ್ನು ಸರಕುಗಳು ಮತ್ತು ಸೇವೆಗಳ ಮೇಲೆ ವಿಧಿಸಲಾಗುತ್ತದೆ. ಉದಾ:- ಸರ್ಕಾರವು ಸರಕು ಸೇವೆಗಳ ಉತ್ಪಾದನೆಯ ಸಂದರ್ಭದಲ್ಲಿ ಉತ್ಪಾದಕನ ಮೇಲೆ ತೆರಿಗೆಯನ್ನು ವಿಧಿಸುತ್ತದೆ. ಉತ್ಪಾದಕನು ಈ ತೆರಿಗೆಯನ್ನು ಮಾರಾಟಗಾರನಿಗೆ ವರ್ಗಾಯಿಸಿದರೆ, ಮಾರಾಟಗಾರನು ಅಂತಿಮವಾಗಿ 5 ತೆರಿಗೆ ಹೊರೆಯನ್ನು ಬಳಕೆದಾರನಿಗೆ ವರ್ಗಾಯಿಸುತ್ತಾನೆ. ಅಂದರೆ ಸರ್ಕಾರ ಉತ್ಪಾದಕನ ಮೇಲೆ ತೆರಿಗೆ ವಿಧಿಸಿದರೆ, ಅದರ ಹೊರ ಹೊರುವವನ್ನು ಬಳಕೆದಾರನಾಗಿರುತ್ತಾನೆ. ಕೇಂದ್ರ ಸರ್ಕಾರ ವಿಧಿಸುವ ಪ್ರಮುಖ ಪರೋಕ್ಷ ತೆರಿಗೆಗಳೆಂದರೆ, ಕೇಂದ್ರ ಅಬಕಾರಿ ತೆರಿಗೆ, ಮೌಲ್ಯವರ್ಧಿತ ತೆರಿಗೆ, ಆಮದು ರಫ್ತು ಸುಂಕಗಳು, ಸೇವಾ ತೆರಿಗೆ, ಇತ್ಯಾದಿ, ಜುಲೈ 1, 2017ರಿಂದ ಸರ್ಕಾರವು ಎಲ್ಲ ಪರೋಕ್ಷ ತೆರಿಗೆಗಳ ಬದಲಾಗಿ ಸರಕು ಮತ್ತು ಸೇವಾ ತೆರಿಗೆಯನ್ನು (GST) ಜಾರಿಗೆ ತಂದಿದೆ.
(Goods and Services Tax, GST)
ಜಿಎಸ್‌ಟಿಯು ಭಾರತಾದ್ಯಂತ ವಿಧಿಸಲಾಗುವ ಉತ್ಪಾದನೆ, ಮಾರಾಟ ಹಾಗೂ ಬಳಕೆಯ ಮೇಲಿನ| ಸಮಸ್ಯೆ ಪರೋಕ್ಷ ತೆರಿಗೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸದ ವಿಧಿಸುತ್ತಿರುವ ಎಲ್ಲ ಪರೋಕ್ಷ ತಿಂಗೆಗಳ ಬದಾಗಿ 1-7-2017ರಿಂದ ಜಾರಿಗೆ ಬಂದಿದೆ. ಅದನ್ನು ಸರಕು ಸೇವೆಗಳ ಮಾರಾಟ ಅಥವಾ ಯ ಎಲ್ಲ ಹಂತಗಳಲ್ಲಿ ವಿಧಿಸಿ ಅಕರಿಸಲಾಗುತ್ತದೆ.
ಜಿಎಸ್‌ಟಿಯ - ಜಾರಿಯು ಪರೋಕ್ಷ ತೆರಿಗೆಗಳ ಸುಧಾರಣೆಯಲ್ಲಿ ಒಂದು ಮಹ್ವಾರ ಹೆಜ್ಜೆಯಾಗಿದ್ದು, ಹುವಿಧ ಹೆರಿಗೆ ಆಕರಣೆ ಹಾಗೂ ಅದರ ಪರಿಗ ಮಗಳನ್ನು ತಡೆಗಟ್ಟು ದೇಶದಾದ್ಯಂತ ಒಂದೇ ಸಾಮಾನ್ಯ ಮಾರುಕಟ್ಟೆ ಸ್ಥಾಪಿಸಲು ಸಹಾಯಕವಾಗುತ್ತದೆ. ತೆರಿಗೆಯ ಸರಳಿಕರದಿಂದಾಗಿ ಆದರೆ ಆಡಳಿತ ಹಾಗೂ ಜಾರಿ ಸುಲಭವಾಗುತ್ತದೆ, ಬಳಕೆದಾರರ ದೃಷ್ಟಿಯಿಂದ ನೋಡುವುದಾದರೆ, ಅತ್ಯಂತ ಪ್ರಮುಖ ಪಯೋಜನವ ತೆರಿಗೆ ಹೊರೆಯ ಬಳಕೆಯಾಗುತ್ತದೆ, ಸರಕುಗಳು ಮುಕ್ತವಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಾಟವಾಗುತ್ತವ ಮತ್ತು ದಾಖಲೀಕರಣದ ಹೊರ ಕಡಿಮೆಯಾಗುತ್ತದೆ,
2) ತೆರಿಗೆಯೇತರ ಪರಮಾನ (Non-Tax Revenue) : ಸರ್ಕಾರವು ತೆರಿಗೆಗಳನ್ನು ಹೊರತುಪಡಿಸಿ ಇತರ ಮೂಲಗಳಿಂದಲೂ ವರಮಾನವನ್ನು ಸಂಗ್ರಹಿಸುತ್ತದೆ. ಇದಕ್ಕೆ ತೆರಿಗೆಯೇತರ ವರಮಾನ ಎನ್ನುತ್ತಾರೆ, ಕೇಂದ್ರ ಸರ್ಕಾರ ಸಂಗ್ರಹಿಸುವ ಪ್ರಮುಖ ಕೆಂಗಯಾರ ವರಮಾನಗಳೆಂದರೆ:
1. ಭಾರತೀಯ ರಿಜರ್ವ್ ಬ್ಯಾಂಕು ಗಳಿಸುವ ಲಾಭ
2. ಭಾರತೀಯ ರೈಲ್ವೆ ಗಳಿಸುವ ಲಾಭ
3. ಅಂಚೆ ಮತ್ತು ದೂರವಾಣಿ ಸೇವೆಗಳಿಂದ ಬರುವ ವರಮಾನ:
4. ಸಾರ್ವಜನಿಕ ಉದ್ಯಮಗಳು ಗಳಿಸುವ ವರಮಾನ
5. ನಾಣ್ಯ ಮುದ್ರಣಾಲಯ ಮತ್ತು ಟಂಕಸಾಲೆಯಿಂದ ಬರುವ ವರಮಾನ;
6. ವಿವಿಧ ರೀತಿಯ ಶುಲ್ಕಗಳು, ದಂಡಗಳು, ಇತ್ಯಾದಿ.
B. ಬಂಡವಾಳ ವರಮಾನ (Capital Receipt): ಈ ಮೂಲದ ವರಮಾನವು ಸರ್ಕಾರಕ್ಕೆ ಹೊರೆಯಾಗುತ್ತದೆ ಅಥವಾ ಅದರ ಆಸ್ತಿಗಳನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ ಸರ್ಕಾರ ಮಾಡುವ ಸಾಲಗಳು ಆದರ ಹೊರೆಯನ್ನು ಹೆಚ್ಚಿಸಿದರೆ, ಸಾರ್ವಜನಿಕ ಉದ್ದಿಮೆಗಳ ಷೇರುಗಳ ಮಾರಟದಿಂದ ಆದರ ಆಸ್ತಿಗಳ ಪ್ರಮಾಣ ಕರಗುತ್ತದೆ. ಇವುಗಳನ್ನು ಬಂಡವಾಳ ವರಮಾನ ಎನ್ನುತ್ತೇವೆ.
2.3, ಸಾರ್ವಜನಿಕ ಸಾಲ (ಋಣ)
ಸರ್ಕಾರವು ಬಂಡವಾಳ ವರಮಾನವನ್ನು ಬಹುಮುಖ್ಯವಾಗಿ ಆಂತರಿಕ ಹಾಗೂ ವಿದೇಶಿ ಮೂಲಗಳಿಂದ ಸಾಲ ಪಡೆಯುವ ಮೂಲಕವೂ ಸಂಗ್ರಹಿಸುತ್ತದೆ. ದೇಶದಲ್ಲಿರುವ ಪಜೆಗಳು, ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಉದ್ಯಮ ಸಂಸ್ಥೆಗಳು ಮುಂತಾದುವುಗಳಿಂದ ಸಂಗ್ರಹಿಸುವ ಸಾಲವು ಆಂತರಿಕ ಸಾಲವಾದರೆ: ವಿದೇಶಿ ಸರ್ಕಾರಗಳು, ವಿದೇಶಿ ಹಣಕಾಸು ಸಂಸ್ಥೆಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಪಡೆಯುವ ಸಾಲವು ಬದೇಶಿ ಸಾಲವಾಗಿದೆ.
ಹಣಕಾಸು ಸಂಸ್ಥೆಗಳಿಂದ ಸರ್ಕಾರವು ಸಾಲವಲ್ಲದೆ ಇತರೆ ಮೂಲಗಳಿಂದ ಬಂದವ ಪರಮಾನವನ್ನು ಸಂಗ್ರಹಿಸುತ್ತದೆ, ಅದು ಸಾರ್ವಜನಿಕ ಉದ್ಯಮಗಳಲ್ಲಿ ಹೂಡಿರುವ ತನ್ನ ಬಂಡವಾಳವನ್ನು ಹಿಂದಕ್ಕೆ ಪಡೆಯುತ್ತದೆ. ಇದಕ್ಕೆ ಹೂಡಿಕೆ ಹಿಂತೆಗೆತ ಎನ್ನುತ್ತಾರೆ, ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದಿಂದ ಪಡೆದಿರುವ ಸಾಲ ಮತ್ತು ಹಣಕಾಸಿನ ನೆರವನ್ನು ಕಾಲಕಾಲಕ್ಕೆ ಮರುಪಾವತಿ ಮಾಡುತ್ತವೆ, ಹೀಗೆ ಹೂಡಿಕೆ ಹಿಂಶೆಗಳ ಮತ್ತು ಸಾಲ ಮರುಪಾವತಿಯಿಂದ ಸಂಗ್ರಹವಾಗುವ ಹಣವನ್ನು ಸಾರೇತರ ಬಂಡವಾಳ ವರಮಾನ ಎನ್ನುತ್ತಾರೆ.
ಕೆಳಗಿನ ಚಿತ್ರವು ಭಾರತ ಸರ್ಕಾರದ 2014-15ನೇ ವರ್ಷದ ಆಯ-ವ್ಯಯದ ವಿವರಣೆಯನ್ನು ತೋರಿಸುತ್ತದೆ.
ಈ ಮೊದಲು ತಿಳಿಸಿದಂತೆ ಸರ್ಕಾರವು ಮೊದಲು ತನ್ನ ವೆಚ್ಚವನ್ನು ಅಂದಾಜು ಮಾಡಿ, ಅದಕ್ಕೆ ತಕ್ಕಂತೆ ವರಮಾನವನ್ನು ಹೊಂದಿಸುತ್ತದೆ. ಹೀಗೆ ಮಾಡುವಾಗ ಸಾಮಾನ್ಯವಾಗಿ ತನ್ನ ವರಮಾನಕ್ಕಿಂತ ಹೆಚ್ಚಿನ ವೆಚ್ಚವನ್ನು ಮಾಡುತ್ತದೆ. ಇದು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮವಾದುದು. ಸರ್ಕಾರವು ತನ್ನ ವರಮಾನ ಮತ್ತು ವೆಚ್ಚದ ನಡುವಿನ ಅಂತರವನ್ನು ಭಾರತೀಯ ರಿಜರ್ವ್ ಬ್ಯಾಂಕಿನಲ್ಲಿ ತಾನು ಹೊಂದಿರುವ ನಗದು ಸಂಗ್ರಹವನ್ನು ಹಿಂಪಡೆಯುವುದು, ಅಂತರಿಕ ಮತ್ತು ವಿದೇಶಿ ಮೂಲಗಳಿಂದ ಸಾಲ ಸಂಗ್ರಹಿಸುವುದು, ಭಾರತೀಯ ರಿಜರ್ವ್ ಬ್ಯಾಂಕಿನಿಂದ ಸಾಲ ಪಡೆಯುವುದು, ಮುಂತಾದ ಕಮಗಳ ಮೂಲಕ ತುಂಬಿಕೊಳ್ಳುತ್ತದೆ. ಅವಶ್ಯ ಬಿದ್ದರೆ ಹೆಚ್ಚುವರಿ ಪ್ರಮಾಣದ ನೋಟು ಮುದ್ರಿಸುವುದೂ ಇದರಲ್ಲಿ ಸೇರಿಕೊಂಡಿದೆ. ಹೀಗೆ ಭಾರತೀಯ ರಿಜರ್ವ್ ಬ್ಯಾಂಕಿನಿಂದ ಸಾಲ ಪಡೆಯುವುದು ಮತ್ತು ಹೊಸ ಹಣ ಸೃಷ್ಟಿಸುವುದನ್ನು ಕೊರತೆ ಹಣಕಾಸು ಎಂದು ಕರೆಯುತ್ತೇವೆ. ಈ ಎಲ್ಲ ಕ್ರಮಗಳಿಂದಾಗಿ ಹಣದ ಚಲಾವಣೆ ಅಧಿಕವಾಗಿ ಅಭಿವೃದ್ಧಿ ಫಲಿತಗಳು ಉತ್ತಮವಾಗುವ ಸಾಧ್ಯತೆಯಿದೆ.
ಭಾರತದಲ್ಲಿ ನಾಲ್ಕು ವಿಧದ ಕೊರತೆ ಪರಿಕಲ್ಪನೆಗಳನ್ನು ಬಳಸಲಾಗುತ್ತದೆ ಮತ್ತು ಅವುಗಳನ್ನು ಈ ಲೆಕ್ಕ ಹಾಕಲಾಗುತ್ತದೆ
i. ವಿತ್ತೀಯ ಕೊರತೆ (Fiscal Deficit): ಆಯವ್ಯಯದಲ್ಲಿ ಸರ್ಕಾರದ ಕಂದಾಯ ವರಮಾನ ಮತ್ತು ಸಾಲೇಕರ ಬಂಡವಾಳ ವರಮಾನಗಳಿಗಿಂತ ಸರ್ಕಾರದ ಒಟ್ಟು ವೆಚ್ಚ ಹೆಚ್ಚಾಗಿದ್ದರೆ, ಅದನ್ನು ವಿತ್ತೀಯ ಕೊರತ ಎನ್ನುತ್ತಾರೆ. ಅದನ್ನು ಹೀಗೆ ಕಂಡು ಹಿಡಿಯುತ್ತವೆ.
ವಿತ್ತೀಯ ಕೊರತೆ = (ಕಂದಾಯ ವರಮಾನ – ಸಾಲೇಕರ ಬಂಡವಾಳ ಪರಮಾನ) – ಒಟ್ಟು ವೆಚ್ಚ
ii. ಕೊರತೆ: ರೆವನ್ನೂ ಖಾತೆಯ ವೆಚ್ಚವ ಖಾತೆಯ ವರಮಾನಕ್ಕಿಂತ ಹೆಚ್ಚಾಗಿದ್ದಾಗ ರವನ್ನೂ ಕೊರತೆ ಉಂಟಾಗುತ್ತದೆ.
ಅದರ ಸೂತ್ರವು ರೆವೆನ್ಯೂ ಕೊರತೆ = ರೆವೆನ್ಯೂ ಬಾಷೆಯ ವರಮಾನ ರೆವೆನ್ಯೂ ಭಾಷೆಯ ವೆಚ್ಚ
iii. ಪ್ರಾಥಮಿಕ ಕೊರತೆ: ಜಾಲ್ತಿ ವರ್ಷದ ವಿತ್ತೀಯ ಕೊರತೆಯಿಂದ ಕಳೆದ ವರ್ಷದ ಬಡ್ಡಿ ಪಾವತಿಯನ್ನು ವಜಾಗೊಳಿಸಿದಾಗ ಪ್ರಾಥಮಿಕ ಕೊರತೆ ದೊರೆಯುತ್ತದೆ.
ಪ್ರಾಥಮಿಕ ಕೊರತೆ = ವಿತ್ತೀಯ ಕೊರತೆ – ಬಡ್ಡಿ ಪಾದು
iv. ಮುಂಗಡಪತ್ರ ಅಥವಾ ಆಯ-ವ್ಯಯ ಕೊರತೆ: ಇದು ಒಟ್ಟಾರೆ ವರಮಾನ ಹಾಗೂ ವೆಚ್ಚಗಳ ನಡುವಿನ ಅಂತರವಾಗಿದೆ, ಅದರ ಲೆಕ್ಕ ಹೀಗೆ ಮಾಡುತ್ತೇವೆ.
ಮುಂಗಡಪತ್ರ ಅಥವಾ ಆಯ-ವ್ಯಯ ಕೊರತೆ = ಒಟ್ಟು ವರಮಾನ – ಒಟ್ಟು ವೆಚ್ಚ
ಆದರೆ ಅಧಿಕ ಪ್ರಮಾಣದ ಕೊರತೆಗಳು ಆರ್ಥಿಕ ವ್ಯವಸ್ಥೆಗೆ ಉತ್ತಮವಲ್ಲ ಏಕೆಂದರೆ ಅವು ರಾಷ್ಟ್ರಕ್ಕೆ ಹೊರ ಸೃಷ್ಟಿಸುತ್ತವೆಯಲ್ಲದೇ ಅನಿಯಂತ್ರಿತ ಕೊರತೆಗಳು ಹಣಕಾಸಿನ ಅಶಿಸ್ತು ತೋರಿಸುತ್ತದೆ. ಅದು ಹಣದುಬ್ಬರವನ್ನೂ ಹೆಚ್ಚಿಸುತ್ತದೆ. ಆದ್ದರಿಂದ ಅಂತಹ ಪ್ರವೃತ್ತಿಗಳನ್ನು ನಿಯಂತ್ರಿಸಲು 2003ರಲ್ಲಿ ಭಾರತ ಸರ್ಕಾರವು ಕೋಶೀಯ ಹೊಣೆಗಾರಿಕೆ ಮತ್ತು ಮುಂಗಡಪತ್ರ ನಿರ್ವಹಣೆ ಕಾಯ್ದೆಯನ್ನು (Fiscal Responsibility and Budget Management Act, FREMA) ಜಾರಿಗೆ ತಂದಿದೆ. ಇದು ಪ್ರಮುಖವಾಗಿ ಹಣಕಾಸಿನ ಶಿಸ್ತು ಪಾಲಿಸುವುದು, ಕೊರತೆಯನ್ನು ಕಮ್ಮಿ ಮಾಡುವುದು, ಆರ್ಥಿಕ ನಿರ್ವಹಣೆಯನ್ನು ಉತ್ತಮಪಡಿಸುವುದು, ಮತ್ತು ಸಾರ್ವಜನಿಕ ನಿಧಿಗಳ ಸೂಕ್ತ ನಿರ್ವಹಣೆಯ ಮೂಲಕ ಮುಂಗಡಪತ್ರದಲ್ಲಿ ಸಮತೋಲನ ಸಾಧಿಸುವ ಗುರಿ ಹೊಂದಿದೆ.
ಕೆಳಗಿನ ಕೋಷ್ಟಕದಲ್ಲಿ 2017-18ನೇ ಸಾಲಿನ ಕೇಂದ್ರ ಸರ್ಕಾರದ ಮುಂಗಡಪತ್ರದ ಸ್ಕೂಲ ನೋಟ ನೀಡಲಾಗಿದೆ.
ವಿಷಯ ವಿವರಣೆ ಕೋಟಿ ರೂಪಾಯಿಗಳು
ಕಂದಾಯ ಖಾತೆ ವರಮಾನ
ತೆರಿಗೆ ವರಮಾನ (ಕೇಂದ್ರದ ಪಾಲು)
ತೆರಿಗೆಯೇತರ ವರಮಾನ
ಬಂಡವಾಳ ಖಾತೆ ವರಮಾನ (5+6+7)
ಸಾಲಗಳ ವಸೂಲಾತಿ
ಇತರ ವಸೂಲಾತಿಗಳು
ಸಾಲಗಳು ಮತ್ತು ಇತರ ಬಾಧ್ಯತೆಗಳು
ಒಟ್ಟು ವಸೂಲಾತಿಗಳು (1+4)
ಯೋಜನೆಗಳ ಮೇಲಿನ ವೆಚ್ಚಗಳು
ಕಂದಾಯ ಖಾತೆ
ಬಂಡವಾಳ ಖಾತೆ
ಯೋಜನೆಗಳ ಮೇಲೆ ಅಲ್ಲದ ಇತರ (13+15
ಕಂದಾಯ ಖಾತೆ
ಬಡ್ಡಿ ಪಾವತಿ
ಬಂಡವಾಳ ಖಾತೆ
ಒಟ್ಟು ವೆಚ್ಚ (9+12)
ಕಂದಾಯ ಖಾತೆ ವೆಚ್ಚ
ಅದರಲ್ಲಿ ಅನುದಾನಗಳು ಎತ್ತು ಆಸ್ತಿಗಳ ಸೃಷ್ಟಿಗಾಗಿ
ಬಂಡವಾಳ ಖಾತೆ ವೆಚ್ಚ
ರೆವೆನ್ಯೂ ಕೊರತೆ (171)
ಪ್ರಾಥಮಿಕ ಕೊರತೆ (2018)
ವಿತ್ತೀಯ ಕೊರತೆ [16-1+5+6)]
ಪ್ರಾಥಮಿಕ ಕೊರತೆ (22-14) 15.15,771
12,27,014
2,88,757
6,30,964
11,932
72,500
5,46,532
21,46,735
9,45,078
6,74,057
2,71,021
12,01,657
11,62,877
5,23,078
38,780
21,46,735
18,36,934
1,95,350
3,09,801
3,21,163
1,25,813
5.46.532
23,454
ಕಾಮೆಂಟ್ ಪೋಸ್ಟ್ ಮಾಡಿ