ಹಣ ಮತ್ತು ಸಾಲ

 ಹಣದಿಂದ ಸರಕು-ಸೇವೆಗಳನ್ನು ಖರೀದಿಸಬಹುದು, ಅದು ಪಾವತಿಯ ಮಾಧ್ಯಮವಾಗಿ, ಮೌಲ್ಯದ ಮಾನವಾಗಿ ಮತ್ತು ಸಂಗ್ರಹ ಮಾಧ್ಯಮವಾಗಿ ಸರ್ವಮಾನವಾಗಿದೆ. ರಾಬರ್ಟನ ಅವರ ಪ್ರಕಾರ “ಸರಕುಗಳಿಗಾಗಿ ಸಂದಾಯ ಮಾಡುವಲ್ಲಿ ಅಥವಾ ಇತರ ವಾಣಿಜ್ಯಕ ಸಾಲಗಳನ್ನು ತೀರಿಸುವಲ್ಲಿ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟ ಯಾವುದೇ ವಸ್ತು ಹಣವಾಗಿದೆ”. ಹಣದ ವಿಕಾಸ: ನಾವೆಲ್ಲ ಈಗ ಕಾಗದದಿಂದ ತಯಾರಿಸಿದ ನೋಟುಗಳನ್ನಲ್ಲವೇ ನಾಣ್ಯಗಳನ್ನು ಹಣವಾಗಿ ಬಳಸುತ್ತಿದ್ದೇವೆ, ಆದರೆ ಈಗ ನಾವು ಉಪಯೋಗಿಸುತ್ತಿರುವ ಹಣವು ಹಲವು ವರ್ಷಗಳ ಅವಧಿಯಲ್ಲಿ ವಿಕಾಸಗೊಂಡಿದೆ. 


ವಿಕಾಸದ ಹಂತಗಳು

ಸಾಟಿ (ವಸ್ತು) ವಿನಿಮಯ ಪದ್ಧತಿ: ಪುರಾತನ ಕಾಲದಲ್ಲಿ ಜನರು ಹಣವನ್ನು ಬಳಸದೆ ಸರಕುಗಳನ್ನು ಸರಕುಗಳಿಗೆ ಏನಿಮಯ ಮಾಡಿಕೊಳ್ಳುತಿದ್ದರು. ಸಾಟಿ ವಿನಿಮಯವು ಅತಿ ಕಷ್ಟಕರ ವ್ಯಾಪಾರ ವಿಧಾನವಾಗಿತ್ತು. ಉದಾಹರಣೆಗೆ ನಿನ್ನ ಹತ್ತಿರ ಹಸು ಇದ್ದು ಅದರ ಬದಲಾಗಿ ಬಯನು, ಬಯಸಿದರೆ, ಆಗ ನೀನು ಕುರ ಹೊಂದಿದವರನ್ನು ಹುಡುಕಬೇಕಾಗುತ್ತಿತ್ತು. ಅಷ್ಟೇ ಅಲ್ಲದೇ ಕುರಿ ಬದಲಿಗೆ ಹಸು ಬೇಕಾದ ಅವಶ್ಯವಿರುವ ವ್ಯಕ್ತಿಯನ್ನೇ ಹುಡುಕಬೇಕಾಗುತ್ತಿತ್ತು. ಕೊನೆಗೆ ಅಂತಹ ವ್ಯಕ್ತಿಯನ್ನು ನೀನು ಹುಡುಕಿದರೂ ಆಗ ಮೌಲ್ಯ ನಿರ್ಣಯದ ಸವಾಲು ಎದುರಾಗುತ್ತಿತ್ತು. ಅಂದರೆ ಒಂದು ಹಸುವಿಗೆ ಎಷ್ಟು ಕುರಿಗಳು ಸಮ? ಹಸುವನ್ನು ಅಥವಾ ಕುರಿಗಳನ್ನು ವಿಭಜಿಸುವ ಬಗೆ ಹೇಗೆ? ಆದುದರಿಂದ ಸಾಟಿ ವಿನಿಮಯ ಪದ್ಧತಿಯು ಹಲವಾರು ಅನಾನುಕೂಲತೆಗಳನ್ನು ಹೊಂದಿತ್ತು.


ವಸ್ತು ರೂಪದ ಹಣ: ಮಾನವ ನಾಗರಿಕತೆಯ ವಿಕಾಸದ ನಂತರದ ಹಂತದಲ್ಲಿ ನಿರ್ದಿಷ್ಟ ಪಡಿಸಿದ ಗಾತ್ರ ಮತ್ತು ತೂಕದ ವಸ್ತುವೊಂದನ್ನು ಹಣವೆಂದು ೬೦ಕು, ಜನರು ಆ ಪ್ರಮಾಣಿ ವಸ್ತುವಿನ ಮೂಲಕ ಇತರ ಪ್ರತಿಯೊಂದರ ಮೌಲ್ಯವನ್ನು ಅಳೆಯುತ್ತಿದ್ದರು. ವಿವಿಧ ದೇಶಗಳಲ್ಲಿ ಬೇರೆ ಬೇರೆ ವಸ್ತುಗಳನ್ನು ಹಣ ಎಂದು ಪರಿಗಣಿಸಿ ಬಳಸಲಾಗುತ್ತಿತ್ತು, ಉದಾಹರಣೆಗೆ, ಗ್ರೀಸ್‌ನಲ್ಲಿ ಜಾನುವಾರುಗಳು: ರೋಮ್‌ನಲ್ಲಿ ಕುರಿಗಳು, ಚೀನಾದಲ್ಲಿ ಹಲ್ಲುಗಳು, ಇತ್ಯಾದಿ. ಆದರೆ ವಸ್ತು ರೂಪದ ಹಣವು ಸಾಟಿ ವಿನಿಮಯ ಪದ್ಧತಿಯ ಎಲ್ಲ ಸಮಸ್ಯೆಗಳನ್ನು ಪರಿಷ್ಕರಿಸಲಿಲ್ಲ.


ಲೋಹದ ಹಣ: ತದನಂತರದಲ್ಲಿ ಕ್ರಮೇಣವಾಗಿ ಬೆಲೆಬಾಳುವ ಲೋಹಗಳಾದ ಚಿನ್ನ, ಬೆಳ್ಳಿ, ತಾನು, ಕಂಚನ್ನು ಹಣ ಎಂದು ಬಳಸುವ ಪರಿಪಾಠ ಆರಂಭವಾಯಿತು, ಸಬಳಸಲಾಗುತ್ತಿತ್ತ ಮತ್ತು ವಿಶೇಷವಾಗಿ ಚಿನ್ನ ಅಥವಾ ಬೆಳೆಯಿಂದ ತಯಾರಿಸಿದ ಜಿಲ್ಲೆಗಳನ್ನು ಟಂಕಿಸಿ ಹಣವಾಗಿ ಸಾಮಾನ್ಯವಾಗಿ ಬಳಸಲಾಗುತ್ತಿತ್ತು. 

ಅವು ವಿವಿಧ ಮುಖಬೆಲೆವುಳ್ಳವು ಆಗಿದ್ದರಿಂದ ವಿಭಜನೆ ಸರಳವಾಗಿದ್ದು, ಅವುಗಳ ಸಾಗಾಟ ಮತ್ತು ಸಂದಾಯ  ಕೂಡಅನುಕೂಲಕರವಾಗಿತ್ತು.

 ಕಾಗದದ ಹಣ: ಲೋಹದ ಹಣವನ್ನು ಒಂದು ಮತ್ತೊಂದು ಸ್ಥಳಕ್ಕೆ ಸಾಗಿಸುವುದು ಸುರಕ್ಷಿತವಾಗಿರಲಿಲ್ಲ. ಆದುದರಿಂದ ವ್ಯಾಪಾರಸ್ಥರು ಚಿರಪರಿಚಿತ ಲೇವಾದೇವಿದಾರರು ನೀಡುತ್ತಿದ್ದ ತ ದಾಖಲೆಗಳನ್ನು ಅವರ ಆಜ್ಞಾಪಿತ ಹಣದ ಪ್ರಮಾಣಕ್ಕೆ ಸಾಕ್ಷಿಯಾಗಿ ತಮ್ಮ ಜೊತೆ ಕೊಂಡೊಯ್ಯಲು ಪ್ರಾರಂಭಿಸಿದರು. ಈ ಲಿಖಿತ ದಾಖಲೆಗಳು ನೈಜ ಹಣವಾಗಿರಲಿಲ್ಲ, ಆದರೆ ಅವುಗಳು ಹಣಕ್ಕೆ ಎನಿಮಯವಾಗುತ್ತಿದ್ದರಿಂದ ಅವು ಸಾಂಕೇತಿಕ ಹಣವಾಗಿ ಬಳಕೆಯಾಗುತ್ತಿದ್ದವು. ಕ್ರಮೇಣ ಜನರು ಬ್ಯಾಂಕುಗಳು ನೀಡಿದ ಕಾಗದದ ಪ್ರಾಮಿಸಲ ನೋಟುಗಳು ಹಣವೆಂದು ಬಳಕೆಯಲ್ಲಿ ಬಂದವು ಬಳಸತೊಡಗಿದರು. ತದನಂತರದಲ್ಲಿ ಸರ್ಕಾರಗಳು ಕೇಂದ್ರ ಬ್ಯಾಂಕು ಒಂದನ್ನು ಸ್ಥಾಪಿಸಿ ಅದಕ್ಕೆ ನೋಟು ಮುದ್ರಣ ಮಾಡುವ ಅಧಿಕಾರ ನೀಡಿದವು, ಆ ಹಾವು ಶಾಸನಬದ್ಧ ಹಣವಾಯಿತು, ಆಯಾ ದೇಶಗಳಲ್ಲಿ ನಡೆಯುವ ವ್ಯವಹಾರಗಳಲ್ಲಿ ಆ ಹಣವನ್ನು ಯಾರೊಬ್ಬರೂ ತಿರಸ್ಕರಿಸುವಂತಿಲ್ಲ. ಅಂತೆಯೇ ನಮ್ಮ ದೇಶದಲ್ಲಿ ರೂಪಾಯಿ, ಆಮೇರಿಕದಲ್ಲಿ ಡಾಲರ್, ಇಂಗ್ಲೆಂಡಿನಲ್ಲಿ ಬೌಂಡ್, ಜಪಾನ್‌ನಲ್ಲಿ ಯನ್, ಚೀನಾದಲ್ಲಿ ಯುವಾನ್ ಇತ್ಯಾದಿ ಹೆಸರಿನ ಹಣ ಬಳಕೆಯಲ್ಲಿದೆ. ಬ್ಯಾಂಕ್ ಹಣ: ವ್ಯಾಪಾರ ಮತ್ತು ವಾಣಿಜ್ಯ ಅಭಿವೃದ್ಧಿ ಹೊಂದಿದಂತೆ ಬ್ಯಾಂಕ್ ಹಣ ಅಸ್ತಿತ್ವಕ್ಕೆ ಬಂದಿತು. ಚೆಕ್ಕುಗಳು, ಪ್ರಾಸ್ಟ್‌ಗಳು, ಠೇವಣಿ ರಸೀಡಿ ಮುಂತಾದವುಗಳು ಬಳಕೆಗೆ ಬಂದವು. ಇವುಗಳನ್ನು ಬಳಸಿ ಹಣದ ಪಾವತಿ ಮತ್ತು ವರ್ಗಾವಣೆಗಳನ್ನು ಮಾಡಬಹುದಾಗಿದೆ.


ಪ್ಲಾಸ್ಟಿಕ್ ಹಣ: ಇದು ಇತ್ತೀಚಿನ ಆವಿಷ್ಕಾರವಾಗಿದ್ದು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುಗಳನ್ನು ನೀಡಿ ಅದರ ಮುಖಾಂತರ ವ್ಯವಹಾರ ಮಾಡುವ ಅನುಕೂಲತೆ ಕಲ್ಪಿಸಿವೆ. ಈಗ ನೀವು ಹಣವನ್ನು ಭೌತಿಕವಾಗಿ ತೆಗೆದುಕೊಂಡು ಹೋಗಬೇಕಾಗಿಲ್ಲ, ಕೆಡಿಟ್ ಅಥವಾ ಡೆಬಿಟ್ ಕಾರ್ಡನ್ನು ಎಲೆಕ್ಟ್ರಾನಿಕ್ ಯಂತ್ರದ ಮೇಲೆ ಒಕ್ಕಿ ಎಳೆದು ನಿಮಗೆ ನೀಡಿದ ಪಿನ್ನು ಬಳಸಿ ಹಣದ ಎರ್ಗಾವಣೆ ಮಾಡಬಹುದಾಗಿದೆ. ಡೆಬಿಟ್ ಕಾರ್ಡ್ ಸಹ ಇದೇ ರೀತಿಯಲ್ಲಿ ಕೆಲಸ ಮಾಡುತ್ತದೆ. ಇವುಗಳನ್ನು ಪ್ಲಾಸ್ಟಿಕ್‌ನಿಂದ ಮಾಡಿದ್ದರಿಂದ ಇವುಗಳನ್ನು ಪ್ಲಾಸ್ಟಿಕ್ ಹಣವೆಂತಲೂ, ವಿದ್ಯುನ್ಮಾನ ಸಾಧನಗಳ ಮೂಲಕ ವ್ಯವಹಾರ ನಡೆಸುವುದರಿಂದ ಅದನ್ನು ಇ-ಹಣ ಎಂತಲೂ ಎನ್ನುತ್ತೇವೆ.

2, ಹಣದ ಕಾರ್ಯಗಳು:


2.1. ಪ್ರಾಥಮಿಕ ಅಥವಾ ಮುಖ್ಯ ಕಾರ್ಯಗಳು: ಹಣದ ಪ್ರಾಥಮಿಕ ಕಾರ್ಯಗಳು ಈ ಕೆಳಗಿನಂತಿವ

ಆ) ವಿನಿಮಯ ಮಾಧ್ಯಮ ಅಥವಾ ಸಂದಾಯ ಸಾಧನ: ಸರಕುಗಳ ಖರೀದಿಗೆ ಮತ್ತು ಮಾರಾಟದಲ್ಲಿ ಹಣವನ್ನು ಪಾವತಿ ಮಾಧ್ಯಮವಾಗಿ ಉಪಯೋಗಿಸುತ್ತೇವೆ.


ಬ) ಮೌಲ್ಯ ನಿರ್ಣಯ: ಎಲ್ಲ ಸರಕುಗಳು ಮತ್ತು ಸೇವೆಗಳ ಮೌಲ್ಯವನ್ನು ಬೆಲೆಯನ್ನು ಹಣದ ರೂಪದಲ್ಲಿ ಹೇಳಲಾಗುತ್ತದೆ. ಸರಕುಗಳ ಮೌಲ್ಯ ರ್ನೀಯಕ್ಕೆ ಒಂದು ಸಾಮಾನ್ಯ ಮಾನದಂಡ ಹದ ಮೂಲಕ ದೊರಕಿದೆ. 


2.2. ಪೂರಕ ಕಾರ್ಯಗಳು: ಹಣದ ಪೂರಕ ಕಾರ್ಯಗಳೆಂದರೆ:


ಅ) ವಿಳಂಬಿತ ಸಂದಾಯದ ಪ್ರಮಾಣ: ಹಣವು ಭವಿಷ್ಯದಲ್ಲಿನ ವ್ಯವಹಾರ ಮತ್ತು ಸಂದಾಯಗಳಿಗೂ ಸಹಾಯಕವಾಗಿದೆ. ಸಾಲ ಪಡೆದವರು ನಿರ್ದಿಷ್ಟ ಪ್ರಮಾಣದ ಹಣವನ್ನು ಭವಿಷ್ಯದಲ್ಲಿ ನಿಗದಿತ ದಿನಾಂಕದಂದು ಮರುಪಾವತಿ ಮಾಡುವ ಕರಾರಿನ ಮೇಲೆ ಸಾಲವಾಗಿ ಪಡೆಯಬಹುದು. ಅದೇ ರೀತಿಯಲ್ಲಿ ವ್ಯಕ್ತಿಯೊಬ್ಬನು ಸದ್ಯದಲ್ಲಿ ಸರಕುಗಳನ್ನು ಕೊಂಡು, ಅವುಗಳ ಹಣವನ್ನು ಮುಂದಿನ ನಿರ್ದಿಷ್ಟ ದಿನಾಂಕದಂದು ಸಂಧಾಯ ಮಾಡಬಹುದು, ಹಣದ ಬಳಕೆಯಿಂದ ಈ ರೀತಿಯಾದ ಎಳಂಬದ ಪಾವತಿ ಅನುಕೂಲಕರವಾಗಿದೆ. 

ಬ) ಮೌಲ್ಯ ಅಥವಾ ಖರೀದಿ ಶಕ್ತಿಯ ಸಂಗ್ರಹ: ಹಣದ ಬಳಕೆಯಾಗಿ ಉಳಿತಾಯ ಮಾಡುವುದು ಮತ್ತು ಸಂಪತ್ತಿನ ಸಂಗ್ರಹ ಮಾಡುವುದು ಸರಳ ಸಾಧ್ಯವಾಗಿದೆ.


ಕ) ಮೌಲ್ಯ ವರ್ಗಾವಣೆ ಅಥವಾ ಖರೀವಿ ಶಕ್ತಿಯ ವರ್ಗಾವಣೆ: ಪಣದ ಮೂಲಕ ಸರಕು-ಸವಗಳನ್ನು

ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸಿ ವಿನಿಮಯ ಮಾಡುವುದು ಸರಳೀಕರಣಗೊಂಡಿದೆ. ಇದರ ದೆಸೆಯಿಂದಾಗಿ ವ್ಯಾಪಾರ ವೃದ್ಧಿಗೊಂಡಿದೆ. ವ್ಯಕ್ತಿ-ವ್ಯಕ್ತಿಗಳ ನಡುವಿನ ವರ್ಗಾವಣೆ ಕೂಡ ಸುಗಮಗೊಂಡಿದೆ.


3. ಬ್ಯಾಂಕುಗಳು ಬ್ಯಾಂಕುಗಳು ದೇಶದ ವ್ಯವಹಾರ, ವಾಣಿಜ್ಯ ಮತ್ತು ಇತರ ಆರ್ಥಿಕ ಚಟುವಟಿಕೆಗಳ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. 1949ರ ಭಾರತೀಯ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯು ಬ್ಯಾಂಕಿಂಗ್ ಕಂಪನಿಯನ್ನು ಭಾರತದಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಸುವ ಯಾವುದೇ ಕಂಪನಿಯ ಬ್ಯಾಂಕಿಂಗ್ ಕಂಪಟ ಎನಿಸುತ್ತದೆ". ಬ್ಯಾಂಕಿಂಗ್' ಎಂದರೆ "ಸಾಲ ನೀಡುವ ಅಥವಾ ಬಂಡವಾಳ ಹೂಡುವ ಉದ್ದೇಶಕ್ಕಾಗಿ ಸಾರ್ವಜನಿಕರಿಂದ ಹಣವನ್ನು ಠೇವಣಿಯಾಗಿ ಸ್ವೀಕರಿಸಿ, ಬೇಡಿಕೆ ಅಥವಾ ಇತರ ಆಧಾರದ ಮೇಲೆ ಹಣ ಮರುಪಾವತಿಸುವುದಲ್ಲದೇ, ಚೆಕ್ಕುಗಳು, ಡ್ರಾಗಳು, ಆದೇಶಗಳು ಮುಂತಾದವುಗಳ ಮೂಲಕ ಹಣ ಹಿಂಪಡೆಯುವ ಪ್ರಕ್ರಿಯೆಯೇ ಬ್ಯಾಂಕಿಂಗ್ ಆಗಿರುತ್ತದೆ".


ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಅಲ್ಲದೆ 2) ಸಾರ್ವಜನಿಕ ವಲಯದ ಬ್ಯಾಂಕುಗಳು (1969ರಲ್ಲಿ ರಾಷ್ಟ್ರೀಕರಣಗೊಂಡ 14, 1980ರಲ್ಲಿ 6 ವಾಣಿಜ್ಯ ಬ್ಯಾಂಕುಗಳು: ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (1976ರಲ್ಲಿ ಸ್ಥಾಪಿತ): ಖಾಸಗಿ ವಲಯದ ಬ್ಯಾಂಕುಗಳು, ಸಹಕಾರಿ ಬ್ಯಾಂಕಾಗಳು ಸಂಘಗಳು ಹಾಗೂ ಭಾರತೀಯ ರಿಜರ್ವ ಬ್ಯಾಂಕಿನಲ್ಲಿ ನೋಂದಾಯಿತ ಮತ್ತು ಅದರ ನಿಯಂತ್ರಣಗೊಳಪಟ್ಟ ಇತರ ಬ್ಯಾಂಕುಗಳು ಇವೆ.


ಬ್ಯಾಂಕುಗಳ ಮಹತ್ವ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕುಗಳು ಮಹತ್ವದ ಪಾತ್ರ ವಹಿಸುತ್ತವೆ. ಅವು ಸಾರ್ವಜನಿಕರ ಉಳಿತಾಯವನ್ನು ಸಂಗ್ರಹಣೆ ಮಾಡಿ ಅವುಗಳನ್ನು ಹೂಡಿಕೆದಾರರಿಗೆ ಒದಗಿಸುತ್ತವೆ. ಈ ಮೂಲಕ ಬಂಡವಾಳ ಸಂಗ್ರಹಣೆ ಮತ್ತು ಸಂಚಯನದಲ್ಲಿ ಅವು ಪ್ರಮುಖ ಪಾತ್ರ ವಹಿಸುತ್ತವೆ. ವಿವಿಧ ಸಾಧನಗಳ ಮೂಲಕ ಗ್ರಾಹಕರಿಗೆ ಹಣಸಂದಾಯದ ಅನುಕೂಲಕರ ಮಾರ್ಗಗಳನ್ನು ಒದಗಿಸಿವೆ. ನಿರ್ದಿಷ್ಟ ಅವಧಿ ಠೇವಣಿಗಳಿಗೆ ಅಧಿಕ ಬಡ್ಡಿ ದರ ನೀಡುವುದಲ್ಲದೇ ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳ ಅಭಿವೃದ್ಧಿಗಾಗಿ ಸಾಲಗಳನ್ನೂ ಬ್ಯಾಂಕುಗಳು ನೀಡುತ್ತವೆ. ಅಲ್ಲದೆ ಅವು ಹುಂಡಿ (Bills of Exchange) ಗಳನ್ನು ವರ್ಗಾಯಿಸುತ್ತವಲ್ಲದೇ ರಾಜ್ಯಗಳು, ಕೋಟ್ ಮತ್ತು ಡೆಬಿಟ್ ಕಾರ್ಡುಗಳನ್ನೂ ನೀಡಿ ಸುಗಮ ವ್ಯವಹಾರಕ್ಕೆ ಇಂಬು ಕೊಡುತ್ತವೆ.


4. ಭಾರತೀಯ ರಿಜರ್ವ ಬ್ಯಾಂಕು


ಭಾರತದ ಕೇಂದ್ರೀಯ ಬ್ಯಾಂಕ್ ಆಗಿ ಭಾರತೀಯ ರಿಜರ್ವ ಬ್ಯಾಂಕನ್ನು (ಆರ್‌ಬಿಐ) 1935ರ ಎಪ್ರಿಲ್ Iರಂದು ಸ್ಥಾಪಿಸಲಾಯಿತು ಹಾಗೂ ಅವನ್ನು ಜನವರಿ 1, 1949ರಂದು ರಾಷ್ಟ್ರೀಕರಣ ಮಾಡಲಾಯಿತು. 

ಆರ್‌ಬಿಐನ ಕಾರ್ಯಗಳು


1) ನೋಟು ಚಲಾವಣೆಯ ಏಕಸ್ವಾಮ್ಯ: ಆರ್‌ಬಿಐಗೆ ರೂ, 2, 5, 10, 20, 50, 100, 200, 500 ಮತ್ತು 2000 ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುವ ಏಕಸ್ವಾಮ್ಯವಿದೆ. ಒಂದು ರೂಪಾಯಿಯ ನೋಟನ್ನು ಸರ್ಕಾರದ ಪರವಾಗಿ ಆರ್‌ಬಿಐ ಮುದ್ರಿಸಿ ಚಲಾಯಿಸುತ್ತದೆ. 

2) ಸರ್ಕಾರದ ಬ್ಯಾಂಕು ಆಗಿ ಕಾರ್ಯ ನಿರ್ವಹಣೆ: ಆರ್‌ಬಿಐ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಠೇವಣಿಗಳನ್ನು ಸ್ವೀಕರಿಸುತ್ತದೆ. ಇದು ಸರ್ಕಾರದ ಪರವಾಗಿ ತೆರಿಗೆ ಮತ್ತು ಇತರ ಪಾವತಿಗಳನ್ನು ಸ್ವೀಕರಿಸಿ, ಸರ್ಕಾರದ ಆದೇಶದ ಮೇರೆಗೆ ಹಣ ಪಾವತಿ ಸಹ ಮಾಡುತ್ತದೆ. ಸರ್ಕಾರಿ ಸಾಲ ಖಜಾನೆ ಹುಂಡಿಗಳ ನೀಡಿಕೆಯಲ್ಲದೇ ಸರ್ಕಾರದ ಹಣಕಾಸು ಸಲಹೆಗಾರನಾಗಿ ಕಾರ್ಯ ಮಾಡುತ್ತದೆ. ಸರ್ಕಾರಗಳಿಗೆ ಅವಶ್ಯವಿರುವ ಸಾಲದ ವ್ಯವಸ್ಥೆಯನ್ನೂ ಸಹ ಅದು ಒದಗಿಸುತಹಣಕ್ಕ

3) ಆಗಿ ಕಾರ್ಯ ನಿರ್ವಹಣೆ: ಆರ್‌ಬಿಐ ಬ್ಯಾಂಕುಗಳ ಬ್ಯಾಂಕಾಗಿ 3) ಬ್ಯಾಂಕುಗಳ ಬ್ಯಾಂಕು ಕಾರ್ಯನಿರ್ವಹಿಸುತ್ತದೆ. ದೇಶದಲ್ಲಿರುವ ಎಲ್ಲಾ ಬ್ಯಾಂಕುಗಳನ್ನು ನಿಯಂತ್ರಿಸುತ್ತದೆ. ಎಲ್ಲಾ ಬ್ಯಾಂಕುಗಳು ತಮ್ಮ ಠೇವಣಿ ಹಣದ ನಿರ್ದಿಷ್ಟ ಪಡಿಸಿದ ಭಾಗವನ್ನು ಆರ್‌ಬಿಐನಲ್ಲಿ ಮೀಸಲು ಇಡಬೇಕು. ಬ್ಯಾಂಕುಗಳಿಗೆ ಹೆಚ್ಚುವರಿ ಹಣದ ಅವಶ್ಯಕತೆ ಇದ್ದಾಗ ಅವುಗಳಿಗೆ ಆರ್‌ಬಿಐ ಸಾಲ ಒದಗಿಸುತ್ತದೆ. ಅದು ಬ್ಯಾಂಕುಗಳ ಹಣಕಾಸು ನಿರ್ವಹಣೆಯ ಕುರಿತಾಗಿಯೂ ಮಾರ್ಗದರ್ಶನ ನೀಡುತ್ತದೆ.

4) ರಾಷ್ಟ್ರೀಯ ಸಂದಾಯ ಕೇಂದ್ರವಾಗಿ ಕಾರ್ಯನಿರ್ವಹಣೆ: ಬ್ಯಾಂಕುಗಳ ನಡುವಿನ ವ್ಯವಹಾರಗಳನ್ನು ಸೂಕ್ತವಾಗಿ ಬಗೆಹರಿಸುವ ಸಲುವಾಗಿ ಆರ್‌ಬಿಐ ಸಂದಾಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ.

5) ಸಾಲ ಪ್ರಮಾಣದ ನಿಯಂತ್ರಕ: ದೇಶದಲ್ಲಿ ನಿರೀಕ್ಷಿತ ಹಣಕಾಸು ಪರಿಸ್ಥಿತಿಗೆ ಅನುಗುಣವಾಗಿ ವಾಣಿಜ್ಯ ಬ್ಯಾಂಕುಗಳು ನೀಡುವ ಸಾಲದ ಪ್ರಮಾಣವನ್ನು ಆರ್‌ಬಿಐ ನಿಯಂತ್ರಿಸುತ್ತದೆ.

6) ವಿದೇಶಿ ವಿನಿಮಯ ಸಂಗ್ರಹದ ಮೇಲ್ವಿಚಾರಕ: ಆರ್‌ಬಿಐ ವಿದೇಶಿ ವಿನಿಮಯ ಸಂಗ್ರಹದ ಮೇಲ್ವಿಚಾರಕನಾಗಿ ಕಾರ್ಯ ನಿರ್ವಹಿಸುತ್ತದೆ. ಈ ಕಾರ್ಯವು ನಮ್ಮ ಹಣ ಬೇರೆ ದೇಶಗಳ ಹಣಕ್ಕೆ ವರ್ಗಾವಣೆಯಾಗುವ ವಿನಿಮಯ ದರಗಳನ್ನು ನಿಯಂತ್ರಿಸಲು ಸಹಾಯಕವಾಗಿದೆ. ವಿದೇಶಿ ವಿನಿಮಯ ದರಗಳಲ್ಲಿನ ಅನಪೇಕ್ಷಿತ ಏರಿಳಿತಗಳನ್ನು ಕಡಿಮೆಗೊಳಿಸುವ ಸಲುವಾಗಿ, ಪರಿಸ್ಥಿತಿಗಳನ್ನು ಅವಲಂಬಿಸಿ, ಆರ್‌ಬಿಐ ವಿದೇಶಿ ಹಣಗಳನ್ನು ಕೊಳ್ಳುವ ಮತ್ತು ಮಾರುವ ಕ್ರಮಗಳನ್ನು ಜರುಗಿಸುತ್ತದೆ. 

7) ಬ್ಯಾಂಕಿಂಗ್ ವಿದ್ಯಾಸದ ಅಭಿವೃದ್ಧಿ: ಬ್ಯಾಂಕ್ ಶಾಖೆಗಳ ವಿಸ್ತರಣೆಯ ಮೂಲಕ ಜನರಲ್ಲಿ   ಪೇರೇಪಿಸುವುದಲ್ಲದೇ, ಹಣಕಾಸು ಸಾಕ್ಷರತೆಗೆ ಒತ್ತು ನೀಡಿದೆ.

ಭಾರತದ ಆರ್ಥಿಕ ಅಭಿವೃದ್ಧಿಯನ್ನು ತೀವ್ರಗೊಳಿಸಲು ಆರ್‌ಬಿಐ ಮಹತ್ವದ ಪಾತ್ರ ವಹಿಸಿದೆ. ಅಂಕಿ-ಅಂಶಗಳ ಸಂಗ್ರಹಣೆ ಮತ್ತು ಪ್ರಕಟಣೆ, ಸಂಶೋಧನೆ ಹಾಗೂ ಬ್ಯಾಂಕಿಂಗ್ ಸಂಬಂಧಿತ ಜ್ಞಾನ ಹಂಚಿಕೆಯ ಕಾರ್ಯಗಳ ಮೂಲಕ ದೇಶದ ಅಭಿವೃದ್ಧಿಗೆ ಪೂರಕಾದ ಕೆಲಸ ಮಾಡುತ್ತಿದೆ. ದೇಶವು ಹಲವಾರು ಹಣಕಾಸು ಬಿಕ್ಕಟ್ಟುಗಳನ್ನು ಸೂಕ್ತವಾಗಿ ಎದುರಿಸಲು ಆರ್‌ಬಿಐನ ಕ್ರಮಗಳು ಸಹಾಯಕಾರಿಯಾಗಿವೆ.

5. ಹಣದ ಪೂರೈಕೆಯ ನಿಯಂತ್ರಣ

ದೇಶದ ಹಣಕಾಸು ಪ್ರಾಧಿಕಾರ ನೀಡಿದ ಕರೆನ್ಸಿ ನೋಟುಗ ಮತ್ತು ನಾಣ್ಯಗಳು ಆ ದೇಶದ ಹಣದ ಪೂರೈಕೆಯಾಗಿದೆ. ಇವಲ್ಲದೇ ರಾಷ್ಟ್ರದ ಬ್ಯಾಂಕುಗಳಲ್ಲಿರುವ ಉಳಿತಾಯ ಮತ್ತು ಚಾಲ್ತಿ ಖಾತೆಯಲ್ಲಿ ಹೊಂದಿರುವ ಶಿಲ್ಕನ್ನು ಸಹ ಹಣವೆಂದು ಪರಿಗಣಿಸಲಾಗುತ್ತದೆ. ಈ ಖಾತೆಗಳಲ್ಲಿರುವ ಹಣವನ್ನು ಬ್ಯಾಂಕುಗಳಿಂದ ಅಲ್ಪಾವಧಿ ಸೂಚನೆ ನೀಡಿ ಅಥವಾ ಬೇಡಿಕೆಯಾಧಾರದ ಹೊರ ತೆಗೆಯಬಹುದಾದ್ದರಿಂದ ಇವುಗಳನ್ನು ಬೇಡಿಕೆ ಅಥವಾ ಡಿಮಾಂಡ್ ಠೇವಣಿಗಳು ಎಂದೂ ಕರೆಯುತ್ತಾರೆ. ಉಳಿದ ಠೇವಣಿಗಳಿಗೆ ನಿರ್ದಿಷ್ಟ ಸಮಯಾವಧಿ ಇರುವುದರಿಂದ ಅವುಗಳು ಮುದ್ದತ್ತು ಠೇವಣಿಗಳಾಗಿರುತ್ತವೆ. ಹಾಗಾಗಿ ಯಾವುದೇ ಸಮಯದಲ್ಲಿ ಜನರ ಬಳಿ ಇರುವ ಕರೆನ್ಸಿ ಮತ್ತು ಉಳಿತಾಯ ಠೇವಣಿಗಳ ಒಟ್ಟು ಮೊತ್ತವನ್ನು ಆಗಿನ ಪೂರೈಕೆಯಲ್ಲಿರುವ ಒಟ್ಟು ಹಣದ ಪ್ರಮಾಣ ಎಂದು ಲೆಕ್ಕ ಹಾಕಲಾಗುತ್ತದೆ. 

ಭಾರತದಲ್ಲಿ ಹಣ ಪೂರೈಕೆಯ ನಾಲ್ಕು ಪರಿಕಲ್ಪನೆಗಳನ್ನು ಬಳಸಲಾಗುತ್ತದೆ: M1, M2, M3 ಮತ್ತು M4. ಅವುಗಳನ್ನು ಹೀಗೆ ವ್ಯಾಖ್ಯಾನಿಸಬಹುದು:


M1 = ಕರೆನ್ಸಿ ನೋಟುಗಳು ಮತ್ತು ನಾಣ್ಯಗಳು + ವಾಣಿಜ್ಯ ಬ್ಯಾಂಕುಗಳಲ್ಲಿರುವ ಬೇಡಿಕೆ ಠೇವಣಿಗಳು; M2 = M1 + ಅಂಚೆ ಕಛೇರಿಗಳಲ್ಲಿರುವ ಉಳಿತಾಯ ಠೇವಣಿಗಳು;


M3 = M1 + ವಾಣಿಜ್ಯ ಬ್ಯಾಂಕುಗಳಲ್ಲಿರುವ ಮುದ್ದತ್ತು ಠೇವಣಿಗಳು, ಮತ್ತು


M4 = M3 + ಅಂಚೆ ಕಛೇರಿಗಳಲ್ಲಿರುವ ಒಟ್ಟು ಠೇವಣಿಗಳು,


ಹಣಕಾಸು ನಿರ್ವಹಣೆಯ ದೃಷ್ಟಿಯಿಂದ M1 ಮತ್ತು M2 ಕಿರಿದಾದ ಹಣವೆಂದು ಪರಿಗಣಿತವಾದರೆ, M3 ಮತ್ತು M4 ಗಳನ್ನು ವಿಶಾಲ ಹಣವೆಂದು ಪರಿಗಣಿತವಾಗುತ್ತವೆ. ಈ ಹಣದ ಪೂರೈಕೆಯ ಹೊರತಾಗಿ ವಾಣಿಜ್ಯ ಬ್ಯಾಂಕುಗಳು ತಾವು ಸ್ವೀಕರಿಸಿದ ಠೇವಣಿಗಳ ಆಧಾರದ ಮೇಲೆ ಎಷ್ಟೋ ಪಟ್ಟು ಅಧಿಕ ಪ್ರಮಾಣದ ಸಾಲ ಸೃಷ್ಟಿಸಿ ವಾಣಿಜ್ಯ ಹಾಗೂ ಇತರ ಉದ್ದೇಶಗಳಿಗೆ ನೀಡುತ್ತವೆ. ಇದು ಕೂಡ ಆರ್ಥಿಕ ವ್ಯವಸ್ಥೆಯಲ್ಲಿ ಚಲಾವಣೆಯಲ್ಲಿರುವ ಹಣದ ಪ್ರಮಾಣವನ್ನು ಪ್ರಭಾವಿಸುತ್ತದೆ. ಈ ಹಣದ ಪೂರೈಕೆ ಒಂದೆಡೆಯಾದರೆ ಇನ್ನೊಂದೆಡೆ ಸರಕು ಸೇವೆಗಳ ಪ್ರಮಾಣವು ದೇಶದಲ್ಲಿನ ಹಣದುಬ್ಬರದ (ಬೆಲೆಗಳ ಏರಿಳಿತಗಳು) ಸ್ಥಿತಿಯನ್ನು ಪ್ರಭಾವಿಸುತ್ತವೆ. ಹಣದ ಪೂರೈಕೆ ಅಧಿಕವಾಗಿ ಅದಕ್ಕೆ ತಕ್ಕುದಾದ ಸರಕು ಸೇವೆಗಳ ಪೂರೈಕೆ ಇಲ್ಲವಾದಾಗ ದೆಲೆಗಳು ತೀವ್ರವಾಗಿ ಏರಲು ಪ್ರಾರಂಭಿಸಿ ಬಹಳಷ್ಟು ತೊಂದರೆಗಳು ಶುರುವಾಗುತ್ತವೆ.


ಬೆಲೆಗಳಲ್ಲಿನ ಅಲ್ಪ ಏರಿಕೆಯ ಪ್ರಮಾಣವು ಆರ್ಥಿಕತೆಗೆ ಶಕ್ತಿದಾಯಕ ಬಿಯದಂತಿದ್ದರೆ, ತೀವ್ರ ಬೆಲೆ ಏರಿಕೆಯು ಜನರ ಖರೀದಿ ಶಕ್ತಿ ಮತ್ತು ಆದಾಯ ಹಂಚಿಕೆಯನ್ನು ತೀವ್ರವಾಗಿ ಬಾಧಿಸುತ್ತದೆಯಲ್ಲದೇ ಹೂಡಿಕೆದಾರರ ನಿರೀಕ್ಷೆಗಳನ್ನೂ ಹುಸಿಯಾಗಿಸಿ ಆರ್ಥಿಕ ಅಭಿವೃದ್ಧಿಗೆ ತೊಡರಾಗುತ್ತದೆ.


ಇಂಥ ಸಂದರ್ಭಗಳಲ್ಲಿ, ಪರಿಸ್ಥಿತಿಯನುಸಾರ ಆರ್‌ಬಿಐ ಹಣದ ಪೂರೈಕೆಯಲ್ಲಿ ಬದಲಾವಣೆ ಮಾಡುತ್ತದೆ. ಆದರೆ ಬ್ಯಾಂಕುಗಳ ಸಾಲ ನೀಡಿಕೆಯ ಸಾಮರ್ಥ್ಯವನ್ನು ನಿಯಂತ್ರಿಸಲು ಅದು ಹಲವು ನಿರ್ದಿಷ್ಟ ಕ್ರಮಗಳನ್ನು ಅನುಸರಿಸುತ್ತದೆ. ಹಣದ ಮೊರೈಕೆ ಮತ್ತು ಸಾಲದ ಪ್ರಮಾಣ ಮತ್ತು ಬಡ್ಡಿ ದರದ ನಿಯಂತ್ರಣಕ್ಕಾಗಿ ಇರುವ ಕ್ರಮಗಳನ್ನು ಒಟ್ಟಾಗಿ `ಹಣಕಾಸು ನೀತಿ' ಎಂದು ಕರೆಯುತ್ತೇವೆ. ಈಗ ನಾವು ಆರ್‌ಬಿಐ ಕೈಗೊಳ್ಳುವ ಸಾಲ ನಿಯಂತ್ರಣ ಕ್ರಮಗಳನ್ನು ಸಂಕ್ಷಿಪ್ತವಾಗಿ ಚರ್ಚಿಸೋಣ,


6. ಸಾಲ ಮತ್ತು ನಿಯಂತ್ರಣ ಕ್ರಮಗಳು


ಇವುಗಳನ್ನು ನಾವು ಎರಡು ವಿಧಗಳಾಗಿ ವಿಂಗಡಿಸಬಹುದು: ಪರಿಮಾಣಾತ್ಮಕ ಮತ್ತು ಗುಣಾತ್ಮಕ ಕ್ರಮಗಳು.


ಅ. ಪರಿಮಾಣಾತ್ಮಕ ಸಾಲ ನಿಯಂತ್ರಣ ಕ್ರಮಗಳು


ಈ ಸಾಧನಗಳು ವ್ಯವಹಾರಕ್ಕೆ ಮತ್ತು ಜನರಿಗೆ ಲಭ್ಯವಾಗುವ ಹಣದ ಪ್ರಮಾಣವನ್ನು ಪರಿಣಮಿಸುತ್ತವೆ. ಈಗ ಅವುಗಳನ್ನು ಅರ್ಥಮಾಡಿಕೊಳ್ಳೋಣ.

1. ಬ್ಯಾಂಕ್ ದರ: ಕೇಂದ್ರ ಬ್ಯಾಂಕು ಉಳಿದ ಬ್ಯಾಂಕುಗಳು ತೆಗೆದುಕೊಳ್ಳುವ ಸಾಲಕ್ಕೆ ವಿಧಿಸುವ ಮೂಲ ಬಡ್ಡಿ ದರವಾಗಿರುತ್ತದೆ. ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ವಿಧಿಸುವ ಬಡ್ಡಿ ದರವನ್ನು ನಿರ್ಧರಿಸುವ ತಳಮಟ್ಟದ ದರವಾಗಿದ್ದು ಬ್ಯಾಂಕುಗಳು ನೀಡುವ ಸಾಲದ ಪ್ರಮಾಣವನ್ನು ಪ್ರಭಾವಿಸುತ್ತದೆ. ಬ್ಯಾಂಕ್ ದರ ಹೆಚ್ಚಾದಾಗ ಒಟ್ಟಾರೆ ಸಾಲದ ವೆಚ್ಚ ಹೆಚ್ಚಾಗಿ ಸಾಲ ನೀಡಿಕೆ ಕುಗ್ಗುತ್ತದೆ ಮತ್ತು ಬ್ಯಾಂಕ್ ದರ ಇಳಿಕೆಯಾದಾಗ ಸಾಲದ ವೆಚ್ಚ ಕಡಿಮೆಯಾಗಿ ಸಾಲ ನೀಡಿಕೆ ಹಿಗ್ಗುತ್ತದೆ. ಭಾರತೀಯ ರಿಜರ್ವ ಬ್ಯಾಂಕು ಇದೇ ಉದ್ದೇಶವನ್ನು ರೆಮೋ ಮತ್ತು ರಿವರ್ಸ್ ರೆಪೋ ದರಗಳ ಏರಿಳಿತ ಮಾಡುವುದರಿಂದಲೂ ಸಾಧಿಸುತ್ತದೆ.

2. ಮುಕ್ತ ಮಾರುಕಟ್ಟೆ ಕಾರ್ಯಾಚರಣೆ: ಹಣಕಾಸು ಮಾರುಕಟ್ಟೆಯಲ್ಲಿ ಮುಕ್ತವಾಗಿ ಸರ್ಕಾರಿ ಭದ್ರತೆಗಳನ್ನು ಕೇಂದ್ರ ಬ್ಯಾಂಕು ಕೊಳ್ಳುವ ಮತ್ತು ಮಾರಾಟ ಮಾಡುವ ಕ್ರಮವೇ ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಆಗಿದೆ. ಸರ್ಕಾರಿ ಭದ್ರತೆಗಳ ಮಾರಾಟವು ಸಾರ್ವಜನಿಕರ ಮತ್ತು ಬ್ಯಾಂಕುಗಳ ಬಳಿಯ ಹಣವನ್ನು ಕೇಂದ್ರ ಬ್ಯಾಂಕಿಗೆ ವರ್ಗಾಯಿಸಿದರೆ, ಭದ್ರತೆಗಳ ಖರೀದಿಯು ಹಣವನ್ನು ಕೇಂದ್ರ ಬ್ಯಾಂಕಿನಿಂದ ಸಾರ್ವಜನಿಕರಿಗೆ ಮತ್ತು ಬ್ಯಾಂಕುಗಳಿಗೆ ವರವರ್ಗಾಯಿಸುತ್ತದೆ


3. ಮೀಸಲು ಅನುಪಾತದ ಅವಶ್ಯಕತೆಯನ್ನು ಏರಿಳಿತಗೊಳಿಸುವುದು: ವಾಣಿಜ್ಯ ಮತ್ತು ಇತರ ಬ್ಯಾಂಕುಗಳು ಆರ್‌ಬಿಐನ ಸೂಚನೆಗಳ ಪ್ರಕಾರ ಎರಡು ರೀತಿಯ ಮೀಸಲುಗಳನ್ನು ಹೊಂದಬೇಕಾಗುತ್ತದೆ. ಮೊದಲನೆಯದು ನಗರ ಮೀಸಲು ಅನುಪಾಶ, ಎರಡನೆಯದು ಶಾಸನಬದ್ಧ ದ್ರವ್ಯತೆ ಅನುಪಾಹ,


ನಗದು ಮೀಸಲು ಅನುಪಾತವು ಬ್ಯಾಂಕುಗಳು ತಮ್ಮ ಒಟ್ಟು ಠೇವಣಿಗಳ ನಿರ್ದಿಷ್ಟ ಪಡಿಸಿದ ಪ್ರಮಾಣವನ್ನು ಆರ್‌ಬಿಐನಲ್ಲಿ ಜಮೆಯಾಗಿಡಬೇಕಾದ ಪ್ರಮಾಣವಾಗಿದೆ. ಶಾಸನಬದ್ಧ ದ್ರವ್ಯತೆಯ ಅನುಪಾತವು ಬ್ಯಾಂಕುಗಳು ತಮ್ಮ ಒಟ್ಟು ಠೇವಣಿಗಳ ನಿರ್ದಿಷ್ಟಪಡಿಸಿದ ಪ್ರಮಾಣವನ್ನು ನಗದಾಗಿ ಇರಿಸಿಕೊಳ್ಳುವ ಪ್ರಮಾಣವಾಗಿದೆ. ಈ ಎರಡೂ ಅನುಪಾತಗಳನ್ನು ಏರಿಸಿದಾಗ ಬ್ಯಾಂಕುಗಳ ಬಳಿ ದೈನಂದಿನ ವ್ಯವಹಾರಕ್ಕೆ ಕಡಿಮೆ ಹಣ ಲಭ್ಯವಾಗುತ್ತದೆ ಮತ್ತು ಅವುಗಳನ್ನು ಇಳಿಸಿದಾಗಿ ಹೆಚ್ಚಿನ ಹಣದ ಪ್ರಮಾಣ ಲಭ್ಯವಾಗುತ್ತದೆ.


ಬ. ಗುಣಾತ್ಮಕ ಸಾಲ ನಿಯಂತ್ರಣ ಕ್ರಮಗಳು ಗುಣಾತ್ಮಕ ಅಥವಾ ಆಯ್ದ ಸಾಲ ನಿಯಂತ್ರಣ ಕ್ರಮಗಳು ಸಾಲ ಪಡೆಯುವ ಉದ್ದೇಶವನ್ನು ಮತ್ತು ಅದರ ಬಳಕೆಯನ್ನು ಪ್ರಭಾವಿಸುತ್ತವೆ, ಪ್ರಮುಖ ಗುಣಾತ್ಮಕ ಸಾಲ ನಿಯಂತ್ರಣ ಕ್ರಮಗಳು ಹೀಗಿವೆ:


1. ಮಾರ್ಜಿನ್ ಪ್ರಮಾಣದ ಬದಲಾವಣೆ: ಸಾಲ ಪಡೆಯುವಾಗ ಬ್ಯಾಂಕು ಭದ್ರತೆಯನ್ನು ಕೇಳುತ್ತದೆ. ಅಥವಾ ಸಾಲದ ನಿಗದಿತ ಪ್ರಮಾಣವನ್ನು ಸಾಲಗಾರ ವ್ಯಕ್ತಿಯೇ ಮಾರ್ಜಿನ್ ಹಜವಾಗಿ ಭರಿಸಬೇಕಾಗುತ್ತದೆ. ಯಾವುದೇ ಉದ್ದೇಶಕ್ಕಾಗಿ ಸಾಲ ನೀಡಿಕೆಯನ್ನು ಉತ್ತೇಜಿಸಲು ಮಾರ್ಜಿನ್ ಹಣದ ಪ್ರಮಾಣವನ್ನು ಇಳಿಸಬಹುದು. ಅದೇ ರೀತಿ ಸಾಲ ನೀಡಿಕೆಯನ್ನು ನಿರುತ್ತೇಜಿಸಲು ಮಾರ್ಜಿನ್ ಹಣದ ಪ್ರಮಾಣವನ್ನು ಏರಿಸಭೆ


2. ಸಾಲದ ಗರಿಷ್ಠ ಮಿತಿ ನಿಗದಿ ಅಥವಾ ಸಾಲದ ಪಡಿತರ: ನಿರ್ದಿಷ್ಟ ಉದ್ದೇಶಗಳಿಗೆ ನೀಡುವ ಸಾಲದ ಪ್ರಮಾಣದ ಗರಿಷ್ಠ ಮಿತಿಯನ್ನು ಆರ್‌ಬಿಐ ನಿಗದಿಗೊಳಿಸಿ ಯಾವುದೇ ಉದ್ದೇಶಕ್ಕೆ ಅತಿಯಾದ ಸಾಲ ನೀಡಿಕೆಯನ್ನು ತಡೆಯುತ್ತ


3. ನೈತಿಕ ಒತ್ತಡ: ಹಲವು ಉದ್ದೇಶಗಳಿಗೆ ಒಟ್ಟಾರೆ ಸಾಲ ನೀಡಿಕೆಯನ್ನು ಅಥವಾ ಹಲವು ಉದ್ದೇಶಗಳಿಗೆ ಸಾಲದ ಪ್ರಮಾಣವನ್ನು ತಗ್ಗಿಸುವ ಸಲುವಾಗಿ ಆರ್‌ಬಿಐ ವಾಣಿಜ್ಯ ಬ್ಯಾಂಕುಗಳ ಮೇಲೆ ನಿಯಮಿತ ಸುತ್ತೋಲೆಗಳ ಮೂಲಕ ನೈತಿಕ ಒತ್ತಡ ಹೇರುವ ಕ್ರಮ ಇದಾಗಿದೆ.


4. ನೇರ ಕ್ರಮ: ಯಾವಾಗ ಉಳಿದೆಲ್ಲ ಕ್ರಮಗಳು ನಿಷ್ಪಲವಾಗುತ್ತವೆಯೋ ಆಗ ಆರ್‌ಬಿಐ ವಾಣಿಜ್ಯ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳನ್ನು ನೇರವಾಗಿ ನಿಯಂತ್ರಿಸುವ ಕ್ರಮ ಕೈಗೊಳ್ಳುತ್ತದೆ. ಇದು ಒಂದು ಶಿಕ್ಷೆಯ ರೂಪವಾಗಿದ್ದರಿಂದ ಇದನ್ನು ಕಟ್ಟ ಕಡೆಗೆ ಬಳಸಲಾಗುತ್ತದೆ.


ಹೀಗೆ ಕೇಂದ್ರ ಬ್ಯಾಂಕುಗಳು (ಭಾರತದಲ್ಲಿ ಆರ್‌ಬಿಐ) ಹಲವಾರು ಕ್ರಮಗಳ ಮೂಲಕ ಹಣದ ಪ್ರಮಾಣ ನಿಯಂತ್ರಿಸಿ ತನ್ಮೂಲಕ ಬೆಲೆ ಪರಿಸ್ಥಿತಿ ಮತ್ತು ಒಟ್ಟಾರೆ ಅಭಿವೃದ್ಧಿಯ ಗತಿಯನ್ನು ಪ್ರಭಾವಿಸುತ್ತವೆ.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು