ಗ್ರಾಮೀಣ ಅಭಿವೃದ್ಧಿ

 ಭಾರತ ಹಳ್ಳಿಗಳ ದೇಶ. 2011ರ ಜನಗಣತಿಯ ಪ್ರಕಾರ ಶೇ.68.84ರಷ್ಟು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಬಹು ಹಿಂದೆಯೇ ಭಾರತದ ನೈಜ ಅಭಿವೃದ್ಧಿಯೆಂದರೆ, ಗ್ರಾಮಗಳ ಅಭಿವೃದ್ಧಿ’ ಎಂದಿದ್ದರು. ಆದರೆ ಸ್ವಾತಂತ್ರ್ಯ ದೊರಕಿ ಸುಮಾರು 70 ವರ್ಷಗಳ ನಂತರವೂ ಭಾರತದ ಗ್ರಾಮಗಳು ದುಸ್ಥಿತಿಯ ಮತ್ತು ಒಂದುಳಿಯುವಿಕೆಯ ಕುರುಹುಗಳಾಗಿದ್ದು, ಮೂರನೆಯ ಒಂದರಷ್ಟು ಗ್ರಾಮೀಣ ಜನರು ಕಡು ಬಡತನದಿಂದ ಬಳಲುತ್ತಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಬಡತನ ನಿರ್ಮೂಲನಾ ಯೋಜನೆಗಳು ಜನರನ್ನು ತಲುಪಲು ಸಂಪೂರ್ಣವಾಗಿ ಸಫಲವಾಗಿಲ್ಲ.

ಸ್ವಾತಂತ್ರ್ಯಾನಂತರ ಸರ್ಕಾರವು ಅನುಸರಿಸಿದ ಅಭಿವೃದ್ಧಿ ತಂತ್ರಗಳು ನಗರ ಕೇಂದ್ರಿತ ಅಭಿವೃದ್ಧಿಗೆ ಅವಕಾಶ ನೀಡಿದವು ಎಂದು ಬಹಳಷ್ಟು ವಿದ್ವಾಂಸರು ವಾದಿಸುತ್ತಾರೆ. ಬ್ರಿಟಿಷ್ ಆಳ್ವಿಕೆಯಲ್ಲಿ ಗ್ರಾಮೀಣ ಕೈಗಾರಿಕೆಗಳು ಅವಸಾನದತ್ತ ಸಾಗಿದ್ದು, ಸ್ವಾತಂತ್ರ್ಯಾ ನಂತರದಲ್ಲಿ ಆಧುನಿಕ ಉದ್ದಿಮೆಗಳ ಪೈಪೋಟಿಯಿಂದಾಗಿ ಅವು ಮತ್ತಷ್ಟು ಆಘಾತವನ್ನು ಅನುಭವಿಸಿದವು, ಕೃಷಿಯು ನಿಯತ ಉದ್ಯೋಗ ಮತ್ತು ಸೂಕ್ತ ಕೂಲಿ ಒದಗಿಸಲು ಅಸಮರ್ಥವಾಗಿದ್ದರಿಂದ ಜನರು ನಗರಗಳೆಡೆಗೆ ವಲಸೆ ಬರಲು ಪ್ರಾರಂಭಿಸಿದರು. ಉದಾರೀಕರಣ ಮತ್ತು ಜಾಗತೀಕರಣ ಪ್ರಕ್ರಿಯೆಗಳ ಜಾರಿಯಿಂದಾಗಿ ಆತ್ಯಾಧುನಿಕ ತಂತ್ರಜ್ಞಾನವನ್ನು ತನ್ನದಾಗಿಸಿಕೊಂಡ ಕೈಗಾರಿಕೆ ಮತ್ತು ಸೇವಾ ವಲಯಗಳು ತೀವ್ರವಾಗಿ ವಿಸ್ತರಣೆಗೊಳ್ಳುವ ಪ್ರಕ್ರಿಯೆಗೆ ಮತ್ತಷ್ಟು ಉತ್ತೇಜನ ದೊರಕಿತು.

ಬಹುತೇಕ ಕೃಷಿಯೊಂದನ್ನೇ ಅವಲಂಬಿಸಿರುವ ಗ್ರಾಮೀಣ ಜನರಲ್ಲಿ ಬಡತನ ಹೆಚ್ಚಾಗಿದೆ. ಸುಮಾರು ಶೇ. 60ರಷ್ಟು ಜನರು ಪ್ರಾಥಮಿಕ ವಲಯದಲ್ಲಿ ದುಡಿಯುತ್ತಿದ್ದು, ರಾಷ್ಟ್ರೀಯ ವರಮಾನಕ್ಕೆ ಈ ವಲಯದ ಕೊಡುಗೆ ಬಹಳ ಕಡಿಮೆಯಿದ್ದು, ಅದು ನಿರಂತರವಾಗಿ ಇಳಿಕೆಯಾಗುತ್ತಿದೆ. ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಅಂತರ ದಿನೇ ದಿನೇ ಹೆಚ್ಚುತ್ತಿದೆ. ಈ ಅಸಮತೋಲನವನ್ನು ಹೋಗಲಾಡಿಸಿ, ದೇಶದ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಬೇಕಾದರೆ, ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು ಅತ್ಯವಶ್ಯವಾಗಿದೆ.

ಈ ಅಧ್ಯಾಯದಲ್ಲಿ ನೀವು ಗ್ರಾಮೀಣ ಅಭಿವೃದ್ಧಿಯ ಅರ್ಥ ತಿಳಿದುಕೊಂಡು ಅದನ್ನು ಸಾಧಿಸಲು ಕೈಗೊಂಡ ಸರ್ಕಾರದ ಕ್ರಮಗಳ ಪರಾಮರ್ಶೆ ಮಾಡಲಿದ್ದೀರಿ. 1, ಗ್ರಾಮೀಣ ಅಭಿವೃದ್ಧಿಯ ಅರ್ಥ ಹಾಗೂ ಮಹತ್ವ

ಗ್ರಾಮೀಣ ಅಭಿವೃದ್ಧಿಯ ಗ್ರಾಮಗಳ ಆರ್ಥಿಕ ಮತ್ತು ಸಾಮಾಜಿಕ ಉನ್ನತಿ ಸಾಧಿಸುವ ಒಂದು ಪ್ರಕ್ರಿಯೆ ಎಂದು ಅರ್ಥೈಸಬಹುದು. ಗ್ರಾಮೀಣ ಜನರ ಜೀವನದ ಗುಣಮಟ್ಟವನ್ನು ಉತ್ತಮಪಡಿಸುವ ಗ್ರಾಮ ಪ್ರದೇಶಗಳ ಒಳ್ಳೆಯನ್ನು ಗ್ರಾಮೀಣ ಅಭಿವೃದ್ಧಿಯೆಂದು ಕರೆಯಬಹುದು. ಆದು ಬಡಜನರ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಆಧ್ಯಾತ್ಮಿಕ ಮುನ್ನಡೆಯ ಒಂದು ಸಮಗ್ರ ಪ್ರಕ್ರಿಯೆಯಾಗಿದೆ.

ಕೃಷಿಯ ಸ್ಥಗಿತತೆ ಮತ್ತು ನಿಧಾನಗತಿಯ ಬೆಳವಣಿಗೆಯು ಗ್ರಾಮೀಣ ಹಿಂದುಳಿಯುವಿಕೆ ಮತ್ತು ಗ್ರಾಮೀಣ ಬಡತನಕ್ಕೆ ಅತ್ಯಂತ ಪ್ರಮುಖ ಕಾರಣವಾಗಿದೆ. ಆದ್ದರಿಂದ ಅಧಿಕ ಪ್ರಮಾಣದ ಕೃಷಿಯೇತರ ಚಟುವಟಿಕೆಗಳನ್ನು ಪೋಷಿಸುವ ಅಗತ್ಯತೆಯಿದ್ದು, ಇದಕ್ಕಾಗಿ ಸಾಕ್ಷರತೆ: ಕೌಶಲಗಳು, ಆರೋಗ್ಯ, ನೈರ್ಮ ಸಾರಿಗೆ, ಶಕ್ತಿ, ಸಂಪರ್ಕ, ಮಾರುಕಟ್ಟೆ, ಹಣಕಾಸು, ಮುಂತಾದ ಮೂಲಭೂತ ಸೌಲಭ್ಯಗಳನ್ನು ಬಲಪಡಿಸುವುದು ಅವಶ್ಯವಿದೆ. ಅಲ್ಲದೇ ಕೃಷಿ ಅಭಿವೃದ್ಧಿಗಾಗಿ ನೀರಾವರಿ ಮತ್ತು ಭೂ ಸುಧಾರಣೆಗಳು ಸಹ ಅತ್ಯವಶ್ಯವಾಗುತ್ತವೆ. ಹೀಗೆ, ಗ್ರಾಮೀಣ ಅಭಿವೃದ್ಧಿಯು ಸಾಕ್ಷರತೆ, ಆರೋಗ್ಯ, ಮೂಲಭೂತ ಸೌಲಭ್ಯಗಳು, ಭೂ ಸುಧಾರಣೆಗಳು, ನೀರಾವರಿಗಳಲ್ಲದೆ ಬಡವರ ಜೀವನ ಸ್ಥಿತಿಯನ್ನು ಸುಧಾರಿಸುವ ನಿರ್ದಿಷ್ಟ ಕ್ರಮಗಳನ್ನು ಒಳಗೊಂಡಿದೆ.

ಆದ್ದರಿಂದ, ಗ್ರಾಮೀಣ ಅಭಿವೃದ್ಧಿಗಾಗಿ ಇರುವ ಅವಶ್ಯಕ ಕ್ರಮಗಳೆಂದರೆ:

 1. ಮಾನವ ಸಂಪನ್ಮೂಲ ಅಭಿವೃದ್ಧಿ

1. ಸಾಕ್ಷರತೆ, ಅದರಲ್ಲೂ ಮಹಿಳಾ ಸಾಕ್ಷರತೆ, ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ

ii. ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯದ ಸುಧಾರಣೆ:

2. ಭೂ ಸುಧಾರಣೆ

3. ಸ್ಥಳೀಯ ಉತ್ಪಾದಕ ಸಂಪನ್ಮೂಲಗಳ ಅಭಿವೃದ್ಧಿ;

4. ವಿದ್ಯುತ್ ಶಕ್ತಿ, ನೀರಾವರಿ, ಹಣಕಾಸು, ಮಾರುಕಟ್ಟೆಗಳು, ಸಾ (ಗ್ರಾಮೀಣ ಮತ್ತು ಸಂಪರ್ಕ ರಸ್ತೆಗಳು), ಕೃಷಿ ಸಂಶೋಧನೆ ಮತ್ತು ವಿಸ್ತರಣೆ, ಹಾಗೂ ಮಾಹಿತಿ ಪ್ರಸರಣಗಳನ್ನೊಳಗೊಂಡ ಮೂಲಭೂತ ಸೌಕರ್ಯಗಳ ಅಭಿವೃದ್ಧಿ: ಮತ್ತು

5. ಬಡತನ ನಿರ್ಮೂಲನೆಯ ನಿರ್ದಿಷ್ಟ ಯೋಜನೆಗಳು

ಗ್ರಾಮೀಣ ಅಭಿವೃದ್ಧಿಯ ಮಹತ್ವ: ಗ್ರಾಮೀಣ ಅಭಿವೃದ್ಧಿಯು ಕೃಷಿ ಹಾಗೂ ಕೃಷಿಯೇತರ ವಲಯಗಳ ಅಭಿವೃದ್ಧಿಯನ್ನು ಒಳಗೊಂಡಿರುವುದರಿಂದ, ಅದರಿಂದಾಗಿ ಒಟ್ಟಾರೆ ರಾಷ್ಟ್ರದ ಅಭಿವೃದ್ಧಿಯಾಗುತ್ತದೆ. ಅಧಿಕ ಕೃಷಿ ವರಮಾನದ ಪರಿಣಾಮವಾಗಿ, ಔದ್ಯಮಿಕ ಸರಕು-ಸೇವೆಗಳಿಗೆ ಬೇಡಿಕೆ ಹೆಚ್ಚಾಗುತ್ತದೆ, ತನ್ಮೂಲಕ ಅಧಿಕ ಉದ್ಯೋಗ ಸೃಷ್ಟಿಯಾಗಿ ಆ ಚಟುವಟಿಕೆಗಳು ಸಹ ವಿಸ್ತಾರ ಹೊಂದುತ್ತವೆ. ಅಧಿಕ ಶಿಕ್ಷಣ ಮತ್ತು ಕೌಶಲಗಳಿಂದಾಗಿ ಹೆಚ್ಚಿನ ಉತ್ಪಾದಕತೆಯನ್ನು ಸಾಧಿಸಬಹುದು. ಉತ್ತಮ ಆರೋಗ್ಯದಿಂದ ಜನರ ಕೆಲಸದ ಸಹಭಾಗಿತ್ವದ ಪ್ರಮಾಣ ಹೆಚ್ಚಾಗಿ, ರಾಷ್ಟ್ರೀಯ ಉತ್ಪನ್ನ ಹೆಚ್ಚಾಗುತ್ತದೆ. ಕೃಷಿ ಸಂಸ್ಕರಣೆ, ಸಣ್ಣ ಕೈಗಾರಿಕೆಗಳು ಅಭಿವೃದ್ಧಿ ಹೊಂದಿ ಒಟ್ಟಾರೆ ಗ್ರಾಮೀಣ ಪರಿವರ್ತನೆಗೆ ನಾಂದಿಯಾಗುತ್ತದೆ. ಇವೆಲ್ಲವೂ ಬಡತನದ ಇಳಿಕೆಗೆ ಕಾರಣೀಭೂತವಾಗುತ್ತವೆ.


2. ವಿಕೇಂದ್ರೀಕರಣ

ಪ್ರತಿಯೊಂದು ಗ್ರಾಮದ ಆಡಳಿತಾಧಿಕಾರ ಹಾಗೂ ಅದರ ಅಭಿವೃದ್ಧಿಯ ಜವಾಬ್ದಾರಿಯನ್ನು ಗ್ರಾಮಸ್ಥರಿಗೆ ವಹಿಸಿಕೊಡುವುದನ್ನು ವಿಕೇಂದ್ರೀಕರಣ ಎನ್ನುತ್ತೇವೆ. ಇದು ಅಧಿಕಾರ ಹಂಚಿಕೆಯ ಒಂದು ಪ್ರಕ್ರಿಯೆಯಾಗಿದ್ದು ನಿರ್ಧಾರ ಕೈಗೊಳ್ಳುವಲ್ಲಿ ಜನರ ಪಾಲುದಾರಿಕೆಯೂ ಹೆಚ್ಚಳವಾಗುತ್ತದೆ. ತಳಮಟ್ಟದಿಂದ ಯೋಜನೆ ನಿರೂಪಿಸುವಿಕೆ ಮತ್ತು ಅಭಿವೃದ್ಧಿ ಸಾಧನೆಯ ಪ್ರಕ್ರಿಯೆಯೂ ಇದಾಗಿದೆ. ಇದನ್ನೇ ಗಾಂಧೀಜಿಯವರು `ಗ್ರಾಮ ಸ್ವರಾಜ್ಯ’ ಎಂದು ಕರೆದಿದ್ದರು. ವಿಕೇಂದ್ರೀಕರಣವು ಎಲ್ಲ ರೀತಿಯ ಶೋಷಣೆಗಳನ್ನು ತಡೆಯುತ್ತದೆ, ಮಾನವನ ಸ್ವಾತಂತ್ರ್ಯ ಮತ್ತು ಘನತೆಯನ್ನು ಸಂರಕ್ಷಿಸುತ್ತದೆಯಲ್ಲದೇ ಸಹಾನುಭೂತಿ ಮತ್ತು ಸಹಕಾರದಂತಹ ಮಾನವೀಯ ಮೌಲ್ಯಗಳನ್ನು ವೃದ್ಧಿಸುತ್ತದೆ.

ಕೇಂದ್ರೀಕರಣವನ್ನು ಪ್ರೋತ್ಸಾಹಿಸುವುದಕ್ಕಾಗಿ ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಮನರುಜ್ಜಿವನ ಮಾಡಲಾಗಿದೆ. ಭಾರತ ಸರ್ಕಾರವು 1993ರ ಸಂವಿಧಾನದ 73ನೆಯ ತಿದ್ದುಪಡಿ ಕಾಯ್ದೆಯ ಮೂಲಕ ದೇಶದಾದ್ಯಂತ ಏಕರೂಪದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತಂದಿತು. ಇದರಿಂದ ಪಂಚಾಯತ್ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ದೊರೆಯಿತು. ಈ ತಿದ್ದುಪಡಿಯ ಪ್ರಕಾರ ಮೂರು ಹಂತದ ಪಂಚಾಯತಿ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ. ಭಾರತದಲ್ಲಿ ಜಾರಿಯಲ್ಲಿರುವ ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಮುಖ ಲಕ್ಷಣಗಳೆಂದರೆ

I. ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳುಳ್ಳ ಮೂರು ಹಂತದ ಪಂಚಾಯತಿ ವ್ಯವಸ್ಥೆ ಇದ್ದು ಗ್ರಾಮಸಭೆಯು ಅದರ ತಳಹದಿಯಾಗಿದೆ;

II. ಹಾಗೂ ನಿಯಮಿತ ಚುನಾವಣೆಗಳು;

III. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗಾಗಿ ಸ್ಥಾನ ಮೀಸಲಾತಿ;

IV. ಹಣಕಾಸು, ಆಡಳಿತಾತ್ಮಕ, ಮುಂಗಡಪತ್ರ ಮಂಡಿಸುವ ಮತ್ತು ಲೆಕ್ಕ ಪರಿಶೋಧಿಸುವ ಜವಾಬ್ದಾರಿಗಳ ನೀಡಿಕೆ;

V. ಕಾರ್ಯ ನಿರ್ವಾಹಕ ಮತ್ತು ಇತರ ಸಿಬ್ಬಂದಿ ನೀಡಿಕೆ; ಮತ್ತು

VI. ಪಂಚಾಯತಿಯನ್ನು ವಿಸರ್ಜಿಸುವಾಗ ಅನುಸರಿಸಬೇಕ ಕಟ್ಟು ನಿಟ್ಟಿನ ಕ್ರಮಗಳು ಮತ್ತು ವಿಸರ್ಜನೆಗೊಂಡ ಆರು ತಿಂಗಳುಗಳ ಒಳಗೇ ಕುನಾವಣೆ ನಡೆಸುವುದು.

ಕರ್ನಾಟಕದಲ್ಲಿ 30 ಜಿಲ್ಲಾ ಪಂಚಾಯತಿಗಳು, 176 ತಾಲ್ಲೂಕು ಪಂಚಾಯತಿಗಳು ಮತ್ತು 6,022 ಗ್ರಾಮ ಪಂಚಾಯತಿಗಳಿವೆ.


3. ಗ್ರಾಮೀಣಾಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ಪಾತ್ರ

ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮಗಳ ಪಾಲ್ಗೊಳ್ಳುವಂತೆ ಮಾಡುವಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ ಹಿರಿದಾದುದು. ಬಡತನ ರ್ಮೂಲನೆ, ಜೀವನೋಪಾಯ ಭದ್ರತೆ ಹಾಗೂ ಸಾರ್ವಜನಿಕ ಸೌಕರ್ಯಗಳನ್ನು ಒದಗಿಸುವ ಯೋಜನೆಗಳ ಅನುಷ್ಠಾನದಲ್ಲಿ ಈ ಸಂಸ್ಥೆಗಳ ಜವಾಬ್ದಾರಿ ಮಹತ್ವದ್ದಾಗಿದೆ. ಇವು ಗ್ರಾಮಗಳಿಗೆ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ, ಶೌಚಾಲಯ, ಶಾಲೆ ಮತ್ತು ಆಸ್ಪತ್ರೆ ಕಟ್ಟಡಗಳು, ಮಾರುಕಟ್ಟೆ ಮುಂತಾದ, ಸಮುದಾಯಕ್ಕೆ ಉಪಯೋಗವಾಗುವ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಹೊಣೆ ಹೊತ್ತಿವೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ, ವಯಸ್ಕರ ಶಿಕ್ಷಣ, ತಾಂತ್ರಿಕ ಹಾಗೂ ವೃತ್ತಿ ತರಬೇತಿಗೆ ಪ್ರೋತ್ಸಾಹ, ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳ ವಿಸ್ತರಣೆ ಮೂಲಕ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವಲ್ಲಿಯೂ ಪಂಚಾಯತ್ ಸಂಸ್ಥೆಗಳು ಕಾರ್ಯನಿರ್ವಹಿಸಬೇಕಾಗಿದೆ.

ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಸಭೆಯು ಅತ್ಯಂತ ಮಹತ್ವದ ಸಂಸ್ಥೆಯಾಗಿದೆ. ಕನಿಷ್ಠ ಆರು ತಿಂಗಳಿಗೊಮ್ಮೆ ಅದರ ಸಭೆ ನಡೆಸಬೇಕಾಗಿದ್ದು, ಗ್ರಾಮದ ಎಲ್ಲ ಮತದಾರರು ಅದರ ಸದಸ್ಯರಾಗಿರುತ್ತಾರೆ. ಗ್ರಾಮದ ಎಲ್ಲ ಅಭಿವೃದ್ಧಿ ಅವಶ್ಯಕತೆಗಳ ಹಾಗೂ ಯೋಜನೆಗಳ ಕುರಿತಾದ ಚರ್ಚೆಯು ಗ್ರಾಮ ಸಭೆಯಲ್ಲಿಯೇ ಆಗುತ್ತದೆ. ಸ್ಥಳೀಯ ಯೋಜನೆಗಳನ್ನು ಸಿದ್ಧಪಡಿಸುವುದು, ಪಂಚಾಯತ್ ರಾಜ್ ಸಂಸ್ಥೆಗಳ ಒಂದು ಮಹತ್ವದ ಕಾರ್ಯವಾಗಿದೆ. ಗ್ರಾಮ ಸಭೆಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯ ಯೋಜನೆಗಳನ್ನು ನಿರ್ಣಯಿಸಲಾಗುತ್ತದೆ.

‘ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಯಂಥ ಉದ್ಯೋಗ ನಿರ್ಮಾಣ ಹಾಗೂ ಬಡತನ ನಿರ್ಮೂಲನ ಯೋಜನೆಗಳನ್ನು ಪಂಚಾಯತ್ ಸಂಸ್ಥೆಗಳ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಹುದಾಗಿದೆ. ಇದರಿಂದ ಗ್ರಾಮೀಣ ಬಡತನ ಮತ್ತು ನಿರುದ್ಯೋಗವನ್ನು ಹೋಗಲಾಡಿಸಲು ಸಾಧ್ಯವಿದೆ, ‘ಪ್ರಧಾನ ಮಂತ್ರಿ ಆವಾಸ್ ಯೋಜನೆ”, “ಅಂಬೇಡ್ಕರ್‌ -ವಾಲ್ಮೀಕಿ ವಸತಿ ಯೋಜನೆ”, “ಆಶ್ರಯ ಯೋಜನೆ’ ಮುಂತಾದ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ವಸತಿ ಹಿಣರಿಗೆ ಮನೆಗಳನ್ನು ನಿರ್ಮಿಸಿ ಕೊಡಬಹುದು,

ಗ್ರಮಗಳಲ್ಲಿನ ಪಡಿತರ ವ್ಯವಸ್ಥೆಯನ್ನು ಬಲಪಡಿಸಿ, ಆರ್ಹ ಬಡಜನರಿಗೆ ಅಗತ್ಯ ಅಪಾರ ಧಾನ್ಯಗಳು ಸಮರ್ಪಕವಾಗಿ ದೊರೆಯುವಂತೆ ಮಾಡಬಹುದು. ಗ್ರಾಮಗಳಲ್ಲಿನ ವಯೋವೃದ್ಧರು, ಅಂಗವಿಕಲರು, ವಿಧವೆಯರು, ಮಾನಸಿಕ ಅಸ್ವಸ್ಥರು, ಮುಂತಾದವರನ್ನು ಗುರುತಿಸಿ, ಅವರಿಗೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ದೊರಕಿಸಿಕೊಡುವ ಮೂಲಕ ಸಾಮಾಜಿಕ ಕಲ್ಯಾಣ ಸೇವೆಗಳನ್ನು ಒದಗಿಸಬಹುದಾಗಿದೆ. ವಾಹಿಳಾ ಸ್ವಸಹಾಯ ಸಂಘಗಳನ್ನು ಸಂಘಟಿಸಿ, ಉತ್ಪಾದಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ, ಮಹಿಳೆಯರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು, ಗ್ರಾಮೀಣ ಜಾತ್ರೆಗಳು, ಹಬ್ಬ ಹರಿದಿನಗಳ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು, ಮುಂತಾದ ಚಟುವಟಿಕೆಗಳ ಮೂಲಕ ಗ್ರಾಮೀಣ ಕಲೆಗಳನ್ನು ಗ್ರಾಮೀಣ ಸಂಸ್ಕೃತಿಗಳನ್ನು ಶ್ರೀಮಂತವಾಗಿಸಬಹುದು.

ಗ್ರಾಮೀಣ ಉತ್ಪಾದಕ ಚಟುವಟಿಕೆಗಳಾದ ಕೃಷಿ, ಪಶುಪಾಲನೆ, ಕೋಳಿ ಸಾಕಣೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ ಮುಂತಾದುವುಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜನರಿಗೆ ದುಡಿಯುವ ಅವಕಾಶಗಳನ್ನು ಹೆಚ್ಚಿಸಬಹುದಾಗಿದೆ. ಕೆರೆ ಕಟ್ಟೆಗಳ ನಿರ್ಮಾಳು, Publish ಹೂಳು ತೆಗೆಯುವುದು, ಕಿರು ನೀರಾವರಿ ಯೋಜನೆಗಳ ನಿರ್ವಹಣೆ ಮುಂತಾದ ಕಾರ್ಯಗಳ ಮೂಲಕ ಕೃಷಿ ನೀರಾವರಿಯನ್ನು ವಿಸ್ತರಿಸಬಹುದಾಗಿದೆ. ಗ್ರಾಮೀಣ ಹಾಗೂ ಗುಡಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಬಹುದು, ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಬಹುದು,

ಮೇಲಿನ ಎಲ್ಲ ಚಟುವಟಿಕೆಗಳಲ್ಲಿ ಪಂಚಾಯತಿಗಳು ಅತಿ ಮಹತ್ವದ ಪಾತ್ರ ವಹಿಸಿ ಗ್ರಾಮಗಳ ಒಟ್ಟಾರೆ ಅಭಿವೃದ್ಧಿಯನ್ನು ಸಾಕಾರಗೊಳಿಸಲು ಸಾಧ್ಯವಿದೆ.


4. ಅಭಿವೃದ್ಧಿಯಲ್ಲಿ ಮಹಿಳೆ

ಮಾನವನ ಬದುಕಿನಲ್ಲಿ ಮಹಿಳೆ ತಾಯಿಯಾಗಿ, ಹೆಂಡತಿಯಾಗಿ, ಸೊಸೆಯಾಗಿ, ಮಗಳಾಗಿ ನಾನಾರೀತಿಯ ಕರ್ತವ್ಯಗಳನ್ನು ನಿರ್ವಹಿಸುತ್ತಾಳೆ, ಮಾನವನ ಬದುಕು ರೂಪುಗೊಳ್ಳುವುದೇ ಮಹಿಳೆಯಿಂದ, ಅವಳು ಮನೆಯೊಳಗೆ ದುಡಿಯುವುದಲ್ಲದೇ, ಮನೆಯ ಹೊರಗೆ ಕೃಷಿಕಳಾ, ಕಾರ್ಮಿಕರಾಗಿ, ನೌಕರಳಾಗಿ, ಅಧಿಕಾರಿಯಾಗಿ, ಉದ್ಯಮಿಯಾಗಿ, ನೀತಿ ನಿರೂಪಕಳಾಗಿ, ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದಾಳೆ. ಹಾಗಾಗಿ ದೇಶದ ಅಭಿವೃದ್ಧಿಯಲ್ಲಿ, ಅದರಲ್ಲೂ ವಿಶೇಷವಾಗಿ ಗ್ರಾಮೀಣಾಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ನೀರ್ಣಾಯಕವಾದುದು, ಚಪ್ಪ ಕೃಷಿ, ಕೋಳಿಸಾಕಣೆಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ದುಡಿಯುತ್ತಿದ್ದಾರೆ, ಕೃಷಿ ಕಾರ್ಮಿಕದಲ್ಲಿಯೂ ಮಹಿಳೆಯರೇ ಹೆಚ್ಚಾಗಿದ್ದಾರೆ.

ವಿದ್ಯಾವಂತ ಮಹಿಳೆಯರು ಅರ್ಥವ್ಯವಸ್ಥೆಯ ವಿವಿಧ ಕ್ಷೇತ್ರಗಳಲ್ಲಿ, ನಾನಾರೀತಿಯ ಉದ್ಯೋಗಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಚೇರಿಗಳು, ವ್ಯಾಪಾರಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ವೃದ್ಧಾಶ್ರಮಗಳು ಮುಂತಾದ ಕಡೆಗಳಲ್ಲೆಲ್ಲಾ ಮಹಿಳೆಯರ ಸೇವೆ ಅಸಾಧಾರಣವಾದುದು. ಅಲ್ಲದೆ ವಿದ್ಯಾವಂತ ಮಹಿಳೆ ಜನಸಂಖ್ಯಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾಳೆ.

ಮಹಿಳೆಯರು ರಾಜಕೀಯ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಗ್ರಾಮ ಪಂಚಾಯ್ತಿಯಿಂದ ಮೊದಲ್ಗೊಂಡು ರಾಷ್ಟ್ರಪತಿ ಭವನದವರೆಗೆ ಸರ್ಕಾರದ ವಿವಿಧ ಹಂತಗಳಲ್ಲಿ ರಾಜಕೀಯ ಮುಂದಾಳುಗಳಾಗಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿರುವುದರಿಂದ, ಸಾಮಾನ್ಯ ಗ್ರಾಮೀಣ ಮಹಿಳೆಯೂ ಅಧಿಕಾರದ ಚುಕ್ಕಾಣಿ ಹಿಡಿದು ಗ್ರಾಮಗಳ ಅಭಿವೃದ್ಧಿಯಲ್ಲಿ ದುಡಿಯಲು ಅವಕಾಶವಾಗಿದೆ. ಸದ್ಯದಲ್ಲಿ ಕರ್ನಾಟಕದ ಪಂಚಾಯತ್ ಸಂಸ್ಥೆಗಳಿಗೆ ಚುನಾಯಿತರಾಗಿರುವ ಸದಸ್ಯರುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳಾ ಸದಸ್ಯರಿರುವುದು ಮಹತ್ವದ ಅಂಶವಾಗಿದೆ.

ಗ್ರಾಮೀಣ ಭಾಗದ ಎಲ್ಲಾ ಹಳ್ಳಿಗಳಲ್ಲಿ ‘ಮಹಿಳಾ ಸ್ವಸಹಾಯ ಸಂಘ’ ಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಇವು ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸುವಲ್ಲಿ ಮತ್ತು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಈ ಸಂಘಗಳ ಸದಸ್ಯರಾಗಿರುವ ಮಹಿಳೆಯರು ಇವುಗಳ ಮೂಲಕ ಸುಲಭವಾಗಿ ಸಾಲ ಪಡೆದು ಉತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ದುಡಿಯುತ್ತಾರೆ. ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಘಗಳು ಮಹಿಳೆಯರು ಇವುಗಳ ಉಳಿತಾಯ ಸಂಗ್ರಹದಲ್ಲಿ ಮತ್ತು ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡುತ್ತಿವೆ. ಹಳ್ಳಿಗಳಲ್ಲಿ ಕುಡಿತ, ಜೂಜು ಮುಂತಾದ ದುಶ್ಚಟಗಳು ವ್ಯಾಪಕವಾಗಿದ್ದು: ಬಾಲ್ಯವಿವಾಹ, ವರದಕ್ಷಿಣೆ, ಜಾತಿಪದ್ಧತಿ, ಮೂಢನಂಬಿಕೆ, ಮಹಿಳೆ ಮತ್ತು ಮಕ್ಕಳ ಶೋಷಣೆ ಮೊದಲಾದ ಸಾಮಾಜಿಕ ಪಿಡುಗುಗಳು ಇನ್ನೂ ಜೀವಂತವಾಗಿವೆ. ಎಚ್ಚೆತ್ತ ಮಹಿಳೆಯರು ಸಂಘಟಿತ ಪ್ರಯತ್ನದ ಮೂಲಕ ಇಂತಹ ಅನಿಷ್ಟಗಳನ್ನು ಹೋಗಲಾಡಿಸಬಹುದಾಗಿದೆ. ಆ ಮೂಲಕ ಸ್ವಚ್ಛ ಹಾಗೂ ಪ್ರಗತಿಪರ ಸಮಾಜವನ್ನು ಕಟ್ಟುವಲ್ಲಿ ಮಹಿಳೆಯರು ನೆರವಾಗಬಹುದಾಗಿದೆ.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು