ಅಭಿವೃದ್ಧಿ ಮತ್ತು ಅನಾಭಿವೃದ್ಧಿ

 ನಾವು ನಮ್ಮ ಜೀವನದಲ್ಲಿ ನಿರಂತರ ಪ್ರಗತಿ ಸಾಧಿಸಲು ಪ್ರಯತ್ನಿಸುತ್ತಿರುತ್ತೇವೆ. ನಮ್ಮ ಆಶೋತ್ತರಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಈಡೇರಿಸಿಕೊಂಡು, ಹಿಂದಿನಕ್ಕಿಂತ ಉತ್ತಮವಾಗಿರಲು ಬಯಸುತ್ತೇವೆ. ಅದೇ ರೀತಿಯಲ್ಲಿ ಪ್ರತಿಯೊಂದು ಅರ್ಥವ್ಯವಸ್ಥೆಯು ಸಹ ಜನರಿಗೆ ಲಭ್ಯವಿರುವ ಸರಕು-ಸೇವೆಗಳ ಪ್ರಮಾಣವನ್ನು ಹೆಚ್ಚಿಸಿ ಅವರ ಕಲ್ಯಾಣವನ್ನು ಉತ್ತಮಪಡಿಸುವ ಪ್ರಯತ್ನ ಅದುತ್ತಿರುತ್ತದೆ. ಒಂದು ದೇಶದ ಎಲ್ಲರ ಆಶೋತ್ತರಗಳನ್ನು ಈಡೇರಿಸುವ ಸಾಮರ್ಥ್ಯವನ್ನು ವಿಸ್ತರಿಸುವ ಈ ಪ್ರಕ್ರಿಯೆಯನ್ನು ಅಭಿವೃದ್ಧಿ ಎಂದು ಕರೆಯುತ್ತಾರೆ. ಆದ್ದರಿಂದ, ಒಂದು ರಾಷ್ಟ್ರದ ಜನರ ಆರ್ಥಿಕ ಆಶೋತ್ತರಗಳನ್ನು ಪೂರೈಸುವ ಸಾಮರ್ಥ್ಯ ಹೆಚ್ಚಿಸಿ; ಬಡತನ, ನಿರುದ್ಯೋಗ, ಅಸಮಾನತೆ, ಹಣದುಬ್ಬರಗಳಂತಹ ಅರ್ಥಿಕ ಸಮಸ್ಯೆಗಳನ್ನು ನಿಯಂತ್ರಿಸುವುದನ್ನು ಆರ್ಥಿಕ ಅಭಿವೃದ್ಧಿ ಎಂದು ಕರೆಯಬಹುದು. 

1. ಅಭಿವೃದ್ಧಿ ಮತ್ತು ಅನಾಭಿವೃದ್ಧಿ

ಅಭಿವೃದ್ಧಿ: ಅಭಿವೃದ್ಧಿ ಎಂಬ ಪದವನ್ನು ನಾವು ನಿತ್ಯದ ಬದುಕಿನಲ್ಲಿ ಸಾಮಾನ್ಯವಾಗಿ ಬಳಸುತ್ತಿರುತ್ತೇವೆ. ಯಾವುದೇ ಒಂದು ಕ್ಷೇತ್ರ ಇಲ್ಲವೇ ವ್ಯಕ್ತಿಗಳ ಪ್ರಗತಿಯನ್ನು ಸೂಚಿಸಲು ನಾವು ಸಾಮಾನ್ಯವಾಗಿ ‘ಅಭಿವೃದ್ಧಿ’ ಪದವನ್ನು ಬಳಸುತ್ತೇವೆ. ಉದಾ: ಗ್ರಾಮೀಣ ಅಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ, ಶೈಕ್ಷಣಿಕ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇತ್ಯಾದಿ. ಹಾಗೆಯೇ ಒಂದು ದೇಶದ ಆರ್ಥಿಕ ಚಟುವಟಿಕೆಗಳ ವಿಸ್ತರಣೆಯನ್ನು ನಾವು ಆರ್ಥಿಕ ಅಭಿವೃದ್ಧಿ ಎಂದು ಗುರುತಿಸುತ್ತೇವೆ. ಆದರೆ ಆರ್ಥಿಕ ಅಭಿವೃದ್ಧಿಯು ಒಂದು ಸಂಕೀರ್ಣ ವಿದ್ಯಮಾನವಾಗಿದ್ದು ಅದನ್ನು ಸರಳವಾಗಿ ವ್ಯಾಖ್ಯಾನಿಸಲು ಆಗುವುದಿಲ್ಲ.

ಪ್ರೊ. ಮೆಯರ್‌ ಮತ್ತು ಬಾಲವಿನ್ ಅವರ ಪ್ರಕಾರ “ಒಂದು ರಾಷ್ಟ್ರದ ನೈಜ ರಾಷ್ಟ್ರೀಯ ವರಮಾನವು ದೀರ್ಘಾವಧಿಯವರೆಗೆ ಹೆಚ್ಚಳವಾಗುವ ಪ್ರಕ್ರಿಯೆಯೇ ಆರ್ಥಿಕ ಅಭಿವೃದ್ಧಿಯಾಗಿದೆ. ಈ ವ್ಯಾಖ್ಯಾನವು ಆರ್ಥಿಕ ಅಭಿವೃದ್ಧಿಯ ಮೂರು ಅಂಶಗಳನ್ನು ಒತ್ತಿ ಹೇಳುತ್ತದೆ. ಅವೆಂದರೆ, ಆರ್ಥಿಕ ಅಭಿವೃದ್ಧಿಯು 1, ಒಂದು ಪ್ರಕ್ರಿಯೆ; 2. ನೈಜ ರಾಷ್ಟ್ರೀಯ ವರಮಾನದ ಹೆಚ್ಚಳ; ಮತ್ತು 3. ದೀರ್ಘಾವಧಿ ಹೆಚ್ಚಳ. ಇವುಗಳನ್ನು ಸಂಕ್ಷಿಪ್ತವಾಗಿ ಗಮನಿಸೋಣ:

a) ಒಂದು ಪ್ರಕ್ರಿಯೆ: ಇಲ್ಲಿ ಪ್ರಕ್ರಿಯೆ ಎಂಬ ಪದವು ಉತ್ಪಾದನಾಂಗಗಳ ಪೂರೈಕೆ ಮತ್ತು ಸರಕು ಸೇವೆಗಳ ಬೇಡಿಕೆಯಲ್ಲಿನ ಬದಲಾವಣೆಗಳನ್ನು ಸೂಚಿಸುತ್ತದೆ. ಉತ್ಪಾದನಾಂಗಗಳ ಪೂರೈಕೆಯು ಹೊಸ ಸಂಪನ್ಮೂಲಗಳ ಶೋಧ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಬಂಡವಾಳ ಸಂಚಯನ, ಜನಸಂಖ್ಯಾ ಬೆಳವಣಿಗೆ, ಉತ್ತಮ ತಾಂತ್ರಿಕತೆಯ ಕಾರಣಗಳಿಂದಾಗಿ ಬದಲಾವಣೆಯಾಗುತ್ತವೆ. ಅದೇ ರೀತಿ ಜನಸಂಖ್ಯೆಯ ಬೆಳವಣಿಗೆ ಮತ್ತು ಅದರ ಲಕ್ಷಣಗಳ ಬದಲಾವಣೆ, ವರಮಾನದ ಮಟ್ಟ ಹಾಗೂ ಅದರ ಹಂಚಿಕೆಯಲ್ಲಿನ ಬದಲಾವಣೆ, ಜನರ ಅಭಿರುಚಿಗಳಲ್ಲಿನ ಬದಲಾವಣೆ, ಮುಂತಾದವುಗಳಿಂದಾಗಿ ಸರಕುಗಳ ಬೇಡಿಕೆಯಲ್ಲಿ ಬದಲಾವಣೆ ಉಂಟಾಗುತ್ತದೆ. ಈ ಬದಲಾವಣೆಗಳು ರಾಷ್ಟ್ರೀಯ ವರಮಾನದ ಹೆಚ್ಚಳಕ್ಕೆ ಪೂರಕವಾಗುತ್ತವೆ.

b) ನೈಜ ರಾಷ್ಟ್ರೀಯ ದಶಮಾನ: ರಾಷ್ಟ್ರೀಯ ವರಮಾನವು ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಉತ್ಪಾದಿಸಿದ ಎಲ್ಲ ಸರಕು-ಸೇವೆಗಳ ಒಟ್ಟು ಮೌಲ್ಯವಾಗಿದೆ. ಇದು ಆರ್ಥಿಕ ಅಭಿವೃದ್ಧಿಯ ಮಾಪನದ ಪ್ರಮುಖ ಸಾಧನವಾಗಿದೆ. ರಾಷ್ಟ್ರೀಯ ವರಮಾನ ಹೆಚ್ಚಾಗಿದ್ದಷ್ಟೂ ಅಭಿವೃದ್ಧಿ ಹೆಚ್ಚು, ಆದರೆ ಇಲ್ಲಿ 'ನೈಟ್ ಎಂಬ ಪದದ ಮೇಲೆ ಒತ್ತು ನೀಡಲಾಗಿದ್ದು, ಅದು ಜನರ ಕೊಳ್ಳುವ ಶಕ್ತಿಯನ್ನು ಬಿಂಬಿಸುತ್ತದೆ. ಸಮಯ ಕಳೆದ ಹಾಗೆ ಬೆಲೆಗಳು ಏರುವುದು ನಮಗೆಲ್ಲ ತಿಳಿದ ವಿಷಯ. ಈ ಎರಿದ ಬೆಲೆಗಳಲ್ಲಿ ನಾವು ಸರಕು ಸೇವೆಗಳ ಮೌಲ್ಯಮಾಪನ ಮಾಡಿದಾಗ, ಆ ಮೌಲ್ಯಗಳು ಮತ್ತು ಅಂತೆಯೇ ವರಮಾನ ಹೆಚ್ಚಿದ ಹಾಗೆ ತೋರುತ್ತವೆ. ಆದ್ದರಿಂದ ಈ ಹೆಚ್ಚಳದಲ್ಲಿ ಬೆಲೆ ಏರಿಕೆಯ ಪರಿಣಾಮವನ್ನು ಕಳೆಯಬೇಕಾಗುತ್ತದೆ. ಹಾಗೆ ಬೆಳ ಬದಲಾವಣೆಗೆ ವರಮಾನವನ್ನು ಹೊಂದಾಣಿಕೆ ಮಾಡಿದಾಗ ನೈಜ ವರಮಾನ ಅಥವಾ ಹಣದ ವಾಸ್ತವಿಕ ಖರೀದಿ ಸಾಮರ್ಥ್ಯ ದೊರಕುತ್ತದೆ, ಇದು ಅಭಿವೃದ್ಧಿಯನ್ನು ಪೋಷಿಸುವಲ್ಲಿ ಬೆಲೆಗಳ ಸ್ಥಿರತೆ ಕಾಯ್ದುಕೊಳ್ಳುವ ಅವಶ್ಯಕತೆಯನ್ನು ಸೂಚಿಸುತ್ತದೆ.

c) ದೀರ್ಘಾವಧಿ ಹೆಚ್ಚಳ: ಮೇಲೆ ಸೂಚಿಸಿದ ನೈಜ ವರಾನವು ದೀರ್ಘಾವಧಿಯವರೆಗೆ ಅಂದರೆ 10 ವರ್ಷಗಳು ಅಥವಾ ಅದಕ್ಕಿಂತ ಅಧಿಕ ಅವಧಿಯವರೆಗೆ ಹೆಚ್ಚಳವಾಗಬೇಕು ಅಲ್ಲಾವಧಿಯ ಹೆಚ್ಚಳಗಳು ಅಭಿವೃದ್ಧಿಯೆಂದು ಪರಿಗಣಿತವಾಗುವುದಿಲ್ಲ. ಈ ಮೊದಲು ತಿಳಿಸಿದ ಬೇಡಿಕೆಯ ಸಂರಚನೆ ಮತ್ತು ಉತ್ಪಾದನಾಂಗಗಳ ಪೂರೈಕೆಗಳಲ್ಲಿನ ಬದಲಾವಣೆಯು ನಿರಂತರ ಪ್ರತಿಕ್ರಿಯೆ ಆದಾಗ ಮಾತ್ರ ಅಭಿವೃದ್ಧಿಯು ದೀರ್ಘಾವಧಿಯದ್ದಾಗಿರುತ್ತದೆ.

ಪ್ರೊ ಕೋಲಿನ್ ಕ್ಲಾರ್ಕ ಅವರು ಆರ್ಥಿಕ ಅಭಿವೃದ್ಧಿಯು ಜನರ ಆರ್ಥಿಕ ಕಲ್ಯಾಣದ ಹೆಚ್ಚಳವೆಂದು ವಿವರಿಸುತ್ತಾರೆ. ಆದರೆ ಆರ್ಥಿಕ ಕಲ್ಯಾಣವ ಜನರು ಬಳಸುವ ಸರಕು – ಸೇವೆಗಳ ಮೊತ್ತವೇ ಆಗಿರುತ್ತದೆ. ಆರ್ಥಿಕ ಕಲ್ಯಾಣದ ಹೆಚ್ಚಳವು ಇನ್ನೊಂದು ಅರ್ಥದಲ್ಲಿ ಬಡತನದಂತಹ ಸಮಸ್ಯೆಗಳು ಕಡಿಮೆಯಾಗುವುದನ್ನು ಸೂಚಿಸುವುದರಿಂದ ಅಭಿವೃದ್ಧಿಯನ್ನು ದೀರ್ಘಾವಧಿಯವರೆಗೆ ನಿರಂತರವಾಗಿ, ಬಡತನದ ಪ್ರಮಾಣ ಕಡಿಮೆ ಮಾಡಿ, ಒಂದು ರಾಷ್ಟ್ರವನ್ನು ಸಹೋದಕ ಬೆಳವಣಿಗೆಯೆಡೆಗೆ ಕೊಂಡೊಯ್ಯುವ ಪ್ರಕ್ರಿಯೆ ಎಂದು ವ್ಯಾಖ್ಯಾನಿಸಬಹುದು.

ಆದರೆ ಕಾಲಾಂತರದಲ್ಲಿ ಅಭಿವೃದ್ಧಿಯ ಉದ್ದೇಶಗಳು ಎಸ್ತತಗೊಂಡಿದ್ದು, ಈಗ ನಾವು ಪ್ರತಿಯೊಬ್ಬರಿಗೂ ಪ್ರಯೋಜನ ದೊರಟವಂಥ ಒಳಗೊಳ್ಳುವ ಅಭಿವೃದ್ಧಿ’ಯಲ್ಲದೇ, ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ಪರಿಸರವನ್ನು ಮುಂದಿನ ಪೀಳಗೆಯವರಿಗಾಗಿಯೇ ಸಂರಕ್ಷಿಸಿ ಪ್ರಯೋಜನ ನೀಡುವಂಥ ‘ನಿರಂತರ ಅಭಿವೃದ್ಧಿ’ಯ ಕುರಿತಾಗಿ ಮಾತನಾಡುತ್ತಿದ್ದೇವೆ. ಆದ್ದರಿಂದ ಅಭಿವೃದ್ಧಿಯ ಉದ್ದೇಶಗಳು: ವರಮಾನದ ಹೆಚ್ಚಳ: ಬಡತನ, ನಿರುದ್ಯೋಗ ಮತ್ತು ಅಸಮಾನತೆಗಳಲ್ಲಿ ಇಳಕೆ, ಪರಿಸರದ ಸಂರಕ್ಷಣೆಯಲ್ಲದೇ ಎಲ್ಲ ಜನರ ಕಲ್ಯಾಣವನ್ನು ಹೆಚ್ಚಿಸುವುದು, ಒಂದು ಹೇಳಬಹುದು.

ಪ್ರಥಮ ಹಂತದಲ್ಲಿ ಅಮೇರಿಕ, ಕೆನಡಾ, ಜಪಾನ್, ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯ, ಪಶ್ಚಿಮ ಯುರೋಪ್‌ನ ರಾಷ್ಟ್ರಗಳು: 1950ರ ನಂತರದಲ್ಲಿ ಸಿಂಗರ, ಹಾಂಗ್‌ಕಾಂಗ್‌, ಮಲೇಷ್ಯಾ, ಚೀನ ಹಾಗೂ ಇನ್ನೂ ಹಲವು ರಾಷ್ಟ್ರಗಳ ವರಮಾನವು ದೀರ್ಘಾವಧಿ ಏರಿಕೆ ಕಂಡಿದ್ದರಿಂದ ಅವುಗಳನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳೆಂದು ವರ್ಗೀಕರಿಸಲಾಗಿದೆ.

ಅನಾಭಿವೃದ್ಧಿ: ಅನಾಭಿವೃದ್ಧಿ’ ಎಂಬ ತಬ್ಬವು ಹಿಂದುಳಿದ, ಅಭಿವೃದ್ಧಿ ಹೊಂದದೇ ಇರುವ ನಿಶ್ಚಲ ಸ್ಥಿತಿಯನ್ನು ಸೂಚಿಸುತ್ತದೆ. ಇಂಥ ದೇಶಗಳಲ್ಲಿ ಒಟ್ಟಾರೆ ಉತ್ಪಾದನೆ ಕಡಿಮೆಯಿದ್ದು, ಜನಸಂಖ್ಯೆ ಅಪಾರವಾಗಿರುವುದರಿಂದ ತಲಾ ವರಮಾನವು ಬಹಳ ಕಡಿಮೆ ಇರುತ್ತದೆ. ಸಂಯುಕ್ತ ರಾಷ್ಟ್ರದ ಪ್ರಕಾರ ಆಮೇರಿಕ, ಕೆನಡಾ, ಆಸ್ಟ್ರೇಲಿಯ ಮತ್ತು ಪಶ್ಚಿಮ ಯುರೋಪ್‌ನ ರಾಷ್ಟ್ರಗಳಿಗಿಂತ ಕಡಿಮೆ ನೈಜ ತಲಾ ವರಮಾನ ಹೊಂದಿರುವ ರಾಷ್ಟ್ರಗಳೇ ಅನಾಭಿವೃದ್ಧಿ ರಾಷ್ಟ್ರಗಳು", ಇಲ್ಲಿ ಮುಂದುವರೆದ ರಾಷ್ಟ್ರಗಳಿಗೆ ಹೋಲಿಸಿದಂತೆ ತಲಾ ವರಮಾನ ಕಡಿಮೆ ಇರುವುದೇ ಅನಾಭಿವೃದ್ಧಿಯಾಗಿದೆ. ಆದರೆ ಈ ರಾಷ್ಟ್ರಗಳು ಅಭಿವೃದ್ಧಿ ಹೊಂದುವ ಸಾಮರ್ಥ್ಯವನ್ನು ಮತ್ತು ಆ ದೆಸೆಯಲ್ಲಿ ಅವುಗಳ ಪ್ರಯತ್ನಗಳನ್ನು ಗಮನಿಸಿ ಅವುಗಳನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು' ಎಂದು ಕರೆಯಲಾಗುತ್ತಿದೆ.

ವಿಶ್ವ ಬ್ಯಾಂಕು ತನ್ನ 'ಜಾಗತಿಕ ಅಭಿವೃದ್ಧಿ ವರದಿಗಳಲ್ಲಿ ರಾಷ್ಟ್ರಗಳನ್ನು ಅಧಿಕ, ಮಧ್ಯಮ ಮತ್ತು ಕಡಿಮೆ ವರಮಾನ ಹೊಂದಿದ ರಾಷ್ಟ್ರಗಳೆಂದು ವರ್ಗೀಕರಿಸಿ, ಮಧ್ಯಮ ಮತ್ತು ಕಡಿಮೆ ವರಮಾನ ಹೊಂದಿದ ರಾಷ್ಟ್ರಗಳನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೆಂದು ಕರೆಯುತ್ತದೆ. ಭಾರತದ ಅಭಿವೃದ್ಧಿ ಹೊಂದುತ್ತಿರುವ ಒಂದು ಮುಂಚೂಣಿ ರಾಷ್ಟ್ರವಾಗಿದ್ದು, 1990ರ ನಂತರದಲ್ಲಿ ವರಮಾನದಲ್ಲಿ ಗಣನೀಯ ಹೆಚ್ಚಳವನ್ನು ಸಾಧಿಸಿದೆ. 2. ಅಭಿವೃದ್ಧಿಯ ಸೂಚಿಗಳು

ಆರ್ಥಿಕ ಅಭಿವೃದ್ಧಿಯ ಮಾಪನ ಹೇಗೆ? ಹಲವು ಅರ್ಥ ಶಾಸ್ತ್ರಜ್ಞರು ವರಮಾನವನ್ನು ಒಂದು ಪ್ರಮುಖ ಮಾನದಂಡವಾಗಿ ಬಳಸಿದ್ದರೆ, ಇನ್ನೂ ಹಲವರು ಆದಾಯತರ ಮಾನದಂಡಗಳನ್ನು ಬಳಸುತ್ತಾರೆ,

ದರದಾನ ಸೂಚಿಗಳು: ಇಲ್ಲಿ ಬಳಸುವ ವರಮಾನವು, ರಾಷ್ಟ್ರೀಯ ವರಮಾನವಾಗಿದ್ದು, ಇದು ಈ ಮೊದಲೇ ತಿಳಿಸಿದ ಹಾಗೆ ರಾಷ್ಟ್ರದಲ್ಲಿ ವಾಸವಾಗಿರುವ ಎಲ್ಲ ಜನರ ಒಟ್ಟು ವರಮಾನವಾಗಿದೆ. ವರಮಾನ ಹೆಚ್ಚಾದಂತೆ ಅಭಿವೃದ್ಧಿಯ ಮಟ್ಟ ಕೂಡ ಹೆಚ್ಚಾಗುತ್ತದೆ, ಆದರೆ ರಾಷ್ಟ್ರೀಯ ವರಮಾನದ ಜೊತೆ ಜೊತೆಗೆ ಜನಸಂಖ್ಯೆಯ ಹೆಚ್ಚಳವೂ ಕಂಡು ಬಂದರೆ ಅದು ಆರ್ಥಿಕ ಪ್ರಗತಿಯ ವಾಸ್ತವ ಚಿತ್ರಣ ನೀಡುವುದಿಲ್ಲ, ಆದ್ದರಿಂದ ವಿಭಿನ್ನ ವರಮಾನ ಮತ್ತು ಜನಸಂಖ್ಯೆಗಳು ರಾಷ್ಟ್ರಗಳ ಅಭಿವೃದ್ಧಿಯ ಹೋಲಿಕೆ ಮಾಡುವುದಕ್ಕೆ ರಾಷ್ಟ್ರೀಯ ವರಮಾನವು ಸೂಕ್ತವಾಗುವದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ತಲಾ ವರಮಾನವನ್ನು ಅಭಿವೃದ್ಧಿಯ ಮಾನದಂಡವಾಗಿ ಸಾಮಾನ್ಯವಾಗಿ ಬಳಸಲಾಗುತ್ತದೆ. ತಲಾ ವರಮಾನವು ಒಂದು ದೇಶದ ಜನರ ಸರಾಸರಿ ವರಮಾನವಾಗಿದ್ದು, ರಾಷ್ಟ್ರೀಯ ವರಮಾನವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ದೊರಕುವ ಅಂಕಿಯಾಗಿದೆ.


ನಿಮಗಿದು ತಿಳಿದರಲಿ:

2016 ರಲ್ಲಿ ಭಾರತದ ತಲಾ ವರಮಾನವನ್ನು ರೂ. 1,21,693 ಎಂದು ಲೆಕ್ಕ ಹಾಕಲಾಗಿದ್ದು, ಅದು ಜಾಗತಿಕ ಸರಾಸು ವರಮಾನದ ಶೇ.15ರಷ್ಟಿದೆ. ಆ ವರ್ಷದ ಒಟ್ಟು ವರಮಾನವಾದ ರೂ. 1.47,46,557 ಕೋಟಿಗಳನ್ನು, 1215 ಕೋಟಿ ಜನಸಂಖ್ಯೆಯಿಂದ ಭಾಗಿಸಿದಾಗ ಬಂದಂಥ ಸಂಖ್ಯೆ ಇದಾಗಿದೆ. ರಾಷ್ಟ್ರೀಯ ವರಮಾನದಲ್ಲಿ ಏಳನೆಯ ಸ್ಥಾನದಲ್ಲಿರುವ ಭಾರತವು, ತಲಾ ವರಮಾನದಲ್ಲಿ 143ನೆಯ ಸ್ಥಾನದಲ್ಲಿದೆ.


ತಲಾ ವರಮಾನವು ಒಂದು ಬಹು ಜನಪ್ರಿಯ ಮಾನದಂಡವಾಗಿದ್ದರೂ, ಅದು ಜನರ ನಡುವಿನ ವರಮಾನ ಹಂಚಿಕೆಯನ್ನು ಅದು ತೋರಿಸುವುದಿಲ್ಲ. ಅಲ್ಲದೆ ಅದು ಆಹಾರ, ವಸತಿ, ಶಿಕ್ಷಣ, ಆರೋಗ್ಯ ಮತ್ತು ಇತರ ಸಾಮಾಜಿಕ ಅಂಶಗಳ ಲಭ್ಯತೆಯನ್ನು ಪರಿಗಣಿಸುವುದಿಲ್ಲ. ಆದ್ದರಿಂದ ಆರ್ಥಿಕ ಅಭಿವೃದ್ಧಿಯನ್ನು ಸೂಕ್ತವಾಗಿ ಅಳೆಯಬಹುದಾದಂಥ 'ಪರ್ಯಾಯ ಮಾಪನಗಳ ರಚನೆಗೆ ತಜ್ಞರು ಪ್ರಯತ್ನಿಸಿದ್ದು, ಮಾನವ ಅಭಿವೃದ್ಧಿ ಸೂಚ್ಯಂಕ ಅವುಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ.

3. ಮಾನವ ಅಭಿವೃದ್ಧಿ ಸೂಚಿಗಳು ಆರ್ಥಿಕ ಪ್ರಗತಿಯ ಮುಖ್ಯ ಉದ್ದೇಶವು ಜನರ ಕಲ್ಯಾಣವನ್ನು ಹೆಚ್ಚಿಸುವುದಾಗಿದೆ ಎಂಬ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅಭಿವೃದ್ಧಿಯು ಜನರಿಗೆ ಘನತೆಯುತ ಜೀವನ ನಡೆಸಲು ಸಹಾಯ ಮಾಡಬೇಕು. ಅದು ಕನಿಷ್ಠ ಅವಶ್ಯಕತೆಗಳಾದ ಆಹಾರ, ವಸತಿ, ಬಟ್ಟೆ, ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ, ಶುದ್ಧ ಕುಡಿಯುವ ನೀರು, ಶುದ್ಧ ಗಾಳಿ ಮತ್ತು ಸ್ವಚ್ಛ ಪರಿಸರ ಒದಗಿಸುವಿಕೆಯನ್ನು ಸೂಚಿಸುತ್ತದೆ. ಕೇವಲ ವರಮಾನದ ಹೆಚ್ಚಳದಿಂದ ಮಾತ್ರ ಇವುಗಳೆಲ್ಲವೂ ಸಾಧ್ಯವಾಗದಿರಬಹುದು.

ಅಮಾರ್ತ್ಯ ಸನ್ ಅವರ ಚಿಂತನೆಗಳನ್ನು ಬಳಸಿಕೊಂಡು ಪಾಕಿಸ್ತಾನದ ಅರ್ಥಶಾಸ್ತ್ರಜ್ಞರಾದ ಮಹಬೂಬ್ ಉಲ್ ಹಕ್ ಅವರು ಮಾನವರು ಘನತೆಯುತ ಜೀವನ ನಡೆಸಲು ಬೇಕಾಗಿರುವ ಅತ್ಯಂತ ಮಹತ್ವದ ಅಂಶಗಳನ್ನು ಸುದೀರ್ಘವಾದ ಆರೋಗ್ಯಯುತ ಜೀವನ ನಡೆಸುವುದು, ಜ್ಞಾನವಂತರಾಗಿರುವುದು ಮತ್ತು ಜೀವನಕ್ಕೆ ಅವಶ್ಯವಿರುವ ಕನಿಷ್ಠ ಸೌಲಭ್ಯಗಳನ್ನು ಖರೀದಿಸಲು ಅವಶ್ಯವಿರುವ ವರಮಾನದ ಪ್ರಮಾಣ ಹೊಂದುವುದು ಎಂದು ತಿಳಿಸುತ್ತಾರೆ. ಇದನ್ನೇ ಅಮರ್ತ್ಯ ಸನ್ ಅವರು ಮಾನವ ಅಭಿವೃದ್ಧಿ ಎಂದು ಕರೆದಿದ್ದಾರೆ. ಅವರ ಪ್ರಕಾರ ಮಾನವನ ಸಾಮರ್ಥ್ಯಗಳನ್ನು ವಿಸ್ತರಿಸುವ ಪ್ರಕ್ರಿಯೆಯೇ ಮಾನವ ಅಭಿವೃದ್ಧಿಯಾಗಿದೆ. ಮಾನವರು ಬಯಸುವ ಪ್ರಮುಖ ಸಾಮರ್ಥ್ಯಗಳೆಂದರೆ ಆರೋಗ್ಯ, ಶಿಕ್ಷಣ ಮತ್ತು ವರಮಾನ, ಹಾಗಾದರೆ ಮಾನವ ಅಭಿವೃದ್ಧಿಯನ್ನು ಅಳೆಯುವುದು ಹೇಗೆ?

ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ವಿಭಾಗವು ಈ ಚಿಂತನೆಗಳನ್ನು ಬಳಸಿಕೊಂಡು ‘ಮಾನವ ಅಭಿವೃದ್ಧಿ ಸೂಚ್ಯಂಕ’ ಎಂಬ ಹೊಸ ಮಾನದಂಡವನ್ನು ರಚಿಸಿ, ರಾಷ್ಟ್ರಗಳ ಪ್ರಗತಿಯನ್ನು ಮಾಪನ ಮಾಡುತ್ತಿದೆ. ಪ್ರಮುಖ ಸಾಮರ್ಥ್ಯಗಳನ್ನು ಅಳೆಯಬಹುದಾದ ಸೂಜೆಗಳನ್ನು ಬಳಸಿ, ಮಾನವ ಅಭಿವೃದ್ಧಿ ಸೂಚ್ಯಂಕವನ್ನು ರಚಿಸಲಾಗಿದೆ. ಆರೋಗ್ಯವನ್ನು ವ್ಯಕ್ತಿಗಳ ಜೀವಿತಾವಧಿ, ಶಿಕ್ಷಣವನ್ನು ಸಾಕ್ಷರತೆಯ ಪ್ರಮಾಣ, ಹಾಗೂ ಖರೀದಿ ಶಕ್ತಿಯನ್ನು ತಲಾ ವರಮಾನ ಅಳೆಯಲಾಗುತ್ತಿದೆ.

ನಿರೀಕ್ಷಿತ ಜೀವಿತಾವಧಿಯು ಒಂದು ದೇಶದಲ್ಲಿರುವ ಜನರು ಜೀವಿಸುವ ಸರಾಸರಿ ಆಯಸ್ಸು ಆಗಿದೆ. ಪೌಷ್ಠಿಕ ಆಹಾರ, ಆರೋಗ್ಯ ಮತ್ತು ನೈರ್ಮಲ್ಯ ಸ್ವಚ್ಛ ಪರಿಸರ ಮುಂತಾದವುಗಳ ಲಭ್ಯತೆಯು ನಿರೀಕ್ಷಿತ ಜೀವಿತಾವಧಿಯನ್ನು ನಿರ್ಧರಿಸುತ್ತವೆ. ಶಿಕ್ಷಣದ ಮಟ್ಟವು ರಾಷ್ಟ್ರದ ಪ್ರಗತಿಗೆ ಪೂರಕವಾಗಿದ್ದು, ರಾಜ್ಯದ ಶಿಕ್ಷಣದ ಸಾಧನೆಯನ್ನು 25 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಪೂರ್ಣಗೊಳಿಸಿದ ಶಿಕ್ಷಣದ ಅವಧಿ ಹಾಗೂ 5 ವರ್ಷದ ಮಕ್ಕಳು ಪಡೆಯಬಹುದಾದ ಶಿಕ್ಷಣದ ಅವಧಿಯನ್ನು ಬಳಸಿ ಮಾಪನ ಮಾಡಲಾಗುತ್ತದೆ.ಇದೇ ರೀತಿ ತಲಃ ವರಮಾನ ಬಳಸಿ ಜೀವನ ಮಟ್ಟವನ್ನು ಅಳೆಯಲಾಗುತ್ತದೆ. ಈ ಮೂರು ಸೂಚಿಗಳ ಸರಾಸರಿಯೇ ಮಾನವ ಅಭಿವೃದ್ಧಿ ಸೂಚ್ಯಂಕವಾಗಿದೆ.

ಹೀಗೆ ಲೆಕ್ಕ ಹಾಕಲಾದ ಸೂಚ್ಯಂಕವನ್ನು ಬಳಸಿಕೊಂಡು, ನೀವು ಪ್ರತಿಯೊಂದು ಸೂಚಿಯ ಪ್ರಗತಿಯನ್ನಲ್ಲದೇ, ಒಟ್ಟಾರೆ ಸೂಚ್ಯಂಕದ ಪ್ರಗತಿಯನ್ನೂ ಅಳೆಯಬಹುದಾಗಿದ್ದು, ರಾಷ್ಟ್ರಗಳ ನಡುವಿನ ಮಾನವ ಅಭಿವೃದ್ಧಿಯ ಪ್ರಗತಿಯ ತುಲನೆ ಮಾಡಬಹುದು. 2014ರಲ್ಲಿ, ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕವು 0.586ರಷ್ಟಿದ್ದಿತು ಹಾಗೂ ಲೆಕ್ಕ ಹಾಕಲಾದ 187 ರಾಷ್ಟ್ರಗಳ ಪೈಕಿ 135ನೇಯ ಸ್ಥಾನ ಪಡೆದಿತ್ತು. ಭಾರತವು UNDP ಯ ವರ್ಗೀಕರಣದ ಅನುಸಾರ ಮಧ್ಯಮ ಮಟ್ಟದ ಮಾನವ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಮೂಹದಲ್ಲಿ ಬರುತ್ತದೆ.



ಚಿತ್ರದಲ್ಲಿ ತೋರಿಸಿದಂತೆ 2012ರಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕವು 0.554 ಇದ್ದು, 186 ರಾಷ್ಟ್ರಗಳ ಪೈಕಿ 136ನೆಯ ಸ್ಥಾನವನ್ನು ಪಡೆದಿತ್ತು. ಸೂಚ್ಯಂಕದ ಈ 0.554 ಮೌಲ್ಯವು 65.8 ವರ್ಷಗಳ ನಿರೀಕ್ಷಿತ ಜೀವಿತಾವಧಿ; 44 ವರ್ಷಗಳ ಸರಾಸರಿ ಶಾಲಾ ಕಲಿಕೆಯ ಅವಧಿ; ಹಾಗೂ $3203 ತಲಾ ವರಮಾನದ ಸರಾಸರಿ ಫಲಿತವಾಗಿದೆ. 1980 ಹಾಗೂ 2012ರ ಅವಧಿಯಲ್ಲಿ, ಮಾನವ ಅಭಿವೃದ್ಧಿಯ ಎಲ್ಲ ಅಂಶಗಳು ಸುಧಾರಣೆ ಹೊಂದಿದ್ದು, ಭಾರತದ ಒಟ್ಟಾರೆ ಮಾನವ ಅಭಿವೃದ್ಧಿ ಸೂಚ್ಯಂಕವು 0.334ರಿಂದ 0.554ಕ್ಕೆ ಏರಿಕೆಯಾಗಿದೆ. ಆದರೆ, ಮೊದಲ ಹತ್ತು ರಾಷ್ಟ್ರಗಳ ಸಾಧನೆಯನ್ನು ಗಮನಿಸಿದಾಗ ಭಾರತ ಸಾಧಿಸಬೇಕಿರುವುದು ಇನ್ನೂ ಬಹಳಷ್ಟು ಇದೆ.

4. ಲಿಂಗ ಸಂಬಂಧಿ ಅಭಿವೃದ್ಧಿ

ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಹಿಳೆಯ ಪಾತ್ರ ಅತ್ಯಂತ ಮಹತ್ವವಾದುದು. ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರು ಅರ್ಥವ್ಯವಸ್ಥೆಯ ಎಲ್ಲ ಕ್ಷೇತ್ರಗಳಲ್ಲಿ ದುಡಿಯುವ ಸಾಮರ್ಥ್ಯವನ್ನು ಪಡೆದಿದ್ದಾರೆ. ಅವರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸಮಾನತೆಯನ್ನು ಒದಗಿಸಿಕೊಡಬೇಕಾದುದು ನಾಗರಿಕ ಸಮಾಜದ ಕರ್ತವ್ಯವಾಗಿದೆ. ಭಾರತದ ಸಂವಿಧಾನವು ಮಹಿಳೆಯರಿಗೆ ಪುರುಷರಷ್ಟೇ ಸ್ವಾತಂತ್ರ್ಯ, ಸಮಾನತೆ ಮತ್ತು ಅವಕಾಶಗಳನ್ನು ನೀಡಿದೆ. ಆದರೆ ಮಹಿಳೆಯರ ವಿರುದ್ಧದ ಇನ್ನೂ ಹಲವಾರು ತಾರತಮ್ಯಗಳನ್ನಲ್ಲದೇ, ಹಿಂಸೆಯ ಘಟನೆಗಳು ಮೇಲಿಂದ ಮೇಲೆ ವರದಿಯಾಗುವುದನ್ನು ಗಮನಿಸಿದ್ದೇವೆ. ಮಹಿಳೆಯರು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿಯಲ್ಲಿ ಸಮಾನ ಪಾಲುದಾರರಾಗಿಲ್ಲ, ಆದ್ದರಿಂದ ಸದ್ಧ ಇರುವ

ಲಿಂಗ

ತಾರತಮ್ಯತೆಗಳನ್ನು ಕಡಿಮೆ ಮಾಡುವ ಕ್ರಮ ಕೈಗೊಳ್ಳಬೇಕಾಗಿದೆ. ಭಾರತದಲ್ಲಿ ಸದ ಇರುವ ಲಿಂಗ ತಾರತಮ್ಯಗಳ ಹಲವು ಆಯಾಮಗಳನ್ನು ನಾವು ಗಮನಿಸಬಹುದು. ಪ್ರತಿ 1000 ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆಯನ್ನು ಲಿಂಗ ಅನುಪಾತವೆಂದು ಕರೆಯಲಾಗಿದ್ದು, ಅದು ಸ್ಕೂಲವಾಗಿ ಒಂದು ಸಮಾಜದಲ್ಲಿ ಮಹಿಳೆಯರ ಸ್ಥಾನಮಾನವನ್ನು ಬಿಂಬಿಸುತ್ತದೆ. ನಮ್ಮ ದೇಶದಲ್ಲಿನ ಒಟ್ಟಾರೆ ಮಹಿಳೆಯರ ವಿರುದ್ಧದ ತಾರತಮ್ಯದ ಕಾರಣವಾಗಿ, 2015 ಜನಗತಿಯ ಅನುಸಾರ, ಈ ಲಿಂಗ ಅನುಪಾತವು ಕೇವಲ 945 ಇದ್ದದ್ದು ಆಘಾತಕಾರಿ, ಇನ್ನೂ ಹೆಚ್ಚಿನ ಆಘಾತಕಾರಿ ಅಂಶವೆಂದರೆ ಮಕ್ಕಳ (0-6 ವರ್ಷ) ಲಿಂಗ ಅನುಪಾತವು ಇದಕ್ಕಿಂತಲೂ ಕಡಿಮೆ ಇರುವುದು,

ಅದೇ ರೀತಿ 2011ರ ಜನಗಣತಿಯ ಪ್ರಕಾರ ವಾಹಿಳೆಯರ ಸಾಕ್ಷರತಾ ದರವು ಶೇ. 65.46 ಇದ್ದರೆ, ಪುರುಷರ ಸಾಕ್ಷರತಾ ದರವು ಶೇ. 82.14 ಇದ್ದಿತು, ಇಂದಿಗೂ ಸಹ ಕೆಲವು ಜನರು ಮಹಿಳೆಗೆ ಶಿಕ್ಷಣ ಅವಶ್ಯವಿಲ್ಲವೆಂದು ನಂಬುವುದರಿಂದ ಹಾಗೂ ಇನ್ನೂ ಹಲವೆಡೆ ಮಹಿಳೆಯರ ಶಿಕ್ಷಣಕ್ಕೆ ಸೂಕ್ತ ಸೌಲಭ್ಯಗಳು ಇರದಿರುವುದರಿಂದ ಈ ತಾರತಮ್ಯವು ಮುಂದುವರೆದಿದೆ. ಇನ್ನು ಮಹಿಳೆಯರ ಉದ್ಯೋಗದ ಪರಿಸ್ಥಿತಿಗಳನ್ನು ಗಮನಿಸಿದರೆ, ಅವರು ಪ್ರಮುಖವಾಗಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದು (ಕೃಷಿ, ಕಟ್ಟಡನಿರ್ಮಾಣ ಸಣ್ಣ ಉಪ್ಪಮಗಳು, ಗೃಹ ಕೈಗಾರಿಕೆಗಳು, ಇತ್ಯಾದಿ) ಅವಳಿಗೆ ಪುರುಷರಿಗಿಂತ ಕಡಿಮೆ ಪ್ರಮಾಣದ ಕೂಲಿ ನೀಡಲಾಗುತ್ತದೆ. ಮೇಲಾಗಿ ಅವರು ಸಂಪಾದಿಸಿದ ಹಣವನ್ನು ಖರ್ಚು ಮಾಡುವ ಸ್ವಾತಂತ್ರ್ಯವೂ ಅವರಿಗೆ ಇಲ್ಲ, ಅಲ್ಪ ಶಿಕ್ಷಣದ ಕಾರಣದಿಂದಾಗಿ ಮಹಿಳೆಯರು ಉತ್ತಮ ಹುದ್ದೆಗಳಲ್ಲಿ ಮತ್ತು ಅಧಿಕ ಸಂಬಳವಿರುವ ಉದ್ಯೋಗಗಳಲ್ಲಿ ಇರುವುದು ಅಪರೂಪ,

ಬಹಳಷ್ಟು ಮನೆಗಳಲ್ಲಿ ಮಹಿಳೆಯರು ಊಟದ ಪಾಳಿಯು ಕೊನೆಯದಾಗಿದ್ದು, ಗಂಡ ಹಾಗೂ ಮಕ್ಕಳು ಊಟ ಮಾಡಿದ ನಂತರ ಮಿಕ್ಕಿದ ಅಡುಗೆಯನ್ನು ಅವರು ಊಟ ಮಾಡಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಅವಳು ಅಪೌಷ್ಠಿಕತೆಗೆ ತುತ್ತಾಗಿ ಹಲವಾರು ರೋಗಗಳಿಗೂ ಬೇಡಾಗುತ್ತಾಳೆ. ಒಂದೆಡೆ ಅಪೌಷ್ಠಿಕತೆ, ಮತ್ತೊಂದೆಡೆ ಅಧಿಕ ಕೆಲಸದ ಒತ್ತಡದಿಂದ ಅವಳು ಅನಾರೋಗ್ಯಕ್ಕೆ ಒಳಗಾದರೂ ಪುರುಷರು ಅದನ್ನು ನಿರ್ಲಕ್ಷಿಸುವುದೇ ಹೆಚ್ಚು. ಅದರಲ್ಲೂ ಗರ್ಭಿಣಿಯರ ಆರೋಗ್ಯವು ಕಟ್ಟರೆ, ಅದು ಹುಟ್ಟುವ ಮಕ್ಕಳ ಆರೋಗ್ಯವನ್ನೂ ಬಾಧಿಸುತ್ತದೆ. ಈ ಕಾರಣಗಳಿಂದಾಗಿ ಭಾರತದಲ್ಲಿ ತಾಯಂದಿರ ಮರಣ (ಗರ್ಭಿಣಿಯಾಗಿದ್ದಾಗ ಮತ್ತು ಹೆರಿಗೆ ಸಮಯದಲ್ಲಿ), ಶಿಶುಗಳ ಮಾರಣ (ಒಂದು ವರ್ಷದ ಒಳಗಿನವರು) ಮತ್ತು ಮಕ್ಕಳ ಮರಣ (ಐದು ವರ್ಷ ಒಳಗಿನವರು) ಪ್ರಮಾಣ ಅಧಿಕವಾಗಿರುತ್ತದೆ. ತಾಯಿಯ ಗರ್ಭದಲ್ಲಿರುವಾಗಲೇ ಹೆಣ್ಣು ಭ್ರಗಳನ್ನು ಪತ್ತೆಹಚ್ಚಿ, ಪತ್ತೆ ಮಾಡುವ ಕೆಟ್ಟ ಪರಂಪರೆ ಬೆಳೆಯುತ್ತಿದೆ. ಇದರಿಂದ ಲಿಂಗಾನುಪಾತ ಕುಸಿಯುತ್ತಿದೆ.

ರಾಜಕೀಯ ಸಂಸ್ಥೆಗಳಲ್ಲಿ (ಪಂಚಾಯತಿಗಳು, ಪೌರಸಂಸ್ಥೆಗಳು) ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಾಗಿರಿಸಿದ್ದರೂ ಅವರ ಇರುವಿಕೆಯು ಹಲವು ಸಾರಿ ಅವಗಣನೆಗೆ ಒಳಗಾದರೆ, ಅವರ ಧ್ವನಿಯನ್ನು ಇನ್ನೂ ಹಲವು ಸಾರಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಹೀಗಾಗಿ ಲಿಂಗ ತಾರತಮ್ಯ ಮುಂದುವರೆದಿರುವುದನ್ನು ನಾವು ಕಾಣುತ್ತೇವೆ.

ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಿ ಅವರ ಸಬಲೀಕರಣವನ್ನು ಸಾಧಿಸಲು ಸ್ವಸಹಾಯ ಸಮೂಹಗಳನ್ನು ಸ್ಥಾಪಿಸಲಾಗಿದೆ. ಒಂದು ಸ್ವಸಹಾಯ ಸಮೂಹವು 20 ಸಮಾನ ಮನಸ್ಥ ಮಹಿಳೆಯರ ಒಂದು ಸಂಘವಾಗಿದ್ದು, ಸದಸ್ಯರು ತಮ್ಮಲ್ಲಿರುವ ಅಲ್ಪ ಪ್ರಮಾಣದ ಸಂಪನ್ಮೂಲಗಳನ್ನು ಕ್ರೋಢೀಕರಿಸಿ, ಬಾಹ್ಯ ಸಹಾಯವನ್ನು ಪಡೆದು, ವ್ಯವಹಾರ ಆರಂಭಿಸಿ, ವರಮಾನ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಲಕ್ಷ ನಿರ್ವಹಣೆ, ಬ್ಯಾಂಕಿನ ಜೊತೆ ವ್ಯವಹರಿಸುವುದಲ್ಲದೇ ವರಮಾನ ಸೃಷ್ಟಿಸುವಂಥ ಉದ್ಯೋಗಗಳ ಕುರಿತು ಅವರಿಗೆ ತರಬೇತಿಯನ್ನೂ ನೀಡಲಾಗುತ್ತದೆ. ಸ್ವಸಹಾಯ ಸಮೂಹಗಳು ಮಹಿಳೆಯರ ವರಮಾನ ಹಾಗೂ ಉಳಿತಾಯಗಳ ವೃದ್ಧಿಗೆ ಕಾರಣವಾಗಿವೆಯಲ್ಲದೇ, ಅವರು ತಮ್ಮ ಇಚ್ಛಾನುಸಾರ ಖರ್ಚು ಮಾಡುವುದಕ್ಕೂ ಅನುವು ಮಾಡಿಕೊಟ್ಟಿವೆ. ಇದರಿಂದಾಗಿ ಮಹಿಳೆಯರ ಘನತೆ ಹಾಗೂ ಸ್ವಾಯತ್ತತೆ ಹೆಚ್ಚಿದೆ, ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಬಲೀಕರಣವನ್ನು ಈ ಹಿಂದೆ ಅವರಿಗೆ ನಿರಾಕರಿಸಲಾದ ಜೀವನದ ಮಹತ್ವದ ಆಯ್ಕೆಗಳನ್ನು ಮಾಡುವ ಸಾಮರ್ಥ್ಯವನ್ನು ವಿಸ್ತರಿಸುವ ಪ್ರಕ್ರಿಯೆ ಎಂದು ವ್ಯಾಖ್ಯಾನಿಸಬಹುದು, ಅದು ಜನರಲ್ಲಿ ಶಕ್ತಿ ತುಂಬುವ ಒಂದು ಪ್ರಕ್ರಿಯೆ ಎಂದು ಸಹ ವ್ಯಾಖ್ಯಾನಿಸಬಹುದು. ಮಹಿಳೆಯರ ವಿರುದ್ಧದ ಹಿಂಸೆಯನ್ನು ತಡೆಗಟ್ಟಲು ಹಲವಾರು ಕಾನೂನುಗಳನ್ನು ಜಾರಿಗೊಳಿಸಿ, ಸಮಾನ ವೇತನ, ಚುನಾಯಿತ ಸಂಸ್ಥೆಗಳಲ್ಲಿ ಮೀಸಲಾತಿಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇವುಗಳು ಮಹಿಳೆಯರನ್ನು ಅಭಿವೃದ್ಧಿಯ ವಾಹಿನಿಗೆ ತರುವಲ್ಲಿ ಖಂಡಿತವಾಗಿ ಸಹಾಯ ಮಾಡಬಲ್ಲವು.

UNDPಯು ಲಿಂಗ ಅಸಮಾನತೆಯ ಸೂಚ್ಯಂಕವನ್ನೂ ಮಟ್ಟದಲ್ಲಿ ರಚಿಸುತ್ತದೆ. ಈ ಸೂಚ್ಯಂಕದ ಮೌಲ್ಯವು 0 ಹಾಗೂ 1ರ ಮಧ್ಯದಲ್ಲಿದ್ದು, ಸೊನ್ನೆಯ ಸಂಪೂರ್ಣ ಸಮಾನತೆ ಸೂಚಿಸಿದರೆ, ಒಂದು ಸಂಪೂರ್ಣ ಅಸಮಾನತೆ ಸೂಚಿಸುತ್ತದೆ. 2015ರಲ್ಲಿ ಭಾರತದ ಲಿಂಗ ಅಸಮಾನತಾ ಸೂಚ್ಯಂಕದ ಮೌಲ್ಯವು 0.563 ಇದ್ದು, 188 ರಾಷ್ಟ್ರಗಳ ಪೈಕಿ 130 ನೆಯ ಸ್ಥಾನ ಪಡೆದಿತ್ತು. ಇದರರ್ಥ ಲಿಂಗ ಸಮಾನತೆ ಮತ್ತು ಮಹಿಳಾ ಅಭಿವೃದ್ಧಿ ಕುರಿತಂತೆ ಭಾರತವು ಹೀನ ಸ್ಥಿತಿಯಲ್ಲಿದೆ ಎಂದು.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು