ಶ್ರಮವು ಒಂದು ಮಹತ್ವದ ಹಾಗೂ ಅನಿವಾರ್ಯ ಉತ್ಪಾದನಾಂಗವಾಗಿದೆ. ಅದು ಉತ್ಪಾದನಾ ಪ್ರಕ್ರಿಯೆಯಲ್ಲಿ ಮಾನವ ಅಂಶವಾಗಿದೆ. ಶ್ರಮವಿಲ್ಲದೇ ಯಾವುದೇ ತೆರನಾದ ಉತ್ಪಾದನೆಯು ಅಸಾಧ್ಯ. ಏಕೆಂದರೆ ಶ್ರಮವು ಮಾತ್ರ ಉತ್ಪಾದನೆಯ ಮೌಲ್ಯದಲ್ಲಿ ಗಣನೀಯ ಹೆಚ್ಚಳವನ್ನು ತರಬಲ್ಲುದಾಗಿದೆ.
ಶ್ರಮದ ಅರ್ಥ : ಮಾನವರು, ಸರಕು ಅಥವಾ ಸೇವೆಗಳ ಉತ್ಪಾದನೆಗಾಗಿ ಹಾಕುವ ಭೌತಿಕ ಅಥವಾ ಬೌದ್ಧಿಕ ಸಾಮರ್ಥ್ಯವನ್ನು ಶ್ರಮವೆಂದು ಕರೆಯಬಹುದು. ಬೌದ್ಧಿಕ ಅದು ಜೀವನೋಪಾಯ ಗಳಿಕೆಗಾಗಿ ಮಾನವರು ಮಾಡುವ ಎಲ್ಲ ಕಾರ್ಯಗಳನ್ನು ಒಳಗೊಂಡಿದೆ. ಅದು ಸರಕು ಅಥವಾ ಸೇವೆಗಳ ಉತ್ಪಾದನೆಯಲ್ಲಿ ಪರ್ಯಾವಸಾನಗೊಳ್ಳುತ್ತದೆ. ಆದರೆ ಸ್ವಸಂತೋಷಕ್ಕಾಗಿ ಅಥವಾ ಅನುಕಂಪದಿಂದ ಮಾಡಿದ ಕೆಲಸವನ್ನು ಶ್ರಮವೆಂದು ಪರಿಗಣಿಸಲಾಗುವುದಿಲ್ಲ. ತನ್ನ ಸೇವೆಗಳಿಗೆ ಸಂಬಳ ಪಡೆಯುವ ದಾದಿಯರ ಸೇವೆಯನ್ನು ಶ್ರಮ ಎಂದು ಪರಿಗಣಿಸಿದರೆ, ತನ್ನ ಅನಾರೋಗ್ಯಪೀಡಿತ ಮಗುವಿನ ಲಾಲನೆಗಾಗಿ ಮಾಡಿದ ಒಬ್ಬ ತಾಯಿಯ ಸೇವೆಯು ಶ್ರಮವೆಂದು ಪರಿಗಣಿತವಾಗುವುದಿಲ್ಲ. ಸರಕುಗಳ ಉತ್ಪಾದನೆ
ದೃಷ್ಟಿಯಿಂದ ದೇಹ ಮತ್ತು ಮನಸ್ಸು ಜೀವನೋಪಾಯ ಗಳಿಕೆಗಾಗಿ ಮಾನವರು ಮಾಡುವ ಎಲ್ಲ ಕೈಗೊಳ್ಳುವ ಯಾವುದೇ ಭಾಗಶಃ ಅಥವಾ ಸಂಪೂರ್ಣ ಪ್ರಯತ್ನವನ್ನು ಶ್ರಮ ಎಂದು ಉತ್ಪಾದನೆಯಲ್ಲಿ ಪರ್ಯಾವಸಾನಗೊಳ್ಳುತ್ತದೆ. ಕರೆಯುತ್ತಾರೆ. - ಆಲೈಡ್ ಮಾರ್ಷಲ್
ಶ್ರಮವು ಮಾನವನಿಗೆ ಸಂಬಂಧಿತವಾದ್ದರಿಂದ ಅದರದ್ದೇ ಆದ ಕೆಲವೊಂದು ವಿಶಿಷ್ಟ ಲಕ್ಷಣಗಳಿವೆ :
1. ಶ್ರಮವನ್ನು ಶ್ರಮಿಕನಿಂದ ಬೇರ್ಪಡಿಸಲು ಆಗುವುದಿಲ್ಲ.
2. ಶ್ರಮವನ್ನು ಸಂಗ್ರಹಿಸಿ ಇಡಲು ಆಗುವುದಿಲ್ಲ
3. ಶ್ರಮದ ಪೂರೈಕೆಯು ಕಾಲಾಂತರದಲ್ಲಿ ಬದಲಾಗುತ್ತದೆ
4. ಶ್ರಮದ ವಲಸೆಯ ಪ್ರಮಾಣವು ಕಡಿಮೆ
5. ಶ್ರಮವು ದಕ್ಷತೆಯಲ್ಲಿ ಭಿನ್ನತೆ ಹೊಂದಿದೆ
ಶ್ರಮದ ಮಹತ್ವ : ಶ್ರಮವು ಒಂದು ಉತ್ಪಾದಕ ಅಂಗವಾಗಿದ್ದು ಅದು ಇತರ ಉತ್ಪಾದನಾಂಗಗಳನ್ನೂ ಚುರುಕುಗೊಳಿಸಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ದೇಶದ ಶ್ರಮಶಕ್ತಿಯ ಪ್ರಮಾಣ ಮತ್ತು ಗುಣಮಟ್ಟ ಆ ದೇಶದ ಅಭಿವೃದ್ಧಿಯನ್ನು ತೀವ್ರಗೊಳಿಸುವಲ್ಲಿ ತುಂಬಾ ಮಹತ್ವದ್ದಾಗಿದೆ. ಶ್ರಮಶಕ್ತಿ ಹೆಚ್ಚಿಗೆ ಇದ್ದಷ್ಟೂ ಆ ದೇಶದ ಆರ್ಥಿಕ ಚಟುವಟಿಕೆಗಳ ಪ್ರಮಾಣ ಹಾಗೂ ಅಭಿವೃದ್ಧಿಯ ಮಟ್ಟ ಅಧಿಕವಾಗುತ್ತದೆ.
ಸಾಮಾನ್ಯವಾಗಿ ಶ್ರಮಶಕ್ತಿಯ ಗಾತ್ರವನ್ನು ಒಂದು ದೇಶದಲ್ಲಿರುವ 15ರಿಂದ 60 ವರ್ಷ ವಯೋಮಾನದವರ ಸಂಖ್ಯೆಯ ಆಧಾರದ ಮೇಲೆ ಅಳೆಯುತ್ತಾರೆ. ಹದಿನೈದು ವರ್ಷದ ಕೆಳಗಿನ ಮಕ್ಕಳನ್ನು ಹಾಗೂ ಅರುವತ್ತು ವರ್ಷ ಮೇಲ್ಪಟ್ಟ ಹಿರಿಯರನ್ನು ಶ್ರಮಿಕರೆಂದು ಪರಿಗಣಿಸುವುದಿಲ್ಲ. ಸದ್ಯ ಭಾರತವು 'ಜನಸಂಖ್ಯಾ ಲಾಭಾಂಶ'ವನ್ನು ಪಡೆಯುತ್ತಿರುವ ರಾಷ್ಟ್ರವೆಂದು ಹೇಳಲಾಗುತ್ತಿದೆ. ಯುವಕರ ಹಾಗೂ ಕೆಲಸ ಮಾಡಬಹುದಾದಂಥ ಜನರ ಸಂಖ್ಯೆಯು ಬೇರೆ ರಾಷ್ಟ್ರಗಳಿಗಿಂತ ಹೆಚ್ಚಿಗಿರುವುದರಿಂದ ದೇಶದ ಉತ್ಪಾದನಾ ಸಾಮರ್ಥ್ಯ ಅತಿ ಹೆಚ್ಚು ಎಂದು ನಂಬಲಾಗಿದೆ. ಭಾರತದಲ್ಲಿ ಶ್ರಮಶಕ್ತಿಯ ರಚನೆ
ಕಾರ್ಮಿಕರ ಅಥವಾ ಶ್ರಮಶಕ್ತಿಯ ಸಂರಚನೆಯನ್ನು ಅದರ ಗಾತ್ರ ಲಿಂಗ, ಚಟುವಟಿಕೆ ಮತ್ತು ವಲಯ ಆಧಾರಿತ ಹಂಚಿಕೆಯ ಮೂಲಕ ಅಧ್ಯಯನ ಮಾಡಬಹುದು, ಭಾರತದಲ್ಲಿ ಶ್ರಮಶಕ್ತಿ ಮತ್ತು ಕಾರ್ಮಿಕರ ಕುರಿತಾದ ಮಾಹಿತಿಯನ್ನು ಜನಗಣತಿ ಹಾಗೂ ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಘಟನೆಗಳು ಸಂಗ್ರಹಿಸುತ್ತವೆ.
1. ಶ್ರಮಶಕ್ತಿಯ ಗಾತ್ರ: 2011ರ ಜನಗಣತಿಯ ಅನುಸಾರ ಶೇ. 39,4ರಷ್ಟು ಜನರು ಕೆಲಸಗಾರರೆಂದು ಗುರುತಿಸಲ್ಪಟ್ಟಿದ್ದಾರೆ. ಇನ್ನುಳಿದ ಶೇ. 60ರಷ್ಟು ಜನರು ಕೆಲಸಗಾರರಲ್ಲದರ ಅವಲಂಬಿತ ಸ್ಥಿತಿಯನ್ನು ತೋರಿಸುತ್ತದೆ. ಇದು ಬಹಳಷ್ಟು ಜನರು ನಿರುದ್ಯೋಗ ಅಥವಾ ಅರದ್ಯೋಗದ ಸಮಸ್ಯೆಯಿಂದ ಬಳಲುತ್ತಿರುವುದನ್ನೂ ಸೂಚಿಸುತ್ತದೆ, ಆದರೆ 2011 ಮತ್ತು 2011ರ ಅವಧಿಯಲ್ಲಿ ಕಾರ್ಮಿಕರ ಸಂಖ್ಯೆಯ 41.2 ಕೋಟಿಗಳಿಂದ 48.2 ಕೋಟಿಗಳಿಗೆ ಹೆಚ್ಚಾಗಿರುವುದು ಅವರೆಲ್ಲರಿಗೆ ಸೂಕ್ತ ಸರ್ಕಾರದ ಹೊಣೆಗಾರಿಕೆಯನ್ನೂ ತೋರಿಸುತ್ತದೆ.
2. ಶ್ರಮಶಕ್ತಿಯ ಲಿಂಗ ಸಂರಚನೆ: 2001 ಮತ್ತು 2011 ಎರಡರ ಜನಗಣತಿಗಳಲ್ಲೂ ಮಹಿಳೆಯರಲ್ಲಿನ ಕಾರ್ಮಿಕರ ಪ್ರಮಾಣವು ಶೇ. 35ರಷ್ಟಿತ್ತು. ಅಂದರೆ ಕೆಲಸದಲ್ಲಿ ಭಾಗವಹಿಸುತ್ತಿರುವ ಮಹಿಳೆಯರ ಪ್ರಮಾಣವು ಪುರುಷರಿಗಿಂತ ಕಡಿಮೆ ಇದೆ. ಮಹಿಳೆಯರಿಗೆ ಸೂಕ್ತವಾದ ಉದ್ಯೋಗಾವಕಾಶಗಳು ಇರದಿರುವುದನ್ನೂ ಮತ್ತು ಅವರ ಕೆಲ ಕಾರ್ಯಗಳನ್ನು ಕೆಲಸ ಎಂದು ಗುರುತಿಸದೇ ಇರುವುದನ್ನೂ ಈ ಮಾಹಿತಿಯು ತೋರಿಸುತ್ತದೆ.
3. ಶ್ರಮಶಕ್ತಿಯ ಔದ್ಯೋಗಿಕ ಮತ್ತು ವಲಯವಾರು ಸಂರಚನೆ: ಔದ್ಯೋಗಿಕ ಸಂರಚನೆಯನ್ನು ಕೃಷಿ, ಉದ್ದಿಮೆ, ಮತ್ತು ಸೇವಾ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಕಾರ್ಮಿಕರ ಪ್ರಮಾಣವನ್ನು ಆಧರಿಸಿ ಅಭ್ಯಸಿಸಬಹುದು. 2011ರಷ್ಟು ತಡವಾಗಿಯೂ ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದ ಕಾರ್ಮಿಕರು ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದನ್ನು ಕಾಣಬಹುದು
ಸುಮಾರು ಶೇ.66ರಷ್ಟು ಕಾರ್ಮಿಕರು ಪ್ರಾಥಮಿಕ ಅಂದರೆ ಕೃಷಿ ಮತ್ತು ಸಂಬಂಧಿತ ಕೆಲಸಗಳಲ್ಲಿ ಭಾಗಿಯಾಗಿದ್ದು, ಇನ್ನುಳಿದ ಕಾರ್ಮಿಕರು ಹೆಚ್ಚು ಕಡಿಮೆ ಸಮಾನವಾಗಿ ದ್ವಿತೀಯ (ಔದ್ಯಮಿ) ಮತ್ತು ತೃತೀಯ (ಸೇವಾ) ವಲಯಗಳಲ್ಲಿ ತೊಡಗಿಕೊಂಡಿದ್ದಾರೆ. ಪ್ರಮುಖವಾದ ಅಂಶವೆಂದರೆ ಹಲವು ವರ್ಷಗಳ ನಂತರ ಕೃಷಿಯಲ್ಲಿ ನಿರತರಾದ ಜನರ ಸಂಖ್ಯೆ ಕಡಿಮೆಯಾಗಿ, ಸೇವೆಗಳಲ್ಲಿ ತೊಡಗಿಕೊಂಡವರ ಸಂಖ್ಯೆಯು ಕಾಲುಭಾಗಕ್ಕಿಂತ ಅಧಿಕವಾಗಿದೆ. ಈ ಔದ್ಯೋಗಿಕ ವೈವಿಧೀಕರಣ ಆದಾಯದ ವರ್ಗೀಕರಣಕ್ಕೆ ಹೋಲಿಸಿದರೆ ತುಂಬಾ ನಿಧಾನ ಎಂದೇ ಹೇಳಬಹುದು. ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ಪ್ರಮುಖ ಉದ್ಯೋಗವಾದರೆ, ನಗರ ಪ್ರದೇಶಗಳಲ್ಲಿ ಸೇವಾ ವಲಯವು ಅತ್ಯಂತ ಪ್ರಮುಖವಾಗಿದೆ. ಹಾಗೆಯೇ ಅಧಿಕ ಪ್ರಮಾಣದ ಪುರುಷರು ಉದ್ದಿಮೆ ಹಾಗೂ ಸೇವೆಗಳಲ್ಲಿ ತೊಡಗಿಕೊಂಡಿದ್ದರೆ, ಮಹಿಳೆಯರಲ್ಲಿ ಇನ್ನೂ ಹೆಚ್ಚಿನ ಪ್ರಮಾಣದವರು ಕೃಷಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರ ಹಂಚಿಕೆಯು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಮಹಿಳೆಯರಿಗಾಗಿ ಕೃಷಿಯೇತರ ಉದ್ಯೋಗಗಳನ್ನು ನಿರ್ಮಿಸುವ ಅಗತ್ಯತೆಯನ್ನು ತೋರಿಸುತ್ತದೆ. ಇದರಿಂದ ಒಟ್ಟಾರೆ ಆದಾಯ ಸೃಷ್ಟಿ ಅಧಿಕವಾಗಿ ಬಡತನ ಕಡಿಮೆಯಾಗುತ್ತದೆ.
4. ಕಾರ್ಮಿಕರ ಸಂಘಟಿತ ಹಾಗೂ ಅಸಂಘಟಿತ ವಲಯದ ಪಂಚಿಕೆ: ಉದ್ಯೋಗದ ನಿಯಮಗಳನ್ನು ಆಧರಿಸಿ ಕಾರ್ಮಿಕರನ್ನು ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರು ಎಂದು ವಿಂಗಡಿಸಲಾಗುತ್ತದೆ. ದೇಶದ ಕಾನೂನುರೀತ್ಯ ನೋಂದಾಯಿತ ಉದ್ದಿಮೆಗಳನ್ನು ಸಂಘಟಿತ ವಲಯವೆಂತಲೂ, ಯಾವುದೇ ರೀತಿ ನೊಂದಣಿ ಮಾಡಲಾರದ ಉದ್ದಿಮೆಗಳನ್ನು ಅಸಂಘಟಿತ ವಲಯವೆಂತಲೂ ಕರೆಯುತ್ತವೆ. ನೋಂದಾಯಿತ ಉದ್ದಿಮೆಗಳು ಸರ್ಕಾರ ವಿಧಿಸುವ ಎಲ್ಲ ಷರತ್ತುಗಳಿಗೆ ಹಾಗೂ ನಿಯಮಗಳಿಗೆ ಪ್ರಮುಖವಾಗಿ ಕೂಲಿ ಹಾಗೂ ಕೆಲಸದ ಭದ್ರತೆಗೆ ಬದ್ಧವಾಗಿರಬೇಕಾಗುತ್ತದೆ. ಕಾರ್ಮಿಕರಿಗೆ ನಿಗದಿತ ಕೂಲಿ ಹಾಗೂ ಇತರ ನಿಗದಿಪಡಿಸಿದ ಸವಲತ್ತುಗಳು ದೊರಕುತ್ತವೆ. ಆದರೆ ಅಸಂಘಟಿತ ವಲಯದಲ್ಲಿನ ಕಾರ್ಮಿಕರು ಸರ್ಕಾರದ ಈ ನಿಯಮಗಳಿಗೆ ಒಳಪಡುವುದಿಲ್ಲವಾದ್ದರಿಂದ ಅಲ್ಲಿ ಕೂಲಿ ಹಾಗೂ ಕೆಲಸದ ಭದ್ರತೆ ಇರುವುದಿಲ್ಲ, ಉದಾಹರಣೆಗೆ ಲಯನ್ ಸಮೂಹದ ಉದ್ದಿಮೆಗಳು, ಟಾಟಾ ಉಕ್ಕು ಉದ್ಯಮ ಮುಂತಾದವುಗಳು ನೋಂದಾಯಿತ ಉದ್ದಿಮೆಗಳಾದರೆ, ಹಲವಾರು ಸಣ್ಣ ಮತ್ತು ಚದುರಿದಂತೆ ಇರುವ ವ್ಯಾಪಾರಸ್ಥರು ಅನೋಂದಾಯಿತ ಉದ್ದಿಮೆದಾರರಾಗಿದ್ದಾರೆ. ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು, ಸಣ್ಣ ಅಂಗಡಿಗಳನ್ನು ಹೊಂದಿದವರು ಮುಂತಾದವರು ಈ ವರ್ಗದಲ್ಲಿ ಬರುತ್ತಾರೆ. ಇವರಿಗೆಲ್ಲ ಉದ್ಯೋಗ ಭದ್ರತೆ ಇರುವುದಿಲ್ಲ ಮತ್ತು ಅವರ ಉದ್ಯೋಗ ಸ್ಥಿತಿಗಳು ತುಂಬಾ ಕಠೋರವಾಗಿರುತ್ತವೆ. ಇಲ್ಲಿ ನಿಯಮಗಳನ್ನು ಪಾಲಿಸದೇ ಇರುವುದರಿಂದ ಮತ್ತು ಇದು ಸರ್ಕಾರದ ನಿಯಂತ್ರಣದ ಹೊರಗೆ ಇರುವುದರಿಂದ ಇದನ್ನು ಅನೌಪಚಾರಿಕ ವಲಯವೆಂತಲೂ ಕರೆಯುತ್ತಾರೆ. ಕೋಷ್ಟಕ 2ರಲ್ಲಿನ ಮಾಹಿತಿ ಹೇಳುವಂತೆ 2011-12ರಲ್ಲಿ ಕೇವಲ ಶೇ. 18ರಷ್ಟು ಕಾರ್ಮಿಕರು ನಿಯಮಿತ ಉದ್ಯೋಗ ಹೊಂದಿದ್ದು ಸಂಘಟಿತ ವಲಯದಲ್ಲಿದ್ದಾರೆ.
ಶೇ.52ರಷ್ಟು ಜನರು ಸ್ವ-ಉದ್ಯೋಗಿಗಳಾಗಿದ್ದರೂ ಬಹಳಷ್ಟು ಸಾರಿ ಆ ಉದ್ಯೋಗವು ಅತ್ಯಂತ ಕಡಿಮೆ ಆದಾಯ ನೀಡುವ ಕೆಲಸವಾಗಿದ್ದು, ಬೇರೆ ಯಾವ ಪರ್ಯಾಯವೂ ಇಲ್ಲದೇ ಕುಟಂಟದ ಎಲ್ಲರೂ ಅದರಲ್ಲಿ ತೊಡಗಿಕೊಂಡಿರುವ ಪರಿಸ್ಥಿತಿ ಸಾಮಾನ್ಯವಾಗಿ ಕಂಡು ಬರುತ್ತದೆ. ಅನಿಯಮಿತ ಕೂಲಿ ಅಥವಾ ಕ್ಯಾಶುಯಲ್ ಉದ್ಯೋಗ ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗುತ್ತಲಿದ್ದು, ಸದ್ಯ ಸುಮಾರು ಶೇ. 30ರಷ್ಟು ಕೆಲಸಗಾರರು ಈ ತೆರನಾದ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ.
ನಿರುದ್ಯೋಗ ಮತ್ತು ಭಾರತದಲ್ಲಿ ನಿರುದ್ಯೋಗದ ಪ್ರಮಾಣ ಪ್ರಸ್ತುತ ಕೂಲಿದರದಲ್ಲಿ ಕೆಲಸ ಮಾಡಲು ಇಚ್ಚಿಸುವ ಒಬ್ಬ ವ್ಯಕ್ತಿಗೆ ಕೆಲಸ ದೊರಕದೇ ಇರುವ ಸ್ಥಿತಿಯನ್ನು ನಿರುದ್ಯೋಗ ಎಂದು ಕರೆಯುತ್ತೇವೆ. ಭಾರತದಲ್ಲಿ ಕೆಲಸವಿಲ್ಲದ ಮತ್ತು ನಿರುದ್ಯೋಗಿಗಳ ಸಂಖ್ಯೆ ಅಧಿಕವಿದೆ ಅಲ್ಲದೇ ಹೆಚ್ಚಾಗುತ್ತಲಿದೆ.
ಭಾರತದಂಥ ಬೃಹತ್ ರಾಜ್ಯದಲ್ಲಿ ಒಟ್ಟು ನಿರುದ್ಯೋಗಿಗಳ ಸಂಖ್ಯೆಯನ್ನು ಲೆಕ್ಕ ಹಾಕುವುದು ಅಷ್ಟು ಸರಳವಲ್ಲ, ಭಾರತ ಸರ್ಕಾರದ ಕಾರ್ಮಿಕ ಬ್ಯೂರೋ ಮಾಡಿದ ಸರ್ವೇಕ್ಷಣೆಯ ಪ್ರಕಾರ 1951ರಲ್ಲಿ 5 ದಶಲಕ್ಷಗಳಷ್ಟಿದ್ದ ನಿರುದ್ಯೋಗಿಗಳ ಸಂಖ್ಯೆಯು 2010ರ ವೇಳೆಗೆ 40.47 ದಶಲಕಕ್ಕೆ ಏರಿಕೆಯಾಗಿದೆ. ಸದ್ಯ ಭಾರತದಲ್ಲಿಯ ನಿರುದ್ಯೋಗದ ಪ್ರಮಾಣವು ಒಟ್ಟು ಶ್ರಮಶಕ್ತಿಯ ಶೇ. 9.4ರಷ್ಟಿದೆ, ಪರದರಲ್ಲಿ ಆದು ಶೇ. 8ರಷ್ಟಿದ್ದರೆ, ಮಹಿಳೆಯರಲ್ಲಿ ಅದು ಶೇ.14.6ರಷ್ಟಿದೆ. ಅಂತೆಯೇ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ದರವು ಶೇ. 10.1ರಷ್ಟಿದ್ದರೆ, - ಪ್ರದೇಶದಲ್ಲಿ ಅದು ಶೇ 7.3ರಷ್ಟಿದೆ.
ಭಾರತದಲ್ಲಿ ನಿರುದ್ಯೋಗದ ಸಮಸ್ಯೆಗೆ ಕಾರಣಗಳು
ಭಾರತದ ನಿರುದ್ಯೋಗದ ಸಮಸ್ಯೆಗೆ ಪ್ರಮುಖ ಕಾರಣಗಳೆಂದರೆ
1. ಉದ್ಯೋಗ ರಹಿತ ಆರ್ಥಿಕ ಬೆಳವಣಿಗೆ : ಭಾರತದ ಇತ್ತೀಚಿನ ಆರ್ಥಿಕ ಬೆಳವಣಿಗೆಯನ್ನು ಉದ್ಯೋಗರಹಿತವೆಂದು ವರ್ಣಿಸಲಾಗುತ್ತದೆ. 1990ರಿಂದೀಚೆಗೆ ಜರಗಿದ ಉದ್ಯಮ ರಂಗದ ಮತ್ತು ಸೇವಾ ವಲಯದ ಬೆಳವಣಿಗೆಯು ಬಂಡವಾಳ ಸಾಂದ್ರ ತಂತ್ರಜ್ಞಾನ ಬಳಸಿ ಸಾಧಿಸಿದ ಬೆಳವಣಿಗೆಯಾದ್ದರಿಂದ ಕಡಿಮೆ ಪ್ರಮಾಣದ ಉದ್ಯೋಗ ನಿರ್ಮಾಣವಾಗಿದೆ. ಹಾಗೆಯೇ, ಪ್ರಾಥಮಿಕ ವಲಯದ ಅತ್ಯಂತ ನಿಧಾನ ಗತಿಯ ಬೆಳವಣಿಗೆಯು ಗ್ರಾಮೀಣ ಪ್ರದೇಶಗಳಲ್ಲಿ ಸೃಷ್ಟಿಯಾಗಿಲ್ಲ, ಹೀಗಾಗಿ ಒಟ್ಟಾರೆ ಬೆಳವಣಿಗೆಯು ಉದ್ಯೋಗರಹಿತವಾಗಿದೆ.
2. ಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳ : ಏರುತ್ತಿರುವ ಜನಸಂಖ್ಯೆಯು ಕಾರ್ಮಿಕರ ಸಂಖ್ಯೆಯನ್ನು ಏನೇ ಏನೇ ಅಧಿಕಗೊಳಿಸುತ್ತಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆರೆ-ಉದ್ಯೋಗದ ಪರಿಸ್ಥಿತಿ ಇದ್ದರೆ, ನಗರ ಪ್ರದೇಶಗಳಲ್ಲಿ ಅದು ಮುಕ್ತ ರೂಪದಲ್ಲಿ ಗೋಚರಿಸುತ್ತಿದೆ.
3. ಅಸಮಂಜಸ ತಂತ್ರಜ್ಞಾನ : ಈಗಾಗಲೇ ತಿಳಿಸಿದ ಹಾಗೆ, ಕೃಷಿ ಹಾಗೂ ಉದ್ದಿಮೆಗಳಲ್ಲಿ ಬಳಸುತ್ತಿರುವ ತಂತ್ರಜ್ಞಾನವು ಬಂಡವಾಳ ಸಾಂದ್ರವಾಗಿದ್ದು ಭಾರತದ ಪರಿಸ್ಥಿತಿಗೆ ಅಸಮಂಜಸ ಎಂದು ಹೇಳಬಹುದು.
5. ಕೃಷಿಯ ಮೇಲಿನ ಅವಲ೦ಬನೆ : ಕೃಷಿಯು ಋತುಮಾನ ಆಧಾರಿತ ಚಟುವಟಿಕೆಯಾಗಿದ್ದು ಅದರಲ್ಲಿ ತೊಡಗಿಕೊಂಡವರಿಗೆ ವರ್ಷದ ಕೆಲವು ತಿಂಗಳುಗಳಿಗೆ ಮಾತ್ರ ಉದ್ಯೋಗ ಆಧ್ಯತೆ ಇರುತ್ತದೆ. ಆದ್ದರಿಂದ ಕೃಷಿಯ ಮೇಲಿನ ಅವಲಂಬನೆಯು ಅಧಿಕವಾಗಿದ್ದರಿಂದ ಭಾರತದಲ್ಲಿ ನಿರುದ್ಯೋಗವು ಅಧಿಕವಾಗಿದೆ.
6. ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಅವನತಿ : ಭಾರತದಲ್ಲಿ ಸಾಕಷ್ಟು ಉದ್ಯೋಗ ಒದಗಿಸುತ್ತಿದ್ದ ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಅವನತಿಯಿಂದಾಗಿಯೂ ನಿರುದ್ಯೋಗ ಅಧಿಕವಾಗಿದೆ.
7. ಕಾರ್ಮಿಕರ ಕಡಿಮೆ ಚಲನಶೀಲತೆ : ಕಾರ್ಮಿಕರ ಕೌಟುಂಬಿಕ ನಿಷ್ಠೆ, ಭಾಷೆ, ಧರ್ಮ, ಸಂಸ್ಕೃತಿಯಲ್ಲಿನ ಭಿನ್ನತೆಗಳು ಕಾರ್ಮಿಕರು ದೂರದ ಊರುಗಳಿಗೆ ವಲಸೆ ಹೋಗುವುದನ್ನು ನಿರ್ಬಂಧಿಸುತ್ತವೆ. ಈ ಕಾರಣದಿಂದಾಗಿಯೂ ಸಹ ಭಾರತದಲ್ಲಿ ನಿರುದ್ಯೋಗದ ಪ್ರಮಾಣ ಅಧಿಕವಿದೆ.
ಭಾರತದಲ್ಲಿ ಉದ್ಯೋಗ ನಿರ್ಮಾಣದ ಕಾರ್ಯಕ್ರಮಗಳು
ದೇಶದಲ್ಲಿ ಅನುಷ್ಠಾನಗೊಳಿಸಿದ ಪ್ರತಿಯೊಂದು ಪಂಚವಾರ್ಷಿಕ ಯೋಜನೆಯು ಎರುದ್ಯೋಗವನ್ನು ಕಡಿಮೆ ಮಾಡುವ ನಿರ್ದಿಷ್ಟ ಗುರಿಯನ್ನು ಹೊಂದಿದ್ದು ಅಲ್ಲದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಉದ್ಯೋಗ ಸೃಷ್ಟಿಸಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ. ಅವು ಜನರಿಗೆ ಸ್ವಂತ ಉದ್ದಿಮೆ ಪ್ರಾರಂಭಿಸಿ ಸ್ವ-ಉದ್ಯೋಗ ಹೊಂದಲು ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ಕೂಲಿಯಾಧಾರಿತ ಉದ್ಯೋಗ ದೊರಕಿಸುವ ಮಹದಾಸೆ ಹೊಂದಿದ್ದವು.
ಆಯಾ ಕಾಲದ ಮತ್ತು ಪರಿಸ್ಥಿತಿಯನ್ನಾಧರಿಸಿ, ಸರ್ಕಾರಗಳು ಹಲವು ರೀತಿಯ ಕ್ರಮಗಳನ್ನು ಜಾರಿಗೊಳಿಸಿವೆ.
ಗ್ರಾಮೀಣ ಪ್ರದೇಶ
1977 : ಕೂಲಿಗಾಗಿ ಕಾಳು ಯೋಜನೆ
1979 : ಗ್ರಾಮೀಣ ಯುವಕರಿಗೆ ಸ್ವ-ಉದ್ಯೋಗಕ್ಕಾಗಿ ತರಬೇತಿ
1980: ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ
1983: ಗ್ರಾಮೀಣ ಭೂರಹಿತರಿಗೆ ಉದ್ಯೋಗ ಖಾತ್ರಿ ಯೋಜನೆ
1989:ಜವಾಹರ ರೋಜಗಾರ್ ಯೋಜನೆ
1993 : ವಾರ್ ಯೋ ಉದ್ಯೋಗ ಭರವಸೆ ಯೋಜನೆ
1999 : ಸ್ವರ್ಣ ಜಯಂತಿ ಗ್ರಾಮ ಸ್ವರೋಜಗಾರ ಯೋಜನೆ
2004: ರಾಷ್ಟ್ರೀಯ ಕೂಲಿಗಾಗಿ ಕಾಳು ಯೋಜನೆ
2006 : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ
ನಗರ ಪ್ರದೇಶ
1989 : ನೆಹರು ರೋಜಗಾರ್ ಯೋಜನೆ
1990 : ನಗರ ಕೂಲಿ ಉದ್ಯೋಗ ಯೋಜನೆ
1993 : ಪ್ರಧಾನ ಮಂತ್ರಿ ರೋಜಗಾರ್ ಯೋಜನೆ
1997 : ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಆಗಸ್ಟ್ 25, 2015ರಂದು ಕಾಯ್ದೆಯಾಗಿ ನಾನು ಮಾಡಿದ್ದರೂ ಅದು ದಾರಿಯಾಗಿದ್ದು ಮಾತ್ರ 2-2-2014ರಂದು, ಈ ಕಾಯ್ದೆಯು ಗ್ರಾಮೀಣ ಪ್ರದೇಶದ ಯಾವುದೇ ಕುಟುಂಬದ ಒಬ್ಬ ವಯಸ್ಕ ಕಾರ್ಮಿಕನಿಗೆ ಪ್ರತಿವರ್ಷ ಒಂದು ನೂರು ದಿನಗಳ ಕೌಶಲ್ಯರಹಿತ ಉದ್ಯೋಗ ಖಾತ್ರಿಯನ್ನು ಕನಿಷ್ಠ ಕೂಲಿದರದಲ್ಲಿ ನೀಡುವ ಸಾಂವಿಧಾನಿಕ ಖಾತ್ರಿ ಒದಗಿಸುತ್ತದೆ. ಒಂದು ವೇಳೆ ಉದ್ಯೋಗ ನೀಡುವಲ್ಲಿ ಸರ್ಕಾರ ವಿಫಲವಾದರೆ, ಆ ವ್ಯಕ್ತಿಗೆ ವಿರುದ್ಯೋಗ ಭತ್ಯೆ ನೀಡುವ ನಿಯಮವನ್ನು ಈ ಯೋಜನೆ ಒಳಗೊಂಡಿದೆ. ನರಗ ಯೋಜನೆಯು ನೂರು ಪ್ರತಿಶತ ನಗರ ಜನಸಂಖ್ಯೆ ಇರುವ ಜಿಲ್ಲೆಗಳನ್ನು ಹೊರತು ಪಡಿಸಿ ಭಾರತದ ಎಲ್ಲ ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ.
ಅನ್ವಯಿಕ ಆರ್ಥಿಕ ಸಂಶೋಧನೆಯ ರಾಷ್ಟ್ರೀಯ ಪರಿಷತ್ತಿನ (NCAER) ಒಂದು ವರದಿಯ ಪ್ರಕಾರ ಎಮ್‌ಜಿನರೇಗಳ ವಿಶ್ವದ ಅತ್ಯಂತ ಬೃಹತ್ತಾದ ಬಡತನ ನಿರ್ಮೂಲನಾ ಕಾರ್ಯಕ್ರಮವಾಗಿದ್ದು, ಬಡತನ ನಿರ್ಮೂಲನೆಯಲ್ಲಿ ಮತ್ತು ಮಹಿಳೆಯರ ಸಬಲೀಕರಣದಲ್ಲಿ ಯಶಸ್ಸನ್ನು ಸಾಧಿಸಿದೆ. ಸದರಿ ಕಾರ್ಯಕ್ರಮದ ಪರಿಣಾಮಗಳೆಂದರೆ: ಪ್ರಥಮ ಬಾರಿಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನ ಕೂಲಿ ನೀಡಲಾಗಿದ್ದು, ಸದರಿ ಯೋಜನೆಯ ಪ್ರಯೋಜನ ಪಡೆದವರಲ್ಲಿ ಪುರುಷರಿಗಿಂತ ಮಹಿಳೆಯರು ಅಧಿಕ ಸಂಖ್ಯೆಯಲ್ಲಿದ್ದಾರೆ. ಮಹಿಳೆಯರ ಭಾಗವಹಿಸುವಿಕೆ ಅಧಿಕವಾದಂತೆ ಕುಟುಂಬದ ಆದಾಯ ವೃದ್ಧಿಯಾಗಿದೆ. ಯೋಜನೆಯ ದೆಸೆಯಿಂದಾಗಿ ಜನರು ಬ್ಯಾಂಕ್ ಸೇವೆ ಪಡೆಯುವ ಪ್ರಮಾಣವೂ ಹೆಚ್ಚಿದೆ. ಆದರೆ ಹಿಂದಿನ ಉದ್ಯೋಗ ಕಾರ್ಯಕ್ರಮಗಳಂತೆಯೇ ಈ ಯೋಜನೆಯು ಸಹ ಕಳಪೆಯಾಗಿ ಜಾರಿಗೊಂಡಿದೆಯಲ್ಲದೆ ಉಸ್ತುವಾರಿ ಸಹ ಸೂಕ್ತವಾಗಿಲ್ಲ. ಹೀಗಾಗಿ ಈ ಯೋಜನೆಯ ಸಹ ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ನೀಡಿಲ್ಲ.
ಮಹಿಳಾ ಕಾರ್ಮಿಕರ ಸ್ಥಿತಿಗತಿ :
ಭಾರತದಲ್ಲಿ ಮಹಿಳೆಯರ ಉದ್ಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಲಕ್ಷಣಗಳನ್ನು ಗಮನಿಸಬೇಕು:
1. ಮಹಿಳಾ ಕೆಲಸದ ಅಲ್ಪತೆ : ಭಾರತದಲ್ಲಿ ಮಹಿಳಾ ಕಾರ್ಮಿಕರ ಪ್ರಮಾಣ ಇಳಿಕೆಯಾಗುತ್ತಿದ್ದು, ನಗರ ಪ್ರದೇಶಗಳಲ್ಲಿ ಶೇ.31ರನ್ನು ಮತ್ತು ನಗರ ಪ್ರದೇಶಗಳಲ್ಲಿ ಶೇ. 20ರಷ್ಟು ಕಾರ್ಮಿಕರ ಪ್ರಮಾಣವಿದೆ. 1990ರಲ್ಲಿ ಸುಮಾರು ಶೇ.40ದಷ್ಟಿದ್ದುದು, 2011-12ರ ವೇಳೆಗೆ ಶೇ. 22.5ಕ್ಕೆ ಇಳಿಕೆಯಾಗಿದೆ.
2. ಉದ್ಯೋಗಕ್ಕೆ ಅಡೆತಡೆಗಳು: ಮಹಿಳೆಯರು ಉದ್ಯೋಗ ಅರಸುವಲ್ಲಿ ಹಲವಾರು ಅಡೆತಡೆಗಳಿದ್ದು, ಉದ್ಯೋಗದ ಆಯ್ಕೆ, ಕೆಲಸದ ಪರಿಸ್ಥಿತಿಗಳು, ಕೆಲಸದ ಭದ್ರತೆ, ವೇತನ ತಾರತಮ್ಯ, ಮನೆ ಹಾಗೂ ಕೆಲಸದ ಬಾಧ್ಯತೆಗಳಲ್ಲಿ ಸಮತೋಲನ ಸಾಧಿಸುವುದು, ಮುಂತಾದ ಸಮಸ್ಯೆಗಳು ಮಹಿಳೆಯರು ಉದ್ಯೋಗ ಮಾಡುವುದನ್ನು ಕಠಿಣಗೊಳಿಸುತ್ತವೆ.
3. ಮಹಿಳೆಯರ ಆರ್ಥಿಕ ಅವಲಂಬನೆ: 2004-05ನೇ ಸಾಲಿನಲ್ಲಿ ಶೇ.85ರಷ್ಟು ಮಹಿಳೆಯರು ಆರ್ಥಿಕವಾಗಿ ಪುರುಷರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದರು ಮತ್ತು # ಪ್ರಮಾಣ ಕಾಲ ಕಳೆದಂತೆ ಏರಿಕೆಯಾಗಿ ಮಹಿಳೆಯರ ಉದ್ಯೋಗ ರಾಹಿತ್ಯದ ಸ್ಥಿತಿಯನ್ನು ಬಿಂಬಿಸುತ್ತದೆ.
4. ಅನಿಯಮಿತ ಅಥವಾ ಕ್ಯಾಮುಯೆಲ್ ಉದ್ಯೋಗ: ಬಹಳಷ್ಟು ಮಹಿಳಾ ಕಾರ್ಮಿಕರು ಪ್ರಾಥಮಿಕ ವಲಯದಲ್ಲಿ ಕೆಲಸ ಮಾಡುತ್ತಲಿದ್ದು (639, ಪುರುಷರಲ್ಲಿ ಇದು 441) ಅಲ್ಲಿ ಉತ್ಪಾದಕತೆ ಕಡಿಮೆಯಿರುತ್ತದೆ. ಹಾಗೆಯೇ ಶೇ.13ರಷ್ಟು ಮಹಿಳೆಯರು ನಿಯಮಿತ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದರೆ, ಗುರುಷರದ್ದು ಶೇ.20ರಷ್ಟಿರುತ್ತದೆ. ನಗರ ಪ್ರದೇಶಗಳಲ್ಲಿ ಮಹಿಳೆಯರು ಮನಕೆಲಸದ ಉದ್ಯೋಗ ಮಾಡುತ್ತಲಿದ್ದು ಅವರು ತುಂಬಾ ನಿಕೃಷ್ಣ ಸ್ಥಿತಿಯಲ್ಲಿದ್ದಾರೆ.
ಶಿಕ್ಷಣದ ಜೊತೆಗೆ ಸಾಮಾಜಿಕ ಸೇವೆಗಳ ಮೇಲೆ ಅಧಿಕ ವೆಚ್ಚ ಮಾಡುವುದರಿಂದ ಮಹಿಳೆಯರ ಕಾರ್ಮಿಕರ ಪಾಲುದಾರಿಕೆಯನ್ನು ಹೆಚ್ಚಿಸಬಲ್ಲುದು. ಹಾಗೆಯೇ, ಅತ್ಯುನ್ನತ ಹುದ್ದೆಗಳಲ್ಲಿ (ಐಎಎಸ್, ಐಪಿಎಸ್, ಕೆಎಎಸ್, ಮುಂತಾದವು) ಅಲ್ಲದೇ, ವಿಧಾನ ಸಭೆಗಳಲ್ಲಿ, ವಿಧಾನ ಪರಿಷತ್ತುಗಳಲ್ಲಿ ಮತ್ತು ಸಂಸತ್ತಿನಲ್ಲಿ ಮಹಿಳೆಯರ ಪಾತಿನಿಧ್ಯವನ್ನು ಹೆಚ್ಚಿಸುವುದರಿಂದ ಅವರ ಒಟ್ಟಾರೆ ಕೆಲಸದ ಘನತೆಯನ್ನು ಹೆಚ್ಚಿಸಬಹುದಾಗಿದೆ.
ಕಾಮೆಂಟ್ ಪೋಸ್ಟ್ ಮಾಡಿ