‘ಚಿತ್ರಾಂಜಲಿ@75’, ‘ಸಂವಿಧಾನ ರೂಪುಗೊಂಡ ಬಗೆ’: ಇ–ಫೋಟೊ ಪ್ರದರ್ಶನಕ್ಕೆ ಚಾಲನೆ
=============
ದೇಶದ ಸ್ವಾತಂತ್ರ್ಯ ಪಯಣದ ಮೈಲಿಗಲ್ಲುಗಳನ್ನು ಬಿಂಬಿಸಲು ‘ಸಂವಿಧಾನ ರೂಪುಗೊಂಡ ಬಗೆ’ ಇ–ಫೋಟೊ ಪ್ರದರ್ಶನ ಮತ್ತು ‘ಚಿತ್ರಾಂಜಲಿ@75’ ವರ್ಚುವಲ್ ಸಿನಿಮಾ ಪೋಸ್ಟರ್ ಪ್ರದರ್ಶನಕ್ಕೆ ಕೇಂದ್ರ ಸಚಿವರಾದ ಜಿ.ಕಿಶನ್ ರೆಡ್ಡಿ ಮತ್ತು ಅನುರಾಗ್ ಠಾಕೂರ್ ಚಾಲನೆ ನೀಡಿದ್ದಾರೆ.
ಪ್ರದರ್ಶನವು ಹಿಂದಿ, ಇಂಗ್ಲಿಷ್ ಮಾತ್ರವಲ್ಲದೆ 11 ಪ್ರಾದೇಶಿಕ ಭಾಷೆಗಳಲ್ಲಿಯೂ ಇರಲಿದೆ ಎಂದು ಸಂಸ್ಕೃತಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ದೇಶಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ, ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಡಿ ತೆರೆಯ ಮರೆಯ ಹಿಂದೆ ಉಳಿದವರ ಯಶೋಗಾಥೆಯನ್ನು ಜನರಿಗೆ ಪರಿಚಯಿಸಲು ‘ಆಜಾದಿ ಕಾ ಅಮೃತ್ ಮಹೋತ್ಸವ್’ ಅಂಗವಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ವಿವಿಧ ಮಾಧ್ಯಮ ಘಟಕಗಳ ಸಹಯೋಗದೊಂದಿಗೆ ‘ಐಕಾನಿಕ್ ವೀಕ್’ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಅಡಿಯಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಚಿತ್ರಾಂಜಲಿ@75’ ವರ್ಚುವಲ್ ಪೋಸ್ಟರ್ ಪ್ರದರ್ಶನವು 75 ವರ್ಷಗಳ ಭಾರತೀಯ ಸಿನಿಮಾವನ್ನು ಪ್ರತಿನಿಧಿಸುತ್ತದೆ. ಜತೆಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ನಮ್ಮ ಸಮಾಜ ಸುಧಾರಕರು ಮತ್ತು ನಮ್ಮ ಸೈನಿಕರ ಶೌರ್ಯದ ಪವಿತ್ರ ನೆನಪುಗಳ ಮೆಲುಕಿಗೆ ಕಾರಣವಾಗಲಿದೆ ಎಂಬ ಖಾತರಿ ನನಗಿದೆ. ಅಂಥ 75 ಅಪ್ರತಿಮ ಚಲನಚಿತ್ರಗಳನ್ನು ನಮ್ಮ ಪೋಸ್ಟರ್ ಪ್ರದರ್ಶನದಲ್ಲಿ ಸೇರಿಸಲು ನಾವು ಪ್ರಯತ್ನಿಸಿದ್ದೇವೆ ಎಂದು ಅವರು ಹೇಳಿದ್ದಾರೆ
ಕಾಮೆಂಟ್ ಪೋಸ್ಟ್ ಮಾಡಿ