ಕನಕದಾಸರು - ಕ್ರಿ. ಶ. 1508-1606

  ಕನಕದಾಸರು - ಕ್ರಿ. ಶ. 1508-1606


🧿 ಇವರ ಪೂರ್ಣ ಹೆಸರು :  ತಿಮ್ಮಪ್ಪನಾಯಕ


🧿 ಜನನ : ಕ್ರಿ. ಶ. 1508


🧿ಸ್ಥಳ  :  ಹಾವೇರಿ ಜಿಲ್ಲೆಯ ಬಾಡ ಗ್ರಾಮ.


🧿 ತಂದೆ - ತಾಯಿ : ಬೀರಪ್ಪ, ಬಚ್ಚಮ್ಮ


🧿 ಇವರ ಆರಾಧ್ಯದೈವ:  ಕಾಗಿನೆಲೆಯಾದಿ ಕೇಶವ, ಆದಿಕೇಶವ.


🧿 ದೀಕ್ಷೆಕೊಟ್ಟ ಗುರು : ವ್ಯಾಸರಾಯರು 


🧿 ಕನಕದಾಸರು ಅನೇಕ ಭಾವಪೂರ್ಣ ಕೀರ್ತನೆಗಳನ್ನು ರಚಿಸಿದ್ದಾರೆ.


          ✍ ಕನಕರ ಸಾಹಿತ್ಯ✍


🔹 ಕೃತಿಗಳು:  ಮೋಹನತರಂಗಿಣಿ,

ನಳಚರಿತ್ರೆ,ಹರಿಭಕ್ತಿಸಾರ, ರಾಮಧಾನ್ಯ ಚರಿತೆ, ನೃಸಿಂಹಸ್ತವ.


🔸 ಮೋಹನತರಂಗಿಣಿ :

ಇದು ಒಂದು ಸಾಂಗತ್ಯ ಗ್ರಂಥವಾಗಿದೆ ಇದಕ್ಕೆ ಕೃಷ್ಣಚರಿತೆ ಎಂಬ ಮತ್ತೊಂದು ಹೆಸರು ಇದೆ.


🔹 ನಳಚರಿತ್ರೆ :

ಭಾಮಿನಿ ಷಟ್ಪದಿಯಲ್ಲಿದೆ ಇದು  ಅತ್ಯಂತ ರಮ್ಯವಾದ ಒಂದು ಕಥನಕಾವ್ಯವಾಗಿದೆ. ಮಹಾಭಾರತದ ಕಥೆಯನ್ನು ಮೂಲವಾಗಿ ಹೊಂದಿದೆ.

ಇದರಲ್ಲಿ 9 ಸಂಧಿಗಳು 480 ಪದ್ಯಗಳು ಇವೆ ನಳದಮಯಂತಿಯರ ಚಿರಂತನ ಪ್ರೇಮದ ಚಿತ್ರಣ ಕಾವ್ಯದ ಜೀವಾಳವಾಗಿದೆ.


🔸 ರಾಮಧಾನ್ಯಚರಿತೆ : 

ಭಾಮಿನಿ ಷಟ್ಪದಿಯಲ್ಲಿದೆ, ಇದು ಒಂದು ಖಂಡ ಕಾವ್ಯವಾಗಿದೆ.

ಇದು ಸುಮಾರು 156 ಪದ್ಯಗಳಲ್ಲಿ ಉತ್ಕೃಷ್ಟತೆಯನ್ನು ಬಹಳ ಚಮತ್ಕಾರವಾಗಿ ನಿರೂಪಿಸಲಾಗಿದೆ. ಈ ಕೃತಿಯಲ್ಲಿ ಭತ್ತ ಮತ್ತು ರಾಗಿಯನ್ನು ವರ್ಗಸಂಘರ್ಷದ ರೂಪಕವನ್ನಾಗಿ ನೀಡಿದ್ದಾರೆ.


🔹 ಹರಿಭಕ್ತಿಸಾರ:

 ಇದು ಸಹ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ ಪ್ರತೀ ಪದ್ಯದಲ್ಲಿ ಕೊನೆಯ ಚರಣ ರಕ್ಷಿಸು ನಮ್ಮನನವರತ ಎಂದು ಮುಗಿಯುತ್ತದೆ.


🔻🔻🔻 ವಿಶೇಷ ಅಂಶಗಳು🔺🔺🔺


🔵 ತಮ್ಮ ಕೃತಿಯನ್ನು ಕನಕದಾಸರು

ಹರಿಶರಣರಚ್ಚು,, ಬುಧಜನರಿಗೆ ಮೆಚ್ಚು,,,, ಕೇಳುವವರಿಗೆ ತನಿಬೆಲ್ಲದಚ್ಚು,,, ಎಂದು ಮುಂತಾಗಿ ಪ್ರಶಂಸಿಸಿ ಕೊಂಡಿದ್ದಾರೆ.


🟢ತಿಮ್ಮಪ್ಪನಾಯಕ ತಮ್ಮ ಕೃತಿ ಮತ್ತು ಸಾಧನೆಯಿಂದ ಕನಕದಾಸರ ಎಂದೇ ಪ್ರಸಿದ್ಧಿ ಹೊಂದಿದ್ದರು.


🟡 "ತಲ್ಲಣಿಸದಿರು ಕಂಡ್ಯ ತಾಳು ಮನವೇ, ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ, ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೆ, 

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ, ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ ಜಗಳವೇ ಲೇಸು, ದೇವಿ ನಮ್ಮ ದ್ಯಾವರು ಬಂದರು ನೋಡಿರೆ."  ಮುಂತಾದ ಕೀರ್ತನೆಗಳನ್ನು ರಚಿಸಿದರು.


🔴 ಕನಕದಾಸರ ಕೀರ್ತನೆ ಮತ್ತು ಕಾವ್ಯಗಳಲ್ಲಿ ಬಂಡಾಯದ ಧ್ವನಿ, ಸಾಮಾಜಿಕ ಕಳಕಳಿ, ಚಾತುರ್ಯಗಳು ಇವೆ.


🟠"ಕುಲ ಕುಲವೆನ್ನುತಿಹರು, ಕುಲವಾವುದು ಸತ್ಯ ಸುಖವುಳ್ಳ ಜನರಿಗೆ, ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?"

 ಹೀಗೆ ಜಾತಿವ್ಯವಸ್ಥೆಯ ಬಗ್ಗೆ ಪ್ರಶ್ನಿಸಿದ್ದಾರೆ.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು