ಸಮಾಸಗಳು


            ಎರಡು ಅಥವಾ ಅನೇಕ ಪದಗಳನ್ನು ಅರ್ಥಕ್ಕನುಸಾರವಾಗಿ ಸೇರಿಸಿ ಒಂದೇ ಪದವನ್ನಾಗಿ ಮಾಡುವ ಪ್ರಕ್ರಿಯೆಗೆ ಸಮಾಸ ರಚನೆ ಎನ್ನುವರು.

        ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅರ್ಥಕ್ಕೆ ಲೋಪಬಾರದಂತೆ ಒಟ್ಟು ಸೇರಿಸುವ ಪದವನ್ನು ಎನ್ನುವರು.ಸಮಾಸ ಪದವನ್ನು ಅರ್ಥಕ್ಕೆ ಅನುಸಾರವಾಗಿ ಬಿಡಿಸಿದರೆ ಅದನ್ನು ವಿಗ್ರಹವಾಕ್ಯ ಎನ್ನುವರು.ಸಮಾಸದ ಮೊದಲ ಪದವನ್ನು ಪೂರ್ವಪದ ಎಂತಲೂ ಎರಡನೆಯ ಪದವನ್ನು ಉತ್ತರಪದ ಎಂತಲೂ ಕರೆಯುವರು.ಇಲ್ಲಿ ಎರಡು ಪದಗಳು ಅರ್ಥಕ್ಕೆ ಅನುಸಾರವಾಗಿ ಅರ್ಥವನ್ನು ಸೂಚಿಸುತ್ತವೆ.ಪದಗಳು ಸೇರಿದಾಗ ಅವುಗಳ ನಡುವಿನ ಪ್ರತ್ಯಯ ಬಿಟ್ಟು ಹೋಗುತ್ತದೆ.

ಸಮಾಸಗಳಲ್ಲಿ 8 ಪ್ರಕಾರಗಳಿವೆ.

1.ತತ್ಪುರುಷ ಸಮಾಸ
2.ಕರ್ಮಧಾರೆಯ ಸಮಾಸ
3.ಕ್ರಿಯಾ ಸಮಾಸ
4.ದ್ವಿಗು ಸಮಾಸ
5.ದ್ವಂದ್ವ ಸಮಾಸ
6.ಬಹುರ್ವೀಹಿ ಸಮಾಸ
7.ಅಂಶಿ ಸಮಾಸ
8.ಗಮಕ ಸಮಾಸ

1.ತತ್ಪುರುಷ ಸಮಾಸ:ಎರಡು ನಾಮಪದಗಳು ಸೇರಿ ಸಮಾಸ ವಾಗುವಾಗ ಉತ್ತರ ಪದದ ಅರ್ಥವು ಪ್ರಧಾನವಾದರೆ ಅದನ್ನು ತತ್ಪುರುಷ ಸಮಾಸ ಎನ್ನುವರು.

🌟 ಉದಾ : ರಾಜನ + ಪುತ್ರಿ=ರಾಜಪುತ್ರಿ
                  ಅರಸನ +ಮನೆ=ಅರಮನೆ
               ಬೆಟ್ಟದ+ತಾವರೆ=ಬೆಟ್ಟದಾವರೆ
      ವಯಸ್ಸಿನಿಂದ+ವೃದ್ಧ=ವಯೋವೃದ್ಧ
ಹಗಲಿನಲ್ಲಿ +ಕನಸು =ಹಗಲುಗನಸು

2.ಕರ್ಮಧಾರಯ ಸಮಾಸ : ಸಮಾಸ ರಚನೆಯಲ್ಲಿ ಪೂರ್ವ ಪದ ಗುಣವಾಚಕ ವಾಗಿದ್ದು ಉತ್ತರ ಪದ ನಾಮಪದ ವಾಗಿರುತ್ತದೆ ಈ ಎರಡು ಪದಗಳ ರಚನೆಯ ನಡುವೆ ವಿಶೇಷ,ವಿಶೇಷ್ಯ ಸಂಬಂಧವಿದ್ದು ಅದರಿಂದ ಉಂಟಾದ ಸಮಾಸವೇ ಕರ್ಮಧಾರಯ ಸಮಾಸ.

🌟 ಉದಾ :ಕೆಂಪಾದ+ಅಕ್ಕಿ = ಕೇಸಕ್ಕಿ
      ಬಿಳಿದು +ತಾವರೆ=ಬೆಳ್ದಾವರೆ
      ಇನಿದು +ಸರ =ಇಂಚರ
      ಮೆಲ್ಲಿತು +ನುಡಿ = ಮೆಲ್ಕುಡಿ
      ಹೊಸದು +ಕನ್ನಡ =ಹೊಸಗನ್ನಡ

3.ಕ್ರಿಯಾ ಸಮಾಸ:ಸಮಾಸ ರಚನೆಯಲ್ಲಿ ಪೂರ್ವ ಪದ ನಾಮಪದವಾಗಿದ್ದು (ಸಾಮಾನ್ಯವಾಗಿ ದ್ವಿತೀಯ ವಿಭಕ್ತಿ ಪ್ರತ್ಯಯವನ್ನು ಹೊಂದಿರುತ್ತದೆ.('ಅನ್ನು'ಇದು ದ್ವಿತೀಯ ವಿಭಕ್ತಿ)ಉತ್ತರ ಪದ ಕ್ರಿಯಾಪದವಾಗಿದ್ದು ಇವೆರಡು ಸೇರಿ ಆಗುವುದೇ ಕ್ರಿಯಾಸಮಾಸ .

🌟ಉದಾ:ಕೈಯನ್ನು +ಮುಗಿ=ಕೈಮುಗಿ
    ಕಣ್ಣನ್ನು +ಮುಚ್ಚಿ =ಕಣ್ಮುಚ್ಚಿ
    ಸಾಕ್ಷಿಯನ್ನು +ಮಾಡಿ =ಸಾಕ್ಷಿ ಮಾಡಿ

4.ದ್ವಿಗು ಸಮಾಸ:ಸಮಾಸ ರಚನೆಯಲ್ಲಿ ಪೂರ್ವ ಪದ ಸಂಖ್ಯಾ ವಾಚಕ ವಾಗಿದ್ದು ಉತ್ತರಪದ ನಾಮಪದವಾಗಿದ್ದು ಅವೆರಡು ಸೇರಿ ಆಗುವ ಸಮಾಸವೇ ದ್ವಿಗು ಸಮಾಸ .

🌟 ಉದಾ : ಮೂರು+ಕಣ್ಣು=ಮುಕ್ಕಣ್ಣು
      ಪಂಚ +ಇಂದ್ರಿಯ =ಪಂಚೇಂದ್ರಿಯ
      ಎರಡು +ಕೆಲ =ಇಕ್ಕೆಲ
      ಒಂದು +ಕಟ್ಟು =ಒಗ್ಗಟ್ಟು

5.ದ್ವಂದ್ವ ಸಮಾಸ :ಸಮಾಸ ರಚನೆಯಲ್ಲಿ ಎರಡು ಅಥವಾ ಅನೇಕ ನಾಮಪದಗಳು ಸಂಯೋಗ ತೋರುವಂತೆ ಸೇರಿ ಎಲ್ಲಾ ಪದಗಳ ಅರ್ಥವು ಪ್ರಧಾನವಾದರೆ ಅದನ್ನು ದ್ವಂದ್ವ ಸಮಾಸ ಎನ್ನುವರು.

🌟 ಉದಾ :
    ಕೃಷ್ಣನೂ+ಅರ್ಜುನನೂ=ಕೃಷ್ಣಾರ್ಜುರು
ಧನವೂ+ಧಾನ್ಯವೂ = ಧನಧಾನ್ಯಗಳು
ಮರವೂ+ಗಿಡವೂ+ಬಳ್ಳಿಯೂ= ಮರಗಿಡ ಬಳ್ಳಿಯು
ತರುವು + ಲತೆಯು =ತರುಲತೆಯು

6.ಬಹುರ್ವೀಹಿ ಸಮಾಸ:ಸಮಾಸ ರಚನೆಯಲ್ಲಿ ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾಗುವಾಗ ಬೇರೊಂದು ಪದದ ಅರ್ಥವನ್ನು ನೀಡುತ್ತಿದ್ದರೆ ಅದನ್ನು ಬಹುವ್ರಿಹಿ ಸಮಾಸ ಎನ್ನುವರು.

🌟 ಉದಾ : ಮೂರು+ಕಣ್ಣು ಉಳ್ಳವನು ಅವನೋ ಅವನು = ಮುಕ್ಕಣ್ಣ (ಶಿವ)
ನಾಲ್ಕು + ಮುಖ ಉಳ್ಳವನು ಅವನೋ ಅವನು = ನಾಲ್ಮೊಗ (ಬ್ರಹ್ಮ)

7.ಅಂಶಿ ಸಮಾಸ:ಸಮಾಸ ರಚನೆಯಲ್ಲಿ ಪೂರ್ವ ಪದ ಒಂದು ಅಂಶವಾಗಿದೆ;ಅಂದರೆ ಅದು ಅನೇಕ ಅಂಶಗಳನ್ನು ಒಳಗೊಂಡಿದೆ ಉತ್ತರಪದ ಕೇವಲ ಆ ಅಂಶದ ಒಂದು ಅಂಶವನ್ನು ಮಾತ್ರ ಸೂಚಿಸುತ್ತದೆ.ಹೀಗೆ ಉಂಟಾದ ಸಮಾಸವೇ ಅಂಶಿ ಸಮಾಸ.

🌟 ಉದಾ : ಕೈ + ಮುಂದು = ಮುಂಗೈ
     ಕಾಲು + ಹಿಂದು = ಹಿಂಗಾಲು
    ನಾಲಗೆಯ ತುದಿ= ತುದಿನಾಲಿಗೆ
    ಗೋಡೆಯ+ನಡುವೆ = ನಡುಗೋಡೆ
   ಇರುಳಿನ + ನಡುವೆ = ನಟ್ಟಿರುಳು

8.ಗಮಕ ಸಮಾಸ:ಪೂರ್ವಪದದಲ್ಲಿ ಸರ್ವನಾಮ ಕೃದಂತಗಳಲ್ಲಿ ಯಾವುದಾದರೂ ಒಂದು ಇದ್ದು ಉತ್ತರ ಪದ ನಾಮಪದವಾಗಿದ್ದು ಅವೆರಡೂ ಸೇರಿ ಆಗುವ ಸಮಾಸವೇ ಗಮಕ ಸಮಾಸ.

🌟 ಉದಾ :ಅವನು+ಹುಡುಗ=ಆಹುಡುಗ
ಇದು +ಬೆಟ್ಟ = ಈ ಬೆಟ್ಟ
ಅದು + ಕಲ್ಲು = ಆ ಕಲ್ಲು
ಇದು + ಬೆಕ್ಕು = ಈ ಬೆಕ್ಕು
ಕಡೆಯುವ + ಕೋಲು = ಕಡೆಗೋಲು

😊 ಮುಕ್ತಾಯ😊

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು