ಮಧ್ಯಕಾಲೀನ ಭಾರತದ ಇತಿಹಾಸ - ಮರಾಠರು

ಹದಿನೇಳನೆಯ ಶತಮಾನದಲ್ಲಿ ದಖನ್ ಭಾಗದಲ್ಲಿ ಮರಾಠ ರಾಜ್ಯ ಉದಯವಾಗಿದ್ದು ಒಂದು ಪ್ರಮುಖ ಬೆಳವಣಿಗೆ, ಇದು ಇಂದಿನ ಪಶ್ಚಿಮ ಭಾರತದ ಭಾಗದಲ್ಲಿ ವಿರಮಿಸಿತ್ತು. ಹದಿನೇಳನೆಯ ಶತಮಾನದಲ್ಲಿ ಮರಾಠವಾಡ ಪ್ರದೇಶವು ಅಹಮದ್‌ನಗರದ ನಿಜಾಮಷಾಹಿ ಮತ್ತು ಬಿಜಾಪುರದ ಆದಿಲಷಾಹಿಗಳ ಆಧೀನದಲ್ಲಿತ್ತು. ಈ ಸುಲ್ತಾನರು ಸ್ಥಳೀಯ ಮರಾಠರನ್ನು ಸೈನ್ಯದಲ್ಲಿ ನೇಮಕ ಮಾಡಿಕೊಂಡರು, ಶಹಾ ಭೋಗ್ಯ ಬಿಜಾಪುರದ ಸುಲ್ತಾನರಲ್ಲಿ ಆಡಳಿತಗಾರಾಗಿದ್ದು ಸುಲ್ತಾನರಿಂದ ಕೆಲವು ಜಾಗೀರುಗಳನ್ನು ಪಡೆದುಕೊಂಡಿದ್ದನು. ದೇಶಪಾಂಡೆ ಮತ್ತು ದೇಶಮುಖರು ಸ್ಥಳೀಯವಾಗಿ ಪ್ರಭಾವಿ ನಾಯಕರಾಗಿದ್ದರು.

ಶಿವಾಜಿ
ಮರಾಠ ರಾಜ್ಯದ ಸ್ಥಾಪನೆ: ಮಧ್ಯಕಾಲದ ಭಾರತದ ಇತಿಹಾಸದಲ್ಲಿ ಹೊಸ ಆದಾಯವನ್ನು ಪಾರಂಭಿಸಿತ, ಔರಂಗಜೇಬನ ಆಳ್ವಿಕೆಯ ಕಾಲಕ್ಕೆ ಮೊಘಲ್ ಸಾಮ್ರಾಜ್ಯ ಅವನತಿ ಹೊಂದುತ್ತಿತ್ತು. ಹಿಂದಿನ ಮೊಘಲ್ ಸಾಮ್ರಾಟರು ಕಟ್ಟಿದ ಸಮರ್ಥವಾದ ಆಡಳಿತ ಕ್ರಮೇಣ ಮರ್ಬಲವಾಗುತ್ತಿತ್ತು ರಾಜಧಾನಿಯಿಂದ ದೂರದಲ್ಲಿದ್ದ ಪ್ರಾಂತ್ಯಗಳು ನಿಶಕ್ತಗೊಂಡ ಆಡಳಿತದ ಫಲವಾಗಿ ಅರಾಜಕಸ್ಥಿತಿಯಲ್ಲಿದ್ದವು. ಆಧಿಕಾರಿಗಳು ಸಾಮ್ರಾಟನ ಆದೇಶಗಳನ್ನು ಪಾಲಿಸುತ್ತಿರಲಿಲ್ಲ. ಪಶ್ಚಿಮ ಭಾಗದಲ್ಲಿ ಮೊಘಲ ಸಾಮ್ರಾಜ್ಯದ ಅಂಚಿನಲ್ಲಿದ್ದ ಮರಾಠವಾಡ ಪ್ರಾಂತ್ಯದಲ್ಲಿ ಅಧಿಕಾರಿಗಳ ದಬ್ಬಾಳಿಕೆ ಮಿತಿಮೀರಿತ್ತು. ಕೃಷಿಕರು ವರ್ತಕರು ಮತ್ತು ಕರಕುಶಲಿಗಳು ಅಧಿಕ ತೆರಿಗೆ ಭಾರದಿಂದ ಬಸವಳಿದಿದ್ದರು, ಅಧಿಕಾರಿಗಳ ಕಿರುಕುಳಗಳಿಂದ ಸಾಮಾಜಿಕ ಜೀವನ, ಸಹ ಅಸ್ತವ್ಯಸ್ತವಾಗಿತ್ತು. ಮುಕ್ತವಾಗಿ ಸಾಮಾಜಿಕ ಧಾರ್ಮಿಕ ಸಮಾರಂಭಗಳನ್ನು ನಡೆಸುವಂತಿರಲಿಲ್ಲ, ತೆರಿಗೆಗಳನ್ನು ಮತ್ತು ಮಾರಾಟದ ರಾಜಕ ಸುಸ್ಥಿತಿಯಲ್ಲಿ ಧರ್ಮ, ಸಂಸ್ಕೃತಿಗಳ. ಬಗೆಗೆ ಮರಾಠರಲ್ಲಿದ್ದ, ನಿಷ್ಠೆಯನ್ನು ಉದ್ದೀಪಿಸಿದ ಶಿವಾಜಿ ಔಂಗಜೇಬನ ಜೊತೆ ಹೋರಾಡಿ ಮರಾಠ ಸಾಮ್ರಾಜ್ಯ ಸ್ಥಾಪಸಿದನು ಮರಾಠರಲ್ಲಿ ಶಿವಾಜಿ ಶ್ರೇಷ್ಠ ದೊರೆ, ರಾಜ್ಯ ವಿಸ್ತರಣೆ ಜೊತೆಗೆ ಉತ್ತಮ ಆಡಳಿತ ನೀಡುವುದರಲ್ಲಿಯೂ ಶಿವಾಜಿ ಯಶಸ್ವಿಯಾದನು, ಮಹಾರಾಷ್ಟ್ರದ ಸುಪ್ರಸಿದ್ಧ ಸಂತರ ಬೋಧನೆಗಳಿಂದ ಸ್ಪೂರ್ತಿ ಪಡೆದ ಶಿವಾಜಿಗೆ ಹಿಂದೂ ಧರ್ಮ ರಕ್ಷಣೆ ಮತ್ತು ಮರಾಠ ರಾಜ್ಯ ಸ್ಥಾಪನೆ ಪ್ರಮುಖ ಅಧ್ಯತೆಗಳಾಗಿದ್ದವು.
ಶಿವಾಜಿ ಪುಣೆ ಜಿಲ್ಲೆಯ ಶಿವನೇರಿ ಎಂಬಲ್ಲಿ ಜನಿಸಿದನು. ಈತನ ತಂದೆ ಶಹಾಜಿ ಭೋಷ್ಲೆ ಬಿಜಾಪುರ ಸುಲ್ತಾನರ ಸೇವೆಯಲ್ಲಿದ್ದನು, ಅವನ ತಾಯಿಯಾದ ಜೀಜಾಬಾಯಿ ಧರ್ಮ, ಶ್ರದ್ಧೆಯು ಸಾತ್ವಿಕ ಮಹಿಳೆಯಾಗಿದ್ದು ಪುತ್ರನಲ್ಲಿ ಧರ್ಮಶ್ರದ್ಧೆ, ಧೈರ್ಯ, ಜೀವನ ನಿಷ್ಠೆ ಹಾಗೂ ಉನ್ನತಾದರ್ಶಗಳನ್ನು ಬೆಳೆಸಿದಳು, ದಾದಾಜಿಕೊಂಡದೇವ ಶಿವಾಜಿಯ ಗುರುವಾಗಿದ್ದು, ಶಸ್ತ್ರಾಸ್ತ್ರ ಮತ್ತು ಶಾಸ್ತ್ರಗಳಲ್ಲಿ ತರಬೇತಿಗೊಳಿಸಿದನು. ಶಿವಾಜಿ ಅಂಗಸಾಧನೆ, ಖಡ್ಗ ಪ್ರಯೋಗ, ಕುದುರೆ ಸವಾರಿ ಮುಂತಾದ ಕ್ಷೇತ್ರ ಕಲೆಗಳಲ್ಲಿ ಪರಿಣತಿ ಪಡೆದನು. ಶಿವಾಜಿ ಬಾಲದಲ್ಲಿ, ಸ್ವತಂತ್ರ ರಾಜ್ಯ ನಿರ್ಮಿಸುವ ಕನಸನ್ನು ಹೊಂದಿದ್ದನು ಪಣೆಯನ್ನು ಕೇಂದ್ರವನ್ನಾಗಿಟ್ಟುಕೊಂಡು ರಾಜ್ಯ ವಿಸ್ತರಿಸುವ ಕರ್ಯದಲ್ಲಿ ತೊಡಗಿದನು. ಈ ದಿಶೆಯಲ್ಲಿ ಶಿವಾಜಿಯು ತನ್ನ ಸ್ಥಳೀಯ ನಿವಾಸಿಗಳಾದ ಮಾವಳಿ ಯುವಕರ ಸೈನ್ಯ ಸಂಘಟಿಸಿ ಅವರಿಗೆ ಗೆರಿಲ್ಲಾ ಯುದ್ಧ ತಂತ್ರಗಳಲ್ಲಿ ಸೈನಿಕ ತರಬೇತಿ ನೀಡಿದನು. ಶಿವಾಜಿಯು ಬಿಜಾಪುರದ ಸುಲ್ತಾನನಿಂದ ತೋರಣಗಡ ಕೋಟೆ, ಪರಂದರಗಡ ಕೋಟೆ, ಚರ್ಕ ಕೋಟೆ, ಸಿಂಹಗಡ, ಜವಳಿ ಕೋಟೆ ವಶಪಡಿಸಿಕೊಂಡನು. ಶೋದಕೋಟೆಯ ಹತ್ತಿರದ ಹೊಸದುರ್ಗಕ್ಕೆ ರಾಯಗಡವೆಂದು ಕರೆದನು. ಪತಾಪಗಡ ಎಂಬ ಹೊಸಕೋಟೆಯನ್ನು ನಿರ್ಮಿಸಿದನು. ಶಿವಾಜಿಯು ಬಿಜಾಪುರ ಸುಲ್ತಾನರ ವಿರುದ್ಧ ಹೋರಾಟ ನಡೆಸಿದ್ದರಿಂದ ಆತನ ತಂದೆ ಶಾಹಾಜಿಯನ್ನು ಸುಲ್ತಾನನು ಬಂಧಿಸಿದರು. ಮತ್ತೆ ಹೋರಾಟ ನಡೆಸುವುದಿಲ್ಲ ಎಂಬ ಆಶ್ವಾಸನೆಯ ಮೇಲೆ ಶಹಾಜಿಯನ್ನು ಬಿಡುಗಡೆಗೊಳಿಸಲಾಯಿತು..
ಮೊಘಲರು ಹಾಗೂ ಶಿವಾಜಿ ಸಂಬಂಧ
ಶಿವಾಜಿ ಅನೇಕ ವರ್ಷಗಳ ಕಾಲ ಮೊಘಲ ದೊರೆ ಔರಂಗಜೇಬನೊಂದಿಗೆ ಹೋರಾಟ ನಡೆಸಿದನು. ದಕ್ಷಿಣ ಭಾರತದಲ್ಲಿ ಷಾಹಿ ರಾಜ್ಯಗಳನ್ನು ಸೋಲಿಸುವುದರ ಜೊತೆಗೆ ಮರಾಠ ರಾಜ್ಯವನ್ನು ಸಹ ಸಂಪೂರ್ಣವಾಗಿ ಸೊಲಿಸಬೇಕೆಂದು ಔರಂಗಜೇಬನು ನಿಶ್ಚಯಿಸಿದ್ದನು. ಈ ಉದ್ದೇಶ ಈಡೇರಿಕೆಗಾಗಿ ಕಾಯಿಸ್ವಾಖಾನ, ಜೈಸಿಂಗ್‌ರನ್ನು ನೇಮಕ ಮಾಡಿದನು. ಜೈಸಿಂಗ ಶಿವಾಜಿಯನ್ನು ಸೋಲಿಸಿ ಪುರಂದರಪಡದಲ್ಲಿ ಒಪ್ಪಂದ ಮಾಡಿಕೊಂಡನು. ಆದರನ್ವಯ ಶಿವಾಜಿ ತನ್ನ 21 ಹುರ್ಗಗಳನ್ನು ಹಾಗೂ ವಾರ್ಷಿಕ 15 ಲಕ್ಷ ವರಮಾನ ಬರುವ ಪ್ರದೇಶವನ್ನು ನೀಡಿದನು. ಮೊಘಲ್‌ರೊಂದಿಗೆ ನಿಷ್ಠೆಯಿಂದಿರುವುದಾಗಿ ಹೇಳಿ ತನ್ನ ಪುತ್ರ ಸಂಭಾಜಿಯ ನೇತೃತ್ವದಲ್ಲಿ 50 ಅಶ್ವದಳದೊಂದಿಗೆ ದೆಹಲಿಗೆ ಕಳುಹಿಸಿದನು. ಬಿಜಾಪುರದ ಆದಿಲ್ ೫ ಹಾಗೂ ಗೋಲ್ಕಂಡದ ಕುತುಬ್ ಶಾಹಿ ಸುಲ್ತಾನರೊಂದಿಗೆ ಶಿವಾಜಿ ಕೈಜೋಡಿಸಬಾರದೆಂಬ ಉದ್ದೇಶದಿಂದ ಆತನಿಗೆ ಆಗಾಕ್ಕೆ ಬರಲು ಜೈಸಿಂಗ್ ತಿಳಿಸಿದನು. ಔರಂಗಜೇಬ ತನ್ನ ದರ್ಬಾರಿನಲ್ಲಿ ಶಿವಾಜಿಗೆ ಸೂಕ್ತ ಗೌರವ ನೀಡದೆ ಅಪಮಾನಗೊಳಿಸಿದನು. ಇದನ್ನು ಪ್ರತಿಭಟಸಿದ್ದಕ್ಕಾಗಿ ಶಿವಾಜಿ ಹಾಗೂ ಅವನ ಮಗ ಸಂಭಾಜಿಯನ್ನು ಆಗ್ರಾದ ಸೆರೆಮನೆಯಲ್ಲಿ ಬಂಧನದಲ್ಲಿಡಲಾಯಿತು.ಆದರೆ ಕೆಲವು ದಿನಗಳಲ್ಲಿ ಶಿವಾಜಿ ತನ್ನ ಪುತ್ರನೊಂದಿಗೆ ಮಿಠಾಯ ಬುಟ್ಟಿಯಲ್ಲಿ ಕುಳಿತುಕೊಂಡು ಸರಮನೆಂದ ಶಾರಾಗಿ ರಾಯಗಡ ತಲುಪಿದನು. ಮುಂದೆ ತನ್ನ ಸೈನ್ಯವನ್ನು ಬಲಗೊಳಿಸಿ ತಾನು ಕಳೆದುಕೊಂಡಿದ್ದ ಕೋಟೆಗಳನ್ನು ಪುನಃ ವಶಪಡಿಸಿಕೊಂಡನು.ಶಿವಾಜಿಯು ಮೊರ್ಘ ಮತ್ತು ಸಾಹಿ ದೇಶಗಳೊಂದ ತ (ಭೂಕಂದಾಯದ ಒಂದರ ನಾಲ್ಯಾಂಶ ಭಾಗ) ಮತ್ತು ತನ್ನ ರಾಜ್ಯದಲ್ಲಿ ಸರದೇಶಮುಖ (ಭೂಕಂದಾಯದ ಒಂದರ ಹತ್ತಾಂಶ ಭಾಗ) ಸಂಗ್ರಹಿಸುತ್ತಿದ್ದನು. ಸಾ.ಶ. 1674ರಲ್ಲಿ ರಾಯಘಡದಲ್ಲಿ ಶಿವಾಜಯ ಪಟ್ಟಾಭಿಪ್ರಕ ನಡೆಯಿತು. ಅಲ್ಲಿ ಶಿವಾಜಿಗೆ 'ಭತಪತಿ'ಯೆಂಬ ಬಿರುದು ನೀಡಿ ಗೌರವಿಸಲಾಯಿತು.
ಶಿವಾಜಿಯ ಆಡಳಿತ: ಶಿವಾಜಿ ತನ್ನ ವಿಶಾಲ ರಾಜ್ಯದಲ್ಲಿ ಉತ್ತಮ ಆಡಳಿತ ಸಂಘಟಿಸಿದ್ದನು. ತನ್ನ ರಾಜ್ಯವನ್ನು ಅನೇಕ ಪ್ರಾಂತಗಳಾಗಿ ವಿಂಗಡಿಸಿದ್ದನು. ಅವುಗಳನ್ನು ಸ್ವರಾಜ್ಯ ಮತ್ತು ಮೊಘಲರ ರಾಜ್ಯಗಳೆಂದು ಕರೆಯುತ್ತಿದ್ದರು. ಮರಾಠಿ ಆಡಳಿತ ಭಾಷೆಯಾಗಿತ್ತು. ಸರ್ಕಾರದ ಮುಖ್ಯಸ್ಥನಾಗಿದ್ದ ದೊರೆಗೆ ಆಡಳಿತದಲ್ಲಿ ನೆರವು ನೀಡಲು ಆಷ್ಟ ಪ್ರಧಾನರೆಂಬ ಮಂತ್ರಿಗಳಿದ್ದರು. ಜೊತೆಗೆ ಸಹಾಯಕ್ಕಾಗಿ ಇತರೆ ಅಧಿಕಾರಿಗಳಿದ್ದರು. ಪಂತ, ಜಿಲ್ಲೆ, ಗ್ರಾಮ ಆಡಳಿತದ ಘಟಕಗಳಾಗಿದ್ದವು.

ಕಂದಾಯ ವ್ಯವಸ್ಥೆ: ಶಿವಾಜಿಯ ಕಂದಾಯ ಪದ್ಧತಿ ರೈತರಿಗೆ ಅನುಕೂಲಕರವಾಗಿತ್ತು. ಅವನು ಜಾಗೀರುದಾರಿ ಕಂದಾಯ ಪದ್ಧತಿಯನ್ನು ರದ್ದುಪಡಿಸಿದನು. ಕಂದಾಯವನ್ನು ಹಣದ ಅಥವಾ ವಸ್ತು ರೂಪದಲ್ಲಿ ನೀಡಬೇಕಿತ್ತು. ಚೌತ್ ಹಾಗೂ ಸರದೇಶಮುಖಿಯೆಂಬ ಭೂಕಂದಾಯಗಳಿದ್ದವು. ನ್ಯಾಯಾಂಗ ಪದ್ಧತಿ: ಶಿವಾಜಿ ಆಡಳಿತದಲ್ಲಿ ಪರಂಪರಾನುಗತ ನ್ಯಾಯಾಂಗ ವ್ಯವಸ್ಥೆ ಜಾರಿಯಲ್ಲಿತ್ತು.ಗ್ರಾಮಗಳಲ್ಲಿ ಪಂಚಾಯತಿಗಳು ನ್ಯಾಯದಾನ ನೀಡುತ್ತಿದ್ದವು, ಬ್ರಾಹ್ಮಣ ನ್ಯಾಯಾಧೀಶರು ಸ್ಥತಿಗಳ ಆಧಾರದ ಮೇಲೆ ನಿರ್ಣಯ ನೀಡುತ್ತಿದ್ದರು. ಸೈನ್ಯ: ಮರಾಠ ಸೈನ್ಯದಲ್ಲಿ ಕಾಲ್ಪಳ, ಗಜದಳ, ಅಶ್ವದಳ ಮತ್ತು ಫಿರಂಗಿ ದಳಗಳಿದ್ದವು, ರಾಯಗಡ, ರಾಜಗಡೆ, ಶೋರಣೆ ಗಡ,ಪ್ರತಾಪಗಡ ಮತ್ತು ಸಿಂಹಗಡಗಳು ಪ್ರಮುಖ ಕೋಟೆಗಳಿದ್ದವು. ಹವಾಲ್ದಾರ ಕೋಟೆಯ ಮೇಲ್ವಿಚಾರಕನಾಗಿದ್ದನು. ಸೈನ್ಯದಲ್ಲಿ ಅನೇಕ ಚಿಕ್ಕ ಘಟಕಗಳಿದ್ದವು. ಗೆರಿಲ್ಲಾ ಯುದ್ಧತಂತ್ರಗಾರಿಕೆಯಲ್ಲಿ ಶಿವಾಜಿ ಸೈನಿಕರು ವಿಶೇಷ ತರಬೇತಿ ಪಡೆದಿದ್ದರು.
ಶಿವಾಜಿಯ ಉತ್ತಾರಾಧಿಕಾರಿಗಳು : ಶಿವಾಜಿಗೆ ಮರಣದ ಸಮಯದಲ್ಲಿ ಆತನ ಪತ್ನಿಯರಾದ ಸಾಯಿಬಾಯಿ (ಸಾಂಬಾಜಿಯ ತಾಯಿ), ಸೊಯಾಬಾಯಿ ಶಿರ್ಕೆ (ರಾಜಾರಾಮನ ತಾಯಿಯರ ಮಧ್ಯ ಆಂತರಿಕ ಕಲಹ ಉಂಟಾಯಿತು. ಸಾಂಬಾಜಿ ತನ್ನ ಶಕ್ತಿಯಿಂದ ಮರಾಠ ರಾಜ್ಯವನ್ನು ವಶಪಡಿಸಿಕೊಂಡು ಆಳ್ವಿಕೆ ಪ್ರಾರಂಭಿಸಿದನು. ಈತನಿಗೆ ದೂರದೃಷ್ಟಿ ಮತ್ತು ವಿವೇಕ ಇರಲಿಲ್ಲ. ಇದರಿಂದ ರಾಜ್ಯ ಸಂರಕ್ಷಿಸುವುದರ ಬದಲಾಗಿ ಔರಂಗಜೇಬನ ದಾಳಿಗೆ ತುತ್ತಾಗಿ ಕೊಲ್ಲಲ್ಪಟ್ಟನು. ಆತನ ಪತ್ನಿ ಹಾಗೂ ಚಿಕ್ಕ ಮಗ ಶಾಹುನನ್ನು ಸೆರೆಹಿಡಿಯಲಾಯಿತು. ಹೀಗಾಗಿ ರಾಜಾರಾಮ ಶಾಹು (ಸಾಂಬಾಜಿಯ ಪುತ್ರ) ರಾಜಪ್ರತಿನಿಧಿಯಾಗಿ ಆಡಳಿತದ ಸೂತ್ರ ವಹಿಸಿಕೊಂಡನು. ರಾಜಾರಾಮ ಪುನಃ ಮೊಘಲರೊಂದಿಗೆ ಹೋರಾಟ ಮಾಡಿ ಗುಜರಾತ, ಮಾಳ್ವಾ, ಖಾನದೇಶ, ಬಿರಾರಗಳನ್ನು ಮತ್ತು ಕೆಲವು ಕೋಟೆಗಳನ್ನು ವಶಪಡಿಸಿಕೊಂಡನು. ರಾಜಾರಾಮ ಸಾ.ಶ. 1700ರಲ್ಲಿ ಮರಣ ಹೊಂದಿದ್ದರಿಂದ ಆತನ ಪತ್ನಿ ತಾರಾಬಾಯಿ ಮೋಹಿತೆ ತನ್ನ ಹತ್ತು ವರ್ಷದ ಮಗ ಎರಡನೆಯ ಶಿವಾಜಿಯನ್ನು ಪಟ್ಟಕ್ಕೇರಿಸಿ ಅಧಿಕಾರ ಪ್ರಾರಂಭಿಸಿದಳು. ಇವಳು ಸಾ.ಶ. 1700 ರಿಂದ 1708ರವರೆಗೆ ರಾಜಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದಳು. ಇವಳು ಸಹ ಔರಂಗಜೇಬನೊಂದಿಗೆ ಯುದ್ಧ ಪ್ರಾರಂಭಿಸಿದಳು. ಪ್ರಾರಂಭದಲ್ಲಿ ಮೊಘಲರು ವಿಜಯಶಾಲಿಗಳಾದರೆ ನಂತರ ಮರಾಠರು ತಾವು ಕಳೆದುಕೊಂಡಿದ್ದ ಕೋಟೆಗಳನ್ನು ಪುನಃ ವಶಪಡಿಸಿಕೊಂಡರು. ಔರಂಗಜೇಬನ ಉತ್ತರಾಧಿಕಾರಿಯಾದ ಒಂದನೆಯ ಬಹದ್ದೂರ ಷಾ ಸಾಂಭಾಜಿಯ ಪುತ್ರ ಶಾಹುನನ್ನು ಬಂಧನದಿಂದ ಬಿಡುಗಡೆಗೊಳಿಸಿ ದಕ್ಷಿಣದಲ್ಲಿದ್ದ ಮೊಘಲರ ಸುಭಾಗಳಿಂದ ಚೌತ್ ಮತ್ತು ಸರದೇಶಮುಖಿಗಳನ್ನು ಸಂಗ್ರಹಿಸಲು ಅನುಮತಿ ನೀಡಿದನು. ಇದು ತಾರಾಬಾಯಿ ಮತ್ತು ಶಾಹುನ ನಡುವೆ ಆಂತರಿಕ ಕಲಹಕ್ಕೆ ಕಾರಣವಾಗಿ ಶಾರಾದಾಯಿ ಪರಾಭವಗೊಂಡಳು. ಆದರೆ ಶಾಹುವೂ ಸಹ ಸಾಮರ್ಥ್ಯ ಹೊಂದಿರಲಿಲ್ಲ. ಇದರಿಂದಾಗಿ ತನ್ನ ಆಡಳಿತವನ್ನು ಪೇಶೆಗೆ (ಪ್ರಧಾನ ಮಂತ್ರಿ) ಬಿಟ್ಟುಕೊಡಬೇಕಾಯಿತು. ಹೀಗೆ ಮರಾಠ ರಾಜ್ಯದಲ್ಲಿ ಪಶೈಯರ ಆಡಳಿತ ಪ್ರಾರಂಭವಾಯಿತು.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು