1. ಶಿವಮೊಗ್ಗ
🔸 ಶಿವಮೊಗ್ಗ ಜಿಲ್ಲೆಯಲ್ಲಿ *ಲಿಂಗನಮಕ್ಕಿ ಅಣೆಕಟ್ಟು ಶರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ,*
🔹 ಶಿವಮೊಗ್ಗ ಜಿಲ್ಲೆಯಲ್ಲಿ *ಗಾಜನೂರು ಅಣೆಕಟ್ಟು ತುಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ,*
🔸 ಶಿವಮೊಗ್ಗ ಜಿಲ್ಲೆಯ "ಕೂಡ್ಲಿಯಲ್ಲಿ" ಸ್ಥಳದಲ್ಲಿ *ತುಂಗಾ* ಮತ್ತು *ಭದ್ರಾ ನದಿಗಳು* ಸಂಧಿಸುತ್ತವೆ,
🔹 ಶಿವಮೊಗ್ಗ ಜಿಲ್ಲೆಯಲ್ಲಿ *ಗುಡವಿ ಪಕ್ಷಿಧಾಮ* ಇದೆ,
🔸 ಶಿವಮೊಗ್ಗ ಜಿಲ್ಲೆಯಲ್ಲಿ *ಮಂಡಗದ್ದೆ ಪಕ್ಷಿಧಾಮ* ವಿದೆ,
🔹 ಶಿವಮೊಗ್ಗ ಜಿಲ್ಲೆಯಲ್ಲಿ *ಕುವೆಂಪು ವಿಶ್ವವಿದ್ಯಾಲಯ*
ಇದೆ,( *ಶಾಂತಿನಾಥ ದೇಸಾಯಿಯವರು* ಮೊದಲ ಉಪಕುಲಪತಿಗಳಾಗಿದ್ದರು)
🔸 ಶಿವಮೊಗ್ಗ ಜಿಲ್ಲೆಯಲ್ಲಿ *ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ* ಇದೆ,
🔹 ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ *ಸರ್ ಎಂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ* 1923 ರಲ್ಲಿ ಸ್ಥಾಪನೆ ಮಾಡಲಾಯಿತು, ( ಇದು *ಕರ್ನಾಟಕದ ಮೊದಲ ಕಬ್ಬಿನ ಮತ್ತು ಉಕ್ಕಿನ ಕೈಗಾರಿಕೆ ಆಗಿದೆ*,
🔸 ಶಿವಮೊಗ್ಗ ಜಿಲ್ಲೆಯ ಆಗುಂಬೆ ಪಕ್ಕ *ಹುಲಿಕಲ್* ಎಂಬ ಪ್ರದೇಶವು ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ ವಾಗಿದೆ,
🔹 ಶಿವಮೊಗ್ಗ ಜಿಲ್ಲೆಯ ಆಗುಂಬೆಯನ್ನು *ದಕ್ಷಿಣ ಭಾರತದ ಚಿರಾಪುಂಜಿ* ಎಂದು ಕರೆಯುತ್ತಾರೆ,
🔸 ಶಿವಮೊಗ್ಗ ಜಿಲ್ಲೆಯ ಆಗುಂಬೆ *ಕಾಳಿಂಗ ಸರ್ಪಗಳಿಗೆ ಹೆಸರುವಾಸಿಯಾಗಿದೆ*,
🔹 ಶಿವಮೊಗ್ಗ ಜಿಲ್ಲೆಯ *ಜೋಗ ಜಲಪಾತವು ಶರಾವತಿ ನದಿಯಿಂದ* ಸೃಷ್ಟಿಯಾಗಿದೆ,
🔸 ಶಿವಮೊಗ್ಗ ಜಿಲ್ಲೆಯ *ಕುಂಶಿ* ಎಂಬ ಪ್ರದೇಶವು "ಕಬ್ಬಿಣದ ಅದಿರಿಗೆ" ಪ್ರಸಿದ್ಧಿಯಾಗಿದೆ,
🔹 ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥ ಎಂಬ ಸ್ಥಳದಲ್ಲಿ *ಶರಾವತಿ ನದಿ ಉಗಮಿಸುತ್ತದೆ,*
🔸 ಶಿವಮೊಗ್ಗ ಜಿಲ್ಲೆಯಲ್ಲಿ *ಶಿವಪ್ಪನಾಯಕನ ಅರಮನೆ* ಇದೆ,
🔹 ಕೆಳದಿಯ ಶಿವಪ್ಪ ನಾಯಕ *ಶಿಸ್ತಿಗೆ*( ಕಂದಾಯ) ಹೆಸರುವಾಸಿಯಾಗಿದ್ದಾರೆ,
🔸 ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸರ್ಕಾರಿ ನೌಕರಿಗೆ ನಿಷೇಧಿಸಿದ ಕರ್ನಾಟಕದ ಗ್ರಾಮ= *ಈಸೂರು*
🔹 ಕರ್ನಾಟಕದಲ್ಲಿ ಮೊದಲ ಸ್ವಾತಂತ್ರ್ಯವನ್ನು ಘೋಷಿಸಿಕೊಂಡು ಹಳ್ಳಿ= *ಈಸೂರು*( ಶಿವಮೊಗ್ಗ ಜಿಲ್ಲೆ)
======================================
2. ಬೆಳಗಾವಿ
👉 ಬೆಳಗಾವಿ ಜಿಲ್ಲೆಯ ರಚನೆಯಾದ ವರ್ಷ- *ನವಂಬರ್ 1, 1956*
👉 *ಬೆಳಗಾವಿ ಜಿಲ್ಲೆಯು ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಆಗಿದೆ*, ( ವಿಸ್ತೀರ್ಣದಲ್ಲಿ,)
👉 *1924ರ ಬೆಳಗಾವಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಾತ್ಮ ಗಾಂಧೀಜಿ ಅವರು ವಹಿಸಿದ್ದರು*,
👉 *ಬೆಳಗಾವಿ ಜಿಲ್ಲೆಯಲ್ಲಿ ಸುವರ್ಣಸೌಧ ಎಂಬ ಕಟ್ಟಡವಿದೆ,*( ಶಿಲ್ಪಿ, ಕೆ ಉದಯ್, )
👉 ಬೆಳಗಾವಿ ಜಿಲ್ಲೆಯನ್ನು *ಕಾಲ್ದಳದ ತೊಟ್ಟಿಲು ಎಂದು ಕರೆಯುತ್ತಾರೆ*,
👉 ಬೆಳಗಾವಿ ಜಿಲ್ಲೆಯಲ್ಲಿ *ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಇದೆ*.
👉 ಬೆಳಗಾವಿ ಜಿಲ್ಲೆಯಲ್ಲಿ *ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಇದೆ*
👉 ಬೆಳಗಾವಿ ಜಿಲ್ಲೆಯಲ್ಲಿ *ಹಿಡಕಲ್ ಅಣೆಕಟ್ಟು ಇದೆ, ಇದನ್ನು ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ,*
👉 ಬೆಳಗಾವಿ ಜಿಲ್ಲೆಯಲ್ಲಿ *ಗೋಕಾಕ್ ಜಲಪಾತ ಇದೆ ಈ ಜಲಪಾತವು ಘಟಪ್ರಭಾ ನದಿಯಿಂದ ಸೃಷ್ಟಿಯಾಗಿದೆ*.
👉 ಗೋಕಾಕ್ ಜಲಪಾತವನ್ನು *ಕರ್ನಾಟಕದ ನಯಾಗರ ಜಲಪಾತ ಎಂದು ಕರೆಯಲಾಗುತ್ತದೆ,*✍️
👉 ಬೆಳಗಾವಿ ಜಿಲ್ಲೆಯಲ್ಲಿ *ಕೊಡಂಚಿನ ಮಾಲಕಿ ಜಲಪಾತವು ಮಾರ್ಕಂಡೇಯ ನದಿಗೆ ಸೃಷ್ಟಿಯಾಗಿದೆ*.
👉 ಬೆಳಗಾವಿ ಜಿಲ್ಲೆಯಲ್ಲಿ *ವಜ್ರಪೋಹ ಜಲಪಾತವು ಮಹಾನದಿಗೆ ಸೃಷ್ಟಿಯಾಗಿದೆ*, (KAS-2020)
👉 ಬೆಳಗಾವಿ ಜಿಲ್ಲೆಯಿಂದ *ಕಳಸಾ-ಬಂಡೂರಿ ನಾಲಾ ಯೋಜನೆ ಪ್ರಾರಂಭವಾಗಿದೆ*,
👉 ಈ ಕಳಸಾ-ಬಂಡೂರಿ ನಾಲಾ ಯೋಜನೆ *ಮಹಾದಾಯಿ ನದಿಗೆ ಸಂಬಂಧಿಸಿದೆ*.
👉 ಮಹಾದಾಯಿ ನದಿ ವಿವಾದವೂ *ಕರ್ನಾಟಕ ಮತ್ತು ಗೋವಾ ರಾಜ್ಯಗಳನಡುವೆ ಇದೆ,*
👉 ಬೆಳಗಾವಿ ಜಿಲ್ಲೆಯು ಕರ್ನಾಟಕದಲ್ಲಿ *ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆಯಾಗಿದೆ*
👉 ಬೆಳಗಾವಿ ಜಿಲ್ಲೆಯ *ಚಿಕ್ಕೋಡಿ ತಾಲೂಕು ತಂಬಾಕು/ ಹೊಗೆಸೊಪ್ಪು ಬೆಳೆಗೆ ಹೆಸರುವಾಸಿಯಾಗಿದೆ*,
👉 ಬೆಳಗಾವಿ ಜಿಲ್ಲೆಯಲ್ಲಿ *ಎರಡನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ 2011ರಲ್ಲಿ ನಡೆಯಿತು,*
👉 ಬೆಳಗಾವಿ ಜಿಲ್ಲೆಯ *ಖಾನಾಪುರ ಬಾಕ್ಸೈಟ್ ಅದಿರಿಗೆ ಹೆಸರುವಾಸಿಯಾಗಿದೆ*,
👉 ಬೆಳಗಾವಿ ಜಿಲ್ಲೆಯ *ನಂದಗಡ್ ಎಂಬ ಸ್ಥಳದಲ್ಲಿ ಸಂಗೊಳ್ಳಿ ರಾಯಣ್ಣನ ಸಮಾಧಿ ಇದೆ,*
👉 ಬೆಳಗಾವಿ ಜಿಲ್ಲೆಯ *ಬೈಲಹೊಂಗಲ ಎಂಬ ಸ್ಥಳದಲ್ಲಿ ಕಿತ್ತೂರಾಣಿ ಚೆನ್ನಮ್ಮಳ ಸಮಾಧಿ ಇದೆ.*
👉 ಬೆಳಗಾವಿ ಜಿಲ್ಲೆಯಲ್ಲಿ *ಉಪ್ಪನ್ನು ಮಾರಿ ಉಪ್ಪಿನ ಕಾನೂನು ಗಂಗಾಧರ ದೇಶಪಾಂಡೆ ಅವರು 1930 ಏಪ್ರಿಲನಲ್ಲಿ ಮುರಿದರು*,
👉 ಬೆಳಗಾವಿ ಜಿಲ್ಲೆಯಲ್ಲಿ *ನಿಪ್ಪಾಣಿ, ಚಿಕ್ಕೋಡಿ, ಸೌದತ್ತಿ, ಬೈಲಹೊಂಗಲ, ನಂದಗಡ, ಕಿತ್ತೂರು, ಎಂಬ ಪ್ರಮುಖ ಊರುಗಳಿವೆ*,
👉 ಬೆಳಗಾವಿ ಜಿಲ್ಲೆಯಲ್ಲಿ *ಗಂಗಾಧರ ದೇಶಪಾಂಡೆ ಅವರು ರಾಷ್ಟ್ರೀಯ ಶಾಲೆ ಸ್ಥಾಪಿಸಿದರು*,
👉 ಬೆಳಗಾವಿ ಜಿಲ್ಲೆಯಲ್ಲಿ *ಹಿಂಡಲಗ ಸೆರೆಮನೆ ಇದೆ,*
👉 ಬೆಳಗಾವಿ ಜಿಲ್ಲೆಯಲ್ಲಿ *ರಾಜ ಲಕ್ಕನ್ನಗೌಡ ಆಣೆಕಟ್ಟಿದೆ ಇದು ಘಟಪ್ರಭಾ ನದಿಗೆ ಕಟ್ಟಲಾಗಿದೆ*,
👉 ರಾಜ ಲಕ್ಕನ ಗೌಡ ಅಣೆಕಟ್ಟನ್ನು *ಹಿಡಕಲ್ ಅಣೆಕಟ್ಟು ಎಂದು ಸಹ ಕರೆಯುತ್ತಾರೆ*,
👉 ಕಳಸಾ-ಬಂಡೂರಿ ನಾಲಾ ಯೋಜನೆ ಯಿಂದ ಕುಡಿಯುವ ನೀರಿನ ಸೌಲಭ್ಯ ಪಡೆಯುವ ಜಿಲ್ಲೆಗಳು *ಗದಗ, ಧಾರವಾಡ ಹಾಗೂ ಬೆಳಗಾವಿ*,
👉 ಬೆಳಗಾವಿ ಜಿಲ್ಲೆಯಲ್ಲಿ *ನವಿಲುತೀರ್ಥ ಅಣೆಕಟ್ಟನ್ನು ಮಲಪ್ರಭಾ ನದಿಗೆ ಕಟ್ಟಲಾಗಿದೆ*
👉 ಬೆಳಗಾವಿ ಜಿಲ್ಲೆಯಲ್ಲಿ *ಸಾಂಬ್ರಾ ವಿಮಾನ ನಿಲ್ದಾಣವಿದೆ.*
👉 ಬೆಳಗಾವಿಯನ್ನು *ಪದಾತಿ ಪಡೆಯ ತೊಟ್ಟಿಲು* ಎನ್ನುವರು.
👉 ದೇಶದಲ್ಲಿಯೇ *ಅತಿ ಎತ್ತರದ ಧ್ವಜ ಸ್ತಂಭ ಬೆಳಗಾವಿಯಲ್ಲಿ*("110ಮೀ ಎತ್ತರ")
👉 ಬೆಳಗಾವಿ ಜಿಲ್ಲೆಯಲ್ಲಿ *ಮಲಪ್ರಭಾ ನದಿಗೆ ರೇಣುಕಾ ಸಾಗರ ಡ್ಯಾಮ್ ನಿರ್ಮಿಸಲಾಗಿದೆ*,
👉 ಬೆಂಗಳೂರಿನ ನಂತರ *ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆಯಾಗಿದೆ
======================================
3. ತುಮಕೂರು ಜಿಲ್ಲೆ
🔸ತುಮಕೂರು ಜಿಲ್ಲೆಯ ವಸಂತ ನರಸಾಪುರ ಎಂಬ ಸ್ಥಳದಲ್ಲಿ ಭಾರತದ ಪ್ರಥಮ *ಫುಡ್ ಪಾರ್ಕ್ ಅನ್ನು 2014 ಸೆಪ್ಟೆಂಬರ್ 24ರಂದು ಭಾರತದ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು,*
🔹ತುಮಕೂರು ಜಿಲ್ಲೆಯು ಕರ್ನಾಟಕದಲ್ಲಿ ಅತಿ ಹೆಚ್ಚು *ತೆಂಗಿನಕಾಯಿ ಉತ್ಪಾದಿಸುವ ಜಿಲ್ಲೆಯಾಗಿದೆ*
🔸ತುಮಕೂರು ಜಿಲ್ಲೆಯ ಶಿರಾ ತಾಲೂಕು ಕರ್ನಾಟಕದಲ್ಲಿ *ಮೊಘಲರ ಆಡಳಿತ ಕೇಂದ್ರವಾಗಿತ್ತು,*
🔹ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ *ಕುದುರೆ ತಳಿ ಸಂಶೋಧನಾ ಕೇಂದ್ರವಿದೆ*
🔸ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಏಷ್ಯಾದಲ್ಲಿ ಅತಿ ಎತ್ತರದ *ಏಕಶಿಲಾ ಬೆಟ್ಟ ವಿದೆ*
🔹ತುಮಕೂರು ಜಿಲ್ಲೆಯ *ಪಾವಗಡ ಎಂಬಲ್ಲಿ ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ಅನ್ನು ಸ್ಥಾಪಿಸಲಾಗಿದೆ*
(PC-2020)
🔸ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಬಿದರೆ ಹಳ್ಳಿ ಕಾವಲ್ನಲ್ಲಿ *HAL ನ ಹೆಲಿಕ್ಯಾಪ್ಟರ್ ತಯಾರಿಕಾ ಘಟಕವನ್ನು ಇತ್ತೀಚಿಗೆ ಸ್ಥಾಪಿಸಲಾಗಿದೆ*
🔹ತುಮಕೂರು ಜಿಲ್ಲೆಯಲ್ಲಿ *ತುಮಕೂರು ವಿಶ್ವವಿದ್ಯಾಲಯ ಇದೆ*
🔸ತುಮಕೂರು ಜಿಲ್ಲೆಯಲ್ಲಿ *ಸಿದ್ದಗಂಗಾ ಮಠ ಇದೆ*
🔹ತುಮಕೂರು ಜಿಲ್ಲೆಯಲ್ಲಿ *ಮಾರ್ಕೋನಹಳ್ಳಿ ಅಣೆಕಟ್ಟನ್ನು ಶಿಂಷಾ ನದಿಗೆ ಕಟ್ಟಲಾಗಿದೆ.*
🔸 ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ಅತಿ ಹೆಚ್ಚು *ಕೆಂಪು ಮಣ್ಣು ಹೊಂದಿದೆ*
🔹ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ಅತಿ ಹೆಚ್ಚು *ರಾಗಿ ಬೆಳೆಯುವ ಜಿಲ್ಲೆಯಾಗಿದೆ,*
======================================
4. ಚಿಕ್ಕಮಂಗಳೂರು
🔹ಚಿಕ್ಕಮಗಳೂರು ಜಿಲ್ಲೆ ಯನ್ನು *ಕಾಫಿ ಜಿಲ್ಲೆ. ಕಾಫಿನಾಡು* ಎಂದು ಕರೆಯುತ್ತಾರೆ,
🔸 *ಮುಳ್ಳಯ್ಯನಗಿರಿ ಶಿಖರವು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡು ಬಂದಿದ್ದು. ಇದು ಕರ್ನಾಟಕದ ಅತಿ ಎತ್ತರವಾದ ಶಿಖರ ವಾಗಿದೆ*(913 ಮೀಟರ್)
🔹ಚಿಕ್ಕಮಗಳೂರು ಜಿಲ್ಲೆಯಲ್ಲಿ *ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ*
🔸ಚಿಕ್ಕಮಗಳೂರು ಜಿಲ್ಲೆಯಲ್ಲಿ *ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಇದೆ.*
🔹ಕುದುರೆಮುಖ ರಾಷ್ಟ್ರೀಯ ಉದ್ಯಾನವು *ಭದ್ರಾ ನದಿ ದಂಡೆ ಮೇಲಿದೆ*
🔸 ಕುದುರೆಮುಖ *ಕಬ್ಬಿಣ ಅದಿರಿಗೆ ಹೆಸರುವಾಸಿಯಾಗಿದೆ*
🔹ಚಿಕ್ಕಮಗಳೂರು ಜಿಲ್ಲೆಯಲ್ಲಿ *ಶೃಂಗೇರಿ ಇದೆ. ಇಲ್ಲಿ ಶಂಕರಾಚಾರ್ಯರು ಶಾರದಾ ಪೀಠವನ್ನು ಸ್ಥಾಪಿಸಿದರು*
🔸ಈ ಶೃಂಗೇರಿಯು *ತುಂಗಾ ನದಿ ದಂಡೆ ಮೇಲಿದೆ*
🔹 ಚಿಕ್ಕಮಗಳೂರು ಜಿಲ್ಲೆಯಲ್ಲಿ *ಬಾಬಾಬುಡನಗಿರಿ ಬೆಟ್ಟವಿದೆ, ಇದಕ್ಕೆ ಚಂದ್ರದ್ರೋಣ ಪರ್ವತ ಎಂದು ಸಹ ಕರೆಯುತ್ತಾರೆ*
🔸 *ಬಾಬಾಬುಡನ್ ಎಂಬ ಸಂತ ಮೂಲತಃ ಇಥಿಯೋಪಿಯ ದೇಶದವರು*
🔸 *1978 ರಲ್ಲಿ ಶ್ರೀಮತಿ ಇಂದಿರಾಗಾಂಧಿಯವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು*
🔸 *ಡಿ,ಬಿ ಚಂದ್ರೇಗೌಡ ರವರು ಶ್ರೀಮತಿ ಇಂದಿರಾಗಾಂಧಿ ಅವರಿಗೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು*
🔹ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡುಬರುವ ಜಲಪಾತ *ಕಾಳಹಸ್ತ ಜಲಪಾತ*
🔸ಕನ್ನಡದ ಎರಡನೇ ರಾಷ್ಟ್ರಕವಿ *ಕುವೆಂಪು* ಅವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇ ಕೊಡಗಿಹಳ್ಳಿ ಜನಿಸಿದ್ದಾರೆ,(1904- ಡಿಸೆಂಬರ್ 29)
🔹 ಕರ್ನಾಟಕದಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸುವ ಕಾಫಿ ಬೆಳೆ- *ರೊಬಸ್ಟ್*
🔸 ಭಾರತದಲ್ಲಿ ಕಾಫಿ ಜನ ಸ್ಥಳ- *ಚಿಕ್ಕಮಗಳೂರು*
🔹ಚಿಕ್ಕಮಂಗಳೂರು ಜಿಲ್ಲೆ ಅಜ್ಜಂಪುರ ಎಂಬ ಊರಲ್ಲಿ *ಅಮೃತಮಹಲ್ ಎಂಬ ಹಸುವಿನ ತಳಿ* ಸಂಶೋಧನೆಯಾಗಿದೆ,
==========================================
5. ಧಾರವಾಡ
🔸 ದಾರವಾಡ ಜಿಲ್ಲೆಯನ್ನು *ಪೇಡ ನಗರಿ* ಎಂದು ಕರೆಯುತ್ತಾರೆ,
🔹ವಿಜಯನಗರದ *ರಾಮರಾಜನ* ಕಾಲದ "ಧಾರರಾವ್" ಎಂಬುವನು "1403"ರಲ್ಲಿ ಕೋಟೆ ಕಟ್ಟಿಸಿದ್ದರ ನಿಮಿತ್ತ ಈ ಊರಿಗೆ *ಧಾರವಾಡ* ಎಂಬ ಹೆಸರು ಬಂದಿತೆಂದು ತಿಳಿಸುತ್ತದೆ. ಆದರೆ ಕ್ರಿ.ಶ.1117 "ಧಾರವಾಡ ಶಾಸನದಲ್ಲಿಯೇ" ‘ದಾರವಾಡ’ ಎಂಬ ಹೆಸರು ಬಳಕೆಗೊಂಡಿದೆ.
🔸"2019 ರಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ" ಧಾರವಾಡದಲ್ಲಿ ನಡೆಯಿತು,( ಅಧ್ಯಕ್ಷರು- *ಚಂದ್ರಶೇಖರ್ ಕಂಬಾರ್*)
🔹 ಧಾರವಾಡ ಜಿಲ್ಲೆಯಲ್ಲಿ *I.I.T* ಸ್ಥಾಪಿಸಿದ ಕರ್ನಾಟಕದ ಮೊದಲ ಹಾಗೂ ಏಕೈಕ ಆಗಿದೆ.
(2016 ರಲ್ಲಿ ಸ್ಥಾಪಿಸಲಾಯಿತು)
🔸 ಧಾರವಾಡ ಜಿಲ್ಲೆಯಲ್ಲಿ *ಕರ್ನಾಟಕ ವಿಶ್ವವಿದ್ಯಾಲಯದ* ಇದೆ.
( ಇದು ಸ್ವಾತಂತ್ರ್ಯ ನಂತರ ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವವಿದ್ಯಾಲಯವಾಗಿದೆ,)
🔹 ಧಾರವಾಡ ಜಿಲ್ಲೆಯಲ್ಲಿ *ಕೃಷಿ ವಿಶ್ವವಿದ್ಯಾಲಯ* ಇದೆ.
🔹 ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ *ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಇದೆ.*
🔸 ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ *ನೈರುತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ* ಇದೆ,
( ನೈಋುತ್ಯ ರೈಲ್ವೆಯ ಹುಬ್ಬಳ್ಳಿ ಜಂಕ್ಷನ್‌ಗೆ (ರೈಲ್ವೆ ನಿಲ್ದಾಣ) ಇಲ್ಲಿನ ಆರಾಧ್ಯದೈವ *ಶ್ರೀ ಸಿದ್ಧಾರೂಢರ ಹೆಸರು ಮರುನಾಮಕರಣ ಮಾಡಲಾಗಿದೆ.*
(ನೈಋುತ್ಯ ರೈಲ್ವೆ ಕೇಂದ್ರೀಯ ನಿಲ್ದಾಣವಾದ ಹುಬ್ಬಳ್ಳಿ *ವಿಶ್ವದ ‘ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್’ ಎಂಬ ದಾಖಲೆ ಬರೆಯಲು ಸಜ್ಜಾಗುತ್ತಿದೆ.* ಚಾಲ್ತಿಯಲ್ಲಿರುವ ಪ್ಲಾಟ್‌ಫಾರ್ಮ್ ವಿಸ್ತರಣೆ ಮತ್ತು ಹೆಚ್ಚುವರಿ ಪ್ಲಾಟ್‌ಫಾರ್ಮ್ ನಿರ್ಮಾಣ ಕಾಮಗಾರಿ 2021ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
*ಈಗಿರುವ ಹುಬ್ಬಳ್ಳಿ ಒಂದನೇ ಪ್ಲಾಟ್‌ಫಾರ್ಮ್ 550 ಮೀಟರ್ ಉದ್ದವಿದೆ. ಇದನ್ನು 10 ಮೀ ಅಗಲದಲ್ಲಿ 1,400 ಮೀಟರ್* ಉದ್ದಕ್ಕೆ ವಿಸ್ತರಿಸುವ ಕಾಮಗಾರಿ ಸಾಗಿದೆ.
🔹ಧಾರವಾಡ ಜಿಲ್ಲೆಯಲ್ಲಿ ಆದಿಕವಿ *ಪಂಪನ* ಜನ್ಮಸ್ಥಳ ಅಣ್ಣಿಗೇರಿ ಇದೆ,
🔹 ಧಾರವಾಡ ಜಿಲ್ಲೆಯಲ್ಲಿ ಕರ್ನಾಟಕದ *ಹೈಕೋರ್ಟ್ ಪೀಠವನ್ನು 2008 ಜುಲೈ 4ರಂದು ಸ್ಥಾಪಿಸಲಾಗಿದೆ*.
🔸1890 ರಲ್ಲಿ ಧಾರವಾಡ ಜಿಲ್ಲೆಯಲ್ಲಿ *ಕರ್ನಾಟಕ ವಿದ್ಯಾವರ್ಧಕ ಸಂಘವು* ಸ್ಥಾಪನೆಯಾಯಿತು,
( ಸ್ಥಾಪಿಸಿದವರು= *ರಾ.ಹ.ದೇಶಪಾಂಡೆ*
🔹 ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಹತ್ತಿರ *ಗರಗ* ಎಂಬಲ್ಲಿ ಭಾರತದ *ರಾಷ್ಟ್ರಧ್ವಜವನ್ನು ತಯಾರಿಸಲಾಗುತ್ತದೆ*
( ರಾಷ್ಟ್ರಧ್ವಜವನ್ನು ತಯಾರಿಸಿದವರು= *ಪಿಂಗಳಿ ವೆಂಕಯ್ಯ*)
🔹 ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ "ಡಾ// ಎನ್ ಎಸ್ ಹರ್ಡೆಕರ್" ಅವರು 1923ರಲ್ಲಿ *ಹಿಂದುಸ್ತಾನಿ ಸೇವಾದಳ ವನ್ನು* ಸ್ಥಾಪಿಸಿದರು.
🔸 ಧಾರವಾಡ ಜಿಲ್ಲೆಯನ್ನು ಭಾರತದ *ಸಹಕಾರಿ ಚಳುವಳಿಯ ತೊಟ್ಟಿಲು* ಎಂದು ಕರೆಯಲಾಗುತ್ತದೆ,
🔹 ಧಾರವಾಡ ಜಿಲ್ಲೆಯಲ್ಲಿ ಆಲೂರು ವೆಂಕಟರಾಯರು *ರಾಷ್ಟ್ರೀಯ ಶಾಲೆಯ ಸ್ಥಾಪಿಸಿದರು*,
🔸 ಕರ್ನಾಟಕದಲ್ಲಿ *ಹೋಮ್ ರೂಲ್ ಚಳುವಳಿ* ಧಾರವಾಡದಿಂದ ಪ್ರಾರಂಭವಾಯಿತು.
🔸 ಧಾರವಾಡ ಜಿಲ್ಲೆಯಲ್ಲಿನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರು
1) *ಗಂಗೂಬಾಯಿ ಹಾನಗಲ್*
2) *ಪಂಡಿತ್ ಭೀಮ್ ಸೇನ್ ಜೋಶಿ*
3) *ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್*
4) *ಬಸವರಾಜ ರಾಜಗುರು*
🔹ಧಾರವಾಡ ನಗರದ ಕೆಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಾರಿತ್ರಿಕ ಘಟನೆಗಳು ಇಂತಿವೆ
1)1818- *ಬ್ರಿಟಿಷ್ ಆಡಳಿತ ಪ್ರಾರಂಭ*
2)1824--- *ಧಾರವಾಡ ಜಿಲ್ಲಾ ಕಲೆಕ್ಟರ ಥ್ಯಾಕರೆ ಕಿತ್ತೂರು ಕಿತ್ತೂರು ಚೆನ್ನಮ್ಮಇವಳ ವಿರುದ್ಧ ನಡೆಸಿದ ದಾಳಿಯಲ್ಲಿ ಗುಂಡೇಟಿನಿಂದ ಮೃತನಾದನು*
.
3)1826--- *ಪ್ರಥಮ ಮರಾಠಿ ಶಾಲೆ ಪ್ರಾರಂಭ*.
4)1830--- *ಸಿವಿಲ್ ಆಸ್ಪತ್ರೆ ನಿರ್ಮಾಣ*
5)1831--- *ಪ್ರಥಮ ಕನ್ನಡ ಶಾಲೆಯ ಪ್ರಾರಂಭ*
==========================================
6. ಯಾದಗಿರಿ
🏵 ಯಾದಗಿರಿ ಎಂದು ಹೆಸರು ಬಂದ ಇತಿಹಾಸ= ಯಾದಗಿರಿಯಲ್ಲಿ ಒಂದು ಭವ್ಯ ವಾದ ಗುಡ್ಡ ಯಾದಗಿರಿಯ ಹೃದಯ ಭಾಗದಲ್ಲಿದೆ ಇದನ್ನು ಬೆಟ್ಟವೆಂತಲು ಕರೆಯಬಹುದಾಗಿದೆ. *"ಯಾದವರು"* ಆಳುತ್ತಿದ್ದ ಈ ನಾಡಿಗೆ ಬೆಟ್ಟ ಅಂದರೆ ಗಿರಿ ಸೇರಿರುವದರಿಂದ ಇದನ್ನು ಮುಂದೆ *ಯಾದಗಿರಿ*" ಎಂದು ಕರೆಯಲಾಯಿತು . ಯಾದವನ ಗಿರಿ’, ಯಾದವ ಗಿರಿ’,ಯಾದಗಿರಿ’, ಯಾದ್ಗೀರ್’ ಎಂದು ಸರಳೀಕೃತಗೊಂಡಿದೆ.
🔸 ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ *ಮಲಗಿರುವ ಬುದ್ಧನ ಪರ್ವತಗಳು ಕಂಡುಬರುತ್ತವೆ,*
🔹 ಯಾದಗಿರಿ ಜಿಲ್ಲೆಯು ಕರ್ನಾಟಕದ ಕೊನೆಯ *30ನೇ ಜಿಲ್ಲೆಯಾಗಿತ್ತು*( ಆದರೆ ಇತ್ತೀಚಿನ ಸಚಿವ ಸಂಪುಟದಲ್ಲಿ 31ನೇ ಜಿಲ್ಲೆಯಾಗಿ *ವಿಜಯನಗರವನ್ನು* ಮಾಡಲು ಸರ್ಕಾರ ನಿರ್ಧರಿಸಿದೆ,)
🔸 ಯಾದಗಿರಿ ಜಿಲ್ಲೆಯು *ಕಲಬುರ್ಗಿ ಜಿಲ್ಲೆಯಿಂದ 2010ರಲ್ಲಿ ಪ್ರತ್ಯೇಕಿಸಲಾಗಿದೆ*,
🔹 ಯಾದಗಿರಿ ಜಿಲ್ಲೆಯೂ ಕರ್ನಾಟಕದಲ್ಲಿ ಅತಿ ಕಡಿಮೆ *ಸಾಕ್ಷರತೆ* ಹೊಂದಿದ ಜಿಲ್ಲೆಯಾಗಿದೆ,
🔸 ಯಾದಗಿರಿ ಜಿಲ್ಲೆಯ ಕರ್ನಾಟಕದಲ್ಲಿ ಅತಿ ಕಡಿಮೆ *ತಲಾ ಆದಾಯ* ಹೊಂದಿದ ಜಿಲ್ಲೆಯಾಗಿದೆ,
🔹 ಯಾದಗಿರಿ ಜಿಲ್ಲೆಯಲ್ಲಿ *ನಾರಾಯಣಪುರ ಜಲಾಶಯ ವನ್ನು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ,*
( ಇದಕ್ಕೆ "ಬಸವಸಾಗರ" ಎಂದು ಸಹ ಕರೆಯುತ್ತಾರೆ)
🔸 ಯಾದಗಿರಿ ಜಿಲ್ಲೆಯ ಗೂಗಿ ಎಂಬ ಸ್ಥಳದಲ್ಲಿ *ಯುರೇನಿಯಿಂ ನಿಕ್ಷೇಪ* ಪತ್ತೆಯಾಗಿದೆ.
🔹 ಯಾದಗಿರಿ ಜಿಲ್ಲೆಯ ಸುರಪುರದಲ್ಲಿ *ರಾಜ ವೆಂಕಟಪ್ಪ ನಾಯಕ* 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದನು,
🔸 ಯಾದಗಿರಿಯು *ಕಾಕತೀಯ ರಾಜರ* ಆಳ್ವಿಕೆಗೆ ಒಳಪಟ್ಟಿತು,
🔹 ಯಾದಗಿರಿ ಜಿಲ್ಲೆಯಲ್ಲಿ *ರೈಲ್ವೆ ಬೋಗಿ* ತಯಾರಿಕಾ ಘಟಕವಿದೆ,
🔸 ಯಾದಗಿರಿ ಜಿಲ್ಲೆಯಲ್ಲಿ ಕರ್ನಾಟಕದ ದೊಡ್ಡ ಪಕ್ಷಿಧಾಮ *ಗೋನಾಳ ಪಕ್ಷಿಧಾಮ ವಿದೆ*( ಇದಕ್ಕಿಂತ ಮೊದಲು "ರಂಗನತಿಟ್ಟು ಪಕ್ಷಿಧಾಮ" ಕರ್ನಾಟಕದ ದೊಡ್ಡ ಪಕ್ಷಿಧಾಮ ಎಂದು ಕರೆಯಲಾಗುತ್ತಿತ್ತು. )
🔹 ಯಾದಗಿರಿ ಜಿಲ್ಲೆಯು *ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿಲ್ಲ*,
==========================================
ಕಾಮೆಂಟ್ ಪೋಸ್ಟ್ ಮಾಡಿ