ಭಾರತದ ಚೊಚ್ಚಲ ಸ್ವದೇಶಿ ನಿರ್ಮಿತ ನ್ಯೂಕ್ಲಿಯರ್ ಕ್ಷಿಪಣಿ ಟ್ರ್ಯಾಕಿಂಗ್ ಶಿಪ್ “ಐಎನ್‌ಎಸ್ ಧ್ರುವ್’ ಅತಿ ಶೀಘ್ರದಲ್ಲಿ ನೌಕಾಪಡೆಗೆ ನಿಯೋಜನೆಗೊಳ್ಳಲಿದೆ. “ಧ್ರುವ್’ ಸುತ್ತಮುತ್ತ ಒಂದು ಕಿರುನೋಟ..
👉 ದೋವಲ್‌ರಿಂದ ರಾಷ್ಟ್ರಾರ್ಪಣೆ
ಸೆ.10ರಂದು ವಿಶಾಖಪಟ್ಟಣಂನಿಂದ “ಐಎನ್‌ಎಸ್ ಧ್ರುವ’ವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರಾಷ್ಟ್ರಾರ್ಪಣೆಗೊಳಿಸುವ ಸಾಧ್ಯತೆ ಇದೆ. ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ಕರಮ್‌ಬೀರ್ ಸಿಂಗ್ ಮತ್ತು ಎನ್‌ಟಿಆರ್‌ಒ ಅಧ್ಯಕ್ಷ ಅನಿಲ್ ದಸ್ಮಾನ ಉಪಸ್ಥಿತರಿರಲಿದ್ದಾರೆ.
👉 ನಿರ್ಮಾಣ
ಹಿಂದೂಸ್ತಾನ್ ಶಿಪ್‌ಯಾರ್ಡ್ ಸಂಸ್ಥೆ, ಡಿಆರ್‌ಡಿಒ ಮತ್ತು ಎನ್ ಡಿಆರ್‌ಒ ಸಹಯೋಗ
👉 ಭಾರತ 6ನೇ ರಾಷ್ಟ್ರ
ನ್ಯೂಕ್ಲಿಯರ್‌ಕ್ಷಿಪಣಿ ಟ್ರ್ಯಾಕಿಂಗ್ ಸಾಮರ್ಥ್ಯದ ನೌಕೆ ಪ್ರಸ್ತುತ ಫ್ರಾನ್ಸ್, ಅಮೆರಿಕ, ಇಂಗ್ಲೆಂಡ್, ರಷ್ಯಾ ಮತ್ತು ಚೀನಾಗಳಲ್ಲಿ ಮಾತ್ರವೇ ಇದೆ. ಭಾರತ 6ನೇ ರಾಷ್ಟ್ರವಾಗಿ ಇಂಥ ನೌಕೆಯನ್ನು ನಿಯೋಜಿಸುತ್ತಿದೆ
👉 ಸಾಮರ್ಥ್ಯವೇನು?
● 10 ಸಾವಿರ ಟನ್ ತೂಕದ ಶಿಪ್.
● ಖಂಡಾಂತರ ಕ್ಷಿಪಣಿ ನಿರೋಧಕ ಸಾಮರ್ಥ್ಯ.
● ಶತ್ರುಕ್ಷಿಪಣಿ ದಾಳಿ ಕುರಿತ ಮುನ್ಸೂಚಕ ವ್ಯವಸ್ಥೆ.
● ಶತ್ರು ರಾಡಾರ್ ಸಿಗ್ನಲ್‌ಗಳ ಮೇಲೆ ನಿಗಾ.
● ಸ್ಪೈ ಸ್ಯಾಟ್‌ಲೈಟ್ ಗಳ ಕಳ್ಳಗಣ್ಣನ್ನು ಛೇದಿಸುವ ಸಾಮರ್ಥ್ಯ.
● ಜಲಾಂತರ್ಗಾಮಿ ಡ್ರೋನ್ ದಾಳಿ ತಡೆ ಸಾಮರ್ಥ್ಯ.
👉 ಭಾರತಕ್ಕೆ ಏನು ಲಾಭ?
● ಇಂಡೋಪೆಸಿಫಿಕ್ ಸೀಮೆಯಲ್ಲಿ ಭಾರತದ ಐಎನ್‌ಎಸ್ ಧ್ರುವ ನಿಯೋಜನೆ.
● ಪಾಕಿಸ್ತಾನ, ಚೀನಾ- ಎರಡೂ ಅಣ್ವಸ್ತ್ರ ರಾಷ್ಟ್ರಗಳು. ನಮ್ಮ ಸಾಗರ ಗಡಿಯಲ್ಲಿ ಇವು ಖಂಡಾಂತರ ಕ್ಷಿಪಣಿ ಪರೀಕ್ಷೆ ಅಥವಾ ದೇಶದ ಮೇಲೆ ಪ್ರಯೋಗಿಸಿದರೆ ತಕ್ಷಣವೇ ಮುನ್ಸೂಚನೆ
ಕಾಮೆಂಟ್ ಪೋಸ್ಟ್ ಮಾಡಿ