ಭಾರತದಲ್ಲಿ ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದ ಬಾಬರ್

  • ಭಾರತದಲ್ಲಿ ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದ ಬಾಬರ್ ಮೂಲತಃ ತುರ್ಕಿಸ್ಥಾನದವನು. 
  • ಈತನ ತಂದೆ ಉಮರ್‌ಶೇಖ್ ಮಿರ್ಜಾ ಮಧ್ಯ ಏಷಿಯಾದ ಚಿಕ್ಕ ರಾಜ್ಯವಾದ ಫರ್ಗಾನದ ದೊರೆ
  • ತಂದೆಯ ಮರಣದಿಂದಾಗಿ ಬಾಬರ್ ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಫರ್ಗಾನದ ಸಿಂಹಾಸನ ಏರಿದನು. ಆದರೆ ಕೆಲವೇ ದಿನಗಳಲ್ಲಿ ಸಂಬಂಧಿಕರು ಹಾಗೂ ಶತ್ರುಗಳ ಪಿತೂರಿಯಿಂದಾಗಿ ರಾಜ್ಯವನ್ನು ಕಳೆದುಕೊಂಡು ಅಲೆಮಾರಿ ಜೀವನ ನಡೆಸುವಂತಾಯಿತು.
  • ವಿವಿಧ ಬಗೆಯ ಒತ್ತಡಗಳಿಂದ ಸೃಷ್ಟಿಯಾದ ಸಂದರ್ಭವು ಭಾರತದ ಮೇಲೆ ದಾಳಿ ಮಾಡಲು ಪ್ರೇರಣೆ ನೀಡಿತು. 
  • ಬಾಬರನು ಐದು ಬಾರಿ ದಾಳಿ ಮಾಡಿದನು. 
  • ಸಾ.ಶ.1526ರಲ್ಲಿ ನಡೆದ ಮೊದಲನೆಯ ಪಾಣಿಪತ್ ಯುದ್ಧದಲ್ಲಿ ದೆಹಲಿ ಸುಲ್ತಾನನಾಗಿದ್ದ ಇಬ್ರಾಹಿಂ ಲೋದಿ ಹಾಗೂ ಆತನ ಆಫ್ಘನ್ ಬೆಂಬಲಿಗರನ್ನು ಸೋಲಿಸಿ ಭಾರತದಲ್ಲಿ ಮೊಘಲರ ಆಳ್ವಿಕೆಗೆ ಅಡಿಪಾಯ ಹಾಕಿದನು. ದೆಹಲಿ ಈತನ ರಾಜಧಾನಿಯಾಯಿತು. 
  • ತನ್ನ ನಾಲ್ಕು ವರ್ಷಗಳ ಅವಧಿಯಲ್ಲಿ ಮೇವಾರದ ರಾಣಾ ಸಂಗ್ರಾಮಸಿಂಗ್, ರಜಪೂತ ದೊರೆ ಚಾಂದೇರಿಯ ಮೇದಿನರಾಯ ಹಾಗೂ ಇಬ್ರಾಹಿಂ ಲೋದಿಯ ಸೋದರನಾದ ಮಹಮದ್ ಲೋದಿಯರನ್ನು ಸೋಲಿಸಿದ. 
  • ಬಾಬರನು ಪಾಣಿಪತ್, ಕಣ್ವ ಮತ್ತು ಗೋಗ್ರ ಎಂಬ ಮೂರು ಯುದ್ಧಗಳನ್ನು ಗೆಲ್ಲುವ ಮೂಲಕ ಉತ್ತರ ಭಾರತದ ವಿಶಾಲವಾದ ಪ್ರದೇಶದಲ್ಲಿ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದ.
  • ಬಾಬರನಾಮ (ತುಝಕ್-ಇ-ಬಾಬರಿ) ಬಾಬರ್ ತನ್ನ ಆತ್ಮ ಚರಿತ್ರೆಯನ್ನು ತುರ್ಕಿ ಬಾಷೆಯಲ್ಲಿ ಬರೆದನು.ಈ ಗ್ರಂಥದಲ್ಲಿ ರಾಜಕೀಯ ಸಂಘಟನೆಯಲ್ಲದೆ, ವಿವಿಧ ನಾಡುಗಳ ಪ್ರಾಕೃತಿಕ ಸ್ವರೂಪ, ಸೌಂಧರ್ಯ, ಅಲ್ಲಿನ ಪ್ರಾಣಿ ಸಂಕುಲ, ಸಸ್ಯವರ್ಗ, ಪಕ್ಷಿ, ತೋಟಗಳ ಬಗ್ಗೆ ವರ್ಣಿಸಲಾಗಿದೆ. ಬಾಬರ್ ಕವಿ ಹಾಗೂ ಉತ್ತಮ ಚಿತ್ರಕಾರನಾಗಿದ್ದನು. ಅಬ್ದುಲ್‌ರಹೀಮ್‌ಖಾನ್ ಇದನ್ನು ಪರ್ಶಿಯನ್ ಭಾಷೆಗೆ ಭಾಷಾಂತರಿಸಿದನು.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು