ನಾಮಪದ ಕ್ರಿಯಾಪದ ಗಳಂತೆ ಲಿಂಗ ವಚನ ವಿಭಕ್ತಿಗಳಿಂದ ರೂಪ ಬೇಧವನ್ನು ಹೊಂದದೆ ಏಕರೂಪವಾಗಿರುವ ಶಬ್ದಗಳನ್ನು ಅವ್ಯಯ ಎನ್ನುವರು.
ಅವುಗಳಲ್ಲಿ ಅನೇಕ ಪ್ರಕಾರಗಳಿವೆ
1.ಸಾಮಾನ್ಯ ಅವ್ಯಯ
2.ಅನುಕರಣಾವ್ಯಯ
3.ಭಾವಸೂಚಕ ಅವ್ಯಯ
4.ಕ್ರಿಯಾರ್ಥಕ ಅವ್ಯಯ
5.ಸಂಬಂಧಾರ್ಥಕಾವ್ಯಯ
6.ಅವಧಾರಣಾರ್ಥಕ ಅವ್ಯಯ
1.ಸಾಮಾನ್ಯಅವ್ಯಯ :ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂತ ಅವ್ಯಯಗಳಿಗೆ ಸಾಮಾನ್ಯ ಅವ್ಯಗಳು ಎನ್ನುವರು.
💫ಉದಾ:ಚೆನ್ನಾಗಿ ,ಬೇಗನೆ ,ಸೊಗಸಾಗಿ , ಸುಮ್ಮನೆ, ತಟ್ಟನೆ ಇತ್ಯಾದಿ.
2.ಅನುಕರಣಾವ್ಯಯ : ನಿರ್ದಿಷ್ಟ ಅರ್ಥವಿಲ್ಲದ ಧ್ವನಿ ನಿವೇಶನಗಳನ್ನು ಕಿವಿಯಿಂದ ಕೇಳಿ ದಂತೆಯೇ ಅನುಕರಣೆ ಮಾಡುವ ಶಬ್ದಗಳಿಗೆ ಅನುಕರಣಾವ್ಯಯ ಎನ್ನುವರು.
💫 ಉದಾಃ ಸರ-ಸರ, ಗರ-ಗರ, ದರ-ದರ ಇತ್ಯಾದಿ.
3.ಭಾವಸೂಚಕ ಅವ್ಯಯ :ಮನಸಲ್ಲಿ ಉಂಟಾಗುವ ಹರ್ಷ, ಕೋಪ , ದುಃಖ, ಮೆಚ್ಚುಗೆ , ತಿರಸ್ಕಾರ, ಅಪೇಕ್ಷೆ ಮುಂತಾದ ಭಾವನೆಗಳನ್ನು ವ್ಯಕ್ತಪಡಿಸುತ್ತೇವೆ ಅವುಗಳಿಗೆ ಭಾವಸೂಚಕ ಅವ್ಯಯ ಎನ್ನುವರು.
💫 ಉದಾ: ಅಯ್ಯೋ!, ಭಲೆ!, ಆಹಾ !ಇತ್ಯಾದಿ.
4.ಕ್ರಿಯಾರ್ಥಕ ಅವ್ಯಯ :ಕ್ರಿಯಾಪದದ ಸ್ಥಾನದಲ್ಲಿದ್ದು ವಾಕ್ಯದ ಅರ್ಥಗಳನ್ನು ಪೂರ್ಣಗೊಳಿಸುವ ಅವ್ಯಯಗಳಿಗೆ ಕ್ರಿಯಾರ್ಥಕ ಅವ್ಯಯಎನ್ನುವರು.
💫 ಉದಾ:ಬೇಡ,ಸಾಕು, ಬೇಕು, ಅಹುದು ಇತ್ಯಾದಿ.
5.ಸಂಬಂಧಾರ್ಥಕ ಅವ್ಯಯ :ಎರಡು ಪದಗಳನ್ನಾಗಲಿ , ಪದಸಮೂಹಗಳನ್ನಾಗಲಿ,ವಾಕ್ಯಗಳನ್ನಾಗಲಿ ಜೋಡಿಸುವಂತಹ ಪದಗಳೇ ಸಂಬಂಧಾರ್ಥಕ ಅವ್ಯಯಗಳು.
💫 ಉದಾ:ಆದರೆ,ಆದ್ದರಿಂದ ,ಇದರಿಂದ ಇತ್ಯಾದಿ.
6.ಅವಧಾರಣಾರ್ಥಕ ಅವ್ಯಯ :ಒಂದು ನಿಷ್ಯಯಾರ್ಥಲ್ಲಿ ಇರುವ ಅವ್ಯಗಳನ್ನು ಅವಧಾರಣಾರ್ಥಕ ಅವ್ಯಯ ಎನ್ನುವರು.
ಹಲವು ವಸ್ತುಗಳಲ್ಲಿ ಒಂದನ್ನು ನಿಷ್ಯಯವಾಗಿಹೇಳುವ ಸಂದರ್ಭದಲ್ಲಿ ಈ ಅವ್ಯಯವನ್ನು ಬಳಸುತ್ತೇವೆ.
💫 ಉದಾ :ಅವನೇ,ಅವಳೇ ,ನೀನೇ ,ನಾನೇ ಇತ್ಯಾದಿ.
ಪದಗಳ ಕೊನೆಯಲ್ಲಿರುವ 'ಏ'ಎಂಬ ಅಕ್ಷರವೇ ಅವಧಾರಣಾರ್ಥಕ ಅವ್ಯಯ.
😊ಮುಕ್ತಾಯ😊
ಕಾಮೆಂಟ್ ಪೋಸ್ಟ್ ಮಾಡಿ