ವಿಶ್ವ ರೇಡಿಯೋ ದಿನ - 13th February


ವಿಶ್ವ ರೇಡಿಯೋ ದಿನ - 13th February










Theme 2021 "New World, New Radio"

======================

ಜಗತ್ತಿನ ಪ್ರತಿಯೊಬ್ಬ ನಾಗರಿಕನಿಗೂ ಸುಲಭವಾಗಿ, ವೇಗವಾಗಿ ತಲುಪಬಹುದಾದ ಮಾಧ್ಯಮ ರೇಡಿಯೋ. “ಓಲ್ಡ್‌ ಈಸ್‌ ಗೋಲ್ಡ್‌’ ಎನ್ನುವಂತೆ ರೇಡಿಯೋ ತನ್ನ ಮಹತ್ವವನ್ನು ಇಂದಿಗೂ ಕಳೆದುಕೊಂಡಿಲ್ಲ. ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ ರೇಡಿಯೋ ಕೇಳುಗರ ಸಂಖ್ಯೆ ವಿರಳವಾದರೂ ಅದರ ಕೇಳುಗ ವರ್ಗ ಈಗಲೂ ಇದೆ. ಜಗತ್ತಿನಲ್ಲಿ ನಡೆದ ಮಹಾನ್‌ ಘಟನೆಗಳ ಸುದ್ದಿಯನ್ನು ಜನರಿಗೆ ತಲುಪಿಸಿದ್ದೇ ರೇಡಿಯೋ. ಈಗಲೂ ಹಳ್ಳಿ ಜನರ ದೈನಂದಿನ ದಿನದ ಸಂಗಾತಿಯಾಗಿರುವ ರೇಡಿಯೋವನ್ನು ನೆನಪಿಸಲೆಂದೇ ವಿಶ್ವಸಂಸ್ಥೆ ವರ್ಷದಲ್ಲೊಂದು ದಿನವನ್ನು ರೇಡಿಯೋಗಾಗಿ ಮೀಸಲಿರಿಸಿದೆ. ಆ ದಿನಾಚರಣೆ ಇಂದು.

====================

📻 ಹಿನ್ನೆಲೆ

=======

2010ರ ಸೆ. 20ರಂದು ಸ್ಪೇಯ್ನನ ಸ್ಪ್ಯಾನಿಷ್‌ ರೇಡಿಯೋ ಅಕಾಡೆಮಿಯು ಯುನೆಸ್ಕೋದ ಮುಂದೆ ವಿಶ್ವ ರೇಡಿಯೋ ದಿನವನ್ನು ಆಚರಿಸುವ ಬೇಡಿಕೆಯನ್ನು ಮಂಡಿಸಿತು. 2010ರ ಸೆ. 29ರಂದು ವಿಶ್ವ ರೇಡಿಯೋ ದಿನದ ಆಚರಣೆಯನ್ನು ಘೋಷಿಸಲಾಯಿತು. 2012ರ ಡಿಸೆಂಬರ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇದನ್ನು ಅನುಮೋದಿಸಿತು. ವಿಶ್ವ ರೇಡಿಯೋ ದಿನವನ್ನು ಆಚರಿಸುವ ಸಂಪ್ರದಾಯ 2012ರ ಫೆ. 13ರಿಂದ ಪ್ರಾರಂಭವಾಯಿತು.ರೇಡಿಯೋ ಜನರಿಗೆ ಶಿಕ್ಷಣ, ಕೃಷಿ ಮತ್ತಿತರ ಕ್ಷೇತ್ರಗಳ ಮಾಹಿತಿ ಮತ್ತು ಸುದ್ದಿಗಳನ್ನು ಒದಗಿಸುವ ಮಾಧ್ಯಮವಾಗಿದೆ ಮಾತ್ರವಲ್ಲದೆ, ಅವರು ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು ಒಂದು ವೇದಿಕೆಯೂ ಆಗಿದೆ. ಇಟಲಿಯ ಮಾರ್ಕೊನಿ ರೇಡಿಯೋದ ಪಿತಾಮಹ. ಆರಂಭದಲ್ಲಿ ರೇಡಿಯೋವನ್ನು ವೈರ್‌ಲೆಸ್‌ ಟೆಲಿಗ್ರಾಫ್ ಎಂದು ಕರೆಯಲಾಗುತ್ತಿತ್ತು.

==============

ರೇಡಿಯೋ ಪ್ರಸಾರದಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಸುಧಾರಿಸಲು ಮತ್ತು ರೇಡಿಯೋದ ಮಹತ್ವವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಯುನೆಸ್ಕೋ ಪ್ರತಿವರ್ಷ ಫೆಬ್ರವರಿ 13ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸುತ್ತದೆ. ವಿಶ್ವಸಂಸ್ಥೆಯ ಇಂಟರ್‌ನ್ಯಾಶನಲ್‌ ಬ್ರ್ಯಾಂಡ್‌ಕಾಸ್ಟ್‌ ಸರ್ವಿಸ್‌ 1946ರ ಫೆ. 13ರಂದು ಆರಂಭವಾಗಿರುವುದು ಇದೇ ದಿನಾಂಕವನ್ನು ಆರಿಸಿಕೊಳ್ಳಲು ಇನ್ನೊಂದು ಕಾರಣ.

================

👉 ಮೈಸೂರಿನಲ್ಲಿ ಮೊದಲಿಗೆ ಬಾನುಲಿ

=============

ಮೈಸೂರಿನಲ್ಲಿ ನಮ್ಮ ದೇಶದ ಮೊಟ್ಟಮೊದಲು ರೇಡಿಯೋ ಕಾರ್ಯಕ್ರಮ ಪ್ರಸಾರವಾಗಿದ್ದು ಎಂಬುದು ವಿಶೇಷ. ಪ್ರಾಧ್ಯಾಪಕರಾಗಿದ್ದ ಡಾ.ಎಮ್.ವಿ.ಗೋಪಾಲಸ್ವಾಮಿಯವರು ಮುತುವರ್ಜಿಯಿಂದ 1935ರಲ್ಲೇ ಮೊದಲ ಆಕಾಶವಾಣಿ ಕೇಂದ್ರ ಕಾರ್ಯಾರಂಭವಾಯಿತು. ಕುವೆಂಪು ಕವನ ವಾಚನದೊಂದಿಗೆ ಬಾನುಲಿ ಪ್ರಸಾರ ಕಾರ್ಯ ಮೊದಲುಗೊಂಡಿತು.

================

👉 ಆಲ್‌ ಇಂಡಿಯಾ

ರೇಡಿಯೋ (ಎಐಆರ್‌)

==============

ಆಲ್‌ ಇಂಡಿಯಾ ರೇಡಿಯೋ (ಎಐಆರ್‌) ವಿಶ್ವದ ಅತಿದೊಡ್ಡ ರೇಡಿಯೋ ನೆಟ್‌ವರ್ಕ್‌ ಎಂಬ ಖ್ಯಾತಿಯನ್ನು ಹೊಂದಿದೆ. 1936ರ ಜೂನ್‌ 8ರಂದು ಆಲ್‌ ಇಂಡಿಯಾ ರೇಡಿಯೋ ಸ್ಥಾಪನೆಯಾಯಿತು. ಇದು ದೇಶದ ಜನಸಂಖ್ಯೆಯ ಶೇ. 99.19ರಷ್ಟು ಜನರನ್ನು ತಲುಪುತ್ತಿದೆ. 23 ಭಾಷೆಗಳಲ್ಲಿ ಆಲ್‌ ಇಂಡಿಯಾ ರೇಡಿಯೋ ಪ್ರಸಾರವಾಗುತ್ತದೆ. ಕುಗ್ರಾಮಗಳನ್ನು ಕೂಡ ತಲುಪಿರುವ ಮಾಧ್ಯಮ ಇದಾಗಿದೆ.

============

📻 ಈ ವರ್ಷದ ವಿಶ್ವ ರೇಡಿಯೋ ದಿನದ ಧ್ಯೇಯವಾಕ್ಯ : 

☘ “ಹೊಸ ವಿಶ್ವ  ಹೊಸ ರೇಡಿಯೋ”

(New World, New Radio)

💐💐💐💐

================

👉 Square Kilometre Array

 – World’s Largest Radio Telescope

👉 NASA Detected first fast radio burst in Milky Way galaxy 

👉 Tamil Nadu fisherman starts India’s first radio channel exclusively for fisherfolk 

👉 Father of Indian Radio Astronomy Govind Swarup passes away.

👉 SunRISE :  Sun Radio Interferometer Space Experiment

👉 RFID : Radio Frequency Identification 

👉 Digital Radio To Be Launched In 2024 : Prakash Javadekar

👉 Prakash Javdekar  = (MoEFCC + IB  + HI&PE) Environment Forest & Climate Chnage + Information & Broadcasting + Heavy Industry &  Public Enterprise = RSMP Maharashtra

=====================

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು